ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿ ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ತಾರಿಣಿಗೆ ಧೀರಜ್ ಜೊತೆ ನಿಶ್ಚಿತಾರ್ಥ (Engagement) ಮಾಡಲು ತಯಾರಾಗಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಅತ್ತ ತಾರಿಣಿಗೆ ಮತ್ತೆ ಸಿದ್ದು ಮೇಲೆ ಪ್ರೀತಿ (Love) ಹುಟ್ಟುತ್ತಾ ಇದೆ.
ಸಿದ್ಧಾಂತ್‍ಗೆ ತಾರಿಣಿ ಮೇಲೆ ಪ್ರೀತಿ ಸಿಗಲ್ವಾ?
ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ.
ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಳು. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದ, ಆದ್ರೆ ತಾರಿಣಿ ನೀವು ನನಗೆ ಇಲ್ಲ ಎಂದು ಹೇಳಿಬಿಟ್ಟಿದ್ದಾಳೆ.
ಧೀರಜ್ ಜೊತೆ ತಾರಿಣಿ ನಿಶ್ಚಿತಾರ್ಥ
ತಾರಿಣಿ ಎಷ್ಟೇ ಸಿದ್ಧಾಂತ್ ಮೇಲೆ ಪ್ರೀತಿ ಇಲ್ಲ ಎಂದು ಹೇಳಿದ್ರೂ, ಮನೆಯವರಿಗೆ ನಂಬಲು ಆಗುತ್ತಿಲ್ಲ. ಮತ್ತೆ ಎಲ್ಲಿ ತಾರಿಣಿ ಸಿದ್ಧಾಂತ್ ಕಡೆ ವಾಲಿ ಬಿಡ್ತಾಳೋ ಅನ್ನೋ ಭಯ. ಅದಕ್ಕೆ ಧೀರಜ್ ಜೊತೆ ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡಿದ್ದಾರೆ. ತಾರಿಣಿಗೂ ಹೇಳದೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Ramachari: ನಾನು, ನೀನು ಜೊತೆಯಾಗಲು ಸಾಧ್ಯವೇ ಇಲ್ಲ ಎಂದ ರಾಮಾಚಾರಿ, ಚಾರು ಬೇಸರ!
ತಾರಿಣಿ ಮರೆಯುತ್ತೇನೆ ಎಂದ ಸಿದ್ಧಾಂತ್
ನಾನು ತಾರಿಣಿಯನ್ನು ಒಪ್ಪಿಸಲು ಪ್ರಯತ್ನ ಪಟ್ಟಿದ್ದು ನಿಜ. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಆಗ ತಾರಿಣಿ ಮನಸ್ಸಿನಲ್ಲಿ ಏನ್ ಇದೆ ಎಂದು ಗೊತ್ತಿರಲಿಲ್ಲ. ಮನಸ್ಸಿನಲ್ಲಿ ಚಿಕ್ಕ ಆಸೆ ಇತ್ತು. ಆಕೆ ನನ್ನ ಪ್ರೀತಿ ಒಪ್ಪಿಕೊಳ್ಳಬಹುದು ಎಂದು. ಅವಳು ನಿಶ್ಚಿತಾರ್ಥ ಮಾಡಿಕೊಳ್ತೇನೆ ಎಂದು ಒಪ್ಪಿಕೊಂಡಿದ್ದಾಳೆ. ಇದರ ಅರ್ಥ ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಅಪ್ಪನ ಬಳಿ ಸಿದ್ಧಾಂತ್ ತನ್ನ ನೋವು ಹೇಳಿಕೊಂಡಿದ್ದಾನೆ.
ನನಗೂ ಅವಳು ಬೇಡ!
ಅವಳು ಬೇಗ ಬೇಗ ಎಂಗೇಜ್‍ಮೆಂಟ್, ಬೇಗ ಬೇಗ ಮದುವೆ ಮಾಡಿಕೊಂಡ್ರೆ, ನಾನು ತೊಂದ್ರೆ ಕೊಡಲ್ಲ ಅನ್ನೋ ಉದ್ದೇಶ ಅವಳದ್ದು. ನಾನು ಭ್ರಮೆಯಲ್ಲಿ ಬದುಕುತ್ತಿದ್ದೇನೆ. ತಾರಿಣಿ ಮನಸಾರೆ ಇಷ್ಟ ಪಟ್ಟು ಧೀರಜ್‍ನ ಮದುವೆ ಆಗ್ತಿದ್ದಾಳೆ. ಅವಳಿಗೆ ನಾನು ಬೇಡ ಅಂದ್ಮೇಲೆ, ನನಗೂ ಅವಳು ಬೇಡ. ನಾನು ಅವಳನ್ನು ಸಂಪೂರ್ಣವಾಗಿ ಮನಸ್ಸಿನಿಂದ ತೆಗೆಯುತ್ತೇನೆ ಎಂದು ಸಿದ್ದು ಹೇಳಿದ್ದಾನೆ.
ಇತ್ತ ಮತ್ತೆ ತಾರಿಣಿ ಮನಸ್ಸಿನಲ್ಲಿ ಪ್ರೀತಿ
ತಾರಿಣಿ ಸಿದ್ಧಾಂತ್ ಪ್ರೀತಿಯನ್ನು ರಿಜೆಕ್ಟ್ ಮಾಡಿದ್ಲು. ಆದ್ರೆ ಮತ್ತೆ ಅವನ ಮೇಲೆ ಪ್ರೀತಿ ಆಗುತ್ತಿದೆ. ಸಿದ್ಧಾಂತ್ ಮೇಲೆ ನನಗೆ ಕೋಪ ಇಲ್ಲ. ಪ್ರೀತಿ ಮಾತ್ರ ಇದೆ. ಎಷ್ಟೇ ಯೋಚನೆ ಮಾಡಿದ್ರೂ, ಮನೆಯಲ್ಲಿ ಅಮ್ಮ, ಮಾವ ಹೇಳೋ ಮಾತು ನಿಜ ಅಲ್ಲ ಅನ್ನಿಸುತ್ತೆ ಎಂದು ತನಗೆ ತಾನೇ ತಾರಿಣಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Kannadathi: ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್, ಮುಂದಿದೆಯಾ ಬಿಗ್ ಟ್ವಿಸ್ಟ್?
ತಾರಿಣಿಗೆ ಮತ್ತೆ ಪ್ರೀತಿ ಹುಟ್ಟುತ್ತಿದೆ. ಸಿದ್ದು ತಾರಿಣಿ ಮರೆಯಲು ಪ್ರಯತ್ನ ಮಾಡ್ತಾ ಇದ್ದಾನೆ. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ