• Home
  • »
  • News
  • »
  • entertainment
  • »
  • Olavina Nildana: ಸಿದ್ಧಾಂತ್ ತನ್ನ ಪ್ರೀತಿ ಹೇಳಿಕೊಳ್ಳೋ ಮೊದಲೇ ತಾರಿಣಿಗೆ ಗುಂಡೇಟು! ಸಾವು-ಬದುಕಿನ ಮಧ್ಯೆ ಹೋರಾಟ!

Olavina Nildana: ಸಿದ್ಧಾಂತ್ ತನ್ನ ಪ್ರೀತಿ ಹೇಳಿಕೊಳ್ಳೋ ಮೊದಲೇ ತಾರಿಣಿಗೆ ಗುಂಡೇಟು! ಸಾವು-ಬದುಕಿನ ಮಧ್ಯೆ ಹೋರಾಟ!

ತಾರಿಣಿಗೆ ಗುಂಡೇಟು

ತಾರಿಣಿಗೆ ಗುಂಡೇಟು

ಸಿದ್ದು ಕೊಲ್ಲಲು ಜಗದೀಶ್ವರಿಯ ಪ್ಲ್ಯಾನ್ ಮಾಡಿರುತ್ತಾಳೆ. ಅಂತೆಯೇ ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಬುಲೆಟ್ ಹಾರಿಸಿಬಿಟ್ಟಿದ್ದಾನೆ. ಸಿದ್ಧಾಂತ್‍ಗೆ ತಗುಲಬೇಕಿದ್ದ ಬುಲೆಟ್ ಮಿಸ್ ಆಗಿ ತಾರಿಣಿಗೆ ತಗುಲಿದೆ.

  • News18 Kannada
  • Last Updated :
  • Karnataka, India
  • Share this:

    ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿಗೆ ಸಿದ್ಧಾಂತ್ ಮೇಲೆ ಪ್ರೀತಿ ಇದೆ. ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇನ್ನು ತಾರಿಣಿ ಮನೆಯವರ ಮುಂದೆ, ಸಿದ್ಧಾಂತ್-ತಾರಿಣಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಪ್ರೀತಿ (Love) ಪಡೆಯಲು ತಾರಿಣಿ ಒದ್ದಾಡುತ್ತಿದ್ದಾಳೆ. ಸಿದ್ಧಾಂತ್ ಗೆ ಈಗ ತಾರಿಣಿ ಮೇಲೆ ತನಗೆ ಪ್ರೀತಿ ಇದೆ ಎಂದು ಗೊತ್ತಾಗಿದೆ. ಅದನ್ನು ಹೇಳಿಕೊಳ್ಳುವ ಮೊದಲೇ ತಾರಿಣಿಗೆ ಗುಂಡೇಟು (Shoot) ಬಿದ್ದಿದೆ. ತಾರಿಣಿ ಈಗ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.


    ಮದುವೆ ಬೇಡ ಎಂದು ತಾರಿಣಿ
    ಸಿದ್ದು ಮತ್ತು ತಾರಿಣಿಗೆ ಸುಳ್ಳು ನಿಶ್ಚಿತಾರ್ಥ ಆಗಿರುತ್ತೆ. ತಾರಿಣಿ ಮನೆಯವರು ಅದನ್ನು ನಿಜ ಎಂದುಕೊಂಡು ಮದುವೆ ತನಕ ಎಲ್ಲಾ ತಯಾರಿ ಮಾಡಿರುತ್ತಾರೆ. ಲಗ್ನ ಪತ್ರಿಕೆ ಪೂಜೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುತ್ತಾರೆ. ಸಿದ್ಧಾಂತ್‍ಗೆ ತಾನು ಇಷ್ಟ ಇಲ್ಲ ಎಂದು ಗೊತ್ತಾಗಿ. ಮನೆಯಲ್ಲಿ ತಾನೇ ಮದುವೆ ಬೇಡ ಎಂದು ಮನೆಯವರ ಬಳಿ ಹೇಳ್ತಾಳೆ.


    ಸಿದ್ಧಾಂತ್ ಬಳಿ ಕ್ಷಮೆ ಕೇಳಿದ ತಾರಿಣಿ ತಾತಾ
    ತಾರಿಣಿ ಇದ್ದಕ್ಕಿದ್ದ ಹಾಗೇ ಮದುವೆ ಬೇಡ ಎಂದಿದ್ದಕ್ಕೆ ಮನೆಯವರು ಬೇಸರ ಮಾಡಿಕೊಂಡಿದ್ದಾರೆ. ಲಗ್ನ ಪತ್ರಿಕೆ ಪೂಜೆ ತನಕ ಬಂದ ಮೇಲೆ ಯಾಕೆ ಮದುವೆ ಬೇಡ ಅಂತಿದ್ದಾಳೆ ಗೊತ್ತಾಗಿಲ್ಲ. ಅಲ್ಲದೇ ತಾರಿಣಿ ತಾತಾ, ಸಿದ್ಧಾಂತ್ ಹಾಗೂ ಅವರಪ್ಪನ ಬಳಿ ಕ್ಷಮೆ ಕೇಳ್ತಾರೆ. ಅದಕ್ಕೆ ನೀವು ದೊಡ್ಡವರು. ಕ್ಷಮೆ ಕೇಳಬಾರದು, ಆಶೀರ್ವಾದ ಮಾಡಬೇಕು ಎಂದು ಸಿದ್ದು ಹೇಳ್ತಾನೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, shootout to tharini, ಒಲವಿನ ನಿಲ್ದಾಣ ಧಾರಾವಾಹಿ, ಸಿದ್ಧಾಂತ್ ತನ್ನ ಪ್ರೀತಿ ಹೇಳಿಕೊಳ್ಳೋ ಮೊದಲೇ ತಾರಿಣಿಗೆ ಗುಂಡೇಟು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ತಾರಿಣಿ ತಾತಾ


    ದುಡುಕಿದ ತಾರಿಣಿ
    ತಾರಿಣಿ, ಸಿದ್ದು ಜೊತೆ ಸುಳ್ಳಿನ ನಿಶ್ಚಿತಾರ್ಥ ಮಾಡಿಕೊಂಡಿರಬಹುದು. ಆದ್ರೆ, ತಾರಿಣಿಗೆ ಸಿದ್ದು ಮೇಲೆ ತುಂಬಾ ಪ್ರೀತಿ ಇದೆ. ಸಿದ್ದು ತನ್ನನ್ನು ಪ್ರೀತಿ ಮಾಡಲಿ ಎಂದು ಏನೇನೋ ಮಾಡ್ತಿದ್ದಾಳೆ. ಮನೆಯಲ್ಲೂ ಸಿದ್ಧಾಂತ್ ನನ್ನು ಒಪ್ಪಿಸುವುದಾಗಿ ಹೇಳಿದ್ಲು. ಆದ್ರೆ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಇಲ್ಲ ಎಂದು ಕೊಂಡು, ಮನೆಯಲ್ಲಿ ತನಗೆ ಸಿದ್ಧಾಂತ್ ನನ್ನು ಮದುವೆ ಆಗಲು ಇಷ್ಟ ಇಲ್ಲ ಎಂದು ಹೇಳುತ್ತಾಳೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಿಂದ ಹೊರ ನಡೆದ ನೇಹಾ ಗೌಡ, ಗೊಂಬೆ ಆಟ ಇಲ್ಲಿಗೇ ಮುಗೀತು! 


    ತಾರಿಣಿ ಐ ಲವ್ ಯು ಹೇಳಲು ಸಿದ್ದು ರೆಡಿ
    ತಾರಿಣಿ ಮೇಲೆ ಸಿದ್ಧಾಂತ್ ಗೂ ಪ್ರೀತಿ ಆಗಿದೆ. ಅದನ್ನು ಅವನು ಅವಳ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿದ್ದ, ಅಷ್ಟರಲ್ಲೇ ತಾರಿಣಿ ಮದುವೆ ಬೇಡ ಎಂದು ಬಿಟ್ಟಿದ್ದಾಳೆ. ಅದಕ್ಕೆ ಸಿದ್ಧಾಂತ್ ತಾರಿಣಿಯ ಬಳಿ ಮಾತನಾಡಲು ಹೋಗಿದ್ದಾನೆ. ಆದ್ರೆ ಅಷ್ಟೋತ್ತಿಗೆ ಗುಂಡಿನ ಸದ್ದು ಕೇಳುತ್ತೆ. ನೋಡಿದ್ರೆ ತಾರಿಣಿಗೆ ಏಟು ಬಿದ್ದಿರುತ್ತೆ.


    colors kannada serial, kannada serial, olavina nildana serial, olavina nildana serial today episode, olavina nildana serial timing, shootout to tharini, ಒಲವಿನ ನಿಲ್ದಾಣ ಧಾರಾವಾಹಿ, ಸಿದ್ಧಾಂತ್ ತನ್ನ ಪ್ರೀತಿ ಹೇಳಿಕೊಳ್ಳೋ ಮೊದಲೇ ತಾರಿಣಿಗೆ ಗುಂಡೇಟು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,s
    ಕಿಲ್ಲರ್


    ಸಿದ್ಧಾಂತ್‍ಗೆ ತಗುಲಬೇಕಿದ್ದ ಗುಂಡು
    ಸಿದ್ದು ಕೊಲ್ಲಲು ಜಗದೀಶ್ವರಿಯ ಪ್ಲ್ಯಾನ್ ಮಾಡಿರುತ್ತಾಳೆ. ಅಂತೆಯೇ ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಬುಲೆಟ್ ಹಾರಿಸಿಬಿಟ್ಟಿದ್ದಾನೆ.


    ಇದನ್ನೂ ಓದಿ: BBK Season 9: ದೀಪವೊಂದು ಆರಿ ಹೋಗಿ ವರುಷವಾಗಿದೆ! ಅಪ್ಪುಗಾಗಿ ಹಾಡು ಬರೆದ ರೂಪೇಶ್ ಶೆಟ್ಟಿ 


    ಸಿದ್ಧಾಂತ್‍ಗೆ ತಗುಲಬೇಕಿದ್ದ ಬುಲೆಟ್ ಮಿಸ್ ಆಗಿ ತಾರಿಣಿಗೆ ತಗುಲಿದೆ. ಆಕೆ ಆಸ್ಪತ್ರೆ ಸೇರಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

    Published by:Savitha Savitha
    First published: