• Home
 • »
 • News
 • »
 • entertainment
 • »
 • Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿಯೇ ಬಾಸ್! ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?

Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿಯೇ ಬಾಸ್! ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?

ಸ್ಪರ್ಧಿಗಳ ಕಾಲೆಳೆದ ವಂಶಿ

ಸ್ಪರ್ಧಿಗಳ ಕಾಲೆಳೆದ ವಂಶಿ

ವಂಶಿ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ನ ಎಲ್ಲಾ ಅಭ್ಯರ್ಥಿಗಳು ಹೇಗೆ ಮಾಡ್ತಾರೆ ಅಂತ ತೋರಿಸಿ ಕೊಟ್ಟಿದ್ದಾಳೆ. ಅವರೆಲ್ಲರ ನಟನೆ ಅಣಕಿಸಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಕಳೆದ ಬಾರಿಯ ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star) ಕಾರ್ಯಕ್ರಮ ಮರೆಯೋದು ಉಂಟೆ. ಅದರಲ್ಲಿ ಪಟ್ ಪಟಾಕಿ ವನ್ಷಿಕಾ ಬೆಳಕಿಗೆ ಬಂದಿದ್ದು ಅದರ ಮೂಲಕ ತಾನೇ. ಮಾಸ್ಟರ್ ಆನಂದ್ (Master Anand) ಮಗಳು ಅಲ್ಲ. ವಂಶಿಕಾ ಅಪ್ಪ ಆನಂದ್ ಅನ್ನೋ ಹಾಗೇ ಬೆಳೆದ ಹುಡುಗಿ. ಈಗ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಪ್ರತಿ ಶನಿವಾರ, ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಕಳೆದ ಸೀಸನ್‍ನಲ್ಲಿ ಅಭ್ಯರ್ಥಿಯಾಗಿದ್ದ ವಂಶಿ ಈ ಬಾರಿ ನಿರೂಪಕಿ ಆಗಿದ್ದಾಳೆ. ನಿರಂಜನ್ ದೇಶಪಾಂಡೆಗೆ ಜೊತೆ ನಿರೂಪಣೆಗೆ (Anchoring) ಇಳಿದಿದ್ದಾಳೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಕಾಲೆಳೆದಿದ್ದಾಳೆ. ಆಕೆಯ ಮುದ್ದು ಮಾತುಗಳನ್ನು ನೋಡೋದೇ ಚೆಂದ.


  ಬಿಜಿಲಿ ಪಟಾಕಿ ಈ ವಂಶಿ


  ವಂಶಿ ಈ ಹೆಸರು ಕಳೆದ ಒಂದು ವರ್ಷದಿಂದ ಕನ್ನಡಿಗರ ಮನದಲ್ಲಿ ಉಳಿದು, ನೆಲೆಸಿರುವ ಹೆಸರು. ಈಕೆ ಮಾಸ್ಟರ್ ಆನಂದ್, ಯಶಸ್ವಿನಿ ಅವರ ಮಗಳು. ಈಗ 5 ವರ್ಷ. ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ.


  ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ವಿನ್ನರ್
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು. ಅಂತೆಯೇ ಅವಳೇ ವಿನ್ ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದಳು.


  ಇದನ್ನೂ ಓದಿ: Bigg Boss Kannada: ಡೋರ್ ತುಂಬಾ ಹತ್ತಿರ ಇದೆ ಹೋಗಿ, ಕಿಚ್ಚ ಸುದೀಪ್ ವಾರ್ನ್ ಮಾಡಿದ್ದು ಯಾರಿಗೆ? 


  ನಿರೂಪಕಿ ವಂಶಿಕಾ
  ಕಳೆದ ಬಾರಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿದ್ದ ವಂಶಿ, ಈ ಬಾರಿ ಸೀಸನ್ 2 ಕಾರ್ಯಕ್ರಮದ ನಿರೂಪಕಿ ಆಗಿದ್ದಾಳೆ. ನಿರಂಕನ್ ದೇಶಪಾಂಡೆ ಜೊತೆ ನಿರೂಪಣೆ ಮಾಡ್ತಾ ಇದ್ದಾಳೆ. ತನ್ನ ಮುದ್ದು ಮುದ್ದು ಮಾತಿನಿಂದ ಎಲ್ಲರನ್ನೂ ಮೋಡಿ ಮಾಡ್ತಾಳೆ.


  colors kannada program, nammamma super star season 2 anchor vanshi, vanshi imitate the contestants, new program in colors kannada, colors kannada programs, ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2, ಚಿಕ್ಕ ವಯಸ್ಸಿನಲ್ಲೇ ನಿರೂಪಣೆಗೆ ಇಳಿದ ಮಾಸ್ಟರ್ ಆನಂದ್ ಮಗಳು, ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿನೇ ಬಾಸ್, ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?, ಕಲರ್ಸ್ ಕನ್ನಡ ಕಾರ್ಯಕ್ರಮಗಳು, kannada news, karnataka news,
  ನಿರೂಪಕಿ ವಂಶಿಕಾ


  ಸ್ಪರ್ಧಿಗಳಿಗೆ ಟಾಂಗ್ ಕೊಟ್ಟಿದ್ದು ಹೇಗೆ ಗೊತ್ತಾ?
  ವಂಶಿ ಸ್ಪರ್ಧಿಗಳು ಹೇಗೆ ಮಾಡ್ತಾರೆ, ಹೇಗೆ ಆಡ್ತಾರೆ ಅಂತ ಅವರ ಸ್ಟೈಲ್‍ನಲ್ಲೇ ತೋರಿಸಿದ್ದಾರೆ. ಲಕ್ಕಿ ಎನ್ನುವ ಹುಡುಗ ಮಾತೇ ಅರ್ಥವಾಗೋದಿಲ್ವಂತೆ. ಬರೀ ಡಾರ್ಲಿಂಗ್, ಬ್ರೋ ಅನ್ನೋದಷ್ಟೇ ಅಂತೇ ಗೊತ್ತಾಗೋದು. ದಿಶಾ, ಇಶಾನಿ, ಮಂಡ್ಯ ಅವಳಿ ಹುಡುಗರ ಬಗ್ಗೆಯೂ ಮುದ್ದಾಗಿ ಮಾತನಾಡಿದಳು.


  ವಂಶಿ ಕಾಲೆಳೆದಿದ್ದು ನೋಡಿ ಶಾಕ್
  ವಂಶಿ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ನ ಎಲ್ಲಾ ಅಭ್ಯರ್ಥಿಗಳು ಹೇಗೆ ಮಾಡ್ತಾರೆ ಅಂತ ತೋರಿಸಿ ಕೊಟ್ಟಿದ್ದಾಳೆ. ಅವರೆಲ್ಲರ ನಟನೆ ಅಣಕಿಸಿದ್ದಾಳೆ. ಅದನ್ನು ನೋಡಿ ಜಡ್ಜ್ ಗಳಾದ ಸೃಜನ್ ಲೋಕೇಶ್, ತಾರ ಅನುರಾಧ, ಅನು ಪ್ರಭಾಕರ್ ಶಾಕ್ ಆಗಿದ್ದಾರೆ. ಜೊತೆಗೆ ಭಾಗವಹಿಸಿದ್ದ ಅಮ್ಮಂದಿರು, ಮಕ್ಕಳು ಕೂಡ ಅದನ್ನು ಎಂಜಾಯ್ ಮಾಡಿದ್ದಾರೆ.


  colors kannada program, nammamma super star season 2 anchor vanshi, vanshi imitate the contestants, new program in colors kannada, colors kannada programs, ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2, ಚಿಕ್ಕ ವಯಸ್ಸಿನಲ್ಲೇ ನಿರೂಪಣೆಗೆ ಇಳಿದ ಮಾಸ್ಟರ್ ಆನಂದ್ ಮಗಳು, ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿನೇ ಬಾಸ್, ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?, ಕಲರ್ಸ್ ಕನ್ನಡ ಕಾರ್ಯಕ್ರಮಗಳು, kannada news, karnataka news,
  ಅನು ಪ್ರಭಾಕರ್, ಸೃಜನ್ ಲೋಕೇಶ್, ತಾರ ಅನುರಾಧ,


  ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್, ಸ್ಟ್ರಾಂಗ್ ಅಭ್ಯರ್ಥಿ ಆದ್ರೂ ಆಟ ನಡೆಯಲಿಲ್ಲ! 


  ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ವಂಶಿಕಾದು. ಅಪ್ಪ ಆನಂದ್ ರೀತಿಯೇ ನಿರೂಪಣೆಗೆ ಇಳಿದು ಬಿಟ್ಟಿದ್ದಾಳೆ. ಈಕೆ ಮುದ್ದಾಗಿ ಮಾತನಾಡುವುದನ್ನು ನೋಡೋಕೆ ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ. ಈಕೆ ಸಹ ಅದ್ಭುತವಾಗಿ ನಟಿಸುತ್ತಾಳೆ, ನಿರೂಪಣೆ ಮಾಡುತ್ತಾಳೆ.

  Published by:Savitha Savitha
  First published: