ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಇನ್ನು ಕಾಲೇಜ್ ಎಕ್ಸಾಂನಲ್ಲಿ (Exam) ಸಿದ್ಧಾಂತ್ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾನೆ. ತಾರಿಣಿ ಫೇಲ್ ಆಗಿದ್ದಾಳೆ. ಅಳುತ್ತಿದ್ದ (Crying) ತಾರಿಣಿಗೆ ಸಮಾಧಾನ ಮಾಡಿ ಸಿದ್ದು ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಫೇಲಾದ ತಾರಿಣಿ
ತಾರಿಣಿ 2 ವಿಷಯಗಳಲ್ಲಿ ಫೇಲ್ ಆಗಿದ್ದಾಳೆ. ಅದಕ್ಕೆ ಬೇಸರ ಮಾಡಿಕೊಂಡು ಕಾಲೇಜಿನಲ್ಲಿ ಯಾರನ್ನೂ ಮಾತನಾಡಿಸದೇ ಹೊರಟಿದ್ದಾರೆ. ತಾರಿಣಿ ಫೇಲ್ ಆದ ವಿಚಾರ ಗೊತ್ತಾಗಿ, ತಾರಿಣಿ ಅಪ್ಪ-ಅಮ್ಮ ಚೆನ್ನಾಗಿ ಬೈದಿದ್ದಾರೆ. ಅದಕ್ಕೆ ತಾರಿಣಿ ಬೇಸರ ಮಾಡಿಕೊಂಡು ಕಾಲೇಜಿನಲ್ಲಿ ಅಳುತ್ತಾ ಕೂತಿರುತ್ತಾಳೆ. ಆಕೆಯನ್ನು ಸಿದ್ಧಾಂತ್ ಸಮಾಧಾನ ಮಾಡಿ ಅವರ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ತಾರಿಣಿ ಫೇಲ್ ಆಗಿದ್ದು ನಿಮ್ಮಿಂದ
ಸಿದ್ದು ಮನೆಗೆ ಬಂದಿರುವುದರಿಂದ ಉಮಾ ಮತ್ತು ಸುಮತಿ ಕೋಪ ಮಾಡಿಕೊಂಡಿದ್ದಾರೆ. ನೀನು ಮಾಡ್ತಾ ಇರೋದು ಸರಿ ಇಲ್ಲ ಸಿದ್ಧಾಂತ್ ಈ ತರ ಮನೆಗೆ ಬಂದ ಗಲಾಟೆ ಮಾಡೋದು ತಪ್ಪು ಎಂದು ಸುಮತಿ ಹೇಳ್ತಾ ಇದ್ದಾಳೆ. ಅದಕ್ಕೆ ಸಿದ್ದು, ನಾನು ಇಲ್ಲಿ ಜಗಳ ಮಾಡೋಕೆ ಬಂದಿಲ್ಲ. ತಾರಿಣಿಗೆ ಆಗ್ತಿರೋ ಕಷ್ಟ ನಿಮಗೆ ತಿಳಿಸಲು ಬಂದಿದ್ದೇನೆ. ಅವಳು ಎಮೋಷನಲ್ ವೀಕ್ ಆದ ಕಾರಣ ಎಕ್ಸಾಂನಲ್ಲಿ ಫೇಲ್ ಆಗಿದ್ದಾಳೆ ಎಂದು ಹೇಳಿದ್ದಾನೆ.
ಅವಳು ಏನೂ ಸಾಧನೆ ಮಾಡಬೇಕಿಲ್ಲ
ನನ್ನ ಮಗಳು ಪಾಸ್ ಆಗಿ ಏನೂ ಸಾಧನೆ ಮಾಡಬೇಕಿಲ್ಲ ಸಿದ್ಧಾಂತ್. ನಿನ್ನ ತರ ಓದಿ, ಕೆಲಸ ಹಿಡಿದು, ದುಡ್ಡು ತಂದ್ರೆ ಮಾತ್ರ ಅವಳಿಗೆ ಅನ್ನ ಸಿಗುತ್ತೆ ಅನ್ನೋ ಪರಿಸ್ಥಿತಿಯಲ್ಲಿ ಅವಳು ಇಲ್ಲ. 4 ತಲೆಮಾರು ಕೂತು ತಿಂದ್ರೂ ಕರಗದೇ ಇರುವಷ್ಟು ಆಸ್ತಿ ಇದೆ ನನ್ನ ಮಗಳಿಗೆ. ನಿನ್ನ ಹತ್ತಿರ ಬುದ್ಧಿ ಕೇಳೋ ಅವಶ್ಯಕತೆ ನನಗಿಲ್ಲ ಎಂದು ಉಮಾ ಸಿದ್ಧಾಂತ್‍ಗೆ ಹೇಳುತ್ತಿದ್ದಾಳೆ.
ತಾರಿಣಿಗೆ ಹೊಡೆಯಲು ಹೋದ ಉಮಾ
ನಮ್ಮ ಮನೆ ವಿಷ್ಯ ಕಂಡವರ ಮುಂದೆ ಹೇಳೋ ಅವಶ್ಯಕತೆ ಏನಿತ್ತು? ಬೀದಿಯಲ್ಲಿ ಹೋಗುವವರೆಲ್ಲಾ ನಮಗೆ ಬುದ್ಧಿ ಹೇಳುವ ಹಾಗೆ ಮಾಡಿದೆ ಪಾಪು, ನಿನಗೆ ನಾಚಿಕೆ ಆಗಲ್ವಾ?, ನಿನಗೆ ಬಾಯಿ ಮಾತಿನಲ್ಲಿ ಹೇಳಿದ್ರೆ ಸಾಲದು ಎಂದು ಉಮಾ ತಾರಿಗೆ ಹೊಡೆಯಲು ಕೈ ಎತ್ತುತ್ತಾಳೆ. ಆಗ ಸಿದ್ದು ತಡೆಯುತ್ತಾನೆ.
ಸಿದ್ದುಗೆ ಕೋಪ
ತಾರಿಣಿ ಮೇಲೆ ಏನುಕ್ಕೆ ಕೈ ಮಾಡ್ತಾ ಇದೀರಾ? ನನ್ನ ಮುಂದೆ ತಾರಿಣಿ ಮೇಲೆ ಕೈ ಮಾಡಿದ್ರೆ ನಾನು ಸುಮ್ಮನಿರಲ್ಲ ಎಂದು ಹೇಳ್ತಾನೆ ಸಿದ್ದು. ಅದಕ್ಕೆ ಉಮಾ ಕೋಪಗೊಂಡು, ನನ್ನ ಮಗಳಿಗೆ ನಾನು ಹೊಡೆದ್ರೆ, ಏನೋ ಮಾಡ್ತೀಯಾ? ಎಂದು ಉಮಾ ಪ್ರಶ್ನೆ ಮಾಡ್ತಾಳೆ. ಸಿದ್ಧಾಂತ್ ನೀನು ಓವರ್ ಆಗಿ ಆಡ್ತಾ ಇದೀಯಾ. ಇದು ನಮ್ಮ ವೈಯಕ್ತಿಕ ವಿಚಾರ ಎಂದು ಹೇಳಿ ಕಳಿಸುತ್ತಾರೆ.
10 ದಿನದಲ್ಲಿ ತಾರಿಣಿ ಮದುವೆ
ಮನೆಯ ಎಲ್ಲಾ ಗಲಾಟೆ ನೋಡಿದ ಉಮಾ, ತಾರಿಣಿಗೆ ನಿನಗೆ ಕೈ ಮುಗಿಯುತ್ತೇನೆ, ಇನ್ನು 10 ದಿನದಲ್ಲಿ ನಿನ್ನ ಮದುವೆ ಅಲ್ಲಿಯವರೆಗೂ ಸುಮ್ಮನಿರು ಎಂದು ಹೇಳ್ತಾಳೆ. ಮದುವೆ ಎನ್ನುವುದನ್ನು ಕೇಳಿ ಸಿದ್ದು ಮತ್ತು ತಾರಿಣಿ ಇಬ್ಬರು ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Ramachari: ಚಾರುಗೆ ತಾಳಿ ಕಟ್ಟಿದ್ದು ಮನೆಯಲ್ಲಿ ಗೊತ್ತಾಗಿದೆ, ರಾಮಾಚಾರಿ ತಾಯಿಗೆ ಹೃದಯಾಘಾತ!
ತಾರಿಣಿ-ಧೀರಜ್ ಮದುವೆ ನಡೆಯಲು ಸಿದ್ದು ಬಿಡ್ತಾನಾ? ಧೀರಜ್ ಬಗ್ಗೆ ಎಲ್ಲ ನಿಜ ಹೇಳ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ