ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾರಿಣಿ ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ (Marriage) ಮಾಡಿಸಿದ್ದಾರೆ. ತಾರಿಣಿ ತಾತಾ ರಾಜಶೇಖರ್ ಗೆ ಮತ್ತು ಸಿದ್ಧಾಂತ್ ಅಮ್ಮ ನಿರುಪಮಾಗೆ ಹಳೇ ಸ್ನೇಹಾ ಇದೆ. ಆ ಸ್ನೇಹಾ ಈಗ ದ್ವೇಷವಾಗಿ ಮಾರ್ಪಟ್ಟಿದೆ. ನಿರುಪಮಾ ತಾರಿಣಿ ಮನೆಯಲ್ಲಿ ಹಳೇ ಫೆÇೀಟೋ ನೋಡಿ, ತಲೆ ಸುತ್ತಿ ಬೀಳುತ್ತಾಳೆ. ಮೊದಲು ತಾರಿಣಿ ಬೇಡವೇ ಬೇಡ ಅಂದವಳು, ತಾರಿಣಿಯನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಮನೆಗೆ ಕರೆದುಕೊಂಡು ಹೋಗಿದ್ದಾಳೆ. ತಾರಿಣಿ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.
ಸಾಲ ಕೇಳಿದ ತಾರಿಣಿ
ಅತ್ತೆಗೆ ಕೋಪ ಬರೋ ರೀತಿ ನಾನು ನಡೆದುಕೊಂಡಿದ್ದೆ. ಅದಕ್ಕೆ ಅವರು ರಿಯಾಕ್ಟ್ ಮಾಡಿದ್ರು ಅಷ್ಟೆ. ಇದ್ರಲ್ಲಿ ಅತ್ತೆ ತಪ್ಪು ಏನಿಲ್ಲ. ತಾತಾ ಮನೆಯಲ್ಲಿ ಬೇರೆ ಬೇರೆ ರೀತಿ ಪ್ರಾಬ್ಲಂ ಆಗ್ತಾ ಇದೆ. ಮದುವೆಯಾದ ಮೇಲೆ ಗಂಡನ ಮನೆ ಸಮಸ್ಯೆಯನ್ನು ತವರು ಮನೆಯಲ್ಲಿ ಹೇಳಬಾರದಂತೆ.
ನನಗೆ ಈಗ ಅನಿವಾರ್ಯ ಅದಕ್ಕೆ ಹೇಳ್ತಾ ಇದೀನಿ. ನನಗೆ ಅರ್ಜೆಂಟ್ ಆಗಿ ದುಡ್ಡು ಬೇಕಿತ್ತು. ಸಿದ್ಧಾಂತ್ ಕೆಲಸಕ್ಕೆ ಸೇರ್ತಾರೆ. ಸಾಲ ಅಂತ ಕೊಡಿ ತಾತ ಎಂದು ತಾರಿಣಿ ಕೇಳ್ತಾ ಇದ್ದಾಳೆ.
ತಪ್ಪು ಮಾಡಿದೆ ತಾರಿಣಿ
ತಪ್ಪು ಮಾಡಿ ಬಿಟ್ಟೆ. ನಿಮ್ಮ ಮನೆಯವರು ನಮ್ಮ ಬಗ್ಗೆ ಏನ್ ಅಂದುಕೊಳ್ಳಲ್ಲ. ತಾಯಿ ಮನೆಯವರು ತಮ್ಮ ಮಗಳು ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದು ಬಯಸುತ್ತಾರೆ. ಆದ್ರೆ ಏನೋ ಸಮಸ್ಯೆ ಆಗಿದೆ. ದುಡ್ಡು ಬೇಕು ಅಂದ್ರೆ, ಅವರು ಏನು ಅಂದುಕೊಳ್ಳಲ್ಲ. ಅದರಲ್ಲೂ ಉಮಾ ಆಂಟಿಗೆ ನನ್ನ ಮೇಲಿನ ಕೋಪ ಕಡಿಮೆ ಆಗಿಲ್ಲ ಎಂದು ಸಿದ್ಧಾಂತ್ ತಾರಿಣಿ ಬಳಿ ಹೇಳಿದ್ದಾನೆ.
ತಾತನ ಬಳಿ ಸಾಲ ಕೇಳಿದೆ
ನಾನು ಅಮ್ಮನ ಬಳಿ ದುಡ್ಡು ಕೇಳಿಲ್ಲ. ತಾತನ ಬಳಿ ಕೇಳಿದ್ದು. ಅದನ್ನು ಸುಮ್ನೆ ತಗೊಳಲ್ಲ. ಸಾಲ ಅಂತ ತಗೋಳಿ, ಕೆಲಸ ಸಿಕ್ಕಿದ ಮೇಲೆ ವಾಪಸ್ ಕೊಡಿ. ದುಡ್ಡು ಕೇಳಿದ್ದು ಮಾವ. ಅದು ತಾತನಿಗೆ ಗೊತ್ತಿದೆ. ಕಷ್ಟ ಇದ್ದಾಗ ಇದನ್ನೇಲ್ಲಾ ನೋಡಿಕೊಂಡು ಬದುಕೋಕೆ ಆಗುತ್ತಾ? ಪ್ಲೀಸ್ ಸಿದ್ಧಾಂತ್ ಎಂದು ತಾರಿಣಿ ಹೇಳ್ತಾ ಇದ್ದಾಳೆ.
ಸಹಾಯ ಕೇಳುವುದರಲ್ಲಿ ತಪ್ಪಿಲ್ಲ
ಬೇರೆ ಯಾರೋ ಕೊಡ್ತಾರೆ ಅಂದ್ರೆ ನಾನು ಸುಮ್ನೆ ಇರ್ತಿದ್ದೆ. ಈಗ ದುಡ್ಡಿನ ಅಗತ್ಯ ಇದೆ. ದುಡ್ಡು ಎಲ್ಲಾದ್ರೂ ಸಿಕ್ರೆ ಸಾಕಾಪ್ಪ ಎನ್ನಿಸುತ್ತಿದೆ. ಆದ್ರೂ ಈ ರೀತಿ ಮನೆಯಲ್ಲಿ ಕೇಳಿರೋದು ಸರಿಯಲ್ಲ ಎಂದು ಸಿದ್ಧಾಂತ್ ಹೇಳಿದ್ದಾನೆ.
ನಮಗೆ ಸಹಾಯ ಬೇಕಾದಾಗ ದೂರದವರ ಬಳಿ ಕೇಳುವುದಕ್ಕಿಂತ ಮನೆಯವರ ಬಳಿ ಕೇಳಬಹುದು ತಾನೇ. ಅಲ್ಲದೇ ತಾತ ಬಿಟ್ರೆ ನಮ್ಮ ಕಷ್ಟ ಸುಖ ನೋಡುವವರು ಯಾರಿದ್ದಾರೆ ಹೇಳಿ ಎಂದು ತಾರಿಣಿ ಹೇಳ್ತಾ ಇದ್ದಾಳೆ.
ಇದನ್ನೂ ಓದಿ: Gichhi Giligili: ಗಿಚ್ಚಿ ಗಿಲಿಗಿಲಿ ಸೀಸನ್ 2 ವಿನ್ನರ್ ಚಂದ್ರಪ್ರಭಾ, ಮದುವೆಯಾದ ಮೇಲೆ ಲಕ್ ಚೇಂಜ್ ಆಯ್ತು!
ಅಮ್ಮನಿಗೆ ಗೊತ್ತು
ನೀವೂ ಏನು ಯೋಚ್ನೆ ಮಾಡಬೇಡಿ ಸಿದ್ಧಾಂತ್, ಆದಷ್ಟು ಬೇಗ ಅವರ ದುಡ್ಡು ವಾಪಸ್ ಕೊಡೋಣ ಎಂದು ತಾರಿಣಿ ಹೇಳಿದ್ದಾಳೆ.ಅಮ್ಮನಿಗೆ ಗೊತ್ತಾದ್ರೆ ಕಷ್ಟ ಎಂದು ಸಿದ್ಧಾಂತ್ ಹೇಳ್ತಾನೆ. ಅದಕ್ಕೆ ತಾರಿಣಿ ಅಮ್ಮನಿಗೆ ಗೊತ್ತಿದೆ. ಅತ್ತೆನೇ ಈ ಐಡಿಯಾ ಕೊಟ್ಟಿದ್ದು ಎನ್ನುತ್ತಾಳೆ. ಅದನ್ನು ಕೇಳಿ ಸಿದ್ಧಾಂತ್ ಶಾಕ್ ಆಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ