ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಇನ್ನು ಕಾಲೇಜ್ ಎಕ್ಸಾಂನಲ್ಲಿ (Exam) ಸಿದ್ಧಾಂತ್ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾನೆ. ತಾರಿಣಿ ಫೇಲ್ (Fail) ಆಗಿದ್ದಾಳೆ.
ಸಿದ್ಧಾಂತ್ ಡಿಸ್ಟಿಂಕ್ಷನ್ ನಲ್ಲಿ ಪಾಸ್
ಕಾಲೇಜಿನಲ್ಲಿ ಲಾಸ್ಟ್ ಸೆಮ್ ನಲ್ಲಿ ಸಿದ್ಧಾಂತ್ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾನೆ. ಮನೆಯಲ್ಲಿ ಅಷ್ಟು ಕಷ್ಟ ಇದ್ರೂ, ಎಲ್ಲವನ್ನೂ ಮರೆತು, ಓದಿನ ಕಡೆ ಗಮನ ಕೊಟ್ಟು ಪಾಸ್ ಆಗಿದ್ದಾನೆ. ಸಿದ್ಧಾಂತ್‍ಗೆ ಕಾಲೇಜಿನಲ್ಲಿ ಎಲ್ಲರೂ ಧನ್ಯವಾದ ಹೇಳಿದ್ದಾಳೆ. ಸಿದ್ಧಾಂತ್ ತುಂಬಾ ಖುಷಿಯಾಗಿದ್ದಾನೆ. ಅವನ ಸ್ನೇಹಿತರೂ ಸಹ ಸಂತೋಷವಾಗಿದ್ದಾರೆ.
ಫೇಲಾದ ತಾರಿಣಿ
ತಾರಿಣಿ 2 ವಿಷಯಗಳಲ್ಲಿ ಫೇಲ್ ಆಗಿದ್ದಾಳೆ. ಅದಕ್ಕೆ ಬೇಸರ ಮಾಡಿಕೊಂಡು ಕಾಲೇಜಿನಲ್ಲಿ ಯಾರನ್ನೂ ಮಾತನಾಡಿಸದೇ ಹೊರಟಿದ್ದಾರೆ. ಮನೆಯಲ್ಲಿ ಅವರ ಅಮ್ಮ ಉಮಾ ರಿಸಲ್ಟ್ ಕೇಳಿದಾಗ, ರಿಸಲ್ಟ್ ಬಂದಿಲ್ಲ ಅಮ್ಮ, ಮುಂದಿನ ವಾರ ಬರುತ್ತೆ ಎಂದು ಹೇಳಿದ್ದಾಳೆ. ಅದನ್ನು ಕೇಳಿ ಉಮಾ ಸರಿ ಬಿಡು ಮುಂದಿನ ವಾರವೇ ಸ್ವೀಟ್ ಮಾಡೋಣ ಎಂದು ಹೇಳಿದ್ದಾಳೆ.
ಉಮಾಗೆ ಕಾಲ್ ಮಾಡಿದ ಜಗದೀಶ್ವರಿ
ಜಗದೀಶ್ವರಿ ಉಮಾಗೆ ಕಾಲ್ ಮಾಡಿದ್ದಾಳೆ. ತಾರಿಣಿ ರಿಸಲ್ಟ್ ಏನಾಯ್ತು ಎಂದು ಕೇಳಿದ್ದಾಳೆ. ಅದಕ್ಕೆ ಉಮಾ ರಿಸಲ್ಟ್ ಬಂದಿಲ್ಲ. ಮುಂದಿನ ವಾರ ಬರುತ್ತೆ ಎಂದಿದ್ದಾಳೆ. ಅದಕ್ಕೆ ಇಲ್ಲ ಉಮಾ ರಿಸಲ್ಟ್ ಬಂದಿದೆ. ಆ ಸಿದ್ಧಾಂತ್ ನಮ್ಮ ಮನಗೆ ಬಂದಿದ್ದ, ಡಿಸ್ಟಿಂಕ್ಷನ್ ನಲ್ಲಿ ಪಾಸಾದೆ ಎಂದು ಹೇಳಿದ. ನಮ್ಮ ಮುಂದೆ ಧಿಮಾಕು ತೋರಿಸಿ ಹೋದ ಎಂದು ಹೇಳಿದ್ದಾಳೆ. ಅದಕ್ಕೆ ಉಮಾಗೆ ಕೋಪ ಬಂದಿದೆ.
ತಾರಿಣಿಗೆ ಉಮಾ ಕ್ಲಾಸ್
ತಾರಿಣಿಗೆ ಉಮಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಯಾಕಮ್ಮ ನಿದ್ದೆ ಮಾಡೋಕೆ ಬಿಡದೇ ಬೈಯ್ತಾ ಇದ್ದೀಯಾ ಎಂದು ತಾರಿಣಿ ಕೇಳ್ತಾಳೆ. ಅದಕ್ಕೆ ಉಮಾ ಇನ್ನು ಮೇಲೆ ನಿದ್ದೆ ಮಾಡುವುದೇ ಇರುವುದು ಬಿಡಮ್ಮ. ರಿಸಲ್ಟ್ ಬಂದಿಲ್ವಾ ಎಂದು ಉಮಾ ಪ್ರಶ್ನೆ ಮಾಡ್ತಾ ಇದ್ದಾಳೆ. ಆಗಲೂ ತಾರಿಣಿ ಮುಂದಿನ ವಾರ ಎಂದು ಹೇಳ್ತಾಳೆ. ಅದಕ್ಕೆ ಉಮಾ ಕೋಪಮಾಡಿಕೊಂಡು ಸಿದ್ಧಾಂತ್ ರಿಸಲ್ಟ್ ಹೇಗೆ ಬಂತು ಎಂದು ಕೇಳ್ತಾ ಇದ್ದಾಳೆ. ತಾರಿಣಿಗೆ ಕ್ಲಾಸ್ ತೆಗೆದುಕೊಂಡೊಡಿದ್ದಾಳೆ.
ತಾರಿಣಿಗೆ ಮದುವೆ ಭಯ
ತಾರಿಣಿಗೆ ಧೀರಜ್ ಜೊತೆ ಮದುವೆ ಫಿಕ್ಸ್ ಆಗಿದೆ. ಎಕ್ಸಾಂ ಮುಗಿದ ಮೇಲೆ ಮದುವೆ ಎಂದು ಹೇಳಿದ್ದಾರೆ. ಅದಕ್ಕೆ ಈಗ ರಿಸಲ್ಟ್ ಬಂದಿದ್ದು ಹೇಳಿದ್ರೆ, ಮದುವೆ ಮಾಡ್ತಾರೆ ಅಂತ ಭಯ ಪಟ್ಟುಕೊಂಡಿದ್ದಾಳೆ. ಅಲ್ಲದೇ ಫೇಲ್ ಆದ ಕಾರಣ ಮನೆಯಲ್ಲಿ ಇನ್ನೇನು ಹೇಳ್ತಾರೋ ಎಂದು ಆತಂಕಗೊಂಡು ಸುಳ್ಳು ಹೇಳಿದ್ದಾಳೆ.
ಇದನ್ನೂ ಓದಿ: Bhagya Lakshmi: ವೈಷ್ಣವ್ ಮದುವೆ ನಿಲ್ಲಿಸ್ತಾಳಾ ಕೀರ್ತಿ? ಭಾಗ್ಯ-ಲಕ್ಷ್ಮಿ ಇಬ್ಬರಿಗೂ ಶುರುವಾಗಿದೆ ಅನುಮಾನ
ತಾರಿಣಿ ಅಮ್ಮ ಉಮಾಗೆ ಏನ್ ಉತ್ತರ ಕೊಡ್ತಾಳೆ? ಸಿದ್ದು ಕಷ್ಟಗಳೆಲ್ಲಾ ಪರಿಹಾರ ಆದ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ