ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು (Love) ದೂರ ಮಾಡಿದೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಈಗ ತಾರಿಣಿಗೆ ಧೀರಜ್ ಜೊತೆ ಮದುವೆ (Marriage) ಫಿಕ್ಸ್ ಆಗಿದ್ದು, ಅವನನ್ನು ಮದುವೆ ಆಗೋದಾ, ಬೇಡ್ವಾ ಎನ್ನುವ ಗೊಂದಲದಲ್ಲಿದ್ದಾಳೆ.
ಸಿದ್ಧಾಂತ್‍ನನ್ನು ಪ್ರೀತಿ ಮಾಡ್ತಿದ್ದ ತಾರಿಣಿ
ತಾರಿಣಿ ಈ ಧಾರಾವಾಹಿ ಶುರುವಾದಾಗಿನಿಂದ ಸಿದ್ಧಾಂತ್‍ನ್ನು ಪ್ರೀತಿ ಮಾಡ್ತಾ ಇದ್ಲು. ತಾರಿಣಿ ಮನೆಯಲ್ಲೂ ಒಪ್ಪಿದ್ರು. ಆದ್ರೆ ಆಗ ಸಿದ್ದುಗೆ ಇವಳ ಮೇಲೆ ಪ್ರೀತಿ ಇರಲಿಲ್ಲ. ಅದಕ್ಕೆ ಅವನ ಬೇಡ ಎನ್ನುತ್ತಾನೆ. ತಾರಿಣಿಯೂ ಸುಮ್ಮನಾಗ್ತಾಳೆ. ಆದ್ರೆ ನಂತರ ಸಿದ್ಧಾಂತ್‍ಗೆ ಪ್ರೀತಿ ಹುಟ್ಟುತ್ತೆ. ಆಗ ತಾರಿಣಿ ಬೇಡ ಎನ್ನುತ್ತಾಳೆ.
ಧೀರಜ್ ಜೊತೆ ಮದುವೆ ಫಿಕ್ಸ್
ಮನೆಯವರೆಲ್ಲ ಸೇರಿ ತಾರಿಣಿ ಜೊತೆ ಧೀರಜ್ ಮದುವೆ ಫಿಕ್ಸ್ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಇದೆ. ಆದ್ರೆ ತಾರಿಣಿಗೆ ಧೀರಜ್‍ನನ್ನು ಮದುವೆ ಆಗೋದಾ, ಬೇಡ್ವಾ ಎನ್ನುವ ಗೊಂದಲದಲ್ಲಿದ್ದಾಳೆ. ಧೀರಜ್ ಅವಳ ನಂಬಿಕೆಯಲ್ಲಿ ಫೇಲ್ ಆಗಿದ್ದಾನೆ. ಅಲ್ಲದೇ ತಾರಿಣಿಗೆ ಸಿದ್ದು ಜೊತೆ ಮದುವೆ ಆಗಬೇಕು ಎಂದು ಎನ್ನಿಸುತ್ತಿದೆ.
ಗಣಪನ ಬಳಿ ಕೇಳಿಕೊಂಡ ತಾರಿಣಿ
ಈಗ ತುಂಬ ಕಷ್ಟದ ಪರಿಸ್ಥಿತಿಲ್ಲಿ ಇದ್ದೇನೆ. ನಿನ್ನ ಕೇಳಿಕೊಳ್ತಾ ಇದೀನಿ. ನಾನು ಬದುಕ ಬೇಕಿರೋದು ಧೀರಜ್ ಜೊತೆನಾ, ಸಿದ್ಧಾಂತ್ ಜೊತೆನಾ ನಿರ್ಧಾರ ಮಾಡಬೇಕು. ನಿರ್ಧಾರ ಮಾಡಬೇಕಾದವಳು ನಾನೇ. ಆದ್ರೆ ಅದಕ್ಕೆ ನೀನು ದಾರಿ ತೋರಿಸು. ನಾನು ಇಡೋ ಒಂದು ತಪ್ಪು ಹೆಜ್ಜೆ, ಜೀವನ ಪೂರ್ತಿ ನಾನು ಕಷ್ಟ ಪಡುವಂತೆ ಆಗಬಹುದು.
ಸಿದ್ದು ಜೊತೆ ಇದ್ರೆ ಖುಷಿಯಾಗಿರುತ್ತೇನೆ ಎಂದು ಮನಸ್ಸಿಗೆ ಅನ್ನಿಸುತ್ತೆ. ಧೀರಜ್ ಜೊತೆ ನನಗೆ ಗೊತ್ತಿಲ್ಲ. ನನ್ನ ಕೈ ಬಿಡಬೇಡ. ಕೈ ಹಿಡಿದು ನಡೆಸು. ಇವತ್ತು ದೇವಸ್ಥಾನಕ್ಕೆ ಹೋಗಿ, ಕಾಯಿ ಹೊಡೆದು, ಆಮೇಲೆ ಮುಂದಿನ ಹೆಜ್ಜೆ ಎಂದು ತಾರಿಣಿ ಗಣಪನ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಅದೇ ರೀತಿ ದೇವಸ್ಥಾನಕ್ಕೆ ಹೋಗಿದ್ದಾಳೆ.
ಅಮ್ಮನ ಮಾತು ಕೇಳ್ತಾಳಾ?
ತಾರಿಣಿಗೆ ಮುಂದೆ ಏನ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ದೇವಸ್ಥಾನದಲ್ಲಿ ಯಾರೋ ಒಬ್ಬ ಸಿಕ್ಕಿ, ನಿಮ್ಮ ಗೊಂದಲ್ಲಕ್ಕೆ ನಿಮ್ಮ ತಾಯಿ ಬಳಿ ಪರಿಹಾರ ಕೇಳಿ. ಮಾತೃ ದೇವೋ ಭವ ಅಂತಾರೆ. ನಿಮ್ಮ ತಾಯಿ ಹೇಳಿದ ಹಾಗೆ ಕೇಳಿ ಅಂತಾರೆ. ಅವರ ತಾಯಿಗೆ ಧೀರಜ್ ಜೊತೆ ತಾರಿಣಿ ಮದುವೆ ಆಗೋದು ಇಷ್ಟ. ಹಾಗಾದ್ರೆ ತಾರಿಣಿ ತಾಯಿ ಹೇಳಿದಂತೆ ಕೇಳ್ತಾಳಾ ನೋಡಬೇಕು.
ಇದನ್ನೂ ಓದಿ: Priyanka Chopra: ಶ್ವೇತ ವರ್ಣದ ಡ್ರೆಸ್‍ನಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿಂಗ್, ಅಪ್ಸರೆ ಭೂಲೋಕಕ್ಕೆ ಬಂದ್ರು ಎಂದ ಫ್ಯಾನ್ಸ್!
ತಾರಿಣಿ ಮದುವೆ ಯಾರ ಜೊತೆ ನಡೆಯುತ್ತೆ? ಧೀರಜ್ ಜೊತೆನಾ? ಸಿದ್ಧಾಂತ್ ಜೊತೆನಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ