Nammamma Super Star: ಬರ್ತಿದೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2, ನಿಮ್ಮೂರಲ್ಲೂ ನಡೆಯುತ್ತೆ ಆಡಿಷನ್​

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಆಡಿಷನ್ ನಿಮ್ಮ ಊರುಗಳಲ್ಲೇ ನಡೆಯಲಿದೆ. ಎಲ್ಲಿಲ್ಲೆ ಯಾವಾಗ ನಡೆಯುತ್ತೆ? ಡೇಟ್, ಟೈಂ & ಡೀಟೆಲ್ಸ್ ಇಲ್ಲಿದೆ.

ನಮ್ಮಮ್ಮ ಸೂಪರ್ ಸ್ಟಾರ್

ನಮ್ಮಮ್ಮ ಸೂಪರ್ ಸ್ಟಾರ್

  • Share this:
    ಕಲರ್ಸ್ ಕನ್ನಡ  (Colors Kannada) ವಾಹಿನಿ (Channel) ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ಇನ್ನೊಂದು ಆವಿಷ್ಕಾರಕ್ಕೆ ಕೈ ಹಾಕಿದ್ದು ಬಿಗ್ ಬಾಸ್ (Bigg Boss) ಅನ್ನು ಓಟಿಟಿಯಲ್ಲಿ ತಂದಿದೆ. 24 ಗಂಟೆಯೂ ವೂಟ್‍ನಲ್ಲಿ ಬಿಗ್ ಬಾಸ್ ನೋಡಬಹುದು. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವರ್ಷ ಗಿಚ್ಚಿ ಗಿಲಿಗಿಲಿ ಅನ್ನೂ ಕಾರ್ಯಕ್ರಮ ನಡೆಸುತ್ತಿದೆ. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿದೆ. ಕಳೆದ ಬಾರಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮರೆಯೋದು ಉಂಟೆ. ಅದರಲ್ಲಿ ಪಟ್ ಪಟಾಕಿ ವನ್ಶಿಕಾ ಬೆಳಕಿಗೆ ಬಂದಿದ್ದು, ಅದರ ಮೂಲಕ ತಾನೇ. ಮಾಸ್ಟರ್ ಆನಂದ್ ಮಗಳು ಅಲ್ಲ. ವನ್ಶಿಕಾ ಅಪ್ಪ ಆನಂದ್ ಅನ್ನೋ ಹಾಗೇ ಬೆಳೆದ ಹುಡುಗಿ. ಈಗ ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star) ಸೀಸನ್ 2 (Season 2) ಬರ್ತಿದೆ.

    ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2
    ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮ ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ ಬರಲಿದೆ. ತಮ್ಮ ಮುದ್ದು ಮಕ್ಕಳ ಜೊತೆ ತಾಯಂದಿರು ಸ್ಪರ್ಧಿಸೋ ಕಾರ್ಯಕ್ರಮ. ಕಳೆದ ಬಾರಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆದಿತ್ತು. ಈ ಬಾರಿಯೂ ಕಲರ್ಸ್ ಕನ್ನಡ, ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಗಾಗಿ ಆಡಿಷನ್ ನಡೆಸಲು ಸಿದ್ಧವಾಗಿದೆ. ಇದಕ್ಕೆ ಕಳೆದ ಬಾರಿಯ ವಿನ್ನರ್ ವಂಶಿ ಮತ್ತು ಅವರಮ್ಮ ಯಶಸ್ವಿನಿ ಅವರ ಕೈಯಲ್ಲಿ ಪ್ರೋಮೋ ಮಾಡಿಸಿದ್ದಾರೆ.

    ನಿಮ್ಮೂರಲ್ಲೇ ನಡೆಯುತ್ತೆ ಆಡಿಷನ್
    ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಆಡಿಷನ್ ನಿಮ್ಮ ಊರುಗಳಲ್ಲೇ ನಡೆಯಲಿದೆ. ಮೈಸೂರಿನಲ್ಲಿ, ಸೆಪ್ಟೆಂಬರ್ 3 ಶನಿವಾರ, ವಾಸವಿ ವಿದ್ಯಾನಿಕೇತನ, ಐ ಬ್ಲ್ಯಾಕ್, ಕುವೆಂಪು ನಗರ, ಕೆಇಬಿ ಕಚೇರಿ ಹಿಂಭಾಗ ಆಡಿಷನ್ ನಡೆಯಲಿದೆ. ಶಿವಮೊಗ್ಗದಲ್ಲಿ, ಸೆಪ್ಟೆಂಬರ್ 4 ಭಾನುವಾರ, ಶ್ರೀ ಆದಿ ಚುಂಚನಗಿರಿ, ಟ್ರಸ್ಟ್ (ರಿ), ಶ್ರೀ ಆದಿಚುಂಚನ ಗಿರಿ, ಸಂಯುಕ್ತ ಆಂಗ್ಲಮಾಧ್ಯಮ ಪ್ರೌಢಶಾಲೆ, ಶರಾವತಿ ನಗರದಲ್ಲಿ ನಡೆಯಲಿದೆ.

    ಇದನ್ನೂ ಓದಿ: Hitler Kalyana: ಎಲ್ಲಾ ಲೀಲಾ ಪ್ಲ್ಯಾನ್! ಮೂವರು ಸೊಸೆಯರ ಆಸೆ ಎಲ್ಲಾ ನಿರಾಸೆ!

    ಆಡಿಷನ್‍ಗೆ ಏನು ಬೇಕು?
    ಆಡಿಷನ್‍ಗೆ ಭಾಗವಹಿಸುವ ಮಕ್ಕಳ ವಯಸ್ಸು 4 ರಿಂದ 8 ವರ್ಷದ ಒಳಗೆ ಇರಬೇಕು. ಆಡಿಷನ್‍ಗೆ ಹೋಗುವಾಗ ಮಕ್ಕಳ ಪೋಟೂ, ಅಡ್ರೆಸ್ ಪ್ರೂಪ್ ತಪ್ಪದೇ ತೆಗೆದುಕೊಂಡು ಹೋಗಿ.


    ಪಟ್ ಪಟ್ ಪಟಾಕಿ ಈ ವಂಶಿ
    ವಂಶಿ ಈ ಹೆಸರು ಕಳೆದ ಒಂದು ವರ್ಷದಿಂದ ಕನ್ನಡಿಗರ ಮನದಲ್ಲಿ ಉಳಿದು, ನೆಲೆಸಿರುವ ಹೆಸರು. ಈಕೆ ಮಾಸ್ಟರ್ ಆನಂದ್, ಯಶಸ್ವಿನಿ ಅವರ ಮಗಳು. ಈಗ 5 ವರ್ಷ. ಆದ್ರೆ ಇವಳ ಮಾತು, ನಟನೆ ನೋಡಿದ್ರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥಾ ಅದ್ಭುತ ಪ್ರತಿಭೆ ಎನ್ನಿಸುತ್ತೆ.

    ನಮ್ಮಮ್ಮ ಸೂಪರ್ ಸ್ಟಾರ್ ಟೈಟಲ್ ವಿನ್ನರ್
    ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಇವಳು ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು. ಅಂತೆಯೇ ಅವಳೇ ವಿನ್ ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದಳು.

    ಇದನ್ನೂ ಓದಿ: Kamali Serial: ಕಮಲಿ ಕೊಲ್ಲಲು ಕಾರ್ ಗೆ ಬಾಂಬ್ ಫಿಕ್ಸ್ ಮಾಡಿದ ಅನಿಕಾ, ಬದಲಾದವಳಂತೆ ನಾಟಕ ಮಾಡಿ ಮತ್ತೆ ಮೋಸ!

    ನಿಮ್ಮಗೂ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಲು ಇಷ್ಟನಾ? ಅದಕ್ಕೆ ನಿಮ್ಮ ಮಗು ಬೆಂಬಲ ನೀಡುತ್ತಾ? ಹಾಗಾದ್ರೆ ತಡ ಯಾಕೆ? ಹೋಗಿ ಆಡಿಷನ್‍ನಲ್ಲಿ ಭಾಗವಹಿಸಿ.
    Published by:Savitha Savitha
    First published: