ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ ಮದುವೆ ಆಗಿದೆ. ಲಕ್ಷ್ಮಿ ಮತ್ತು ವೈಷ್ಣವ್ ಬೀಗರ ಊಟಕ್ಕೆ ತವರು ಮನೆಗೆ ಹೋಗಿದ್ದಾರೆ. ಅಲ್ಲಿ ಸುನಂದಾ ಒಡವೆ ಮುಚ್ಚಿಟ್ಟಿದ್ದ ವಿಷ್ಯ ಬಯಲಾಗಿದೆ.
ಲಕ್ಷ್ಮಿ ಅಮ್ಮನ ಒಡವೆ
ಲಕ್ಷ್ಮಿ ಅಪ್ಪ-ಅಮ್ಮ ಆಕೆ ಚಿಕ್ಕವಳಿದ್ದಾಗಲೇ ತೀರಿ ಹೋಗಿದ್ದಾರೆ. ಈಗ ಇರುವ ಲಕ್ಷ್ಮಿಯನ್ನು ಭಾಗ್ಯಾಳೇ ಸಾಕಿದ್ದಾಳೆ. ಲಕ್ಷ್ಮಿ ಚಿಕ್ಕಮ್ಮ ಸುನಂದಾಗೆ ಲಕ್ಷ್ಮಿಯನ್ನುಕಂಡ್ರೆ ಆಗಲ್ಲ. ಎಲ್ಲಾ ಕೆಲಸ ಮಾಡಿಸಿಕೊಳ್ತಾಳೆ. ಅಲ್ಲದೇ ಸುನಂದಾ ಅವರು ಇರುವ ಮನೆ ಸಹ ಲಕ್ಷ್ಮಿಯದ್ದೇ. ಲಕ್ಷ್ಮಿ ಒಡವೆಗಳನ್ನು ಮಾರಿಕೊಂಡಿದ್ದೇನೆ ಎಂದು ಸುನಂದ ಸುಳ್ಳು ಹೇಳಿರ್ತಾಳೆ.
ಮದುವೆಗೂ ಒಡವೆ ಕೊಡಲಿಲ್ಲ
ಲಕ್ಷ್ಮೀ ಮತ್ತು ವೈಷ್ಣವ್ ಮದುವೆ ಇತ್ತಿಚಿಗೆ ನಡೆದಿದೆ. ಲಕ್ಷ್ಮಿ ಮದುವೆಗೆ ಒಡವೆ ಬೇಕಿರುತ್ತೆ. ಅದಕ್ಕೆ ಭಾಗ್ಯ ಫೋನ್ ಮಾಡಿ ಅಮ್ಮ, ಲಕ್ಷ್ಮಿ ಅಮ್ಮನ ಒಡವೆ ಕೊಡು, ಈ ಕಾಲದ ಡಿಸೈನ್ ಮಾಡಿಸೋಣ ಎಂದು ಹೇಳ್ತಾಳೆ. ಆಗ ಸುನಂದ ಆ ಒಡವೆ ಇಲ್ಲ. ನಿನ್ನ ಮದುವೆಗೆ ಕೊಟ್ಟಿದ್ದು ಅದನ್ನೇ ಎಂದು ಸುಳ್ಳು ಹೇಳಿರ್ತಾಳೆ. ಭಾಗ್ಯನಿಗೂ ಬೇಸರವಾಗಿರುತ್ತೆ.
ಮನೆಯಲ್ಲಿ ಒಡವೆ ಬಚ್ಚಿಟ್ಟಿದ್ದ ಸುನಂದಾ
ಸುನಂದಾ ಲಕ್ಷ್ಮಿ ಅಮ್ಮನ ಒಡವೆ ಬಚ್ಚಿಟ್ಟಿರುತ್ತಾಳೆ. ಅದನ್ನು ತನ್ನ ಎರಡನೇ ಮಗಳು ಪೂಜಾ ಮದುವೆಗೆ ಬಳಸಿಕೊಳ್ಳೋಣ ಎಂದುಕೊಂಡಿರುತ್ತಾಳೆ. ಆದ್ರೆ ಕುಸುಮಾ ಏನೋ ತೆಗೆದುಕೊಳ್ಳಲು ಹೋದಾಗ ಒಡವೆ ಸಿಕ್ಕಿವೆ. ಸುನಂದಾ ಬಚ್ಚಿಟ್ಟಿದ್ದು ಗೊತ್ತಾಗಿದೆ. ಎಲ್ಲರ ಮುಂದೆ ಕುಸುಮಾ ಸುನಂದಾಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಕುಸುಮಾ ಕ್ಲಾಸ್
ಭಾಗ್ಯ ಮದುವೆಯಲ್ಲಿ ಒಡವೆ ಮಾರಿಲ್ಲ. ನಕಲಿ ಒಡವೆ ಕೊಟ್ಟುಅಸಲಿ ಒಡವೆಯನ್ನು ಜೋಪಾನವಾಗಿ ಕಪಾಟಿನಲ್ಲಿಟ್ಟಿರುವ ಮಹಾತಾಯಿ ನಮ್ಮ ಬಿಗ್ತಿ. ಲಕ್ಷ್ಮೀ ಮದುವೆಯಲ್ಲಿ ಎಲ್ಲಿ ಕೊಡಬೇಕಾಗುತ್ತೋ ಅಂತ, ಒಡವೆಯನ್ನು ಕಪಾಟಿನಲ್ಲಿ ಬಚ್ಚಿಟ್ಟಿದ್ರು. ಅಲ್ಲರೀ ಸುನಂದಾ, ಲಕ್ಷ್ಮಿಯನ್ನು ಬಿಡಿ, ನಿಮ್ಮ ಸ್ವಂತ ಮಗಳಿಗೂ ಅದೇ ರೀತಿ ಮಾಡ್ತಿರಲ್ಲ, ಎಂತವರು ನೀವು ಎಂದು ಎಲ್ಲರ ಮುಂದೆ ಕುಸುಮಾ ಸುನಂದಾರನ್ನು ಪ್ರಶ್ನೆ ಮಾಡಿದ್ದಾರೆ.
ಭಾಗ್ಯ ಬೇಸರ
ಅಮ್ಮ ಇದ್ಯಾಕಮ್ಮ ನಿನಗೆ ಇಷ್ಟು ಕೆಟ್ಟ ಬುದ್ದಿ. ನನ್ ಹತ್ರನೂ ಸುಳ್ಳು ಹೇಳಿದೆ. ಲಡ್ಡು ಮದುವೆ ಸಮಯದಲ್ಲಿ ಎಷ್ಟು ಕೇಳಿದೆ, ಆದ್ರೂ ನೀನು ಈ ತರ ಮೋಸ ಮಾಡಬಹುದಾ? ಯಾಕ್ ಈ ರೀತಿ ಮಾಡಿದೆ? ಮಾತಾಡು ಎಂದು ಭಾಗ್ಯ ತನ್ನ ಅಮ್ಮ ಸುನಂದಾಳನ್ನು ಕೇಳ್ತಾಳೆ. ಅಮ್ಮನ ಆಶೀರ್ವಾದ ನನ್ನ ಮೇಲೆ ಯಾವತ್ತೂ ಇರುತ್ತೆ. ಅದಕ್ಕೆ ಒಡವೆ ಬೇಕಾಗಿಲ್ಲ ಎಂದು ಲಕ್ಷ್ಮಿ ಹೇಳ್ತಾಳೆ.
ಇದನ್ನೂ ಓದಿ: Ramachari: ಚಾರುವಿನ ಎಲ್ಲಾ ಪ್ರಶ್ನೆಗೂ ರಾಮಾಚಾರಿ ಬಳಿ ಉತ್ತರವಿದೆ, ಇಬ್ಬರ ನಡುವಿನ ಸಂಭಾಷಣೆ ನೋಡಿ
ಎಲ್ಲರ ಮುಂದೆ ಸುನಂದಾಗೆ ಅವಮಾನ ಆಗಿದೆ. ಲಕ್ಷ್ಮಿ ಅಮ್ಮನ ಒಡವೆ ಆಕೆಯ ಕೈ ಸೇರಿವೆ. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ