• Home
  • »
  • News
  • »
  • entertainment
  • »
  • Bhagya Lakshmi: ಬಯಸಿದ್ರೆ ವೈಷ್ಣವ್​​ಗೆ ಚಂದ್ರನನ್ನೇ ಕೊಡ್ತಾಳೆ ಅಮ್ಮ, ಆದ್ರೆ ಕೀರ್ತಿ ಮದುವೆ ಆಗಲು ಒಪ್ತಾಳಾ?

Bhagya Lakshmi: ಬಯಸಿದ್ರೆ ವೈಷ್ಣವ್​​ಗೆ ಚಂದ್ರನನ್ನೇ ಕೊಡ್ತಾಳೆ ಅಮ್ಮ, ಆದ್ರೆ ಕೀರ್ತಿ ಮದುವೆ ಆಗಲು ಒಪ್ತಾಳಾ?

ವೈಷ್ಣವ್ ಅಮ್ಮ ಕಾವೇರಿ

ವೈಷ್ಣವ್ ಅಮ್ಮ ಕಾವೇರಿ

ವೈಷ್ಣವ್ ಅಮ್ಮನ ಬಳಿ ಕೈ ತುತ್ತು ತೆಗೆದುಕೊಂಡು ಊಟ ಮಾಡುತ್ತಾ, ಅಮ್ಮ ನಾನ್ ಏನ್ ಕೇಳಿದ್ರೂ ಕೊಡ್ತೀಯಾ? ಎನ್ನುತ್ತಾನೆ ಅದಕ್ಕೆ ಆಕೆ ಹೌದು ಎನ್ನುತ್ತಾಳೆ. ಚಂದ್ರ ಬೇಕು ಅಂದ್ರು ಕೊಡ್ತೀಯಾ ಅಲ್ವಾ ಅಮ್ಮ ಎಂದು ಕೇಳ್ತಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಭಾಗ್ಯಲಕ್ಷ್ಮಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಎನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟ ಆಗಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಇದ್ದಾರೆ. ಇದರಲ್ಲಿ ಅವನು ಸಿಂಗರ್ ವೈಷ್ಣವ್ ಆಗಿ ಪಾತ್ರ ನಿರ್ವಹಿಸುತ್ತಿದ್ದಾರೆ.


    ಅಮ್ಮನ ಮುದ್ದಿನ ಮಗ ವೈಷ್ಣವ್
    ಈ ಧಾರಾವಾಹಿಯಲ್ಲಿ ನಟನಾಗಿ ಬಿಗ್ ಬಾಸ್ ನಲ್ಲಿ ಇದ್ದ ಶಮಂತ್ ಬ್ರೋ ಗೌಡ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಆಗಿ ಸಖಿಯೇ ಸಖಿಯೇ ಎನ್ನುವ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ದಾರೆ. ಇವರು ಹೆಸರಾಂತ ಸಿಂಗರ್. ನಟನಿಗೆ ಇಬ್ಬರು ನಟಿಯರಿದ್ದಾರೆ. ಅದರಲ್ಲಿ ಒಬ್ಬ ನಟಿಯಾಗಿ ಕೀರ್ತಿ ಎನ್ನುವವರು ಕಾಣಿಸಿಕೊಂಡಿದ್ದಾರೆ. ಇವರು ಸಹ ಈ ಧಾರಾವಾಹಿಯಲ್ಲಿ ಹೊಸ ಪರಿಚಯ. ಕೀರ್ತಿಯನ್ನು ವೈಷ್ಣವ್ ತುಂಬಾ ಪ್ರೀತಿ ಮಾಡ್ತಾ ಇದ್ದಾನೆ.


    ವೈಷ್ಣವ್ ಅಮ್ಮ ಕಾವೇರಿ ಹೇಳಿದಂತೆ ಎಲ್ಲಾ ಆಗಬೇಕಂತೆ
    ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅಲ್ಲ ಇವನು.


    ಇದನ್ನೂ ಓದಿ: Lakshana: ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್​ಗೆ ಬೆಂಕಿ! ಮುಂದಿದೆ ಟ್ವಿಸ್ಟ್


    ಕೀರ್ತಿಗೆ ಮಾತು ಕೊಟ್ಟಿದ್ದಾನೆ ವೈಷ್ಣವ್
    ವೈಷ್ಣವ್ ಮತ್ತು ಕೀರ್ತಿ 2 ವರ್ಷದಿಂದ ಪ್ರೀತಿ ಮಾಡ್ತಾ ಇದ್ದಾರೆ. ವೈಷ್ಣವ್ ಗೆ ಕೀರ್ತಿ ಮದುವೆ ಆಗೋಣ ಎಂದು ಕೇಳುತ್ತಿದ್ದಾಳೆ. ಅದಕ್ಕೆ ವೈಷ್ಣವ್ ಕೂಡ ಓಕೆ ಎಂದಿದ್ದಾನೆ. ತನ್ನ ಆಸೆಗೆ ತನ್ನ ಮನೆಯಲ್ಲಿ ಯಾರೂ ಅಡ್ಡಿ ಬರಲ್ಲ. ನಾನು ಕೇಳಿದ್ರೆ ನನ್ನ ಅಮ್ಮ ಚಂದ್ರನನ್ನೇ ತಂದು ಕೊಡ್ತಾಳೆ ಎನ್ನುತ್ತಿದ್ದಾನೆ.


    Colors Kannada serial, Kannada serial, Bhagya Lakshmi news Serial, serial cast, see today evening 7 PM, Hero mother strict, ಭಾಗ್ಯಲಕ್ಷ್ಮಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಕೀರ್ತಿ


    ಮದುವೆಗೆ ಕಾವೇರಿ ಒಪ್ತಾಳಾ?
    ವೈಷ್ಣವ್ ಅಮ್ಮನ ಬಳಿ ಕೈ ತುತ್ತು ತೆಗೆದುಕೊಂಡು ಊಟ ಮಾಡುತ್ತಾ, ಅಮ್ಮ ನಾನ್ ಏನ್ ಕೇಳಿದ್ರೂ ಕೊಡ್ತೀಯಾ? ಎನ್ನುತ್ತಾನೆ ಅದಕ್ಕೆ ಆಕೆ ಹೌದು ಎನ್ನುತ್ತಾಳೆ. ಚಂದ್ರ ಬೇಕು ಅಂದ್ರು ಕೊಡ್ತೀಯಾ ಅಲ್ವಾ ಅಮ್ಮ ಎಂದು ಕೇಳ್ತಾನೆ. ಅಷ್ಟರಲ್ಲೇ ಕೀರ್ತಿ ಬರುತ್ತಾಳೆ. ನಿಮ್ಮ ಅಮ್ಮ ನಿನಗೆ ಗೊಂಬೆ ಕೊಡೊಸೋದು ಬಾಕಿ ಇದೆ ಎನ್ನುತ್ತಾಳೆ. ಇಬ್ಬರ ಮದುವೆಗೆ ಕಾವೇರಿ ಒಪ್ತಾಳಾ ನೋಡಬೇಕು.


    ಇದನ್ನೂ ಓದಿ: Ramachari: ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ ಮಗಳಿಗೇ ಅಪಾಯ ತಂದ ಮಾನ್ಯತಾ!


    ಕೈ ತುತ್ತು ಕೊಡೋ ಹುಡುಗ ಬೇಕಂತೆ ತಂಗಿಗೆ
    ಭಾಗ್ಯ ತನ್ನ ತಂಗಿ ಲಕ್ಷ್ಮಿಗೆ ಹುಡುಗನನ್ನು ಹುಡುಕುತ್ತಿದ್ದಾಳೆ. ತನ್ನ ತಂಗಿಗೆ ಒಳ್ಳೆ ಹುಡುಗನನ್ನು ಮದುವೆ ಮಾಡಬೇಕು ಎಂದು ಕೊಂಡಿದ್ದಾಳೆ. ಲಡ್ಡು ಅಂದ್ರೆ ಲಕ್ಷ್ಮಿಗೆ ಕೈ ತುತ್ತು ಅಂದ್ರೆ ಇಷ್ಟ ಅಂತೆ. ಅದಕ್ಕೆ ಕೈ ತುತ್ತು ಇಷ್ಟ ಪಡೋ, ಕೈ ತುತ್ತು ಕೊಡೋ ಹುಡುಗನನ್ನು ಹುಡುಕುತ್ತಾಳಂತೆ.


    Colors Kannada serial, Kannada serial, Bhagya Lakshmi news Serial, serial cast, see today evening 7 PM, Hero mother strict, ಭಾಗ್ಯಲಕ್ಷ್ಮಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಲಕ್ಷ್ಮಿ


    ಹೊಸ ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: