ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ (Love) ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಆದ್ರೂ ಪಾಲಾಕ್ಷ ಈ ಮದುವೆ (Marriage) ಆಗಲೇ ಬೇಕು ಎಂದು ಎಚ್ಚರವಹಿಸಿದ್ದಾನೆ.
ಧೀರಜ್ ಪರ ಮಾತನಾಡಿದ ತಾರಿಣಿ
ತಾರಿಣಿಯನ್ನು ಧೀರಜ್ ಎನ್ನುವ ಹುಡುಗನ ಜೊತೆ ಮದುವೆ ಮಾಡಬೇಕು ಎಂದು ತಾರಿಣಿ ಮನೆಯವರು ಅಂದುಕೊಂಡಿದ್ದಾರೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಲೇಜಿನಲ್ಲಿ ಧೀರಜ್ಗೆ ಸಿದ್ದು ಏಕವಚನದಲ್ಲಿ ಮಾಡತನಾಡಿಸಿದ್ದಾನೆ. ಅದಕ್ಕೆ ಕೋಪಗೊಂಡ ತಾರಿಣಿ ಧೀರಜ್ ಪರ ಮಾತನಾಡಿದ್ದಾರೆ, ಅವನು ನನ್ನ ಮದುವೆ ಆಗುವ ಹುಡುಗ ಗೌರವ ಕೊಟ್ಟು ಮಾತನಾಡಿ ಎಂದು ಬೈದು ಹೋಗಿದ್ದಾಳೆ.
ಧೀರಜ್ ಮನೆಗೆ ಹಬ್ಬಕ್ಕೆ ಬಂದ ತಾರಿಣಿ
ಸಂಕ್ರಾಂತಿ ಹಬ್ಬಕ್ಕೆ ಧೀರಜ್ ಮನೆಗೆ ತಾರಿಣಿ, ಪಾಲಾಕ್ಷ, ಸುಮತಿ, ದೇವಿಕಾ ಬಂದಿದ್ದಾರೆ. ಅವರಿಗೆ ಧೀರಜ್ ಮನೆಯವರು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಿದ್ದಾರೆ. ತಾರಿಣಿ ಸಹ ಖುಷಿ ಆಗಿದ್ದಾಳೆ. ಮನೆ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾಳೆ. ಧೀರಜ್ ತುಂಬಾ ಬದಲಾಗಿದ್ದಾನೆ ನೀನು ಸಿಕ್ಕ ಮೇಲೆ ಎಂದು ಅವರ ತಾಯಿ ಹೇಳಿದ್ದಾರೆ.
ತಾರಿಣಿ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ ಪಾಲಾಕ್ಷ!
ಧೀರಜ್ ಇರುವಾಗ್ಲೇ ಸಿದ್ಧಾಂತ್ ನಿನ್ನ ಜೊತೆ ಸುಮ್ಮನೇ ಜಗಳ ಮಾಡಿದ್ನಂತೆ. ಅವನು ನಿನ್ನ ಹತ್ರ ಮಾತ್ರ ಅಲ್ಲ. ನನಗೂ ಹಾಗೇ ಮಾಡಿದ. ನಿನ್ನೆ ನನ್ನ ಜೊತೆ ಕಾಲ್ ಮಾಡಿ ಏನೇನೋ ಮಾತನಾಡಿದ. ನನಗೆ ತುಂಬಾ ಬೇಜಾರ್ ಆಯ್ತು.
ತುಂಬ ಅಸಹ್ಯವಾಗಿ ಮಾತನಾಡಿದ. ಧೀರಜ್ ಜೊತೆ ನಿನ್ನ ಮದುವೆ ಸಾಧ್ಯ ಇಲ್ವಂತೆ. ಅವನು ಅವಳನ್ನು ಮದುವೆ ಆಗಲು ಬಿಡಲ್ಲ. ಈ ಜನ್ಮದಲ್ಲಿ ನಾನು ಹುಟ್ಟಿರೋದೇ ತಾರಿಣಿ ಪಡೆಯಲು ಎಂದು ಹೇಳಿದ ಎಂದು ಪಾಲಾಕ್ಷ ಸುಳ್ಳು ಹೇಳಿದ್ದಾನೆ.
ನೀನು ಎಚ್ಚರದಿಂದ ಇರು
ನಿನ್ನ, ಧೀರಜ್ನನ್ನು ದೂರ ಮಾಡೇ ಮಾಡ್ತೀನಿ. ನಾನೇ ಅವಳ ಕುತ್ತಿಗೆಗೆ ತಾಳಿ ಕಟ್ಟುವುದು ಎಂದು ಹೇಳಿ ಸಿದ್ಧಾಂತ್ ವಿಕಾರವಾಗಿ ನಗ್ತಾನೆ. ತುಂಬಾ ಹರ್ಟ್ ಆಯ್ತು. ಪಾಪು ನಿನ್ನ ಹುಷಾರಲ್ಲಿ ನೀನು ಇರಮ್ಮ. ಇದನ್ನು ನಿನಗೆ ನೇರವಾಗಿ ಹೇಳಲು ಬಂದೆ. ಯಾವುದಕ್ಕೂ ನೀನು ಹುಷಾರಾಗಿರು ಪಾಪು ಎಂದ ಪಾಲಾಕ್ಷ ಹೇಳಿದ್ದಾನೆ.
ಹೊಸ ಆಟ ಶುರು ಮಾಡ್ತಾನೆ ಸಿದ್ಧಾಂತ್!
ಪಾಪು ನಿನ್ನ ಮತ್ತು ಧೀರಜ್ನನ್ನು ದೂರ ಮಾಡಲು ಸಿದ್ಧಾಂತ್ ಹೊಸ ಆಟ ಶುರು ಮಾಡಬಹುದು. ಏನೇ ಕಷ್ಟ ಬಂದ್ರೂ, ಅವನು ಏನೇ ಆಟ ಕಟ್ಟಿದ್ರೂ, ಧೀರಜ್ ನ ಮಾತ್ರ ದೂರ ಮಾಡಿಕೊಳ್ಳಬೇಡ. ಎಲ್ಲಾ ಒಳ್ಳೆಯ ರೀತಿ ಆಗೋ ಹಾಗೆ ನೋಡಿಕೋ. ಎಲ್ಲ ನಿನ್ನ ಕೈಯಲ್ಲಿದೆ ಎಂದು ತಾರಿಣಿಗೆ ಪಾಲಾಕ್ಷ ಹೇಳಿದ್ದಾರೆ.
ಇದನ್ನೂ ಓದಿ: Kannadathi Serial: 'ಕನ್ನಡತಿ' ಕೊನೆ ದಿನದ ಶೂಟಿಂಗ್; ಕಲಾವಿದರ ಕಣ್ಣೀರು, ಅಭಿಮಾನಿಗಳಿಗೂ ಬೇಸರ!
ಸಿದ್ಧಾಂತ್ ಮೇಲೆ ಮತ್ತೆ ತಾರಿಣಿ ತಪ್ಪು ತಿಳಿದುಕೊಳ್ತಾಳಾ? ಸಿದ್ದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ