ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಅಂತರಪಟ (Antarapata ) ಸೀರಿಯಲ್ ಪ್ರಸಾರವಾಗುತ್ತಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣಲು ಬಯಸಿದ ಮಗಳೇ, ಸಾಕು ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ. ಆರಾಧನಾ ಮನೆ ಕಷ್ಟ ನಿಭಾಯಿಸಲು ಕೆಲಸ ಹುಡುಕುತ್ತಿರುತ್ತಾಳೆ. ಕೊನೆಗೂ ಆರಾಧನಾಗೆ ಒಂದು ಕೆಲಸ ಸಿಕ್ಕಿದೆ. ಆ ಕಂಪನಿ ಬಾಸ್ ಸಮೀರಾ ಅಂತ. ತುಂಬಾ ಸ್ಟ್ರಿಕ್ಟ್ ಲೇಡಿ ಬಾಸ್ (Boss). ಹೇಳಿದ ಕೆಲಸ ತಕ್ಷಣ ಆಗಬೇಕು. ಆರಾಧನಾ ಬಾಸ್ ಹೇಳಿದ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದಾಳೆ. ಕಂಪನಿಯಿಂದ ವೆಡ್ಡಿಂಗ್ (Wedding) ಪ್ಲ್ಯಾನ್ ಮಾಡಲು ಹೋಗಿದ್ದಾಳೆ. ಆದ್ರೆ ಅಲ್ಲಿ ಆರಾಧನಾ ಸ್ವಾಭಿಮಾನಕ್ಕೆ ಅಡ್ಡಿ ಬಂದಿದೆ.
ಸಾಕು ಅಪ್ಪ ಇಷ್ಟ ಇಲ್ಲ
ಈ ಧಾರಾವಾಹಿ ನಟಿ ಆರಾಧನಾ ಅವರ ಅಮ್ಮನ ಗಂಡ ಮಹೇಶನನ್ನು ಅಪ್ಪ ಎಂದು ಒಪ್ಪಿಕೊಂಡಿಲ್ಲ. ಹೆಸರಿಗೆ ಮಾತ್ರ ಅಪ್ಪ, ನೀವು ನಮಗಾಗಿ ಏನು ಮಾಡಿಲ್ಲ. ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದು ಆರಾಧನಾ ಹೇಳ್ತಾ ಇದ್ದಾಳೆ. ಆದ್ರೆ ಮಹೇಶ ಮಾತ್ರ, ನೀನು ನನ್ನನ್ನು ಅಪ್ಪ ಎಂದು ಒಪ್ಪಿಕೊಳ್ಳಲೇ ಬೇಕು. ನನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡು ಎಂದು ಒತ್ತಡ ಹಾಕುತ್ತಿದ್ದಾನೆ. ಆದ್ರೆ ಆರಾಧನ ಒಪ್ಪುತ್ತಿಲ್ಲ.
ತಾನೇ ಎಳ್ಳು-ನೀರು ಬಿಟ್ಟುಕೊಂಡ ಮಹೇಶ
ಮಹೇಶ ನಾನು ಈ ಮನೆಯಲ್ಲಿ ಇದ್ದು ಸತ್ತ ರೀತಿ. ನನಗೆ ನಾನೇ ಎಳ್ಳು, ನೀರು ಬಿಟ್ಕೋತೀನಿ ಎಂದು ಹೊರಗೆ ಬಂದು ಕೂತಿದ್ದಾನೆ. ಸುತ್ತಮುತ್ತಲಿನ ಜನ ಬುದ್ಧಿ ಹೇಳಿದ್ರೂ ಕೇಳ್ತಾ ಇಲ್ಲ. ಮಹೇಶ ಎಷ್ಟೇ ಡ್ರಾಮಾ ಮಾಡಿದ್ರೂ ಅವನಿಗೆ ಆರಾಧನ ಕರಗಲ್ಲ. ನೀವು ನಮ್ಮ ಅಮ್ಮನ ಗಂಡ ಅಷ್ಟೆ. ನನಗೆ ಅಪ್ಪ ಅಲ್ಲ ಎಂತಿದ್ದಾಳೆ. ಮಹೇಶನ ಪಾತ್ರವನ್ನು ಮಂಜು ಅವರು ಚೆನ್ನಾಗಿ ನಟಿಸಿದ್ದಾರೆ. ನಟನೆ ಅದ್ಭುತವಾಗಿದೆ. ಸೂಪರ್ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.
ಕೆಲಸದ ಜಾಗದಲ್ಲಿ ಅವಮಾನ
ಆರಾಧನಾ ವೆಡ್ಡಿಂಗ್ ಪ್ಲ್ಯಾನ್ ಮಾಡಿ, ಮದುವೆ ತಯಾರಿ ಮಾಡುತ್ತಿರುತ್ತಾಳೆ. ಆಗ ಮಿಸ್ ಆಗಿ ಹೀರೋ ಸುಶಾಂತ್ ಸಿಂಗ್ ಅಕ್ಕನಿಗೆ ಡ್ಯಾಶ್ ಹೊಡೆದಿದ್ದಾಳೆ. ಆಗ ಜ್ಯೂಸ್ ಚೆಲ್ಲಿ ಸೀರೆ ಹಾಳಾಗಿದೆ. ಆರಾಧನಾ ಕ್ಷಮೆ ಕೇಳಿದ್ರೂ ಬಿಡದೇ ಬಾಯಿಗೆ ಬಂದಂತೆ ಬೈದಿದ್ದಾಳೆ. ನನ್ನ ಸೀರೆಯನ್ನು ಹಾಳು ಮಾಡಿ ಬಿಟ್ಟೆ ತಾನೇ. ಎಷ್ಟು ಕಾಸ್ಟ್ಲಿ ಸೀರೆ ಗೊತ್ತಾ? ನಿನ್ನ ಒಂದು ವರ್ಷದ ಸಂಬಳ ಸಾಲಲ್ಲ ಎಂದು ಹೇಳಿದ್ದಾಳೆ.
ಯೋಗ್ಯತೆ ಇಲ್ಲದ ಜನ
ಕೂಲಿ ಕೆಲಸಕ್ಕೆ ಬಂದಿದ್ದೀಯಾ. ನೆನಪಿಟ್ಕೋ. ಒಂದು ಸೆಕೆಂಡ್ ನಲ್ಲಿ ನಿನ್ನ ಯೋಗ್ಯತೆ ಎಲ್ಲರಿಗೂ ಗೊತ್ತಾಗೋ ರೀತಿ ಹೇಳ್ತೇನೆ. ನಾನು ಮನಸ್ಸು ಮಾಡಿದ್ರೆ, ಇಲ್ಲಿ ಇರೋದನ್ನು ನಿನ್ನ ಕೈನಲ್ಲೇ ಕ್ಲೀನ್ ಮಾಡಿಸುತ್ತೇನೆ. ಶ್ರೀಮಂತರ ಮನೆಯ ಮದುವೆ ಕೆಲಸಕ್ಕೆ ಯಾಕ್ ಬರ್ತೀರಾ ಅಂತ ನನಗೆ ಗೊತ್ತು. ಒಳ್ಳೆ ಊಟ ಸಿಗುತ್ತೆ. ಅದು ಬಿಟ್ಟಿಯಾಗಿ. ಜೊತೆಗೆ ಸಂಬಳನೂ ಸಿಗುತ್ತೆ. ಉಂಡು ಹೋದ, ಕೊಂಡು ಹೋದ ಎನ್ನುವ ಜನ ನೀವು ಎಂದು ಎಲ್ಲರ ಮುಂದೆ ಅವಮಾನ ಮಾಡಿದ್ದಾಳೆ.
ಸ್ವಾಭಿಮಾನಕ್ಕೆ ಪೆಟ್ಟು
ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲ ಅಂದ್ರೆ, ಶ್ರೀಮಂತರ ಮನೆಗೆ ಮದುವೆಗೆ ಏಕೆ ಬರ್ತಿರಾ? ಎಲ್ಲದ್ರೂ ಹೋಗಿ ಬೀದಿಯಲ್ಲಿ ಆಯ್ದುಕೊಂಡು ತಿನ್ನಬೇಕು. ಇನ್ನೊಂದು ಸಕ ನಿನ್ನ ಮುಖ ತೋರಿಸಿದ್ರೆ, ಸರಿ ಇರಲ್ಲ ಎಂದು ಹೇಳಿದ್ದಾಳೆ. ಅದನ್ನು ಕೇಳಿಸಿಕೊಂಡು ಆರಾಧನ ಅಳುತ್ತಿದ್ದಾಳೆ. ಬೇಸರ ಮಾಡಿಕೊಂಡಿದ್ದಾಳೆ. ಆಕೆ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ.
ಇದನ್ನೂ ಓದಿ: Ramachari: ಚಾರು ಮಾತಿಗೆ ರಾಮಾಚಾರಿ ಮನಸ್ಸು ಕರುಗುತ್ತಾ, ಇಬ್ಬರ ನಡುವೆ ಪ್ರೀತಿ ಹುಟ್ಟುತ್ತಾ?
ಅವಮಾನವಾದ ಜಾಗದಲ್ಲಿ ಎದ್ದು ನಿಲ್ತಾಳಾ ಆರಾಧನಾ. ತನ್ನ ಬಡನನ ಮೆಟ್ಟಿ ನಿಂತು ಕಂಪನಿ ಕಟ್ತಾಳಾ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ