ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿಯನ್ನು ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ಅಮ್ಮ ಎಂದು ನಂಬಿರುವ ಸುಮತಿಯೇ ಆಕೆಯ ಬಾಳಲ್ಲಿ ಹೊಸ ಗೇಮ್ ಆಡುತ್ತಿದ್ದಾಳೆ. ಸಿದ್ದು-ತಾರಿಣಿ ದೂರ ಮಾಡಲು ಪಾಲಾಕ್ಷ ಕುಡಿತ (Drinks) ಎಂಬ ಹೊಸ ಪ್ಲ್ಯಾನ್ ಮಾಡಿದ್ದಾನೆ. ಅದು ಸುಮತಿ ಕೊಟ್ಟಿರು ಐಡಿಯಾ (Idea).
ಸಿದ್ಧಾಂತ್ಗೆ ತಾರಿಣಿ ಪ್ರೀತಿ ಬೇಕು
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.
ತಾರಿಣಿಗೂ ಪ್ರೀತಿ ಇದೆ
ತಾರಿಣಿ ಮನೆಯವರಿಗಾಗಿ ಎಷ್ಟೇ ಸಿದ್ಧಾಂತ್ ಬೇಡ ಅಂದ್ರೂ, ಅವಳಿಗೂ ಅವನ ಮೇಲೆ ಪ್ರೀತಿ ಇದೆ. ಅದು ಆಕೆಗೂ ಗೊತ್ತು. ಸಿದ್ಧಾಂತ್ಗೂ ಗೊತ್ತು. ಅದಕ್ಕೆ ತಾರಿಣಿ ಧೈರ್ಯ ಮಾಡಿ, ಮನೆಯವರಿಗೂ ಭಯಪಡದೇ ಅವನನ್ನು ಮಾತನಾಡಿಸಿದ್ದಾಳೆ. ಅದಕ್ಕೆ ಪಾಲಾಕ್ಷನಿಗೆ ಟೆನ್ಶನ್ ಹೆಚ್ಚಿದೆ.
ಇದನ್ನೂ ಓದಿ: Kannadathi: ವಿಲ್ ಓದಿದ ಭುವಿ, ಸತ್ಯ ಗೊತ್ತಾಗಿ ಸುದರ್ಶನ್-ಸಾನಿಯಾ ಕೆಂಡಾಮಂಡಲ!
ಸಿದ್ಧಾಂತ್-ತಾರಿಣಿ ದೂರ ಮಾಡಲು ಪಾಲಾಕ್ಷನ ಪ್ಲ್ಯಾನ್
ಸಿದ್ದು ಮಾತಿಗೆ ತಾರಿಣಿ ಸಿಗಬಾರದು ಅಂತ ಏನೇನೋ ಪ್ಲ್ಯಾನ್ ಮಾಡಿದ್ರೂ ವರ್ಕ್ ಆಗ್ತಿಲ್ಲ. ಅವಳು ಅವನನನ್ನು ಮರೆಯೋಕೆ ಇನ್ನೂ ಏನಾದ್ರು ಗಟ್ಟಿಯಾದ ಪ್ಲ್ಯಾನ್ ಮಾಡಬೇಕು ಎಂದು ಪಾಲಾಕ್ಷ ಹೇಳ್ತಾನೆ. ಅದಕ್ಕೆ ಸುಮತಿ ನನ್ನ ತಲೆಯಲ್ಲಿ ಒಂದು ಐಡಿಯಾ ಇದೆ ಅದನ್ನು ಬಳಸಬಹುದು ಎಂದು ಹೇಳ್ತಾಳೆ.
ಸುಮತಿ ಕೊಟ್ಲು ಮನೆಹಾಳು ಐಡಿಯಾ!
ಧೀರಜ್ ಜೊತೆ ಮೊದಲು ತಾರಿಗೆ ಮದುವೆ ಸೆಟ್ ಆಗಿತ್ತು. ಧೀರಜ್ ಕೆಟ್ಟವನು ಅಂತ ತಾರಿಣಿ ಮನಸ್ಸಿನಲ್ಲಿ ತುಂಬಿದ್ದು ಯಾರು ಹೇಳಿ. ಆ ಸಿದ್ಧಾಂತ್. ಧೀರಜ್ ಮಾಡೋ ಕೆಲಸ ಆ ತಾರಿಗೆ ಒಂದು ಚೂರು ಇಷ್ಟ ಆಗಲ್ಲ. ಅದು ಅವನು ಕುಡಿಯುತ್ತಾನೆ ಅನ್ನೋ ವಿಷಯ. ಯಾರಾದ್ರೂ ಕುಡಿಯುತ್ತಾರೆ ಎಂದ್ರೆ, ತಾರಿಣಿಗೆ ಕುಡಕರನ್ನು ಕಂಡ್ರೆ ಆಗಲ್ಲ ಎಂದು ಸುಮತಿ ಪಾಲಾಕ್ಷನ ಬಳಿ ಹೇಳಿದ್ದಾಳೆ.
ಕುಡಿಯುವವರು ಅಂದ್ರೆ ತಾರಿಣಿಗೆ ಆಗಲ್ಲ
ಸುಮತಿ ಕೊಟ್ಟ ಪ್ಲ್ಯಾನ್ ಬಳಸಲು ಪಾಲಾಕ್ಷ ಮುಂದಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ತಾರಿಣಿ-ಸಿದ್ದು ಭೇಟಿ ಆಗೋ ರೀತಿ ಮಾಡೋಣ. ಆಗ ತಾರಿಣಿಯೇ ಸಿದ್ದುನನ್ನು ಮನೆಯಿಂದ ಓಡಿಸಬೇಕು. ಆ ರೀತಿ ನಾನು ಮಾಡ್ತೇನೆ ಎಂದು ಪಾಲಾಕ್ಷ ಹೇಳುತ್ತಿದ್ದಾನೆ.
ಇದನ್ನೂ ಓದಿ: Kannada Serials: 2022ರಲ್ಲಿ ಮುಕ್ತಾಯವಾದ ಹೆಸರಾಂತ ಧಾರಾವಾಹಿಗಳು ಇವು!
ಪಾಲಾಕ್ಷನ ಕುತಂತ್ರ ನಡೆಯುತ್ತಾ? ಸಿದ್ದು-ತಾರಿಣಿ ದೂರ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿಒ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ