ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ( Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಧಾರಾವಾಹಿಯಲ್ಲಿ ಒಂದೆಡೆ ತಾರಿಣಿ ಮದುವೆ (Marriage) ಸಂಭ್ರಮ ನಡೆಯುತ್ತಿದೆ. ಇನ್ನೊಂದೆಡೆ ಸಿದ್ಧಾಂತ್ ಕುಟುಂಬ (Family) ಬೀದಿಗೆ ಬಿದ್ದಿದೆ.
ತಾರಿಣಿ ಮದುವೆ ಸಂಭ್ರಮ
ತಾರಿಣಿಗೆ ಧೀರಜ್ ಜೊತೆ ಮದುವೆ ನಿಶ್ಚಯ ಆಗಿದೆ. ಅದಕ್ಕೆ ಜಗದೀಶ್ವರಿ ಬೇಗ ಮದುವೆ ಮಾಡಿ ಮುಗಿಸೋಣ ಎಂತಿದ್ದಾಳೆ. ತಾರಿಣಿಗೆ ಯಾರು ಏನೇ ಹೇಳಿದ್ರೂ ಧೀರಜ್ ಮೇಲೆ ಪ್ರೀತಿ ಹುಟ್ಟುತ್ತಿಲ್ಲ. ಅದಕ್ಕೆ ತಾರಿಣಿ ಮದುವೆ ತಯಾರಿಗೆ ಸಮಯ ಕೊಡಿ ಎಂದು ಕೇಳುತ್ತಿದ್ದಾಳೆ. ಆದ್ರೆ ಜಗದೀಶ್ವರಿ ಸಮಯ ಕೊಡುತ್ತಿಲ್ಲ.
ಸಿದ್ದು ಮೇಲೆ ಇನ್ನೂ ಪ್ರೀತಿ ಇದೆ
ತಾರಿಣಿಗೆ ಸಿದ್ಧಾಂತ್ ಮೇಲೆ ಇನ್ನೂ ಪ್ರೀತಿ ಇದೆ. ಅದಕ್ಕೆ ಧೀರಜ್ ನನ್ನು ಮದುವೆ ಆಗಲು ಚಿಂತೆ ಮಾಡುತ್ತಿದ್ದಾಳೆ. ಅದಕ್ಕೆ ಜಗದೀಶ್ವರಿ ನೀವು ಏನೂ ಚಿಂತೆ ಮಾಡಬೇಡಿ, ಮದುವೆ ತಯಾರಿ ನಾನು ನೋಡಿಕೊಳ್ತೇನೆ. ನೀವು ಹೆಣ್ಣು ಕರೆದುಕೊಂಡು ಬನ್ನಿ ಸಾಕು ಎನ್ನುತ್ತಿದ್ದಾಳೆ. ತಾರಿಣಿಗೆ ಆತಂಕವಾಗುತ್ತಿದೆ. ಮದುವೆ ನಡೆದೇ ಬಿಡುತ್ತೆ ಎನ್ನುವ ಭಯದಲ್ಲಿದ್ದಾಳೆ.
ಬೀದಿಗೆ ಬಿದ್ದ ಸಿದ್ಧಾಂತ್ ಕುಟುಂಬ
ಸಿದ್ಧಾಂತ್ ಅಪ್ಪ ಅನಂತಕೃಷ್ಣ ಮಾಡಿದ ಸಾಲದಿಂದ ಸಿದ್ದು ಕುಟುಂಬ ಬೀದಿಗೆ ಬಿದ್ದಿದೆ. ಅನಂತಕೃಷ್ಣ ಮನೆ ಮೇಲೆ 40 ಲಕ್ಷ ಸಾಲ ಮಾಡಿರುತ್ತಾರೆ. ಅದನ್ನು ಬ್ಯಾಂಕ್ ಗೆ ಕಟ್ಟಿರಲ್ಲ. ಅದಕ್ಕೆ ತಾರಿಣಿ ಧೀರಜ್ ಬಳಿ 40 ಲಕ್ಷ ಪಡೆದು ಸಿದ್ದು ಅಪ್ಪನಿಗೆ ನೀಡಿರುತ್ತಾಳೆ. ಅದರಿಂದ ಆಗ ಮನೆ ಉಳಿದಿರುತ್ತೆ. ಆದ್ರೆ ಜಗದೀಶ್ವರಿ ಕುತಂತ್ರಕ್ಕೆ ಸಿದ್ದು ಕುಟುಂಬ ಬೀದಿಗೆ ಬಿದ್ದಿದೆ.
ಮನೆ ದಾಖಲೆ ಜಗದೀಶ್ವರಿ ಬಳಿ
ತಾರಿಣಿ ಸಹಾಯ ಮಾಡಿದ್ದು ಗೊತ್ತಾಗಿ, ಆಕೆ ಅಮ್ಮ ಉಮಾ ಸಿದ್ದುಗೆ ಬಾಯಿಗೆ ಬಂದಂತೆ ಬೈದಿರುತ್ತಾಳೆ. ಅದಕ್ಕೆ ಸಿದ್ಧಾಂತ್ ತಮ್ಮ ಮನೆ ಪತ್ರ ಕೊಟ್ಟಿರುತ್ತಾನೆ. ಅದನ್ನು ಉಮಾ ಜಗದೀಶ್ವರಿ ಕೈನಲ್ಲಿ ಕೊಟ್ಟಿರುತ್ತಾಳೆ. ಅದಕ್ಕೆ ಜಗದೀಶ್ವರಿ ತನಗೆ ತಕ್ಷಣ 40 ಲಕ್ಷ ಬೇಕೇ ಬೇಕು ಎನ್ನುತ್ತಾಳೆ. ಸಿದ್ಧಾಂತ್ ಕುಟುಂಬಕ್ಕೆ ಅದನ್ನು ಜೋಡಿಸಲು ಆಗಲಿಲ್ಲ.
ಮನೆಗೆ ರೌಡಿಗಳ ಕಾಟ
ಅಷ್ಟಕ್ಕೆ ಸುಮ್ಮನಾಗದ ಜಗದೀಶ್ವರಿ ಮನೆಗೆ ರೌಡಿಗಳನ್ನು ಕಳಿಸುತ್ತಾಳೆ. ದುಡ್ಡು ಕೊಡುವವರೆಗೂ ನಾವು ಇದೇ ಮನೆಯಲ್ಲಿ ಇರುತ್ತೇವೆ ಎಂದು ಹೇಳ್ತಾರೆ. ಅಲ್ಲದೇ ಸಿದ್ದು ಅತ್ತಿಗೆ ಸಂಗೀತಾ ಮೇಲೆ ತಮ್ಮ ಕೆಟ್ಟ ಕಣ್ಣು ಹಾಕ್ತಾರೆ. ಅದಕ್ಕೆ ಮನೆಯವರು ಬೇರೆ ದಾರಿ ಇಲ್ಲ ಎಂದು ಮನೆ ಬಿಟ್ಟು ಬಂದಿದ್ದಾರೆ. ಸಿದ್ದು ಅವರಿಗೆ ನೆಲೆ ಇಲ್ಲದೇ ಬೀದಿ ಬೀದಿ ತಿರುಗುತ್ತಿದ್ದಾರೆ.
ಇದನ್ನೂ ಓದಿ: Anupama Gowda: ಅನುಪಮಾ ನ್ಯೂ ಲುಕ್, ಕ್ಯೂಟ್-ಕ್ಯೂಟ್ ಸ್ಮೈಲ್ ಕೊಟ್ಟ 'ಅಕ್ಕ'!
ಸಿದ್ದು ಈಗ ಏನ್ ಮಾಡ್ತಾನೆ. ತಾರಿಣಿ ಮದುವೆ ನಡೆಯುತ್ತಾ? ತಾರಿಣಿ ಇವರ ಸಮಸ್ಯೆ ಬಗೆಹರಿಸುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ