ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಅತ್ತ ತಾರಿಣಿಗೆ ಮತ್ತೆ ಸಿದ್ದು ಮೇಲೆ ಪ್ರೀತಿ ಹುಟ್ಟುತ್ತಾ ಇದೆ. ತಾರಿಣಿ ವಿಷಯವಾಗಿ ಸಿದ್ಧಾಂತ್ ಮತ್ತು ಅಣ್ಣ (Brother) ಆದಿ ನಡುವೆ ಗಲಾಟೆ ಆಗಿದೆ.
ತಾರಿಣಿ ಮನೆಗೆ ಹೋಗಿದ್ದ ಸಿದ್ಧಾಂತ್ ಅಮ್ಮ, ಸಂಗೀತಾ
ಸಿದ್ಧಾಂತ್ ಅಮ್ಮ ಮತ್ತು ಅತ್ತಿಗೆ ತಾರಿಣಿ ಮನೆಗೆ ಬಂದಿದ್ದರು. ನೀನು ಮಾಡ್ತಾ ಇರೋದು ಸರಿ ಇಲ್ಲ ತಾರಿಣಿ ಅದನ್ನು ಹೇಳೋದಕ್ಕೆ ಬಂದಿದ್ದೇನೆ. ನೀನು ಸಿದ್ಧಾಂತ್ ಇಷ್ಟ ಪಡ್ತಾ ಇದೀರಿ ಎನ್ನುವ ವಿಚಾರವನ್ನು ತಾಯಿಯಾದ ನನ್ನಿಂದಾನೆ ಮುಚ್ಚಿಟ್ಟಿದ್ದ ಅವನು. ಈ ವಿಷ್ಯ ನನಗೆ ಗೊತ್ತಾಗಿದ್ದೇ ನಾಲ್ಕು, ಐದು ದಿನದ ಹಿಂದೆ. ಈ ವಿಷ್ಯ ಗೊತ್ತಾಗಿ ನಮ್ಮ ಮನೆಯಲ್ಲಿ ದೊಡ್ಡ ಗಲಾಟೆ ನಡೆಯಿತು ಎಂದು ಸಿದ್ದು ಅಮ್ಮ ಹೇಳಿದ್ದರು.
ತಾರಿಣಿಗೆ ಕ್ಲಾಸ್
ಸಿದ್ಧಾಂತ್ ಅವನು ಅವನ ಪಾಡಿಗೆ ಇದಾನೆ. ನೀನು ಆ ರೀತಿ ಇರೋದಕ್ಕೆ ಏನ್ ಕಷ್ಟ. ಅವನು ನಿನ್ನಿಂದ ದೂರ ಹೋಗ್ತಾ ಒದಾನೆ ಅಂದ್ರೆ, ನೀನೂ ಕೂಡ ಅದನ್ನೇ ಮಾಡಬೇಕಲ್ವಾ ತಾರಿಣಿ, ಯಾಕ್ ಅವನ ದಾರಿಗೆ ಪದೇ ಪದೇ ಅಡ್ಡ ಬರ್ತಾ ಇದೀಯಾ? ಎಂದು ಸಿದ್ಧಾಂತ್ ಅಮ್ಮ ತಾರಿಣಿಗೆ ಬೈದು ಹೋಗಿದ್ದಾರೆ. ಇದಕ್ಕೆಲ್ಲಾ ಸಂಗೀತಾ ಕುಮ್ಮಕ್ಕು ನೀಡಿದ್ದಾಳೆ.
ಇದನ್ನೂ ಓದಿ: Kannadathi: ಕನ್ನಡದಲ್ಲೇ ಕಾಫಿ ಶಾಪ್ ಓಪನ್ ಮಾಡ್ತಾನಂತೆ ಹರ್ಷ! ಭಾಷೆಗೆ ಅವಮಾನ ಮಾಡಿದವನಿಗೆ ತಕ್ಕ ಶಿಕ್ಷೆ
ಸಂಗೀತಾಗೆ ಬೈದ ಸಿದ್ದು
ತನ್ನ ಅತ್ತಿಗೆ ಸಂಗೀತಾಳೇ ನಮ್ಮ ಅಮ್ಮನ ತಲೆ ಕೆಡಿಸುತ್ತಿದ್ದಾಳೆ. ಇಲ್ಲ ಸಲ್ಲದ್ದನ್ನು ಹೇಳಿ ತಾರಿಣಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ ಎಂದು ಸಿದ್ದುಗೆ ಕೋಪ . ಅದಕ್ಕೆ ಅತ್ತಿಗೆಗೆ ಬೈದಿದ್ದಾನೆ. ನನ್ನ ಸುದ್ದಿಗೆ ಬರಬೇಡಿ ಎನ್ನುತ್ತಾನೆ ಸಿದ್ದು. ಅದಕ್ಕೆ ಸಂಗೀತಾ ಕೋಪ ಮಾಡಿಕೊಂಡು ತನ್ನ ಗಂಡ ಆದಿ ಬಳಿ ಎಲ್ಲವನ್ನೂ ಹೇಳಿದ್ದಾಳೆ.
ಸಿದ್ಧಾಂತ್-ಆದಿತ್ಯ ಜಗಳ
ಬರ್ತಾ ಬರ್ತಾ ಅತಿಯಾಗ್ತಿದೆ ನಿಂದು, ನೀನು ಈ ಮನೆ ಯಜಮಾನನಾ? ಎಂದು ಆದಿ ಸಿದ್ದು ಕಾಲರ್ ಹಿಡಿದು ಪ್ರಶ್ನೆ ಮಾಡ್ತಾ ಇದ್ದಾನೆ. ಅದಕ್ಕೆ ಸಿದ್ದು ಅತಿಯಾಗಿ ಆಡ್ತಾ ಇರೋದು ನೀನು. ಅದು ಏನ್ ವಿಷ್ಯ ಬಾಯಲ್ಲಿ ಹೇಳು.
ಕಾಲರ್ ಪಟ್ಟಿ ಬಿಡು ಎನ್ನುತ್ತಾನೆ. ಸಮಾಧಾನವಾಗಿ ಮಾತನಾಡು ಎಂದು ಸಿದ್ದು ಹೇಳ್ತಾನೆ. ಅದಕ್ಕೆ ಆದಿ ನನ್ನ ಹೆಂಡ್ತಿ ಸಂಗೀತಾ ವಿಚಾರಕ್ಕೆ ಬರಬೇಡ. ಬುದ್ಧಿ ಇಲ್ವಾ? ನಾಯಿ ಬಾಲ ನೀನು. ಥೂ ಎಂದು ಆದಿ ವಾರ್ನ್ ಮಾಡ್ತಾನೆ.
ಮನೆ ಬಿಟ್ಟು ಹೋಗು
ನನ್ನ ಪರ್ಸನಲ್ ವಿಷಯಕ್ಕೆ ಅಮ್ಮನಿಗೆ ಏನೇನೋ ತಲೆಯಲ್ಲಿ ತುಂಬ್ತಾ ಇದ್ದಾರೆ ನಿನ್ನ ಹೆಂಡ್ತಿ ಎಂದು ಸಿದ್ದು ಹೇಳ್ತಾರೆ. ಅತ್ತಿಗೆ ಅಮ್ಮನ ತಾರಿಣಿ ಮನೆಗೆ ಕರೆದುಕೊಂಡು ಹೋಗಿದ್ದು ತಪ್ಪು. ನನ್ನ ವಿಷ್ಯಕ್ಕೆ ತಲೆ ಹಾಕಿದ್ರೆ ನಾನು ಹೀಗೆ ರಿಯಾಕ್ಟ್ ಮಾಡೋದು. ನಿನ್ನ ಹೆಂಡ್ತಿಯನ್ನು ಕಂಟ್ರೋಲ್ ಮಾಡಿಕೋ ಎನ್ನುತ್ತಾನೆ.
ಈ ಮನೆ ಬಿಟ್ಟು ಹೋಗು ನೀನು ಎಂದು ಆದಿ ಹೇಳ್ತಾನೆ. ಅದಕ್ಕೆ ಸಿದ್ದು ನೀನು ಯಾರು ಮನೆ ಬಿಟ್ಟು ಹೋಗು ಅನ್ನೋಕೆ? ನಿನ್ನ ಹೆಂಡ್ತಿ ಕರೆದುಕೊಂಡು ನೀನು ಆಚೆ ಹೋಗು ಎನ್ನುತ್ತಾನೆ ಸಿದ್ದು.
ಇದನ್ನೂ ಓದಿ: Actress Sudharani: ಪ್ಲೀಸ್ ನಮ್ಮ ಗಂಗಮ್ಮನನ್ನು ಹುಡುಕಿ ಕೊಡಿ: ಶ್ವಾನ ಕಾಣದೆ ಬೇಜಾರಾಗಿರುವ ನಟಿ ಸುಧಾರಾಣಿ!
ಅತ್ತಿಗೆ ಸಂಗೀತಾ ಅಣ್ಣ-ತಮ್ಮನ ಮಧ್ಯೆ ಜಗಳ ತಂದಿದ್ದಾಳೆ. ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರು ಮನೆ ಬಿಟ್ಟು ಹೋಗ್ತಾರೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ