ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನೆಯವರು ಸಿದ್ದು ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಸಿದ್ಧಾಂತ್ ತಾರಿಣಿಯನ್ನು ಸಂಪೂರ್ಣವಾಗಿ ಮರೆಯುತ್ತಾನಂತೆ. ಇತ್ತ ಸಿದ್ಧಾಂತ್ ಅಪ್ಪ ಮಾಡಿದ ಸಾಲದಿಂದ ಮನೆ ಹರಾಜಿಗಿಗೆ ಬಂದಿತ್ತು ಅದಕ್ಕೆ ತಾರಿಣಿ ದುಡ್ಡಿನ ಸಹಾಯ ಮಾಡಿದ್ದಳು. ಈಗ ಅದರಿಂದ ಸಮಸ್ಯೆ (Problem) ಎದುರಾಗಿದೆ.
ತಾರಿಣಿ ಸಹಾಯ
ಸಿದ್ಧಾಂತ್ ಅಪ್ಪ ಮನೆ ಮೇಲೆ ಬ್ಯಾಂಕ್‍ನಲ್ಲಿ ತುಂಬಾ ಸಾಲ ಮಾಡಿರುತ್ತಾರೆ. ಅದರ ಬಡ್ಡಿಯನ್ನು ಸಹ ಬ್ಯಾಂಕ್ ಗೆ ಕಟ್ಟಿರಲ್ಲ. ಅದಕ್ಕೆ ಬ್ಯಾಂಕ್ ನವರು ಮನೆಗೆ ಬಂದು ನೋಟಿಸ್ ಕೊಟ್ಟಿದ್ದರು. 40 ಲಕ್ಷ ಕಟ್ಟಿಲ್ಲ ಅಂದ್ರೆ ಮನೆ ಹರಾಜು ಹಾಕುವುದಾಗಿ ಹೇಳಿದ್ದರು. ಸಿದ್ದು ಅಪ್ಪ ಅನಂತಕೃಷ್ಣಾಗೆ ತಾರಿಣಿ ಸಹಾಯ ಮಾಡಿರುತ್ತಾಳೆ. ಅದರಿಂದ ಸಿದ್ದು ಮನೆ ಉಳಿದಿರುತ್ತೆ.
ಮನೆ ಪತ್ರ ಉಮಾಗೆ ಕೊಟ್ಟಿದ್ದ ಸಿದ್ದು
ಸಿದ್ದುಗೆ ತಾರಿಣಿ ದುಡ್ಡು ಕೊಟ್ಟಿದ್ದು ಉಮಾಗೆ ಗೊತ್ತಾಗುತ್ತೆ. ಅದಕ್ಕೆ ಉಮಾ, ಸಿದ್ದು ಮತ್ತು ಅನಂತಕೃಷ್ಣಾಗೆ ಉಮಾ ಬಾಯಿಗೆ ಬಂದಂತೆ ಬೈದಿರುತ್ತಾಳೆ. ನಮ್ಮಿಂದಲೇ ನೀವು ಬದುಕಿರೋದು ಎಂದು ಹೇಳ್ತಾಳೆ. ಅದಕ್ಕೆ ಸಿದ್ಧಾಂತ್ ತಮ್ಮ ಮನೆ ಪತ್ರ ತಂದು ಕೊಟ್ಟಿದ್ದ. ಇದು 3 ಕೋಟಿಗೆ ಬೆಲೆ ಬಾಳುತ್ತೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ದುಡ್ಡು ಕೊಟ್ಟ ಮೇಲೆ ವಾಪಸ್ ಕೊಡಿ ಎಂದಿದ್ದ.
ವಿಲನ್ ಜಗದೀಶ್ವರಿ ಕೈನಲ್ಲಿ ಮನೆ ಪತ್ರ
ಉಮಾ ಆ ಪತ್ರವನ್ನು ತಂದು ಜಗದೀಶ್ವರಿ ಕೈನಲ್ಲಿ ಕೊಟ್ಟಿದ್ದಳು. ನಿಮಗೆ ಇದು ಉಪಯೋಗಕ್ಕೆ ಬರಬಹುದು. ಆ ಸಿದ್ದು ತುಂಬಾ ಸ್ವಾಭಿಮಾನಿ ತರ ಮಾತನಾಡಿದ ಎಂದು ಉಮಾ ಹೇಳ್ತಾಳೆ. ಅದನ್ನು ಇಟ್ಟುಕೊಂಡು ಜಗದೀಶ್ವರಿ ಅವರನ್ನು ಆಟವಾಡಿಸಲು ನಿರ್ಧಾರ ಮಾಡಿದ್ದಾಳೆ. ಧೀರಜ್ ಮತ್ತು ಪಾಲಾಕ್ಷ ಸಹ ಕೈ ಜೋಡಿಸಿದ್ದಾರೆ.
ಸಿದ್ದು ಮನೆಗೆ ಗೂಂಡಾಗಳ ಕಾಟ
ಜಗದೀಶ್ವರಿ ಮತ್ತು ಧೀರಜ್ ಸಿದ್ಧಾಂತ್ ಗೆ ಕಾಟ ಕೊಡಲು ಯೋಚನೆ ಮಾಡಿದ್ದಾರೆ. ಅದಕ್ಕೆ ಮನೆಗೆ ಗೂಂಡಾಗಳನ್ನು ಕಳಿಸಿದ್ದಾರೆ. 40 ಲಕ್ಷ ಕೊಡುವವರೆಗೂ ನಾವು ಇಲ್ಲೇ ಇರುತ್ತೇವೆ, ದುಡ್ಡು ಕೊಟ್ಟ ಮೇಲೆ ಇಲ್ಲಿಂದ ಹೋಗುತ್ತೇವೆ ಎಂದು ಗೂಂಡಾಗಳು ಹೇಳುತ್ತಿದ್ದಾರೆ. ಅಲ್ಲದೇ ಅತ್ತಿಗೆ ಸಂಗೀತಾಳನ್ನು ಕೆಟ್ಟ ದೃಷ್ಟಿಯಿಂದ ನೋಡ್ತಾ ಇದ್ದಾರೆ.
ಧೀರಜ್, ಜಗದೀಶ್ವರಿ ಆಟ
ತಾರಿಣಿಯನ್ನು ಮದುವೆ ಆಗಬೇಕು ಎಂದುಕೊಂಡಿರುವ ಧೀರಜ್ ಸಿದ್ದು ಮೇಲೆ ಕತ್ತಿ ಮಸೆಯುತ್ತಿದ್ದಾನೆ. ಎಲ್ಲಿ ತಾರಿಣಿ ಸಿದ್ಧಾಂತ್ ನನ್ನು ಮತ್ತೆ ಪ್ರೀತಿ ಮಾಡ್ತಾಳೋ ಎಂದು ಭಯಪಡುತ್ತಿದ್ದಾನೆ. ಅದಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು, ಸಿದ್ಧಾಂತ್ ಮನೆಗೆ ಗೂಂಡಾಗಳನ್ನು ಕಳಿಸಿದ್ದಾನೆ. ಸಿದ್ದು ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.
ಇದನ್ನೂ ಓದಿ: Aditi Prabhudeva: ಅದಿತಿ ಪ್ರಭುದೇವ ಬೋಲ್ಡ್ ಫೋಟೋ, ಜೋರಾಯ್ತು ಪಡ್ಡೆ ಹುಡುಗರ ಹಾರ್ಟ್ಬೀಟ್
ಒಂದು ಕಡೆ ತಾರಿಣಿ ಸಹಾಯಿದಂದ ಮನೆ ಉಳಿದಿದ್ರೆ, ಇನ್ನೊಂದೆಡೆ ಅವಳ ಸಹಾಯದಿಂದ ಗೂಂಡಾಗಳು ಮನೆಗೆ ಬರುವಂತಾಗಿದೆ. ಈ ಎಲ್ಲ ಸಂಸ್ಯೆಯನ್ನು ಸಿದ್ದು ಹೇಗೆ ಬಗೆಹರಿಸುತ್ತಾನೆ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ