ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾರಿಣಿ ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ (Marriage). ಸಿದ್ಧಾಂತ್ ಮನೆಯ ಕಷ್ಟ ನಿವಾರಿಸಲು ಎಂದು ಆಸ್ಟ್ರೇಲಿಯಾಗೆ ಕೆಲಸಕ್ಕೆ ಹೊರಟಿದ್ದ. ಈಗ ನೋಡಿದ್ರೆ ಕೆಲಸ ಬಿಟ್ಟಿದ್ದಾನೆ. ಮತ್ತೆ ಸಿದ್ಧಾಂತ್ ಅಮ್ಮ ನಿರುಪಮಾ ಕೆಲಸ ಮಾಡ್ತಾ ಇದ್ದಾಳೆ. ಸಿದ್ಧಾಂತ್ ಹೆಂಡ್ತಿಗೆ ಬಟ್ಟೆ ಕೊಡಿಸಲಾಗದೇ ಒದ್ದಾಡ್ತಾ ಇದ್ದಾನೆ. ಹೀಗಾಗಿ ತಾರಿಣಿ ಮೇಲೆ ಕಳ್ಳಿ ಪಟ್ಟ ಬರಬಹುದು.
ನಿರುಪಮಾಗೆ ತಾರಿಣಿ ಮನೆಯವರ ಮೇಲೆ ದ್ವೇಷ
ತಾರಿಣಿ ತಾತಾನಿಗೂ ಮತ್ತು ಸಿದ್ಧಾಂತ್ ಅಮ್ಮ ನಿರುಪಮಾಗೆ ಹಳೇ ಸ್ನೇಹಾ ಇದೆ. ಆ ಸ್ನೇಹಾ ಈಗ ದ್ವೇಷವಾಗಿ ಮಾರ್ಪಟ್ಟಿದೆ. ನಿರುಪಮಾ ತಾರಿಣಿ ಮನೆಯಲ್ಲಿ ಹಳೇ ಫೋಟೋ ನೋಡಿ, ತಲೆ ಸುತ್ತಿ ಬೀಳುತ್ತಾಳೆ. ಮೊದಲು ತಾರಿಣಿ ಬೇಡವೇ ಬೇಡ ಅಂದವಳು, ತಾರಿಣಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ. ತಾರಿಣಿ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.
ಸಿದ್ಧಾಂತ್‍ನಿಂದ ತಾರಿಣಿ ದೂರ
ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿರುವ ನಿರುಪಮಾ, ಸಿದ್ಧಾಂತ್‍ನಿಂದ ತಾರಿಣಿಯನ್ನು ದೂರ ಇಟ್ಟಿದ್ದಾಳೆ. ಯಾವ ಶಾಸ್ತ್ರಕ್ಕೂ ಒಪ್ಪದೇ ಗೆಸ್ಟ್ ರೂಮ್‍ನಲ್ಲಿ ಇರಿಸಿದ್ದಾಳೆ. ಮಗನಿಗೆ ಕೆಲಸ ಸಿಕ್ತು ಎಂದು ಖುಷಿಯಾಗಿದ್ದ ನಿರುಪಮಾ, ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಳು. ಸಿದ್ಧಾಂತ್ ಕೆಲಸಕ್ಕೆ ಹೋಗದ ಕಾರಣ, ನಿರುಪಮಾ ಮತ್ತೆ ಕೆಲಸ ಮಾಡ್ತಾ ಇದ್ದಾಳೆ. ಎಲ್ಲರ ಮೇಲೂ ಬೇಸರ ಮಾಡಿಕೊಂಡಿದ್ದಾಳೆ.
ಬಟ್ಟೆಯೂ ಇಲ್ಲದೇ ತಾರಿಣಿ ಪರದಾಟ
ತಾರಿಣಿ ಇದ್ದಕ್ಕಿದ್ದ ಹಾಗೇ ಸಿದ್ಧಾಂತ್ ಜೊತೆ ಮದುವೆಯಾಗಿದ್ದಾಳೆ. ಮನೆಯಿಂದ ಏನೂ ತಂದಿಲ್ಲ. ಅದಕ್ಕೆ ತಾರಿಣಿ ಬಳಿ ಬಟ್ಟೆಯೂ ಇಲ್ಲ. ಈಗ ತವರು ಮನೆಗೆ ಊಟಕ್ಕೆ ಹೊರಟಿದ್ದಾಳೆ. ಅಲ್ಲಿಗೆ ಹಾಕಿಕೊಂಡು ಹೋಗಲು ಒಳ್ಳೆ ಬಟ್ಟೆ ಇಲ್ಲ. ಅದಕ್ಕೆ ಏನು ಮಾಡೋದು ಎಂದು ಸಿದ್ಧಾಂತ್ ಅತ್ತಿಗೆ ಸಂಗೀತಾ ಬಳಿ ಬಟ್ಟೆ ಇದ್ರೆ ಕೊಡಿ ಎಂದು ಕೇಳಿದ್ದಾಳೆ.
ಸೊಸೆಗೆ ಬಟ್ಟೆ ಕೊಡಿಸಲು ದುಡ್ಡು ಕೊಟ್ಟ ಮಾವ ಅನಂತು
ಸಿದ್ಧಾಂತ್ ತನ್ನ ಅಪ್ಪನ ಬಳಿ ಬಂದು, ಅಪ್ಪ ಸ್ವಲ್ಪ ದುಡ್ಡು ಕೊಡಿ. ತಾರಿಣಿಗೆ ಬಟ್ಟೆ ಕೊಡಿಸಬೇಕು. ಅವಳ ಬಳಿ ಒಂದು ಒಳ್ಳೆ ಬಟ್ಟೆ ಇಲ್ಲ ಎಂದು ಹೇಳ್ತಾನೆ. ಅದಕ್ಕೆ ಅನಂತು ಅವರು ಇನ್ಶೂರೆನ್ಸ್ ಕಟ್ಟಲು ಇಟ್ಟಿದ್ದ ಹಣವನ್ನು ಕೊಟ್ಟಿದ್ದಾನೆ. ಅದೇ ದುಡ್ಡಿನಲ್ಲಿ ಸಿದ್ಧಾಂತ್ ತಾರಿಣಿಗೆ ಸೀರೆ ಕೊಡಿಸಿದ್ದಾನೆ. ತಾರಿಣಿ ಅದನ್ನು ಉಟ್ಟು ತವರು ಮನೆಗೆ ಹೋಗಲು ಸಿದ್ಧವಾಗಿದ್ದಾಳೆ.
ಕಳ್ಳಿ ಪಟ್ಟ ಕಟ್ತಾರಾ?
ಮನೆಯಲ್ಲಿರುವ ಸಂಗೀತಾ ಅವರ ಅಮ್ಮ ನನ್ನ ದುಡ್ಡು ಕಾಣ್ತಾ ಇಲ್ಲ. 5 ಸಾವಿರ ಎಲ್ಲೋ ಕಳೆದು ಹೋಗಿದೆ ಎಂದು ಮನೆಯವರುನ್ನು ಕೇಳ್ತಾ ಇದ್ದಾಳೆ. ಆಗ ತಾರಿಣಿ ಉಟ್ಟು ಸೀರೆ ಮೇಲೆ ಎಲ್ಲರ ಕಣ್ಣು ಬೀಳುತ್ತೆ. ನನ್ನ ದುಡ್ಡಿನಿಂದ ಇದನ್ನು ತೆಗೆದುಕೊಂಡಿರಬಹುದು ಎಂದು ಊಹೆ ಮಾಡ್ತಾ ಇದ್ದಾಳೆ. ಹಾಗಾದ್ರೆ ತಾರಿಣಿ ಮೇಲೆ ಕಳ್ಳಿ ಪಟ್ಟ ಕಟ್ತಾರಾ ನೋಡಬೇಕು.
ಇದನ್ನೂ ಓದಿ: Antarapata: ಆರಾಧನಾ ಕೈಗೆ ಆಸ್ತಿ ಪತ್ರ ಇಟ್ಟ ರವಿ! ಇಬ್ರೂ ಸೇರಿ ಬ್ಯುಸಿನೆಸ್ ಶುರು ಮಾಡ್ತಾರಾ?
ಕೋಟಿಗಟ್ಟಲೇ ಆಸ್ತಿ ಇರುವ ತಾರಿಣಿ ಗಂಡನ ಮನೆಯಲ್ಲಿ ಕಳ್ಳಿ ಪಟ್ಟ ಅನುಭವಿಸುತ್ತಾಳಾ? ಸಿದ್ಧಾಂತ್ ಇದನ್ನು ತಡೆಯುತ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ