New Serial: ಕಲರ್ಸ್​ನಲ್ಲಿ ಹೊಸ ಧಾರಾವಾಹಿ, ಶೀಘ್ರದಲ್ಲೇ ಬರ್ತಿದ್ದಾಳೆ ಭಾಗ್ಯಲಕ್ಷ್ಮಿ

ಕಲರ್ಸ್ ಕನ್ನಡದಲ್ಲಿ ಬಲಗಾಲಿಟ್ಟು ಬರಲು ಭಾಗ್ಯಲಕ್ಷ್ಮಿ ಧಾರಾವಾಹಿ ಸಿದ್ಧವಾಗಿದೆ. ವಾಹಿನಿಯೂ ಪ್ರೋಮೋವನ್ನು ಬಿಟ್ಟಿದೆ. ಪ್ರೋಮೋದಲ್ಲಿ ಇದೊಂದು ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಎನ್ನುವಂತೆ ಕಾಣುತ್ತಿದೆ.

ಭಾಗ್ಯಲಕ್ಷ್ಮಿ

ಭಾಗ್ಯಲಕ್ಷ್ಮಿ

 • Share this:
  ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ (Serials) ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಇನ್ನೇನು ಬಿಗ್‍ಬಾಸ್ ಸೀಸನ್ 9  (Bigg Boss 9) ಶುರುವಾಗಲಿದೆ. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈಗಾಗಲೇ ಹಿಟ್ ಧಾರಾವಾಹಿಗಳು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದು, ಸದ್ಯದಲ್ಲೇ ಹೊಸ ಧಾರಾವಾಹಿ (New Serial) ಬರಲಿದೆ. ಭಾಗ್ಯಲಕ್ಷ್ಮಿ (Bhagya Lakshmi) ಅನ್ನೋ ಹೊಸ ಧಾರಾವಾಹಿ ಬರಲಿದೆ. ಮಖ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಯ ಸಮಯ ಇನ್ನೂ ತಿಳಿದಿಲ್ಲ.

  ಲಕ್ಷ್ಮಿಗೊಬ್ಬ ಶ್ರೀರಾಮ ಬೇಕಂತೆ

  ಕಲರ್ಸ್ ಕನ್ನಡದಲ್ಲಿ ಬಲಗಾಲಿಟ್ಟು ಬರಲು ಭಾಗ್ಯಲಕ್ಷ್ಮಿ ಧಾರಾವಾಹಿ ಸಿದ್ಧವಾಗಿದೆ. ವಾಹಿನಿಯೂ ಪ್ರೋಮೋವನ್ನು ಬಿಟ್ಟಿದೆ. ಪ್ರೋಮೋ ದಲ್ಲಿ ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಎನ್ನುವಂತೆ ಕಾಣುತ್ತಿದೆ. ಸುಷ್ಮಾ ಅಂದ್ರೆ ಭಾಗ್ಯ ಮಾರ್ಕೆಟ್ ಗೆ ತಂಗಿ ಲಕ್ಷ್ಮಿ ಜೊತೆ ಹೋಗಿರುತ್ತಾಳೆ. ಆಕೆಯ ಗಂಡ ಕಾರಿನಲ್ಲಿ ಕಾಯುತ್ತಾ ಇರುತ್ತಾನೆ. ಹೆಂಡ್ತಿ ಲೇಟ್ ಆಗಿ ಬರುತ್ತಾಳೆ. ಅದಕ್ಕೆ ಅವನು ಕೋಪ ಮಾಡಿಕೊಂಡಿರುತ್ತಾಳೆ. ಆಗ ಲಕ್ಷ್ಮಿ ನನ್ನಿಂದ ಲೇಟ್ ಆಗಿಲ್ಲ ಎನ್ನುತ್ತಾಳೆ.

  ಭಾವನಿಗೆ ಕೋಪ, ಅಕ್ಕನಿಗೆ ತಾಳ್ಮೆ

  ಕೋಪ ಮಾಡಿಕೊಂಡ ಭಾವನನ್ನು, ಪತ್ನಿ ಭಾಗ್ಯ ಮದುವೆ ಬ್ರೋಕರ್ ಬಳಿ ಹೋಗಬೇಕು ಬರ್ತಿರಾ ಅಂತಾಳೆ. ಅದಕ್ಕೆ ಭಾವ ಗೆಟ್ ಲಾಸ್ಟ್ ಭಾಗ್ಯ ಎಂದು ಹೋಗುತ್ತಾನೆ. ಆಗ ತಂಗಿ ಲಕ್ಷ್ಮಿ ಭಾವನಿಗೆ ಕೋಪ ಜಾಸ್ತಿನಾ? ಅಥವಾ ನಿನಗೆ ತಾಳ್ಮೆ ಜಾಸ್ತಿಯಾ ಗೊತ್ತಿಲ್ಲ ಅಂತಾಳೆ. ಅದಕ್ಕೆ ಅಕ್ಕ ಸುಮ್ಮನೆ ಬಾ ಎಂದು ಕರೆದುಕೊಂಡು ಹೋಗುತ್ತಾಳೆ.


  ಇದನ್ನೂ ಓದಿ: Gichi GiliGili: ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು-ವನ್ಷಿಕಾ, ಮತ್ತೊಮ್ಮೆ ಮಾಸ್ಟರ್ ಆನಂದ್ ಮಗಳಿಗೆ ಗೆಲುವಿನ ಮಾಲೆ

  ತಂಗಿಗೆ ಗಂಡು ಹುಡುಕುತ್ತಿರುವ ಅಕ್ಕ

  ಭಾಗ್ಯ ಮತ್ತು ಲಕ್ಷ್ಮಿ ಇಬ್ಬರು ಅಕ್ಕ ತಂಗಿಯರು. ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡ್ರೆ ತುಂಬಾ ಪ್ರೀತಿ. ಹೇಗಾದ್ರೂ ಮಾಡಿ, ತನ್ನ ತಂಗಿಗೆ ಒಳ್ಳೆ ಹುಡುಗನನ್ನು ಮದುವೆ ಮಾಡಬೇಕು ಎಂದು ಕೊಂಡಿದ್ದಾಳೆ. ಅದಕ್ಕಾಗಿ ಗಂಡು ಹುಡುಕುತ್ತಿದ್ದಾಳೆ. ತನ್ನ ತಂಗಿ ಲಕ್ಷ್ಮಿಗೆ ಶ್ರೀ ರಾಮನಂತ ಗಂಡನೇ ಬೇಕಂತೆ. ಅದಕ್ಕೆ ಬ್ರೋಕರ್ ಒಳ್ಳೆಯ ಹುಡುಗನನ್ನು ಹುಡುಕಿ ಕೊಡಿ ಎಂದು ಕೇಳುತ್ತಿದ್ದಾಳೆ.

  Colors Kannada serial, Kannada serial, Bhagya Lakshmi news Serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಭಾಗ್ಯಲಕ್ಷ್ಮಿ


  ಶ್ರೀಘ್ರದಲ್ಲೇ ಧಾರಾವಾಹಿ

  ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಮಂಗಳಗೌರಿ ಮದುವೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಈಗಾಗಲೇ ಪ್ರಸಾರವಾಗುತ್ತಿವೆ. ಸದ್ಯ ಈ ಧಾರಾವಾಹಿ ಯಾವ ಸಮಯಕ್ಕೆ ಬರುತ್ತೆ ಅಂತ ಗೊತ್ತಿಲ್ಲ. ಅಲ್ಲದೇ ಇಷ್ಟರಲ್ಲಿ ಇವುಗಳಲ್ಲಿ ಯಾವುದಾದರೂ ಧಾರಾವಾಹಿ ಮುಗಿಯಬಹುದು. ಅದಕ್ಕೆ ವಾಹಿನಿ ಹೊಸ ಧಾರಾವಾಹಿ ಪ್ರೋಮೋ ಬಿಟ್ಟಿದೆ.

  ಇದನ್ನೂ ಓದಿ: Tamil Actress Deepa: ನಟಿ ದೀಪಾ ಮೃತದೇಹದ ಪಕ್ಕ ಇದ್ದ ಡೆತ್​ ನೋಟ್​ನಲ್ಲಿ ಏನಿತ್ತು?

  ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ನನ್ನರಸಿ ರಾಧೆ, ನಮ್ಮನೆ ಯುವರಾಣಿ, ಮಂಗಳಗೌರಿ ಮದುವೆ, ಕನ್ಯಾಕುಮಾರಿ ಧಾರಾವಾಹಿಗಳು ಅಂತ್ಯವಾಗಲಿವೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗುತ್ತಿದೆ. ಅದಕ್ಕೆ ಸ್ವಲ್ಪ ಕಡಿಮೆ ಟಿಆರ್​ಪಿ ಇರುವ ಧಾರಾವಾಹಿಗಳು ಅಂತ್ಯವಾಗಲಿವೆ ಎನ್ನಲಾಗುತ್ತಿದೆ.  ಆದರೆ ಈ ಧಾರಾವಾಹಿಗಳ ಮುಕ್ತಾಯದ ಬಗ್ಗೆ ವಾಹಿನಿ ಈವರೆಗೂ ಅಧಿಕೃತ ಮಾಹಿತಿ ಬಹಿರಂಗಗೊಳಿಸಿಲ್ಲ.
  Published by:Savitha Savitha
  First published: