ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ತಾರಿಣಿ ಸಿದ್ಧಾಂತ್‍ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳು. ಅವನಿಗೆ ತನ್ನ ಪ್ರೀತಿ ವಿಷ್ಯ ಹೇಳಿಕೊಂಡು ಮದುವೆಯಾಗಬೇಕು ಎಂದುಕೊಂಡಿದ್ದಾಳೆ. ಆದ್ರೆ ಸಿದ್ಧಾಂತ್ ಅವತ್ತೇ ತಾನು ವಿದೇಶಕ್ಕೆ ಹೋಗುವುದಾಗಿ ಹೇಳಿದ್ದ.ತಾರಿಣಿ ತನ್ನ ಪ್ರೀತಿ (Love) ಮುಚ್ಚಿಟ್ಟು, ಧೀರಜ್ ನನ್ನು ಮದುವೆಯಾಗಲು (Marriage) ಒಪ್ಪಿದ್ದಾಳೆ. ಬಳೆ ಶಾಸ್ತ್ರ, ಮೆಹಂದಿ ಶಾಸ್ತ್ರ ಮುಕ್ತಾಯವಾಗಿದೆ. ಇನ್ನೂ ಮದುವೆ ಶಾಸ್ತ್ರಕ್ಕೆ ಎಲ್ಲಾ ತಯಾರಿಯನ್ನು ಧೀರಜ್ ಅಮ್ಮ ಜಗದೀಶ್ವರಿಯೇ ನೋಡಿಕೊಂಡಿದ್ದಾಳೆ. ಸಿದ್ಧಾಂತ್ ಧೀರಜ್ ಬಗ್ಗೆ ತಾತಾನ ಬಳಿ ಸತ್ಯ ಹೇಳ್ತಾ ಇದ್ದಾನೆ.
ಆಸ್ಟ್ರೇಲಿಯಾಗೆ ಹೊರಟ ಸಿದ್ಧಾಂತ್
ಸಿದ್ಧಾಂತ್‍ಗೆ ಆಸ್ಟ್ರೇಲಿಯಾದಲ್ಲಿ ಕೆಲಸ ಆಗಿದೆ. ತಿಂಗಳಿಗೆ 4 ಲಕ್ಷ ಸಂಬಳ. ಅದಕ್ಕೆ ಸಿದ್ಧಾಂತ್ ಕೆಲಸಕ್ಕೆಂದು ಆಸ್ಟ್ರೇಲಿಯಾಗೆ ಹೊರಟಿದ್ದಾನೆ. ಹೋಗುವುದಕ್ಕೂ ಮುಂಚೆ ಧೀರಜ್ ಬಗ್ಗೆ ಸತ್ಯ ಹೇಳಬೇಕು ಎಂದುಕೊಂಡು, ತಾರಿಣಿ ತಾತಾನಿಗೆ ಕಾಲ್ ಮಾಡಿದ್ದಾನೆ. ತಾತಾ, ನಿಮ್ಮಿಬ್ಬರ ಹಠದಿಂದ ಪ್ರೀತಿ ಸಾಯ್ತಾ ಇದೆ ಎಂದು ಹೇಳಿದ್ದಾರೆ.
ತಾರಿಣಿ ಮನಸ್ಸಿನಲ್ಲಿರುವುದು ಗೊತ್ತಾಗಲಿಲ್ಲ
ನಿನ್ನೆ ನೀವು ಮಾತನಾಡಿ ಹೋದ ಮೇಲೆ ತಲೆಯಲ್ಲಿ ಅದೇ ವಿಷ್ಯ ಕೊರೆಯುತ್ತಾ ಇದೆ. ಆಗ ಶಾಕ್ ಆಗಿತ್ತು ಮನಸ್ಸಿನಲ್ಲಿ ಇರುವುದನ್ನು ಹೇಳೋಕೆ ಆಗಲಿಲ್ಲ. ತಾತಾ ಅವಳು ತನ್ನ ಪ್ರೀತಿ ವಿಷ್ಯ ಹೇಳಿಕೊಳ್ಳೋಕೆ ಬಂದಿದ್ಲು ಎಂದು ಗೊತ್ತಾಗಲಿಲ್ಲ. ನನ್ನ ದಾರಿಗೆ ಅಡ್ಡ ಬರಬಾರದು ಎಂದು ತನ್ನ ಪ್ರೀತಿಯನ್ನೇ ತ್ಯಾಗ ಮಾಡ್ತಾ ಇದಾಳೆ ಎಂದು ಗೊತ್ತಾಗಲಿಲ್ಲ ಎಂದು ಸಿದ್ಧಾಂತ್ ಹೇಳಿದ್ದಾನೆ.
ನನಗೂ ತಾರಿಣಿ ಮೇಲೆ ಪ್ರೀತಿ ಇದೆ
ಮನೆಯವರ ಒತ್ತಾಯಕ್ಕೆ, ನಿಮಗೆ ನೋವು ಆಗಬಾರದೆಂದು ಧೀರಜ್ ನ ಮದುವೆ ಆಗ್ತಾ ಇದಾಳೆ. ನನ್ನ ಮೇಲೆ ಪ್ರೀತಿ ಇಲ್ಲ ಎಂದುಕೊಂಡಿದ್ದೆ. ನನಗೂ ತಾರಿಣಿ ಮೇಲೆ ತುಂಬಾ ಪ್ರೀತಿ ಇದೆ ತಾತಾ. ನಾನು ದೇಶ ಬಿಟ್ಟು ಹೋಗ್ತಾ ಇರೋದು ಮನೆಯವರಿಗಾಗಿ. ಚೆನ್ನಾಗಿ ದುಡಿಯಬೇಕು ಅನ್ನೋದು ಒಂದು ರೀಸನ್ ಆದ್ರೆ, ತಾರಿಣಿಯನ್ನು ಮರೆಯೋಕೆ ಇದೊಂದು ಮಾರ್ಗ ಎಂದು ಹೊರಟಿದ್ದೇನೆ. ಎಂದು ಕಣ್ಣೀರು ಹಾಕುತ್ತಾ ಹೇಳಿದ್ದಾನೆ.
ನಾನು ಯಾರನ್ನೂ ಮದುವೆಯಾಗಲ್ಲ
ಯಾವಾಗ ತಾರಿಣಿ ಇನ್ನೊಬ್ಬರನ್ನು ಮದುವೆ ಆಗ್ತಾಳೆ ಅಂತ ಗೊತ್ತಾಯ್ತೋ, ಆಗ ನಾನು ಮದುವೆ ಆಗಲ್ಲ ಅಂತ ಡಿಸೈಡ್ ಮಾಡಿದೆ. ಸಿದ್ಧಾಂತ್ ಮನಸ್ಸಿನಲ್ಲಿ ತಾರಿಣಿಗೆ ಮಾತ್ರ ಜಾಗ. ಅದನ್ನು ಯಾರ ಜೊತೆಯೂ ಹಂಚಿಕೊಳ್ಳಲ್ಲ. ತಾರಿಣಿ ಮದುವೆಯಾಗಿ ಸುಖವಾಗಿ ಇರಬೇಕಾದವಳು. ಆ ಧೀರಜ್ ನ ಮದುವೆಯಾಗ್ತಿರೋದು ತುಂಬಾ ಬೇಜಾರಿದೆ ಎಂದು ಸಿದ್ಧಾಂತ್ ಹೇಳಿದ್ದಾನೆ.
ಧೀರಜ್ ಸರಿ ಇಲ್ಲ
ಧೀರಜ್ ಸರಿ ಇಲ್ಲ ಅಂತ ತಾರಿಣಿ ಬಳಿ ಹೇಳಿದೆ ತಾತಾ, ಮದುವೆಯಾದ ಮೇಲೆ ಸರಿ ಮಾಡ್ಕೋತಿನಿ ಎಂದಳು. ಧೀರಜ್ ನನ್ನ ಬಳಿ ಬಂದು ಚಾಲೆಂಜ್ ಮಾಡಿ ಹೋಗಿದ್ದ. ನೀನು ಪ್ರೀತಿ ಮಾಡಿರುವ ಹುಡುಗಿಯನ್ನು ಮದುವೆ ಆಗಿ ಅವಳ ಜೀವನ ನರಕ ಮಾಡ್ತೀನಿ ಎಂದು ಚಾಲೆಂಜ್ ಮಾಡಿದ್ದ. ಅದಕ್ಕೆ ಆಕೆಯನ್ನು ಮದುವೆ ಆಗ್ತಾ ಇದ್ದಾನೆ ಎಂದು ಧೀರಜ್‍ನ ಗುಟ್ಟನ್ನು ಸಿದ್ಧಾಂತ್ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ: Actor Shine Shetty: ಪ್ರವಾಸ ಎಂಜಾಯ್ ಮಾಡುತ್ತಿರುವ ಶೈನ್ ಶೆಟ್ಟಿ, ಹಿಮಾಚಲದಲ್ಲಿ ಬುಲೆಟ್ ರೈಡಿಂಗ್!
ತಾರಿಣಿ ಮದುವೆ ಯಾರ ಜೊತೆ? ಸಿದ್ಧಾಂತ್ ಜೊತೆನಾ? ಧೀರಜ್ ಜೊತೆನಾ? ಮುಂದೇನಾಗುತ್ತೆ ಎಂದು ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ