ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು (Love) ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪ್ಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇನ್ನು ಧೀರಜ್ ತಾರಿಣಿಯನ್ನು ಏಕೆ ಮದುವೆ (Marriage) ಆಗ್ತಾ ಇದ್ದೀನಿ ಎಂದು ಸಿದ್ಧಾಂತ್ ಬಳಿ ಹೇಳಿದ್ದಾನೆ.
ದೇವಿಕಾ ಧೀರಜ್ ಅಕ್ಕ
ತಾರಿಣಿ ಈಗ ದೇವಿಕಾ ಅನ್ನುವವರ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಅದು ಸುಮತಿಯ ನೆಂಟರ ಮನೆ ಎಂದು ಹೇಳಲಾಗಿತ್ತು. ಆದ್ರೆ ದೇವಿಕಾ ಧೀರಜ್ ಅಕ್ಕ. ಅದು ಸಿದ್ಧಾಂತ್‍ಗೆ ಗೊತ್ತಾಗುತ್ತೆ. ತಾರಿಣಿ ಬಳಿ ಹೋಗಿ ನಿಜ ಹೇಳ್ತಾನೆ. ತಾರಿಣಿ ನಿನ್ನ ಸುತ್ತ ಇರುವವರು ನಿನಗೆ ಮೋಸ ಮಾಡ್ತಾ ಇದ್ದಾರೆ. ಹುಷಾರಾಗಿರು ಎಂದು ಹೇಳ್ತಾನೆ. ಅದನ್ನು ಕೇಳಿ ತಾರಿಣಿಗೆ ಶಾಕ್ ಆಗಿದೆ. ಸುಮತಿಗೆ ಬೈದಿದ್ದಾಳೆ.
ಸಿದ್ದು ಅಪ್ಪ ಅನಂತಕೃಷ್ಣಾಗೆ ಅವಮಾನ
ಸಿದ್ಧಾಂತ್ ಅಪ್ಪ ಅನಂತಕೃಷ್ಣ ಧೀರಜ್ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ಅದು ಸಿದ್ದುಗೆ ಗೊತ್ತಾಗುತ್ತೆ. ಸಿದ್ದು ಮುಂದೆಯೇ ಜಗದೀಶ್ವರಿ ಮತ್ತು ಧೀರಜ್ ಅನಂತಕೃಷ್ಣಾಗೆ ಅವಮಾನ ಮಾಡಿದ್ದಾರೆ. ಅದನ್ನು ನೋಡಿ ಕೋಪಗೊಂಡ ಸಿದ್ಧಾಂತ್ ಧೀರಜ್ ಹೊಡೆದಿದ್ದಾನೆ. ನೀವೆಲ್ಲಾ ಸೇರಿಕೊಂಡು ತಾರಿಣಿಗೆ ಮೋಸ ಮಾಡ್ತಾ ಇದ್ದೀರಿ ಎಂದು ಹೇಳಿದ್ದಾನೆ.
ತಾರಿಣಿ ಅವಮಾನ ಮರೆಯೋಲ್ಲ
ನಮ್ಮಿಬ್ಬರಿಗೆ ಮೊದಲ ಸಲ ಎಂಗೇಜ್‍ಮೆಂಟ್ ಆದಾಗ ತಾರಿಣಿ ಏನ್ ಮಾಡಿದ್ಲು. ನಾನೊಬ್ಬ ದೊಡ್ಡ ಮೋಸಗಾರ ಅನ್ನುವ ರೀತಿ ಮಾಡಿದ್ಲು. ಎಲ್ಲರ ಎದುರು ಕೆನ್ನೆಗೆ ಹೊಡೆದ್ಲು. ಅದನ್ನು ಮರೆತು ಅಷ್ಟಕ್ಕೆ ಬಿಟ್ಟು ಬಿಡ್ತೀನಿ ಅಂದುಕೊಂಡ್ಯಾ? ಆಗ ಅವಳು ಹೊಡೆದಿದ್ದು ಮರೆತಿಲ್ಲ. ಈಗ ನಾನು ಅವಳ ಕಣ್ಣಿಗೆ ತುಂಬಾ ಒಳ್ಳೆಯವನು. ಅವಳು ನನ್ನ ನಂಬೋ ತರ ಮಾಡಿಕೊಂಡಿದ್ದೇನೆ ಎಂದು ಧೀರಜ್ ಸಿದ್ದು ಮುಂದೆ ಹೇಳ್ತಾನೆ.
ಸೇಡು ತೀರಿಸಿಕೊಳ್ತೇನೆ
ಅವಳು ಕೇಳಿದ ತಕ್ಷಣ ಒಂದೆರೆಡು ಅಲ್ಲ, 40 ಲಕ್ಷ ಜೋಡಿಸಿ ಕೊಟ್ಟೆ. ನೋಡಿದೆ ತಾನೇ. ಈಗ ತಾರಿಣಿ ನನ್ನ ಮಾತ್ರ ನಂಬ್ತಾಳೆ. ನಾನು ಏನೇನು ಹೇಳ್ತೀನೋ ಅದನ್ನೇ ಕೇಳ್ತಾಳೆ. ಮುಂದೆ ನಾನು ಅವಳನ್ನು ಮದುವೆ ಆಗ್ತೀನಿ. ನನ್ನ ಸೇಡುನ್ನು ತೀರಿಸಿಕೊಳ್ತೇನೆ. ನೀನು ಸುಮ್ನೆ ಕೈಕಟ್ಟಿಕೊಂಡು ನೋಡ್ತಾ ನಿಂತಿರಬೇಕು ಎಂದು ಧೀರಜ್ ಹೇಳ್ತಾನೆ. ಅವನ ಮಾತು ಕೇಳಿ ಸಿದ್ಧಾಂತ್‍ಗೆ ಕೋಪ ಬಂದಿದೆ. ಮುಂದೆ ಏನ್ ಮಾಡ್ತಾನೆ ನೋಡಬೇಕು.
ಸುಮತಿಗೆ ಉಮಾ ಕ್ಲಾಸ್
ದೇವಿಕಾ ಧೀರಜ್ ಅಕ್ಕ ಅನ್ನುವುದನ್ನು ಮುಚ್ಚಿಟ್ಟಿದ್ದಕ್ಕೆ ಸುಮತಿ ಮೇಲೆ ಉಮಾ ಕೋಪಗೊಂಡಿದ್ದಾಳೆ. ನಿನ್ನ ಬಳಿ ಏನಾಯ್ತು ಎಂದು ಕೇಳಿದ್ದಕ್ಕೆ ಏನ್ ಹೇಳಿದೆ ನೀನು. ದೊಡ್ಡ ವಿಷ್ಯ ಏನು ಇಲ್ಲ.ನೀನು ಬರುವಂತದ್ದು ಏನು ಇಲ್ಲ ಎಂದು ಎಂದು ಹೇಳಿದೆ.
ಇಷ್ಟು ದೊಡ್ಡ ಸುಳ್ಳು ಹೇಳಿದ್ದು ನಿನಗೆ ದೊಡ್ಡ ವಿಷ್ಯ ಅಲ್ವಾ? ನಮ್ಮನ್ನು ಯಾಮಾರಿಸಿ ಏನ್ ಮಾಡಬೇಕು ಅಂದುಕೊಂಡಿದ್ದೆ? ಯಾಕ್ ಸತ್ಯ ಮುಚ್ಚಿಟ್ಟೆ? ನನ್ನ ಮೇಲೆ ಸೇಡು ತೀರಿಸಿಕೊಳ್ತಾ ಇದ್ದೀಯಾ ಎಂದು ಸುಮತಿಗೆ ಉಮಾ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಇದನ್ನೂ ಓದಿ: Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್
ಸಿದ್ದು ತಾರಿಣಿ-ಧೀರಜ್ ಮದುವೆ ತಪ್ಪಿಸುತ್ತಾನಾ? ಧೀರಜ್ ಸೇಡಿನ ಬಗ್ಗೆ ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ