ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Serial) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ ಮದುವೆ ಆಗಿದೆ. ಲಕ್ಷ್ಮಿ ಮತ್ತು ವೈಷ್ಣವ್ ಬೀಗರ ಊಟಕ್ಕೆ ತವರು ಮನೆಗೆ ಹೋಗಬೇಕಿದೆ. ಅದಕ್ಕೆ ಮನೆಯಲ್ಲೊ ಪೂಜೆ ಇಟ್ಟುಕೊಂಡಿದ್ದಾರೆ. ಆದ್ರೆ ವೈಷ್ಣವ್ ತಂಗಿ ವಿಧಿ ತನ್ನ ಸ್ನೇಹಿತೆಯರ ಜೊತೆ ಸೇರಿ ಲಕ್ಷ್ಮಿಗೆ ಅವಮಾನ (Insult) ಮಾಡಿದ್ದಾಳೆ.
ವೈಷ್ಣವ್ ಮನೆಯಲ್ಲಿ ಪೂಜೆ
ಲಕ್ಷ್ಮಿ ಮತ್ತ ವೈಷ್ಣವ್ ಹೊಸದಾಗಿ ಮದುವೆಯಾದ ಕಾರಣ ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಎಲ್ಲಾ ತಯಾರಿ ನಡೆದಿದೆ. ಮನೆಗೆ ಗೆಸ್ಟ್ ಗಳು ಬಂದಿದ್ದಾರೆ. ಅತ್ತೆ ಕಾವೇರಿ ಲಕ್ಷ್ಮಿಯನ್ನು ಚೆನ್ನಾಗಿ ರೆಡಿ ಆಗಿ ಬಾ ಎಂದಿದ್ದಾಳೆ. ಅದಕ್ಕೆ ಲಕ್ಷ್ಮಿ ಸಹ ಸರಿ ಎಂದು ಹೋಗಿದ್ದಾಳೆ. ಅಲ್ಲದೇ ವೈಷ್ಣವ್ ಮತ್ತು ಲಕ್ಷ್ಮಿ ಬೀಗರ ಊಟಕ್ಕೆ ತವರು ಮನೆಗೆ ಹೋಗುತ್ತಿದ್ದಾರೆ.
ಅತ್ತಿಗೆ ಅವಮಾನ ಮಾಡುವ ಪ್ಲ್ಯಾನ್
ವೈಷ್ಣವ್ ತಂಗಿ ವಿಧಿಗೆ ಲಕ್ಷ್ಮಿ ತಮ್ಮ ಮನೆಯಲ್ಲಿರುವುದು ಇಷ್ಟ ಇಲ್ಲ. ಅದಕ್ಕೆ ಆಕೆಗೆ ಅವಮಾನ ಮಾಡಬೇಕೆಂದು ಕಾಯ್ತಾ ಇದ್ದಾಳೆ. ಅತಿಥಿಗಳ ಮುಂದೆ ಅವಮಾನ ಮಾಡಬೇಕೆಂದು ಮನೆಗೆ ತನ್ನ ಸ್ನೇಹಿತೆಯರನ್ನು ಕರೆಸಿಕೊಂಡಿದ್ದಾಳೆ. ಕೆಂಡಸಂಪಿಗೆಯ ತೀರ್ಥಂಕರ್ ತಂಗಿ, ತ್ರಿಪುರ ಸುಂದರಿ ಧಾರಾವಾಹಿಯ ಯುಕ್ತಿ ಬಂದಿದ್ದಾರೆ.
ಲಕ್ಷ್ಮಿ ಅವಮಾನ ಆಗುವಂತೆ ಮೇಕಪ್
ಲಕ್ಷ್ಮಿ ಮೊದಲು ರೇಷ್ಮೆ ಸೀರೆ ಉಟ್ಟುಕೊಂಡು, ಚೆಂದವಾಗಿ ರೆಡಿಯಾಗಿದ್ದಳು. ಆದ್ರೆ ವಿಧಿ ನೀವೂ ಚೆನ್ನಾಗಿ ಕಾಣ್ತಾ ಇಲ್ಲ. ನೀವು ನಿಮ್ಮ ಮನೆಯಲ್ಲಿ ಹೇಗಾದ್ರೂ ಇರಿ, ಇಲ್ಲಿ ಚೆನ್ನಾಗಿ ಕಾಣಿಸಬೇಕು ಬನ್ನಿ ಎಂದು ಮೇಕಪ್ ಮಾಡಿದ್ದಾರೆ. ಕೆಟ್ಟದಾಗಿ ಮೇಕಪ್ ಮಾಡಿದ್ದಾರೆ. ಲಕ್ಷ್ಮಿ ಪಾಪಾ ಏನೂ ತಿಳಿಯದೇ ನಿಂತಿದ್ದಾಳೆ.
ಬಂದವರ ಮುಂದೆ ಅವಮಾನ
ಮನೆಗೆ ಬಂದವರ ಮುಂದೆ ಕಾವೇರಿಗೆ ಅವಮಾನವಾಗಿದೆ. ಬಂದ ಅತಿಥಿಗಳು ನಿಮ್ಮ ಸೊಸೆಗೆ ಮೇಕಪ್ ಮಾಡಿಕೊಳ್ಳಲು ಬರಲ್ವಾ? ಇದೇ ಮೊದಲ ಬಾರಿಗೆ ಮೇಕಪ್ ಮಾಡಿಕೊಂಡಿದ್ದ ಎಂದು ಕೇಳಿದ್ದಾರೆ. ಸ್ಟಾರ್ ಸಿಂಗರ್ ಹೆಂಡ್ತಿ ಇವರಾ ಎಂದು ಕೇಳಿದ್ದಾರೆ. ಅದಕ್ಕೆ ಕಾವೇರಿ ಮುಜುಗರ ಪಟ್ಟಿಕೊಂಡಿದ್ದಾಳೆ.
ವಿಧಿ ಹೆಸರು ಹೇಳ್ತಾಳಾ ಲಕ್ಷ್ಮಿ?
ಕಾವೇರಿ ಬೈಯ್ತಾ ಇದ್ದಾಳೆ ಯಾಕ್ ಲಕ್ಷ್ಮಿ ಈ ರೀತಿ ಮೇಕಪ್ ಮಾಡಿಕೊಂಡಿದ್ದೀಯಾ ಅಂತ. ಆಗ ಲಕ್ಷ್ಮಿ ವಿಧಿ ಎಂದು ಹೇಳಲು ಹೋಗ್ತಾಳೆ. ಆಗ ವಿಧಿ ತಡೆದು, ಅತ್ತಿಗೆ ನನ್ನನ್ನು ಕೇಳಿದ್ರೆ ನಾನೇ ಮೇಕಪ್ ಮಾಡಲು ಹೆಲ್ಪ್ ಮಾಡ್ತಾ ಇದ್ದೆ ಎಂದು ಹೇಳ್ತಾಳೆ. ಆಕೆಯ ಮಾತು ಕೇಳಿ ಲಕ್ಷ್ಮಿಗೆ ಶಾಕ್ ಆಗಿದೆ. ಮುಂದೆ ಏನು ಮಾಡಬೇಕು ಎಂದು ಗೊತ್ತಾಗದೇ ಸೈಲೆಂಟ್ ಆಗಿ ನಿಂತಿದ್ದಾಳೆ.
ಇದನ್ನೂ ಓದಿ: Lakshana: ಶ್ವೇತಾಗೂ-ಡೆವಿಲ್‍ಗೂ ಸಂಬಂಧ ಇದೆ, ಸತ್ಯ ಗೊತ್ತಾಗಿ ಭೂಪತಿ ಕೆಂಡಾಮಂಡಲ!
ತಂಗಿಗಾದ ಅವಮಾನವನ್ನು ಭಾಗ್ಯ ಸರಿ ಮಾಡ್ತಾಳಾ? ಲಕ್ಷ್ಮಿ ವಿಧಿ ಹೆಸರು ಹೇಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ