ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಆದ್ರೆ ಈ ಪಾಲಾಕ್ಷ ಮಾಡುತ್ತಿರುವ ಕುತಂತ್ರಕ್ಕೆ ಸಿದ್ದು ತಾರಿಣಿಯನ್ನು ಎತ್ತಕ್ಕೊಂಡು ಹೋಗಿ ಮದುವೆ (Marriage) ಆಗ್ತೀನಿ ಎಂದು ಸವಾಲ್ ಹಾಕ್ತಾ ಇದ್ದಾನೆ.
ಪಾಲಾಕ್ಷನ ಕುತಂತ್ರ
ಪಾಲಾಕ್ಷ ಸಿದ್ದು ಅತ್ತಿಗೆಯ ಸ್ನೇಹ ಮಾಡಿದ್ದಾನೆ. ಸಿದ್ಧಾಂತ್ ಮಾಡೋ ಪ್ರತಿಯೊಂದನ್ನು ಆಕೆಗೆ ತಲುಪಿಸುತ್ತಾನೆ. ಈಗ ಸಿದ್ದು ಮನೆ ಪತ್ರವನ್ನು ಉಮಾಗೆ ಕೊಟ್ಟಿರುವ ವಿಚಾರವನ್ನು ಹೇಳಿದ್ದಾನೆ. ಇದರಿಂದ ಸಿದ್ದು ಮನೆಯಲ್ಲಿ ಗಲಾಟೆ ಆಗಿದೆ. 40 ಲಕ್ಷಕ್ಕೆ ಮನೆ ಪತ್ರವನ್ನೇ ಅವರ ಕೈಗೆ ಕೊಟ್ಟಿದ್ದು ಸರಿ ಇಲ್ಲ ಎಂದು ಹೇಳಿದ್ದಾಳೆ. ಅವರ ಮನೆಯಲ್ಲಿ ಜಗಳವಾಗಲು ಪಾಲಾಕ್ಷನೇ ಕಾರಣ.
ಪಾಲಾಕ್ಷನ ಬಳಿ ಬಂದ ಸಿದ್ದು
ಸಿದ್ಧಾಂತ್ ಪಾಲಾಕ್ಷನ ಬಳಿ ಬಂದು ಮಾತನಾಡುತ್ತಿದ್ದಾನೆ. ಪದೇ ಪದೇ ನಮ್ಮ ಮನೆಯ ವಿಚಾರಕ್ಕೆ ಬರಬೇಡಿ ಎಂದು ಹೇಳ್ತಾನೆ. ಅದಕ್ಕೆ ಪಾಲಾಕ್ಷ ನೀನು ಯಾಕೆ ನಮ್ಮ ಮನೆಯ ವಿಚಾರಕ್ಕೆ ಬರ್ತಿಯಾ? ದೇವಿಕಾ ಧೀರಜ್ ಅಕ್ಕ ಎಂದು ಏಕೆ ತಾರಿಣಿಗೆ ಹೇಳಿದೆ. ಇದರಿಂದ ಅವಳು ನಮ್ಮ ಮೇಲೆ ತುಂಬಾ ಬೇಸರ ಮಾಡಿಕೊಂಡಿದ್ದಾಳೆ ಎಂದು ಹೇಳ್ತಾನೆ.
ತಾರಿಣಿಯನ್ನು ಮದುವೆ ಆಗ್ತೀನಿ
ಪಾಲಾಕ್ಷ ತಾರಿಣಿ ಜೀವನದಲ್ಲಿ ನಿನ್ನ ಪಾತ್ರ ಮುಗಿದಿದೆ. ಅವಳು ಧೀರಜ್‍ನನ್ನು ಮದುವೆ ಆಗ್ತಾಳೆ. ಆದ್ರೂ ನೀನು ಪದೇ ಪದೇ ಆಕೆಯನ್ನು ಮಾತನಾಡಿಸಬೇಡ ಎಂದು ಪಾಲಾಕ್ಷ ಹೇಳ್ತಾನೆ. ಅದಕ್ಕೆ ಸಿದ್ದು ಆ ರೀತಿ ಹೇಳಬೇಡಿ. ನಾನು ತಾರಿಣಿಯನ್ನು ಎತ್ತಕ್ಕೊಂಡು ಹೋಗಿ ಮದುವೆ ಆಗ್ತೀನಿ ಎಂದು ಸಿದ್ದು ಪಾಲಾಕ್ಷನಿಗೆ ಸವಾಲ್ ಹಾಕ್ತಾನೆ. ಆಗ ಪಾಲಾಕ್ಷ ಗಾಬರಿ ಆಗುತ್ತಾನೆ.
ಪೊಲೀಸರಿಗೆ ದೂರು ಕೊಡುತ್ತೇನೆ
ಪಾಲಾಕ್ಷ ಸಿದ್ದು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ. ನೀನು ತಾರಿಣಿ ವಿಷ್ಯಕ್ಕೆ ಬಂದ್ರೆ, ಪೊಲೀಸರಿಗೆ ದೂರು ಕೊಡ್ತೇನೆ. ನೀನು ಮಾತನಾಡಿದ್ದು ರೆಕಾರ್ಡ್ ಆಗಿದೆ. ಇದನ್ನು ಇಟ್ಟುಕೊಂಡು ನಿನ್ನ ಮೇಲೆ ಕಿಡ್ನ್ಯಾಪ್ ಕೇಸ್ ಹಾಕ್ತಾರೆ. ನೀನು ಜೈಲಿನಲ್ಲಿ ಕೊಳೆಯಬೇಕಾಗುತ್ತೆ ಎಂದು ಪಾಲಾಕ್ಷ ಸಿದ್ದುಗೆ ಹೇಳ್ತಾನೆ.
40 ಲಕ್ಷ ಬೇಕು ಎನ್ನುತ್ತಿರುವ ಜಗದೀಶ್ವರಿ
ಸಿದ್ದು ಮನೆ ಉಳಿಸಲು ತಾರಿಣಿ ಧೀರಜ್ ಬಳಿ 40 ಲಕ್ಷ ಪಡೆದಿರುತ್ತಾಳೆ. ಈ ವಿಷ್ಯ ಉಮಾಗೆ ಗೊತ್ತಾಗಿ, ಆಕೆ ಸಿದ್ದುಗೆ ಬೈದಿರುತ್ತಾಳೆ. ಅದಕ್ಕೆ ಸಿದ್ದು ಮನೆ ಪತ್ರ ಕೊಟ್ಟಿರುತ್ತಾನೆ. ಉಮಾ ಆ ಮನೆ ಪತ್ರವನ್ನು ಜಗದೀಶ್ವರಿ ಕೈಯಲ್ಲಿ ಕೊಟ್ಟಿದ್ದಾಳೆ. ಅದಕ್ಕೆ ಜಗದೀಶ್ವರಿ ನನಗೆ 40 ಲಕ್ಷ ದುಡ್ಡು ಅರ್ಜೆಂಟ್ ಬೇಕು. ದುಡ್ಡು ಕೊಟ್ಟು ನಿಮ್ಮ ಮನೆ ಪತ್ರ ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದಾಳೆ. ಆ ದುಡ್ಡು ಜೋಡಿಸಲು ಅನಂತಕೃಷ್ಣ ಒದ್ದಾಡುತ್ತಿದ್ದಾನೆ.
ಇದನ್ನೂ ಓದಿ: Lakshana: ಎಲ್ಲರನ್ನು ಆಟವಾಡಿಸ್ತಿದ್ದ ಡೆವಿಲ್ ಜುಟ್ಟು ಶ್ವೇತಾ ಕೈನಲ್ಲಿ, ಸಿಎಸ್‍ಗೆ ಸತ್ಯ ಗೊತ್ತಾಗುತ್ತಾ?
ಪಾಲಾಕ್ಷನಿಗೆ ಸಿದ್ದು ಬುದ್ಧಿ ಕಲಿಸುತ್ತಾನಾ? ಪಾಲಾಕ್ಷನ ಕುತಂತ್ರದ ಮುಂದೆ ಸಿದ್ದು ಸವಾಲ್ ನಿಲ್ಲಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ