Kendasampige: ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಯಾರು ಇಲ್ಲದ ವೇಳೆ ಮನೆಗೆ ಬಂದ!

ಸುಮನಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಕಾಳಿ. ಮನೆಗೆ ಬರುತ್ತಾನೆ. ಮನೆಯ ಬಾಗಿಲುಗಳನ್ನು ಹಾಕುತ್ತಾನೆ. ಸುಮಿ ಯಾಕೆ ಬಂದಿದ್ದಿ ಹೋಗು ಎನ್ನುತ್ತಾಳೆ. ಅಷ್ಟರಲ್ಲೇ ಕಾಲೋನಿ ಜನ ಎಲ್ಲ ಸುಮಿ ಮನೆ ಬಾಗಿಲ ಮುಂದೆ ಬರುತ್ತಾರೆ. ಆಗ ಕಾಳಿ ಮನೆಯಿಂದ ಆಚೆ ಬಂದು. ನಂದು, ಸುಮಿದು ಎಲ್ಲ ಮುಗಿಯಿತು ಎಂದು ನಗುತ್ತಾ ಹೋಗುತ್ತಾನೆ.

ಸುಮಿ

ಸುಮಿ

 • Share this:
  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (Serial) 2 ವಾರದಿಂದ, ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಅಪ್ಪನ (Father) ಆಪರೇಷನ್‍ಗೆ (Operation) ದುಡ್ಡು ಪಡೆದ ಸುಮಿಗೆ ಕಷ್ಟದ ಮೇಲೆ ಕಷ್ಟ ಬರುತ್ತಿವೆ. ಸಾಲ ತೀರಿಸಿದ್ರೂ ಕಾಳಿ ಸುಮಿ ಮರ್ಯಾದೆ ತೆಗೆಯಲು ಮುಂದಾಗಿದ್ದಾನೆ.

  ತಾಳಿ ಹಿಡಿದು ಬಂದ ಕಾಳಿಗೆ ಕಾರ್ಪೊರೇಟರ್ ವಾರ್ನಿಂಗ್
  ಸುಮಿ ವಿಜಯ ಎಂಬುವವರಿಂದ ತನ್ನ ಅಪ್ಪನ ಆಪರೇಷನ್‍ಗೆ ಸಾಲ ಪಡೆದಿರುತ್ತಾಳೆ. ಅದಕ್ಕೆ ವಿಜಯ ತನ್ನ ಮಗನನ್ನು ಮದುವೆ ಆಗುವಂತೆ ಹೇಳಿರುತ್ತಾಳೆ. ಆದ್ರೆ ಕಾಲೋನಿ ಜನ ಸೇರಿ ಇದು ಆಗಲ್ಲ ಎಂದಾಗ. ಸುಮಿ ಕಾಲೋನಿ ಜನರ ಪರ ನಿಲ್ಲುತ್ತಾಳೆ. ತಾನು ಕಾಳಿಯನ್ನು ಮದುವೆ ಆಗಲ್ಲ ಎನ್ನುತ್ತಾಳೆ.

  ಯಾವಾಗ ಸುಮಿ ಕಾಲೋನಿ ಜನರ ಪರ ನಿಂತಳೋ, ಆಗಲೇ ದುಡ್ಡು ಕೊಟ್ಟ ವಿಜಯ ಮತ್ತು ಆಕೆಯ ಮಗ ಕಾಳಿಗೆ ಕೋಪ ಬಂತು. ಅದಕ್ಕೆ ಸುಮಿಯನ್ನು ಮದುವೆ ಆಗ್ತೀನಿ ಎಂದು ತಾಳಿ ಹಿಡಿದು ಅವಳ ಮನೆ ಬಾಗಿಲಿಗೆ ಬಂದಿದ್ದ. ಈಗಲೇ ಮದುವೆ ಆಗಬೇಕು. ಇಲ್ಲ ಅಂದ್ರೆ ನಮ್ಮ ಸಾಲ ವಾಪಸ್ ಕೊಡು ಎಂದು ಕೂತಿದ್ದ. ಇನ್ನೇನು ತಾಳಿ ಕಟ್ಟಬೇಕು, ಅಷ್ಟರಲ್ಲೇ ಸುಮಿ ತಮ್ಮ ರಾಜೇಶ್ ಬಂದು ತಡೆಯುತ್ತಾನೆ. ಆಗ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಆತನಿಗೆ ಬುದ್ದಿ ಹೇಳಿ, ಸಾಲ ವಾಪಸ್ ಕೊಟ್ಟು, ವಾರ್ನಿಂಗ್ ಮಾಡಿ ಕಳಿಸುತ್ತಾನೆ.

  ಆದ ಅವಮಾನಕ್ಕೆ ಕಾಳಿ ಸೇಡು
  ಕಾಲೋನಿ ಜನರ ಮುಂದೆ ತನಗೆ ಅವಮಾನ ಆಯ್ತು. ಹೇಗಾದ್ರೂ ಮಾಡಿ ನಾನು ಸುಮಿಯನ್ನು ಮದುವೆ ಆಗಲೇ ಬೇಕು. ಅವಳು ಹೇಗೆ ನನ್ನ ಕೈಯಿಂದ ತಪ್ಪಿಸಿಕೊಳ್ತಾಳೆ ನೋಡ್ತಿನಿ ಎಂದು ಸ್ಕೆಚ್ ಹಾಕ್ತಿದ್ದ. ಅದೇ ಸಮಯಕ್ಕೆ ಸುಮಿ ಮನೆಗೆ ಹೋಗುವುದನ್ನು ನೋಡುತ್ತಾನೆ. ಅಲ್ಲದೇ ರಾಜೇಶ್ ಮತ್ತು ಅವರ ಅಪ್ಪ ಹೊರಗೆ ಹೋಗುವುದನ್ನು ನೋಡುತ್ತಾನೆ.

  ಇದನ್ನೂ ಓದಿ: Ramachari: ಅಮ್ಮನಿಗಾಗಿ ಗನ್ ಹಿಡಿದ ಚಾರು! ರೆಬೆಲ್ ಅವತಾರದಲ್ಲಿ ರಾಮಾಚಾರಿ ಮನೆಗೆ!

  ಸುಮಿ ಮನೆಗೆ ಬಂದ ಕಾಳಿ
  ಸುಮನಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಚಿತಪಡಿಸಿಕೊಂಡ ಕಾಳಿ. ಮನೆಗೆ ಬರುತ್ತಾನೆ. ಮನೆಯ ಬಾಗಿಲುಗಳನ್ನು ಹಾಕುತ್ತಾನೆ. ಸುಮಿ ಯಾಕೆ ಬಂದಿದ್ದಿ ಹೋಗು ಎನ್ನುತ್ತಾಳೆ. ಅಷ್ಟರಲ್ಲೇ ಕಾಲೋನಿ ಜನ ಎಲ್ಲ ಸುಮಿ ಮನೆ ಬಾಗಿಲ ಮುಂದೆ ಬರುತ್ತಾರೆ. ಆಗ ಕಾಳಿ ಮನೆಯಿಂದ ಆಚೆ ಬಂದು. ನಂದು, ಸುಮಿದು ಎಲ್ಲ ಮುಗಿಯಿತು ಎಂದು ನಗುತ್ತಾ ಹೋಗುತ್ತಾನೆ.

  Colors Kannada serial, Kannada serial, Kendasampige Serial, Kendasampige serial cast, New serial, Sumana in problem, ಕೆಂಡಸಂಪಿಗೆ ಧಾರಾವಾಹಿ, ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಹೊಸ ಧಾರಾವಾಹಿ,ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕೆಂಡಸಂಪಿಗೆ


  ಕಾಲೋನಿ ಜನರ ಕಣ್ಣಲ್ಲಿ ಕೆಟ್ಟವಳು ಆದ್ಲಾ ಸುಮಾ?
  ಕಾಲೋನಿ ಜನರಿಗೆ ಏನೇ ಕಷ್ಟ ಅಂದ್ರು ಸುಮಿ ಅವರಿಗೆ ನ್ಯಾಯ ಕೊಡಿಸಲು ಮುಂದೆ ಇರ್ತಿದ್ಲು. ಈಗ ಈ ರೀತಿ ಕಾಳಿ ಮನೆಯಿಂದ ಆಚೆ ಹೋಗಿದ್ದನ್ನು ನೋಡಿ, ಜನ ಎಲ್ಲಾ ತಪ್ಪು ತಿಳಿದುಕೊಳ್ತಾರಾ?

  ಇದನ್ನೂ ಓದಿ: Gattimela: ವೇದಾಂತ್, ವಿಕ್ರಾಂತ್‍ಗೆ ಅಮ್ಮನ ಸುಳಿವು ಸಿಗುತ್ತಾ, ವೈದೇಹಿ ಚಿತ್ರ ಬಿಡಿಸ್ತಾನಾ ಸಿಕ್ಕಿರೋ ಅನಾಮಿಕ ವ್ಯಕ್ತಿ?

  ಜನ ಆ ರೀತಿ ತಪ್ಪಾಗಿ ಭಾವಿಸಲಿ ಎಂದೇ ಕಾಳಿ ಈ ರೀತಿ ಮಾಡಿದ್ದಾನೆ. ಸುಮಿಯನ್ನು ಯಾರು ಮದುವೆ ಆಗಬಾರದು ಎನ್ನುವುದೇ ಕಾಳಿಯ ಉದ್ದೇಶ. ಸುಮನಾ ಈಗ ಏನ್ ಮಾಡ್ತಾಳೆ? ಈ ಸಂಕಷ್ಟದಿಂದ ಹೇಗೆ ಪಾರಾಗ್ತಾಳೆ? ಎಲ್ಲವನ್ನೂ ನೋಡಲು ಕೆಂಡಸಂಪಿಗೆ ಸೀರಿಯಲ್ ನೋಡಬೇಕು.
  Published by:Savitha Savitha
  First published: