ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial) ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ ತಪಿತಸ್ಥ ಭಾವನೆ ಮೂಡಿಸುತ್ತಿದ್ದಾರೆ. ಧಾರಾವಾಹಿಗೆ ಬಿಗ್ ಬಾಸ್ (Bigg Boss) ಸೀಸನ್ 09ರ ವಿನ್ನರ್ ರೂಪೇಶ್ ಶೆಟ್ಟಿ ಆರ್ ಜೆಯಾಗಿ (RJ) ಎಂಟ್ರಿ ಕೊಟ್ಟಿದ್ದಾರೆ. ಅವರು ಹೇಳಿದ ನಂಬಿಕೆ ಅನ್ನೋ ಫಾರ್ಮುಲಾನ ತಾರಿಣಿ ಬಳಸುತ್ತಿದ್ದಾಳೆ.
RJ ರೂಪೇಶ್ ಶೆಟ್ಟಿ
ರೂಪೇಶ್ ಶೆಟ್ಟಿ RJ ಆಗಿ ಪಾತ್ರ ನಿರ್ವಹಿಸಿದ್ದು, ತಾರಿಣಿ ತಾನು ಸಿತಾರಾ ಎಂದು ಮಾತಾನಾಡುತ್ತಿದ್ದಾಳೆ. ರೂಪೇಶ್ ಶೆಟ್ಟಿ ನಂಬಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳ್ತಾರೆ. ಅದಕ್ಕೆ ತಾರಿಣಿ ನಂಬಿಕೆ ಎಲ್ಲಾ ಸಂಬಂಧಕ್ಕೂ ಅಡಿಪಾಯ. ಅಡಿಪಾಯ ಸೇಫ್ ಇಲ್ಲ ಅಂದ್ರೆ ಮನೆ ಹೇಗೆ ಸೇಫ್ ಅಲ್ವೋ, ಹಾಗೆ ನಂಬಿಕೆ ಇಲ್ಲ ಅಂದ್ರದೆ ಸಂಬಂಧಗಳು ಸೇಫ್ ಅಲ್ಲ ಎಂದು ತಾರಿಣಿ ಹೇಳ್ತಾಳೆ. ಒಮ್ಮೆ ನಂಬಿಕೆ ಅನ್ನೋ ಗೋಡೆ ಕುಸುದ್ರೆ, ಮತ್ತೆ ಅದನ್ನು ಕಟ್ಟುವುದು ತುಂಬಾ ಕಷ್ಟ ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ.
ನಂಬಿಕೆ ಅನ್ನುವ ಫಾರ್ಮುಲಾ
ತಾರಿಣಿ ಮದುವೆ ಇನ್ನು 10 ದಿನನದಲ್ಲಿ ಧೀರಜ್ ಜೊತೆ ಇದ್ದು, ಆಕೆಗೆ ಅವನ ಮೇಲೆ ಯಾಕೋ ಪ್ರೀತಿ ಹುಟ್ಟುತ್ತಿಲ್ಲ. ಸಿದ್ಧಾಂತ್ ಇಷ್ಟ ಆಗ್ತಾ ಇದ್ದಾನೆ. ತಾರಿಣಿಗೆ ಈಗ ನಿಮಗೆ ಇರುವ ಗೊಂದಲಕ್ಕೆ ನಂಬಿಕೆ ಅನ್ನುವ ಫಾರ್ಮುಲಾ ಯೂಸ್ ಮಾಡಿ. ನಂಬಿಕೆ ಅನ್ನುವ ವಿಚಾರದಲ್ಲಿ ನಿಮ್ಮ ಸ್ನೇಹಿತ ಗೆಲ್ತಾರಾ? ನಿಮ್ಮ ಮನೆಯವರು ನೋಡಿದ ಹುಡುಗ ಗೆಲ್ತಾನಾ ನೋಡೋಣ ಎಂದು ರೂಪೇಶ್ ಶೆಟ್ಟಿ ಹೇಳ್ತಾರೆ.
ಆಕಸ್ಮಿಕ ಭೇಟಿ
ತಾರಿಣಿ ಮತ್ತು ಸಿದ್ಧಾಂತ್ ದೇವಸ್ಥಾನದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಅದನ್ನು ನೋಡಿದ ಧೀರಜ್ ತಾರಿಣಿ ಮೇಲೆ ಕೂಗಾಡುತ್ತಿದ್ದಾನೆ. ರೋಹಿತ್ ಬರ್ತ್‍ಡೇ ಎಂದು ಕದ್ದು ಮುಚ್ಚಿ ಸಿದ್ಧಾಂತ್ ನನ್ನು ಭೇಟಿಯಾಗಿದ್ದೀಯಾ ಎನ್ನುತ್ತಾನೆ. ತಾರಿಣಿ ಎಷ್ಟೇ ಇದು ಆಕಸ್ಮಿಕ ಭೇಟಿ ಎಂದ್ರೂ ನಂಬುತ್ತಿಲ್ಲ. ನಿನ್ನ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಧೀರಜ್ ಹೇಳಿದ್ದಾನೆ.
ನಂಬಿಕೆಯಲ್ಲಿ ಫೇಲ್ ಆದ ಧೀರಜ್
ಸಿದ್ಧಾಂತ್‍ನನ್ನು ಮೀಟ್ ಮಾಡಬೇಕು ಎಂದು ನೀನೇ ರೋಹಿತ್ ಬಳಿ ಫೋನ್ ಮಾಡಿಸಿರಬಹುದು. ನಂಬೋಕೆ ಆಗಲ್ಲ ನಿನ್ನ. ಅದಕ್ಕೆ ಬೇಕು ಅಂತ ನಿನ್ನ ಮೊಬೈಲ್‍ನ್ನು ನನ್ನ ಹತ್ತಿರ ಬಿಟ್ಟು ಹೋದೆ. ರೋಹಿತ್ ಕಾಲ್‍ನ ನಾನು ರಿಸೀವ್ ಮಾಡೋ ರೀತಿ ಮಾಡಿದೆ ನಂಬೋಕೆ ಆಗಲ್ಲ ನಿನ್ನ ಎಂದು ಧೀರಜ್ ಹೇಳಿದ್ದಾನೆ. ಅದನ್ನು ಕೇಳಿ ತಾರಿಣಿ ಬೇಸರ ಮಾಡಿಕೊಂಡಿದ್ದಾಳೆ.
ಕಣ್ಣೆದೆರು ಸಿಕ್ಕಿ ಬಿದ್ರು, ಸತ್ಯದ ತಲೆ ಮೇಲೆ ಹೊಡೆದ ರೀತಿ ಸುಳ್ಳು ಹೇಳ್ತೀಯಾ ತಾರಿಣಿ. ಸಿದ್ಧಾಂತ್ ನಿನಗಾದ್ರೂ ಮರ್ಯಾದೆ ಬೇಡ್ವಾ? ಇನ್ನು 10 ದಿನದಲ್ಲಿ ಧೀರಜ್-ತಾರಿಣಿ ಮದುವೆ ಇದೆ. ಈ ರೀತಿ ಸಮಯದಲ್ಲಿ ಅವಳನ್ನು ಕರೆದು ಮಾತನಾಡಿಸಬಾರದು ಎಂಬ ಕಾಮನ್ ಸೆನ್ಸ್ ಇಲ್ವಾ ನಿನಗೆ ಎಂದು ದೇವಿಕಾ ಬೈಯ್ತಾಳೆ. ಅಷ್ಟರಲ್ಲಿ ರೋಹಿತ್ ಬರ್ತಾನೆ. ಅಲ್ಲಿಗೆ ಧೀರಜ್‍ಗೆ ತಾನು ಮಾತನಾಡಿದ್ದು ತಪ್ಪು ಎಂದು ಗೊತ್ತಾಗುತ್ತೆ.
ಇದನ್ನೂ ಓದಿ: Lakshana Serial: ಗೋಲ್‍ಗಪ್ಪಾ ಅಂದ್ರೆ ಇವರಿಗೆ ಅಚ್ಚುಮೆಚ್ಚು: ಗೆದ್ದಿದ್ದು ನಕ್ಷತ್ರಾನಾ, ಶ್ವೇತಾನಾ?
ತಾರಿಣಿಯ ನಂಬಿಕೆಯಲ್ಲಿ ಧೀರಜ್ ಫೇಲ್ ಆಗಿದ್ದಾನೆ. ಹಾಗಾದ್ರೆ RJ ರೂಪೇಶ್ ಶೆಟ್ಟಿ ಮುಂದೆ ಯಾವ ಫಾರ್ಮುಲಾ ಹೇಳಿಕೊಡ್ತಾರೆ. ತಾರಿಣಿ ಗೊಂದಲಕ್ಕೆ ಪರಿಹಾರ ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ