• Home
 • »
 • News
 • »
 • entertainment
 • »
 • Bhagya Lakshmi: ಮಗನ ಬಗ್ಗೆ ಕಾವೇರಿ ಕನಸು ಚೂರು ಚೂರಾಯ್ತು!

Bhagya Lakshmi: ಮಗನ ಬಗ್ಗೆ ಕಾವೇರಿ ಕನಸು ಚೂರು ಚೂರಾಯ್ತು!

ಮಗನ ಬಗ್ಗೆ ಕಾವೇರಿ ಇಟ್ಟ ಕನಸು ಚೂರು ಚೂರು

ಮಗನ ಬಗ್ಗೆ ಕಾವೇರಿ ಇಟ್ಟ ಕನಸು ಚೂರು ಚೂರು

ಕಾವೇರಿ ಮಗನ ಬಳಿ ಮದುವೆಗೆ ಓಕೆ ಎಂದು ಬಂದಿದ್ದಾಳೆ. ಆದ್ರೆ ಅಕ್ಕನಿಗೆ ಫೋನ್ ಮಾಡಿ, ನಾನು ಇಷ್ಟ ಪಟ್ಟಿದ್ದನ್ನೇ ನನ್ನ ಮಗನಿಗೆ ನೀಡುತ್ತೇನೆ. ಅವನು ಇಷ್ಟ ಪಟ್ಟಿದ್ದು ಅಲ್ಲ ಎಂದು ಹೇಳ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಎನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನಾಗಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಇದ್ದಾರೆ. ಇದರಲ್ಲಿ ಅವನು ಸಿಂಗರ್ (Singer) ವೈಷ್ಣವ್ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ವೈಷ್ಣವ್ ಪ್ರೀತಿ (Love) ವಿಷ್ಯ ಅಮ್ಮನಿಗೆ ಗೊತ್ತಾಗಿದೆ.


  ಸಿಂಗರ್ ಆಗಿರುವ ವೈಷ್ಣವ್
  ಈ ಧಾರಾವಾಹಿಯಲ್ಲಿ ನಟನಾಗಿ ಬಿಗ್ ಬಾಸ್ ನಲ್ಲಿ ಇದ್ದ ಶಮಂತ್ ಬ್ರೋ ಗೌಡ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಆಗಿ ಸಖಿಯೇ ಸಖಿಯೇ ಎನ್ನುವ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ದಾರೆ. ದೊಡ್ಡ ಸಿಂಗರ್ ಕೂಡ ಹೌದು. ನಟನಿಗೆ ಇಬ್ಬರು ನಟಿಯರಿದ್ದಾರೆ. ಅದರಲ್ಲಿ ಒಬ್ಬ ನಟಿಯಾಗಿ ಕೀರ್ತಿ ಎನ್ನುವವರು ಕಾಣಿಸಿಕೊಂಡಿದ್ದಾರೆ. ಇವರು ಸಹ ಈ ಧಾರಾವಾಹಿಯಲ್ಲಿ ಹೊಸ ಪರಿಚಯ. ಕೀರ್ತಿಯನ್ನು ವೈಷ್ಣವ್ ತುಂಬಾ ಪ್ರೀತಿ ಮಾಡ್ತಾ ಇದ್ದಾನೆ.


  ಮಗ ಎಂದ್ರೆ ಕಾವೇರಿಗೆ ಪ್ರಾಣ
  ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು. ಈಗ ಕೀರ್ತಿ-ವೈಷ್ಣವ್ ಪ್ರೀತಿ ಮಾಡೋ ವಿಚಾರ ಕಾವೇರಿಗೆ ಗೊತ್ತಾಗಿದೆ.


  ಇದನ್ನೂ ಓದಿ: BBK Sudeep: ಬಿಗ್ ಬಾಸ್ ವಾರಾಂತ್ಯದ ಕಾರ್ಯಕ್ರಮಕ್ಕೆ ಸುದೀಪ್ ಬರಲ್ವಾ! ಕಿಚ್ಚ ಕೋಪಗೊಂಡಿದ್ದಾರಾ? 


  ಮದುವೆಗೆ ಓಕೆ ಎಂದ ಕಾವೇರಿ
  ವೈಷ್ಣವ್ ಹಾಗೂ ಕೀರ್ತಿ ಫೋಟೋ ಪೇಪರ್ ನಲ್ಲಿ ಬಂದಿರುತ್ತೆ. ಕೂಡಿ ಬಂದ ಕಂಕಣ ಭಾಗ್ಯ ಎಂದು. ಅದನ್ನು ನೋಡಿದ ಕಾವೇರಿ ಸುದ್ದಿ ಹಾಕಿದವರ ಮೇಲೆ ರೇಗಾಡುತ್ತಾ ಇರುತ್ತಾಳೆ. ಆಗ ಬಂದ ವೈಷ್ಣವ್ ಪೇಪರ್ ನಲ್ಲಿ ಬಂದಿರುವುದು ನಿಜ ಎಂದು ಹೇಳ್ತಾನೆ. ಅದಕ್ಕೆ ಕಾವೇರಿ ಮದುವೆಗೆ ಒಪ್ಪಿಗೆ ಕೊಡ್ತಾಳೆ. ಆದ್ರೆ ರೂಮ್ ಒಳಗೆ ಹೋಗಿ ಜೋರಾಗಿ ಅಳುತ್ತಾಳೆ. ಕೊನೆಗೂ ತಾನು ಏನ್ ಆಗಬಾರದು ಎಂದುಕೊಂಡಿದ್ದೇನೋ ಅದೇ ಆಯ್ತು ಎಂದು ಬೇಸರ ಮಾಡಿಕೊಳ್ತಾಳೆ.


  Colors Kannada serial, Kannada serial, Bhagya Lakshmi news Serial, serial cast, See today evening 7 PM, ಭಾಗ್ಯಲಕ್ಷ್ಮಿ ಧಾರಾವಾಹಿ, ಮಗನ ಬಗ್ಗೆ ಕಾವೇರಿ ಇಟ್ಟ ಕನಸು ಚೂರು ಚೂರು, ತನ್ನ ಆಸೆಯಂತೆ ನಡೆಯಬೇಕೆಂದು ವೈಷ್ಣವ್ ಮುಂದೆ ನಾಟಕ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಲಕ್ಷ್ಮಿ


  ತಾನು ಹೇಳಿದ ರೀತಿ ಆಗಬೇಕಂತೆ
  ಕಾವೇರಿ ಮಗ ಬಳಿ ಮದುವೆಗೆ ಓಕೆ ಎಂದು ಬಂದಿದ್ದಾಳೆ. ಆದ್ರೆ ಅಕ್ಕನಿಗೆ ಫೋನ್ ಮಾಡಿ, ನಾನು ಇಷ್ಟ ಪಟ್ಟಿದ್ದನ್ನೇ ನನ್ನ ಮಗನಿಗೆ ನೀಡುತ್ತೇನೆ. ಅವನು ಇಷ್ಟ ಪಟ್ಟಿದ್ದು ಅಲ್ಲ ಎಂದು ಹೇಳ್ತಾಳೆ. ಹಾಗಾದ್ರೆ ವೈಷ್ಣವ್-ಕೀರ್ತಿ ಮದುವೆ ಆಗಲ್ವಾ? ಅಮ್ಮ ಕಾವೇರಿ ಹುಡುಕುತ್ತಿರು ಹುಡುಗಿ ಹೇಗಿರಬೇಕು ಎನ್ನುವುದೇ ಕುತೂಹಲ.


  ಇದನ್ನೂ ಓದಿ: Super Mom: ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಶೀಘ್ರದಲ್ಲೇ ಬರಲಿದೆ ಸೂಪರ್ ಮಾಮ್ 


  ಲಕ್ಷ್ಮಿ ಮೇಲೆ ಕಣ್ಣು ಹಾಕಿದ ವೈಷ್ಣವ್ ದೊಡ್ಡಮ್ಮ
  ಇನ್ನು ವೈಷ್ಣವ್ ದೊಡ್ಡಮ್ಮ ಅಂದ್ರೆ ಭಾಗ್ಯ ಅತ್ತೆ, ಲಕ್ಷ್ಮಿ ಮೇಲೆ ಕಣ್ಣು ಹಾಕಿದ್ದಾಳೆ. ಇವಳೇ ನಮ್ಮ ವೈಷ್ಣವ್ ಗೆ ಒಳ್ಳೆ ಜೋಡಿ ಆಗ್ತಾಳೆ. ಬರೀ ಸ್ಟೈಲ್, ಚೆಂದ ಇದ್ರೆ ಸಾಕಾಗಲ್ಲ. ಮನೆ ನಿಭಾಯಿಸಿಕೊಂಡು ಹುಡುಗಿ ಮದುವೆ ಆದ್ರ ಚೆಂದ ಎನ್ನುವುದು ಅವಳ ವಾದ. ಹೇಗಿದ್ರೂ ತಂಗಿ ತನ್ನ ಮಾತು ಕೇಳ್ತಾಳೆ ಅನ್ನೋ ನಂಬಿಕೆ.


  Colors Kannada serial, Kannada serial, Bhagya Lakshmi news Serial, serial cast, See today evening 7 PM, ಭಾಗ್ಯಲಕ್ಷ್ಮಿ ಧಾರಾವಾಹಿ, ಮಗನ ಬಗ್ಗೆ ಕಾವೇರಿ ಇಟ್ಟ ಕನಸು ಚೂರು ಚೂರು, ತನ್ನ ಆಸೆಯಂತೆ ನಡೆಯಬೇಕೆಂದು ವೈಷ್ಣವ್ ಮುಂದೆ ನಾಟಕ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ವೈಷ್ಣವ್ ದೊಡ್ಡಮ್ಮ


  ವೈಷ್ಣವ್ ಪ್ರೀತಿ ಕೊನೆಯಾಗುತ್ತಾ? ಲಕ್ಷ್ಮಿ-ವೈಷ್ಣವ್ ಮದುವೆ ಅಗ್ತಾರಾ? ಎಲ್ಲವನ್ನೂ ನೋಡಲು ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

  Published by:Savitha Savitha
  First published: