• Home
  • »
  • News
  • »
  • entertainment
  • »
  • Bhagya Lakshmi: ಮಗ ತನ್ನ ಮಾತೇ ಕೇಳಬೇಕು ಎಂದು ಅಮ್ಮ ಕಾವೇರಿಗೆ ಹಠ, ಪ್ರೀತಿಸಿದಾಕೆಗೆ ಮದುವೆ ಆಗು ಪ್ರಾಮಿಸ್ ಮಗನಿಂದ!

Bhagya Lakshmi: ಮಗ ತನ್ನ ಮಾತೇ ಕೇಳಬೇಕು ಎಂದು ಅಮ್ಮ ಕಾವೇರಿಗೆ ಹಠ, ಪ್ರೀತಿಸಿದಾಕೆಗೆ ಮದುವೆ ಆಗು ಪ್ರಾಮಿಸ್ ಮಗನಿಂದ!

ಕಾವೇರಿ

ಕಾವೇರಿ

Bhagya Lakshmi: ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ  (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 (7 PM) ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ (Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಎನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟ ಆಗಿ ಬಿಗ್ ಬಾಸ್ (Bigg Boss) ಖ್ಯಾತಿಯ ಶಮಂತ್ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವನು ವೈಷ್ಣವ್ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ.


    ಶಮಂತ್ ಗೌಡ ಹೀರೋ
    ಈ ಧಾರಾವಾಹಿಯಲ್ಲಿ ನಟನಾಗಿ ಬಿಗ್ ಬಾಸ್ ನಲ್ಲಿ ಇದ್ದ ಶಮಂತ್ ಬ್ರೋ ಗೌಡ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಆಗಿ ಸಖಿಯೇ ಸಖಿಯೇ ಎನ್ನುವ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ದಾರೆ. ನಟನಿಗೆ ಇಬ್ಬರು ನಟಿಯರಿದ್ದಾರೆ. ಅದರಲ್ಲಿ ಒಬ್ಬ ನಟಿಯಾಗಿ ಕೀರ್ತಿ ಎನ್ನುವವರು ಕಾಣಿಸಿಕೊಂಡಿದ್ದಾರೆ. ಇವರು ಸಹ ಈ ಧಾರಾವಾಹಿಯಲ್ಲಿ ಹೊಸ ಪರಿಚಯ. ಕೀರ್ತಿಯನ್ನು ವೈಷ್ಣವ್ ತುಂಬಾ ಪ್ರೀತಿ ಮಾಡ್ತಾ ಇದ್ದಾನೆ.


    ವೈಷ್ಣವ್ ಅಮ್ಮ ಕಾವೇರಿ ಹೇಳಿದಂತೆ ಎಲ್ಲಾ ಆಗಬೇಕಂತೆ
    ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು. ಪುರೋಹಿತರ ಬಳಿ ಕಾವೇರಿ ತನ್ನ ಮತ್ತು ಸೊಸೆಯ ಜಾತಕ ತೋರಿಸಿದ್ದಾರೆ. ಮಗನಿಗೆ ಮದುವೆ ಮಾಡಲು ಅತ್ತೆ ಸೊಸೆ ಜಾತಕ ಹೊಂದಾಗಬೇಕಂತೆ.


    ಇದನ್ನೂ ಓದಿ: Ramachari: ಪ್ರಾಜೆಕ್ಟ್ ಕದ್ದ ವಿಷಯ ಗೊತ್ತಾಯ್ತಾ? ಸುಮ್ನೆ ಬಿಡ್ತಾನಾ ರಾಮಾಚಾರಿ?


    ಕೀರ್ತಿಗೆ ಮಾತು ಕೊಟ್ಟಿದ್ದಾನೆ ವೈಷ್ಣವ್
    ವೈಷ್ಣವ್ ಮತ್ತು ಕೀರ್ತಿ 2 ವರ್ಷದಿಂದ ಪ್ರೀತಿ ಮಾಡ್ತಾ ಇದ್ದಾರೆ. ವೈಷ್ಣವ್ ಗೆ ಕೀರ್ತಿ ಮದುವೆ ಆಗೋಣ ಎಂದು ಕೇಳುತ್ತಿದ್ದಾಳೆ. ಅದಕ್ಕೆ ವೈಷ್ಣವ್ ಕೂಡ ಓಕೆ ಎಂದಿದ್ದಾನೆ. ತನ್ನ ಆಸೆಗೆ ತನ್ನ ಮನೆಯಲ್ಲಿ ಯಾರೂ ಅಡ್ಡಿ ಬರಲ್ಲ. ನಾನು ಕೇಳಿದ್ರೆ ನನ್ನ ಅಮ್ಮ ಚಂದ್ರನನ್ನೇ ತಂದು ಕೊಡ್ತಾಳೆ ಎನ್ನುತ್ತಿದ್ದಾನೆ.


    Colors Kannada serial, Kannada serial, Bhagya Lakshmi news Serial, serial cast, See today evening 7 PM, ಭಾಗ್ಯಲಕ್ಷ್ಮಿ ಧಾರಾವಾಹಿ, ಮಗ ತನ್ನ ಮಾತೇ ಕೇಳಬೇಕು ಎಂದು ಅಮ್ಮ ಕಾಬೇರಿಗೆ ಹಠ, ಪ್ರೀತಿಸಿದಾಕೆಗೆ ಮದುವೆ ಆಗು ಪ್ರಾಮಿಸ್ ಮಗನಿಂದ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೀರ್ತಿ- ವೈಷ್ಣವ್


    ತಂಗಿಗೆ ಗಂಡು ಹುಡುಕುತ್ತಿರುವ ಅಕ್ಕ
    ಭಾಗ್ಯ ಮತ್ತು ಲಕ್ಷ್ಮಿ ಇಬ್ಬರು ಅಕ್ಕ ತಂಗಿಯರು. ಇಬ್ಬರಿಗೂ ಒಬ್ಬರನ್ನೊಬ್ಬರು ಕಂಡ್ರೆ ತುಂಬಾ ಪ್ರೀತಿ. ಹೇಗಾದ್ರೂ ಮಾಡಿ, ತನ್ನ ತಂಗಿಗೆ ಒಳ್ಳೆ ಹುಡುಗನನ್ನು ಮದುವೆ ಮಾಡಬೇಕು ಎಂದು ಕೊಂಡಿದ್ದಾಳೆ. ಅದಕ್ಕಾಗಿ ಗಂಡು ಹುಡುಕುತ್ತಿದ್ದಾಳೆ.


    ಇದನ್ನೂ ಓದಿ: Hitler Kalyana: ಎಜೆಯ ಹೊಸ ಅವತಾರ, ಅಭಿಯಾಗಿ ಹೇಗೆ ಕಾಣ್ತಿದ್ದಾರೆ ಸ್ಟ್ರಿಕ್ಟ್ ಮ್ಯಾನ್?


    ತನ್ನ ತಂಗಿ ಲಕ್ಷ್ಮಿಗೆ ಶ್ರೀ ರಾಮನಂತ ಗಂಡನೇ ಬೇಕಂತೆ. ಅದಕ್ಕೆ ಬ್ರೋಕರ್ ಗೆ ಒಳ್ಳೆಯ ಹುಡುಗನನ್ನು ಹುಡುಕಿ ಕೊಡಿ ಎಂದು ಕೇಳುತ್ತಿದ್ದಾಳೆ.


    Colors Kannada serial, Kannada serial, Bhagya Lakshmi news Serial, serial cast, See today evening 7 PM, ಭಾಗ್ಯಲಕ್ಷ್ಮಿ ಧಾರಾವಾಹಿ, ಮಗ ತನ್ನ ಮಾತೇ ಕೇಳಬೇಕು ಎಂದು ಅಮ್ಮ ಕಾಬೇರಿಗೆ ಹಠ, ಪ್ರೀತಿಸಿದಾಕೆಗೆ ಮದುವೆ ಆಗು ಪ್ರಾಮಿಸ್ ಮಗನಿಂದ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭಾಗ್ಯ ಮತ್ತು ಲಕ್ಷ್ಮಿ


    ಭಾಗ್ಯ ತನ್ನ ತಂಗಿ ಲಕ್ಷ್ಮಿಗೆ ಒಳ್ಳೆ ಹುಡುಗನನ್ನು ಹುಡುಕುತ್ತಾಳಾ? ವೈಷ್ಣವ್ ಗೆ ತನ್ನ ಪ್ರೀತಿ ಸಿಗುತ್ತಾ? ವೈಷ್ಣವ್-ಲಕ್ಷ್ಮಿ ಮದುವೆ ಆಗ್ತಾರಾ? ಎಲ್ಲವನ್ನೂ ನೋಡಲು ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: