ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು (Story), ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾರಿಣಿ ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ (Marriage). ಸಿದ್ಧಾಂತ್ ಮನೆಯ ಕಷ್ಟ ನಿವಾರಿಸಲು ಎಂದು ಆಸ್ಟ್ರೇಲಿಯಾ ಕೆಲಸಕ್ಕೆ ಹೊರಟಿದ್ದ. ಈಗ ನೋಡಿದ್ರೆ ಕೆಲಸ ಬಿಟ್ಟಿದ್ದಾನೆ. ಮತ್ತೆ ಸಿದ್ಧಾಂತ್ ಅಮ್ಮ ನಿರುಪಮಾ ಕೆಲಸ ಮಾಡ್ತಾ ಇದ್ದಾಳೆ. ಮನೆ ಮನೆಯವರ ಜಗಳದಲ್ಲಿ ಸಿದ್ಧಾಂತ್-ತಾರಿಣಿ ಒದ್ದಾಡುತ್ತಿದ್ದಾರೆ.
ನಿರುಪಮಾಗೆ ತಾರಿಣಿ ಮನೆಯವರ ಮೇಲೆ ದ್ವೇಷ
ತಾರಿಣಿ ತಾತಾ ರಾಜಶೇಖರ್ ಗೆ ಮತ್ತು ಸಿದ್ಧಾಂತ್ ಅಮ್ಮ ನಿರುಪಮಾಗೆ ಹಳೇ ಸ್ನೇಹಾ ಇದೆ. ಆ ಸ್ನೇಹಾ ಈಗ ದ್ವೇಷವಾಗಿ ಮಾರ್ಪಟ್ಟಿದೆ. ನಿರುಪಮಾ ತಾರಿಣಿ ಮನೆಯಲ್ಲಿ ಹಳೇ ಫೋಟೋ ನೋಡಿ, ತಲೆ ಸುತ್ತಿ ಬೀಳುತ್ತಾಳೆ. ಮೊದಲು ತಾರಿಣಿ ಬೇಡವೇ ಬೇಡ ಅಂದವಳು, ತಾರಿಣಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ. ತಾರಿಣಿ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.
ಮನೆಗೆ ವಾಪಸ್ ಬಾ ಎಂದ ತಾತಾ
ತಾರಿಣಿ ತಾತಾನ ಬಳಿ ಮಾತನಾಡುತ್ತಿದ್ದಾಳೆ. ತಾತಾ, ನೋಡು ತಾರಿಣಿ ನಾನು ನಿಮ್ಮ ಅತ್ತೆ ಬಳಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ. ನಾನೇ ಮುಂದೆ ನಿಂತು ಸಿದ್ಧಾಂತ್ ಮತ್ತು ನಿನ್ನ ಮದುವೆ ಮಾಡಿಸಿದ್ದೆ. ಈಗ ನಾನೇ ಹೇಳ್ತಾ ಇದೀನಿ. ನೀನು ಆ ಮನೆಯಿಂದ ವಾಪಸ್ ಬಂದು ಬಿಡು. ಇಲ್ಲಿ ನಾನು , ನಿಮ್ಮ ಅಪ್ಪ, ಅಮ್ಮ ಎಲ್ಲರೂ ನಿನ್ನನ್ನು ಖುಷಿಯಾಗಿ ನೋಡಿಕೊಳ್ತಾರೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ತಾರಿಣಿ ಆತಂಕಗೊಂಡಿದ್ದಾಳೆ.
ಬೇಸರದಲ್ಲಿರುವ ತಾರಿಣಿ
ತಾರಿಣಿಗೆ ತಾತಾ ಗಂಡನ ಮನೆ ಬಿಟ್ಟು ಬಾ ಎನ್ನುವುದನ್ನು ಕೇಳಿ ಶಾಕ್ ಆಗಿದ್ದಾಳೆ. ಅಲ್ಲದೇ ತಾತಾ, ನೀನು ಈ ಮನೆಗೆ ಬರಲು ಒಪ್ಪಲ್ಲ ಅಂದ್ರೆ, ನಿಮ್ಮ ಅಮ್ಮ ಊಟಕ್ಕೆ ಕರೆದಿದ್ದಾಳೆ. ಊಟ ಮಾಡಿಕೊಂಡು ಹೋಗು ಎಂದಿದ್ದಾನೆ. ತಾರಿಣಿ ಬೇಸರ ಮಾಡಿಕೊಂಡು ಒಳಗೆ ಹೋಗಿದ್ದಾಳೆ. ರಾಜಶೇಖರ್ ಸಹ ನಾನು ತಪ್ಪು ಮಾಡಿದೆ ಎಂದು ಕೊರಗುತ್ತಿದ್ದಾನೆ.
ನಿರುಪಮಾ ಟಾಂಗ್
ತಾರಿಣಿ ತನ್ನ ಅಪ್ಪನ ಬಳಿ ಬಂದು ಕೂರುತ್ತಾಳೆ. ಆಗ ಅವರ ಅಪ್ಪ, ಯಾಕೆ ಸಣ್ಣ ಆಗಿದ್ದೀಯಾ? ಊಟ ಮಾಡ್ತಾ ಇಲ್ವಾ ಎಂದು ಕೇಳಿದ್ದಾನೆ. ಅದಕ್ಕೆ ಅಲ್ಲೇ ಇದ್ದ ನಿರುಪಮಾ ಏನ್ ಹೇಳ್ತಾ ಇದೀರಿ? ನಾವು ಊಟ ಕೊಟ್ಟಿಲ್ಲ ಅನ್ನುವುದಾ ನಿಮ್ಮ ಮಾತಿನ ಅರ್ಥ ಎಂದಿದ್ದಾಳೆ. ಅದಕ್ಕೆ ಇಲ್ಲ, ಅವಳು ಸರಿಯಾಗಿ ತಿನ್ನುತ್ತಿಲ್ವಾ ಎಂದು ಕೇಳಿದ್ದು ಎಂದು ತಾರಿಣಿ ಅಪ್ಪ ಹೇಳಿದ್ದಾರೆ.
ಸಿದ್ಧಾಂತ್-ತಾರಿಣಿ ಒದ್ದಾಟ
ಎರಡೂ ಮನೆಯವರಿಗೂ ಮೊದಲಿನಿಂದಲೂ ದ್ವೇಷ ಇದೆ. ಆದ್ರೆ ಅದು ಸಿದ್ಧಾಂತ್ ಮತ್ತು ತಾರಿಣಿಗೆ ಗೊತ್ತಿಲ್ಲ. ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಅದಕ್ಕೆ ಮನೆಯವರಿಗೆಲ್ಲಾ ಬೇಸರ ಇದೆ. ಅದನ್ನು ಹೇಗಾದ್ರೂ ಸರಿ ಮಾಡಬೇಕು ಎಂದು ಒದ್ದಾಡುತ್ತಿದ್ದಾರೆ. ತಾರಿಣಿ ಗಂಡನ ಮನೆಯಲ್ಲಿ ಖುಷಿಯಾಗಿಲ್ಲ. ಇದು ಆಕೆ ತವರು ಮನೆಯವರಿಗೆ ತಿಳಿದಿದೆ. ಅದಕ್ಕೆ ಹೇಗಾದ್ರೂ ಇಬ್ಬರನ್ನು ದೂರ ಮಾಡಬೇಕು ಎಂದು ತಾತಾ ಕಾಯ್ತಾ ಇದ್ದಾರೆ.
ಇದನ್ನೂ ಓದಿ: Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?
ಮನೆಯವರ ದ್ವೇಷಕ್ಕೆ ಸಿದ್ದು-ತಾರಿಣಿ ಪ್ರೀತಿ ಬಲಿಯಾಗುತ್ತಾ? ಇಬ್ಬರನ್ನೂ ದೂರ ಮಾಡ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ