• Home
  • »
  • News
  • »
  • entertainment
  • »
  • Olavina Nildana: ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್, ಸಿದ್ಧಾಂತ್​ನಿಂದ ದೂರ ಮಾಡಲು ಪ್ರಯತ್ನ

Olavina Nildana: ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್, ಸಿದ್ಧಾಂತ್​ನಿಂದ ದೂರ ಮಾಡಲು ಪ್ರಯತ್ನ

ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್

ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್

ತಾರಿಣಿ ಮನಸ್ಸಿನಲ್ಲಿ ಸಿದ್ಧಾಂತ್ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದಾಳೆ. ಅದನ್ನು ತಾರಿಣಿ ನಂಬುತ್ತಿದ್ದಾಳೆ.ನೀನು ಅವನ ಜೊತೆ ಇನ್ಮುಂದೆ ಮಾತನಾಡಬೇಡ ಎಂದು ಸುಮತಿ ತಾರಿಣಿ ತಲೆಗೆ ತುಂಬಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ತಾರಿಣಿ ಪ್ರೀತಿಯನ್ನು ಮೊದಲೇ ಅರ್ಥ ಮಾಡಿಕೊಳ್ಳದ ಸಿದ್ಧಾಂತ್, ಈಗ ಆಕೆಯ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾನೆ. ಆದ್ರೆ ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾರಿಣಿಗೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮುಡಿಸುತ್ತಿದ್ದಾರೆ. ಅಮ್ಮ (Mother) ಎಂದು ನಂಬಿರುವ ಸುಮತಿಯೇ ಆಕೆಯ ಬಾಳಲ್ಲಿ ಹೊಸ ಗೇಮ್ (Game) ಆಡುತ್ತಿದ್ದಾಳೆ. ತಾನು ಹೇಳಿದಂತೆ ಕೇಳುವ ರೀತಿ ಮೋಡಿ ಮಾಡುತ್ತಿದ್ದಾಳೆ.


    ಸಿದ್ಧಾಂತ್‍ಗೆ ತಾರಿಣಿ ಪ್ರೀತಿ ಬೇಕು
    ಮೊದಲು ಸಿದ್ಧಾಂತ್ ಮತ್ತು ತಾರಿಣಿ ಮಧ್ಯೆ ಸುಳ್ಳಿನ ನಿಶ್ಚಿತಾರ್ಥ ನಡೆದಿರುತ್ತೆ. ತಾರಿಣಿ ಮನೆಯವರು ಮದುವೆ ತನಕ ಬಂದಿರುತ್ತಾರೆ. ಆಗ ತಾರಿಣಿಗೆ ಮಾತ್ರ ಸಿದ್ಧಾಂತ್ ಮೇಲೆ ತುಂಬಾ ಪ್ರೀತಿ ಇರುತ್ತೆ. ಸಿದ್ದುಗೆ ಇರುವುದಿಲ್ಲ. ಅದಕ್ಕೆ ತಾರಿಣಿ ಮನೆಯವರ ಬಳಿ ಹೇಳಿ ಮದುವೆ ಕ್ಯಾನ್ಸಲ್ ಮಾಡಿಸಿದ್ದಾಳೆ. ಆದ್ರೆ ಈಗ ಸಿದ್ದುಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆಕೆಯನ್ನು ಹೇಗಾದ್ರೂ ಒಪ್ಪಿಸಬೇಕು ಎಂದು ಒದ್ದಾಡುತ್ತಿದ್ದಾನೆ.


    ಸಿದ್ದು-ತಾರಿಣಿ ಮಧ್ಯೆ ಅಡ್ಡ ಗೋಡೆಯಾದ ಪಾಲಾಕ್ಷ
    ತಾರಿಣಿ ಮಾವ ಪಾಲಾಕ್ಷ. ಆತನಿಗೆ ತಾರಿಣಿ ಸಿದ್ದು ಜೊತೆ ಮದುವೆ ಆಗುವುದು ಇಷ್ಟ ಇಲ್ಲ. ತಾರಿಣಿ ಧೀರಜ್ ನನ್ನು ಮದುವೆ ಆಗಬೇಕು. ಅದಕ್ಕೆ ಈ ಕುತಂತ್ರ ಮಾಡುತ್ತಿದ್ದಾರೆ. ಸಿದ್ದು-ತಾರಿಣಿ ಎಲ್ಲೂ ಕೂಡ ಮಾತನಾಡಬಾರದು ಎಂದು ಆಕೆಯ ಜೊತೆಯೇ ಕಾಲೇಜಿಗೆ ಬರುತ್ತಿದ್ದಾರೆ.


    ಇದನ್ನೂ ಓದಿ: Lakshana: ಅಪ್ಪನನ್ನು ಕಾಪಾಡಿದ ನಕ್ಷತ್ರಾ, ಭೂಪತಿ ಪತ್ನಿ ಕೊಲ್ಲಲು ಬಂದ ತಮ್ಮ ಮೌರ್ಯ! 


    ಸಿದ್ಧಾಂತ್ ಮಾತು ನಂಬದ ತಾರಿಣಿ
    ಸಿದ್ಧಾಂತ್ ಪಾಲಾಕ್ಷನ ಕಣ್ಣು ತಪ್ಪಿಸಿ, ತಾರಿಣಿ ಜೊತೆ ಮಾತನಾಡುವ ಪ್ರಯತ್ನ ಮಾಡ್ತಾ ಇದ್ದಾನೆ. ಆದ್ರೂ ತಾರಿಣಿ, ನಿನ್ನ ಜೊತೆ ಮಾತನಾಡುವುದು ಏನೂ ಇಲ್ಲ. ನಿನ್ನ ನನ್ನ ಮಧ್ಯೆ ಏನೂ ಇಲ್ಲ. ನನಗೆ ನಿನ್ನ ಜೊತೆ ಮಾತನಾಡುಲು ಇಷ್ಟ ಇಲ್ಲ. ಸುಮ್ಮನೇ ತೊಂದ್ರೆ ಕೊಡಬೇಡ ಸಿದ್ಧಾಂತ್.


    ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿಸಿಕೊಂಡ ಸಿದ್ಧಾಂತ್‍ಗೆ ನಿಜಕ್ಕೂ ಶಾಕ್ ಆಗಿದೆ. ಅಷ್ಟು ಪ್ರೀತಿ ಮಾಡ್ತಾ ಇದ್ದ ಹುಡುಗಿ ಬದಲಾಗಿದ್ದಾಳೆ ಎಂದು ಬೇಸರ ಮಾಡಿಕೊಂಡಿದ್ದಾನೆ.


    colors kannada serial, kannada serial, olavina nildana serial, tharini reject the siddhant, olavina nildana serial today episode, olavina nildana serial timing, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್, ಸಿದ್ಧಾಂತ್ ಮಾತನಾಡಿಸಿದ ತಾಕೀತು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸಿದ್ಧಾಂತ್


    ಸುಮತಿ ಹೊಸ ಗೇಮ್
    ಈ ಧಾರಾವಾಹಿಯಲ್ಲಿ ಪಾಲಾಕ್ಷನ ಹೆಂಡತಿ ಸುಮತಿ ಕುತಂತ್ರಿ. ತನಗೆ ಮಕ್ಕಳಾಗದ ಕಾರಣ ತಾರಿಣಿ ಅಮ್ಮ ನನಗೆ ಅವಮಾನ ಮಾಡಿದ್ದಾರೆ ಎಂದು, ಎಲ್ಲರಿಗೂ ನೋವು ಮಾಡಲು ಹೊರಟಿದ್ದಾಳೆ. ತಾರಿಣಿ ಮನಸ್ಸಿನಲ್ಲಿ ಸಿದ್ಧಾಂತ್ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದಾಳೆ. ಅದನ್ನು ತಾರಿಣಿ ನಂಬುತ್ತಿದ್ದಾಳೆ.


    colors kannada serial, kannada serial, olavina nildana serial, tharini reject the siddhant, olavina nildana serial today episode, olavina nildana serial timing, ಒಲವಿನ ನಿಲ್ದಾಣ ಧಾರಾವಾಹಿ, ತಾರಿಣಿ ಬಾಳಲ್ಲಿ ಸುಮತಿ ಹೊಸ ಗೇಮ್, ಸಿದ್ಧಾಂತ್ ಮಾತನಾಡಿಸಿದ ತಾಕೀತು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಸುಮತಿ


    ಸಿದ್ಧಾಂತ್ ತುಂಬಾ ಸುಳ್ಳು ಹೇಳುವುದನ್ನು ಕಲಿತಿದ್ದಾನೆ ನೋಡು ನಿನ್ನನ್ನು ಒಲಿಸಿಕೊಳ್ಳಲು, ಊರಿಗೆಲ್ಲಾ ಒಂದು ದಾರಿಯಾದ್ರೆ, ಈ ಎಡವಟ್ಟನಿಗೆ ಒಂದು ದಾರಿಯಂತೆ. ಸಿದ್ಧಾಂತ್ ಬಗ್ಗೆ ನಾವು ಯಾಕೆ ಸುಳ್ಳು ಹೇಳಬೇಕು? ಅದರಿಂದ ನಮಗೆ ಏನ್ ಸಿಗುತ್ತೆ. ಅವತ್ತು ನೋಡಿದ್ರೆ ಮನೆಯಲ್ಲಿ ನಿಮ್ಮ ಮಾವನ ಮೇಲೆ ಕೈ ಮಾಡಿದ. ವಯಸ್ಸಾದವರು ಅಂತ ನೋಡೇ ನಿಮ್ಮ ತಾತಾನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂದು ಸುಮತಿ ತಾರಿಣಿ ಬಳಿ ಹೇಳಿದ್ದಾಳೆ.


    ಇದನ್ನೂ ಓದಿ: Bigg Boss Sanya: ಬಿಗ್ ಬಾಸ್​ನಿಂದ ಔಟ್ ಆದ ಸಾನ್ಯಾ ಐಯ್ಯರ್ ಟೆಂಪಲ್ ರನ್ 


    ಕಾಲೇಜಿನಲ್ಲಿ ನಿಮ್ಮ ಮಾವನಿಗೆ ಇವತ್ತು, ಕಾಲು ಮುರಿಯುವ ಹಾಗೇ ಹೊಡೆದು ಕಳಿಸಿದ್ದಾನೆ. ಇವನ ಬಗ್ಗೆ ನಾವು ಪ್ರೀತಿ, ಕಾಳಜಿ ವಹಿಸಬೇಕಾ? ಅವನಿಗೆ ಸಂಬಂಧಗಳ ಬಗ್ಗೆ ಇಲ್ಲ. ನೀನು ಅವನ ಜೊತೆ ಇನ್ಮುಂದೆ ಮಾತನಾಡಬೇಡ ಎಂದು ಸುಮತಿ ತಾರಿಣಿ ತಲೆಗೆ ತುಂಬಿದ್ದಾಳೆ.

    Published by:Savitha Savitha
    First published: