ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಅಂತರಪಟ (Antarapata) ಸೀರಿಯಲ್ ಪ್ರಸಾರವಾಗುತ್ತಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣಲು ಬಯಸಿದ ಮಗಳೇ, ಸಾಕು ಅಪ್ಪನ (Father) ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ. ಆರಾಧನಾ ಮನೆ ಕಷ್ಟ ನಿಭಾಯಿಸಲು ಕೆಲಸ ಹುಡುಕುತ್ತಿರುತ್ತಾಳೆ. ಕೊನೆಗೂ ಆರಾಧನಾಗೆ ಒಂದು ಕೆಲಸ (Job) ಸಿಕ್ಕಿದೆ. ಆ ಕಂಪನಿ ಬಾಸ್ ಸಮೀರಾ ಅಂತ. ತುಂಬಾ ಸ್ಟ್ರಿಕ್ಟ್ ಲೇಡಿ ಬಾಸ್. ಆ ಪಾತ್ರವನ್ನು ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ಆರಾಧನಾ ಮೋಸ ಮಾಡುತ್ತಿರುವ ಸಮೀರಾಗೆ ಸವಾಲು ಹಾಕಿದ್ದಾಳೆ. ನಾನು ಕೆಲಸ ಬಿಟ್ಟು ಹೋಗ್ತೇನೆ. ಮೋಸ ಮಾಡದೇ ಬ್ಯುಸಿನೆಸ್ ಹೇಗೆ ಮಾಡುವುದು ಅಂತ ತೋರಿಸುತ್ತೇನೆ. ದೊಡ್ಡ ಕಂಪನಿ ಕಟ್ತೇನೆ. ಆಗ ಮೀಟ್ ಆಗೋಣ ಎಂದು ಸಮೀರಾಗೆ ಸವಾಲ್ (Challenge) ಹಾಕಿ ಹೋಗಿದ್ದಾಳೆ ಆರಾಧನಾ.
ಆರಾಧನಾಳನ್ನು ಪ್ರೀತಿ ಮಾಡ್ತಿರುವ ರವಿ
ನಿನ್ನ ಜೊತೆಯೇ ಜೀವನ ಕಳೆಯಬೇಕು ಎಂದು ಆಸೆ. ಆ ಆಸೆ ಇನ್ನೂ ಜೀವಂತವಾಗಿದೆ. ಬ್ಯುಸಿನೆಸ್ ನಡೆಸೋದರ ಬಗ್ಗೆ ನಿನ್ನ ಕಂಡಿಷನ್ ನನಗೆ ಗೊತ್ತು. ಅದಕ್ಕೆ ನಿನ್ನ ಮೇಲಿರುವ ಪ್ರೀತಿಯನ್ನು ಮರೆತಿಲ್ಲ. ನನಗೆ ಚೆನ್ನಾಗಿ ಗೊತ್ತಿದೆ. ನೀನು ಹೇಳಿರುವ ಕಂಡಿಷನ್ ಗೂ, ನಾನು ಮಾತನಾಡುತ್ತಿರುವುದಕ್ಕೂ ಸಂಬಂಧ ಇಲ್ಲ ಅಂತ. ಇದು ವಿರುದ್ಧವಾಗಿದೆ ಅಂತ. ಆದ್ರೆ ಯೋಚನೆ ಮಾಡಬೇಡ. ನನ್ನ ಪ್ರೀತಿ ಏನಿದ್ರೂ ಪ್ರೀತಿ ಅಷ್ಟೇ ಎಂದು ರವಿ ಹೇಳಿದ್ದಾನೆ.
ಆರಾಧನಾ ಕೈಗೆ ಆಸ್ತಿ ಪತ್ರ
ನೀನು ನನ್ನ ಪ್ರೀತಿಸಲೇಬೇಕು ಅಂತ ಡಿಮ್ಯಾಂಡ್ ಖಂಡಿತಾ ಮಾಡಲ್ಲ. ನಿನ್ನ ಪಾಡಿಗೆ ನೀನು ಕೆಲಸ ಮಾಡು. ನನ್ನ ಪಾಡಿಗೆ ನಾನು ಪ್ರೀತಿ ಮಾಡ್ತೇನೆ. ನೀನು ಸುಮ್ಮನೇ ನನ್ನ ಜೊತೆ ಕೆಲಸ ಮಾಡು. ನನ್ನ ಪ್ರೀತಿ ಮೋಸ ಅಲ್ಲ ತಿಳಿಯಿತಾ? ಆ ವಿಷ್ಯ ಬಿಡು, ಈ ದಾಖಲೆ ನೋಡು ಎಂದು ತನ್ನ ಆಸ್ತಿ ಪತ್ರವನ್ನು ಕೊಟ್ಟಿದ್ದಾನೆ ರವಿ. ಅದನ್ನು ನೋಡಿ ಆರಾಧನಾ ಶಾಕ್ ಆಗಿದ್ದಾಳೆ.
ಆಸ್ತಿ ಮಾರೋದು ತಮಾಷೆ ಅಲ್ಲ
ನನಗೆ ಆಸ್ತಿ ಅಂತ ಇರೋದು ಇದೊಂದೇ ಆರಾಧನಾ. ಇದರಿಂದ ನನಗೆ ಏನೂ ಉಪಯೋಗ ಇಲ್ಲ. ಇದರಿಂದ ನಿನಗೆ ಏನಾದ್ರೂ ಉಪಯೋಗವಾದ್ರೆ ಅದಕ್ಕಿಂತ ಇನ್ನೇನು ಬೇಕು ಹೇಳಿ, ಇದನ್ನು ಅಡ ಇಟ್ಟು ಲೋನ್ ತೆಗೆದುಕೊಳ್ಳೋಣ. ಆ ದುಡ್ಡಿನಿಂದ ಬ್ಯುಸಿನೆಸ್ ಮಾಡೋಣ. ಎಲ್ಲಾ ಸರಿ ಹೋಗುತ್ತೆ. ಯೋಚ್ನೆ ಮಾಡು ಎಂದು ರವಿ ಹೇಳ್ತಾರೆ. ಇರೋ ಆಸ್ತಿಯನ್ನು ಮಾಡಿ ಯಾರಾದ್ರೂ ಬ್ಯುಸಿನೆಸ್ ಮಾಡ್ತಾರಾ ಎಂದು ಆರಾಧನಾ ಕೇಳಿದ್ದಾಳೆ.
ನಿನಗಾಗಿ ಎಲ್ಲಾ ಮಾಡ್ತೇನೆ
ನನಗೆ ಯಾರೂ ಇಲ್ಲ. ಅಪ್ಪ ಇಲ್ಲ, ಅಮ್ಮ ಇಲ್ಲ. ಸದ್ಯಕ್ಕೆ ನನ್ನವರು ಅಂತ ಇರೋದು ನೀನು ಒಬ್ಬಳೇ. ನೀನು ಒಂದೊಂದು ರೂಪಾಯಿಗೂ ಒದ್ದಾಡುತ್ತುರುವಾಗ ಈ ಆಸ್ತಿ ಇಟ್ಟುಕೊಂಡು ನಾನೇನು ಮಾಡಲಿ. ಭಯ ಪಡಬೇಡ.
ನಾವು ಸಕ್ಸಸ್ ಫುಲ್ ಬ್ಯುಸಿನೆಸ್ ಮಾಡ್ತೀವಿ. ನೂನು ಸಕ್ಸಸ್ ಫುಲ್ ಬ್ಯುಸಿನೆಸ್ ವುಮೆನ್ ಆಗ್ತೀಯಾ. ಆಮೇಲೆ ಈ ಆಸ್ತಿಯನ್ನು ವಾಪಸ್ ಬಿಡಿಸಿಕೊಂಡ್ರೆ ಆಯ್ತು. ಇದಕ್ಕಿಂತ ನೂರುಪಟ್ಟು ಆಸ್ತಿ ಮಾಡ್ತೀವಿ. ಓಕೆನಾ ಎಂದು ರವಿ ಕೇಳಿದ್ದಾನೆ.
ಇದನ್ನೂ ಓದಿ: Ramachari: ಗಂಡನ ಹುಟ್ಟುಹಬ್ಬಕ್ಕೆ ಕದ್ದು ಮುಚ್ಚಿ ಬಂದ ಚಾರು; ವೈಶಾಖ ಬಳಿ ಸಿಕ್ಕಿ ಹಾಕಿಕೊಳ್ತಾಳಾ?
ಸಮೀರಾಗೆ ಸವಾಲು ಹಾಕಿರುವ ಆರಾಧನಾ ಗೆಲ್ತಾಳಾ? ಅದಕ್ಕೆ ರವಿ ಸಾಥ್ ನೀಡ್ತಾನಾ? ಮುಂದೆನಾಗುತ್ತೆ ಅಂತ ನೋಡೋಕೆ ಅಂತರಪಟ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ