ಇತ್ತೀಚೆಗೆ ಕ್ಯಾನ್ಸರ್ ಪೇಷಂಟ್ (Cancer Patient) ಗಳಿಗೆ ಕೂದಲು ದಾನಮಾಡುವ ವಿಚಾರ ತುಂಬಾ ಸದ್ದು ಮಾಡುತ್ತಿದೆ. ಸಾಮಾಜಿಕ ಕಳಕಳಿಯಿಂದ ಎಲ್ಲರೂ ತಮ್ಮ ಕೂದಲನ್ನು ದಾನ ಮಾಡುತ್ತಿದ್ದಾರೆ. ಈ ಸಾಲಿಗೆ ನಮ್ಮಮ್ಮ ಸೂಪರ್ ಸ್ಟಾರ್ (Nannama Super Star) ಖ್ಯಾತಿಯ ಪುಟ್ಟ ಹುಡುಗಿ ಇಬ್ಬನಿ (Ibbani) ತನ್ನ ಹುಟ್ಟುಹಬ್ಬದ ದಿನ ಕ್ಯಾನ್ಸರ್ ರೋಗಿಗಳಿಗೆ ತನ್ನ ನೀಳ ಕೂದಲನ್ನು ಡೊನೇಟ್ (Hair Donate) ಮಾಡಿದ್ದಾಳೆ. ಈ ಬಗ್ಗೆ ಅವಳ ತಾಯಿ ಸುಪ್ರೀತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಒಳ್ಳೆಯ ವಿಚಾರ ಪುಟ್ಟ ಇಬ್ಬನಿಯ ಮನದಲ್ಲಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಇಬ್ಬನಿ ತಾಯಿ ನಟಿ ಸುಪ್ರೀತಾ
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಇಬ್ಬನಿ ತಾಯಿ ನಟಿ ಸುಪ್ರೀತಾ ತಮ್ಮ ಮಗಳ ಈ ಕಾರ್ಯದ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.
ಅದೇ ರೀತಿ ಈ ಸಂದರ್ಭದಲ್ಲಿ ಅವರು ನಟಿ ನಿರೂಪಕಿ ಅನುಪಮಾ ಗೌಡ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹೌದು ಪುಟ್ಟ ಹುಡುಗಿ ಇಬ್ಬನಿಯ ತಲೆಯಲ್ಲಿ ಇಂತಹ ಒಂದು ವಿಚಾರವನ್ನು ತಮಗೆ ತಿಳಿಯದೆ ತುಂಬಿಸಿರುವುದು ಅನುಪಮ ಗೌಡ ಅವರು.
ಇದನ್ನೂ ಓದಿ: Kannadathi Serial: ಹರ್ಷ-ಭುವಿ ಕನ್ನಡದ ಮದುವೆಯಾಗುತ್ತಿದ್ದಾರಂತೆ? ಏನಪ್ಪಾ ಇದರ ವಿಶೇಷತೆ?
ನಟಿ ನಿರೂಪಕಿ ಅನುಪಮ ಗೌಡರಿಗೆ ಧನ್ಯವಾದ ತಿಳಿಸಿದ ಸುಪ್ರೀತಾ
ಈ ಬಗ್ಗೆ ಹೇಳಿರುವ ಸುಪ್ರೀತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನುಪಮ ಗೌಡ ಅವರ ಪ್ರೊಫೈಲ್ ನಲ್ಲಿ ಅವರು ತನ್ನ ಕೂದಲು ಡೊನೇಟ್ ಮಾಡಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಇಬ್ಬನಿ ಈ ಬಗ್ಗೆ ತಾಯಿಯ ಬಳಿ ತಿಳಿದುಕೊಂಡಿದ್ದಾಳೆ. ಯಾಕಾಗಿ ಕೂದಲು ದಾನ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡ ಇಬ್ಬನಿ ಈ ಬಾರಿ ನನ್ನ ಹುಟ್ಟಿದ ಹಬ್ಬಕ್ಕೆ ನಾನು ನನ್ನ ಕೂದಲನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿ ತಾಯಿ ಸುಪ್ರೀತಾ ಕೂಡ ಒಂದು ಕ್ಷಣಕ್ಕೆ ದಂಗಾಗಿದ್ದಾರಂತೆ. ಮಗಳ ಈ ಮಾತಿನಿಂದ ಹೆಮ್ಮೆ ಗೊಂಡ ಸುಪ್ರೀತಾ ಹಾಗೂ ಪ್ರಮೋದ್ ಶೆಟ್ಟಿ ಹುಟ್ಟು ಹಬ್ಬದ ಶುಭ ದಿನದಂದು ತಮ್ಮ ಮಗಳ ಕೂದಲನ್ನು ಕ್ಯಾನ್ಸರ್ ಪೇಶೆಂಟ್ ಗೆ ದಾನಮಾಡಿದ್ದಾರೆ
ಪುಟ್ಟ ಹುಡುಗಿ ಇಬ್ಬನಿಯ ಈ ಕಾರ್ಯಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು ಕಮೆಂಟ್ ಸೆಕ್ಷನ್ ಪೂರ್ತಿ ಆಕೆಯ ಈ ಕಾರ್ಯಕ್ಕೆ ಅಭಿನಂದನೆ ದೊರಕುತ್ತಿದೆ.
ನಟಿ ಸುಪ್ರೀತಾ ಹಾಗೂ ಪ್ರಮೋದ್ ಶೆಟ್ಟಿಯ ಪುತ್ರಿ ಇಬ್ಬನಿ
ಅಂದಹಾಗೆ ಈ ಪುಟ್ಟ ಇಬ್ಬನಿ ನಟಿ ಸುಪ್ರೀತಾ ಹಾಗೂ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ಪ್ರಮೋದ್ ಶೆಟ್ಟಿಯ ಪುತ್ರಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ತಾಯಿ-ಮಗಳ ಮಧ್ಯ ಇದ್ದ ನಿನ್ನ ಭಿನ್ನಾಭಿಪ್ರಾಯಗಳು ಈ ಶೋ ಮೂಲಕ ಸರಿ ಹೋಗಿರುವುದಾಗಿ ಸುಪ್ರೀತಾ ಈ ಹಿಂದೆ ಹೇಳಿಕೊಂಡಿದ್ದರು.
ಇದನ್ನೂ ಓದಿ: Aditi Prabhudeva: 'ಅಲೆಕ್ಸಾ' ಅವತಾರದಲ್ಲಿ ಅದಿತಿ - ಫುಲ್ ಫೈಟಿಂಗ್ ಮೂಡ್ನಲ್ಲಿ ಶ್ಯಾನೆ ಟಾಪ್ ಹುಡ್ಗಿ
ಈ ಪುಟ್ಟ ಹುಡುಗಿ ಇತರ ಮಕ್ಕಳಿಗೆ ಮಾದರಿ ಯಾಗುವುದರಲ್ಲಿ ಸಂಶಯವಿಲ್ಲ
ಈ ರೀತಿಯ ಕಾರ್ಯಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಹುಟ್ಟಿಕೊಂಡರೆ ಮುಂದೆ ಅದು ಹೆಮ್ಮರವಾಗಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಈ ಪುಟ್ಟ ಹುಡುಗಿ ಇತರ ಮಕ್ಕಳಿಗೆ ಮಾದರಿ ಯಾಗುವುದರಲ್ಲಿ ಸಂಶಯವಿಲ್ಲ. ಇವಳಿಂದ ಪ್ರೇರಣೆಗೊಂಡು ಇನ್ನೂ ಹೆಚ್ಚಿನ ಮಕ್ಕಳು ಈ ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ