ಎಲ್ಲೂ ಸ್ಟಾಪ್ ಆಗದೆ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿಗೆ ಧೀರಜ್ ಜೊತೆ ಮದುವೆ ಫಿಕ್ಸ್ ಆಗಿದೆ. ಆದ್ರೆ ತಾರಿಣಿ ಸಿದ್ಧಾಂತ್‍ನನ್ನು ಪ್ರೀತಿ (Love) ಮಾಡ್ತಾ ಇದ್ದಾಳೆ. ಇನ್ನೆರೆಡು ದಿನದಲ್ಲಿ ಮದುವೆ (Marriage) ಇದ್ದು, ತಾರಿಣಿ ಸಂಕಟ ಪಡುತ್ತಿದ್ದಾಳೆ.
ಮೆಹಂದಿ ಶಾಸ್ತ್ರವೂ ಮುಕ್ತಾಯ
ತಾರಿಣಿಗೆ ಮದುವೆ ಇಷ್ಟ ಇಲ್ಲ. ಆದ್ರೂ ಎಲ್ಲಾ ಶಾಸ್ತ್ರಗಳು ನಡೆಯುತ್ತಿವೆ. ಮೆಹಂದಿ ಶಾಸ್ತ್ರವೂ ಮುಗಿದಿದೆ. ತಾರಿಣಿ ಕೈನಲ್ಲಿ ಧೀರಜ್ ತನ್ನ ಹೆಸರನ್ನು ಬರೆದಿದ್ದಾನೆ. ಮದುವೆ ಆಗಲಿ ತಾರಿಣಿ, ನಿನಗೆ ನರಕ ಏನು ಎಂದು ತೋರಿಸುತ್ತೇನೆ. ನನ್ನನ್ನೇ ಅವಮಾನ ಮಾಡಿದ್ದೇ ತಾನೇ, ಅದಕ್ಕೆಲ್ಲಾ ನೀನು ಉತ್ತರ ನೀಡಲೇಬೇಕು ಎಂದು ಮನಸ್ಸಿನಲ್ಲಿ ಹೇಳಿಕೊಳ್ತಾ ಇದ್ದಾನೆ.
ಸಿದ್ಧಾಂತ್ ನೆನಪು ಮಾಡಿದ ಸುಮತಿ
ಎಲ್ಲಾ ಸರಿ ಇದೆ ಅಂದ್ರೆ ಸುಮತಿ ಅಲ್ಲಿ ಏನಾದ್ರೂ ಕೆಡುಕು ಮಾಡಬೇಕು ಎಂದು ಕಾಯ್ತಾ ಇರ್ತಾಳೆ. ತಾರಿಣಿ ಬಳಿ ಹೋಗಿ ಸಿದ್ಧಾಂತ್‍ನನ್ನು ಹೇಗೆ ಮರೆಯುತ್ತೀಯಾ ಎಂದು ಕೇಳ್ತಾ ಇದ್ದಾಳೆ. ಯಾರೂ ನನ್ನ ಮನಸ್ಸು ಬದಲಾಯಿಸಬೇಕಿಲ್ಲ. ಸಿದ್ಧಾಂತ್ ನನ್ನ ಬದುಕಿನಿಂದ ದೂರ ಹೋಗಿದ್ದಾರೆ. ನನ್ನ ಮನಸ್ಸಿನಿಂದನೂ ದೂರ ಕಳಿಸುತ್ತೇನೆ. ಹೊಸ ಜೀವನ ಕಟ್ಟಿಕೊಳ್ಳೋಕೆ ಆಸ್ಟ್ರೇಲಿಯಾಗೆ ಹೋಗತೀರೋ ಸಿದ್ಧಾಂತ್ ಗೆ ನಾನು ಅಡ್ಡ ಆಗಲ್ಲ.
ಧೀರಜ್ ಕೈನಲ್ಲಿ ತಾಳಿ ಕಟ್ಟಿಸಿಕೊಳ್ಳೋವರೆಗೂ ಇದನ್ನು ಮಾತನಾಡಬೇಡಿ. ನನ್ನ ಮನಸ್ಸಿಗೆ ಹಿಂಸೆ ಆಗುತ್ತೆ ಇದನ್ನು ದಯವಿಟ್ಟು ಇಲ್ಲಿಗೆ ಬಿಟ್ಟು ಬಿಡಿ ಎಂದಿದ್ದಾಳೆ ತಾರಿಣಿ.
ನಿನ್ನ ಮನಸ್ಸಿನಲ್ಲಿ ಏನಿದೆ?
ನಿಮ್ಮ ಬಾಯಿ ಮುಚ್ಚಿಸಬಹುದು, ನಿನ್ನ ಕೈನಲ್ಲಿ ಸಿದ್ಧಾಂತ್‍ನನ್ನು ಮರೆಯಲು ಆಗುತ್ತಾ ಎಂದು ತಾರಿಣಿ ತಾತಾ ಕೇಳಿದ್ದಾರೆ. ಹೆಂಡ್ತಿ ಅಂತ ಒಬ್ಬರ ಕೈನಲ್ಲಿ ತಾಳಿ ಕಟ್ಟಿಸಿಕೊಂಡ ಮೇಲೆ, ಆ ಹೆಂಡ್ತಿ ಸ್ಥಾನಾನಾ, ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಒಬ್ಬರ ಕೈನಲ್ಲಿ ತಾಳಿಸಿಕಟ್ಟಿಕೊಂಡು, ಇನ್ನೊಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ತುಂಬಾ ತಪ್ಪು. ಆ ರೀತಿ ಮಾಡಿದ್ರೆ ನಿನ್ನ ಗಂಡನಿಗೂ ದ್ರೋಹ ಮಾಡಿದ ಹಾಗೇ ಆಗುತ್ತೆ. ನಿನಗೂ ದ್ರೋಹ ಮಾಡಿಕೊಂಡ ರೀತಿ ಆಗುತ್ತೆ ಎಂದು ತಾತಾ ಹೇಳಿದ್ದಾರೆ.
ಬೇಸರದಿಂದ ಹೋದ ತಾರಿಣಿ
ತಾತಾ ಕೇಳಿದ ಪ್ರಶ್ನೆಗಳಿಗೆ ತಾರಿಣಿ ಏನೂ ಉತ್ತರ ಹೇಳಲಾಗದೇ ಬೇಸರದಿಂದ ಹೋಗಿದ್ದಾಳೆ. ಎರಡು ದಿನದಲ್ಲಿ ಮದುವೆ ಇದೆ. ಈಗ ಏನು ಮಾಡೋಕೆ ಆಗುತ್ತೆ ಎಂದು ನೊಂದುಕೊಂಡಿದ್ದಾಳೆ. ಅಲ್ಲದೇ ಸಿದ್ಧಾಂತ್ ಬಳಿ ತನ್ನ ಪ್ರೀತಿ ಹೇಳಿಕೊಳ್ಳಲು ಆಗಲೇ ಇಲ್ಲ ಎಂದ ಅಳುಕು ಅವಳನ್ನು ಕಾಡುತ್ತಿದೆ.
ವಿದೇಶಕ್ಕೆ ಹೊರಡಲು ಸಿದ್ಧಾಂತ್
ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಜಾಬ್ ಸಿಕ್ಕಿದೆ. 4 ಲಕ್ಷ ಸಂಬಳ. ಅದಕ್ಕೆ ತುಂಬಾ ಖುಷಿಯಾಗಿದ್ದಾನೆ. ಮನೆಯವರು ಅಷ್ಟೇ ಖುಷಿಯಾಗಿದ್ದಾರೆ. ಇನ್ಮುಂದೆ ನಮ್ಮ ಕಷ್ಟ ಎಲ್ಲಾ ತೀರಿತು. ನಾವು ಖುಷಿಯಾಗಿರಬಹುದು ಎಂದುಕೊಂಡಿದ್ದಾರೆ.
ಇದನ್ನೂ ಓದಿ: Shrirasthu Shubhamasthu: ಮಾಧವನ ಸಹಾಯಕ್ಕೆ ಬಂದಾಯ್ತು ತುಳಸಿ, ಇನ್ನು ಗೆಲ್ಲುವುದೊಂದೇ ಸವಾಲು!
ತಾರಿಣಿ ಮದುವೆ ಯಾರ ಜೊತೆ ಆಗುತ್ತೆ. ಧೀರಜ್ ಜೊತೆನಾ? ಸಿದ್ಧಾಂತ್ ಜೊತೆನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ