ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ (Serial) ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ ಮದುವೆ ಆಗಿದೆ. ಅಳಿಯ ಮಾವನ ಮನೆಗೆ ಬಂದಿದ್ದಾನೆ. ಅಲ್ಲಿ ಆಚೆ ಮಲಗಿದ್ದ. ಅದಕ್ಕೆ ವೈಷ್ಣವ್ ಅಮ್ಮ ಕಾವೇರಿ ಲಕ್ಷ್ಮಿಗೆ ಬೈದಿದ್ದಾಳೆ.
ಲಕ್ಷ್ಮಿ ತವರು ಮನೆಗೆ ಬಂದ ವೈಷ್ಣವ್
ಲಕ್ಷ್ಮಿ ಮದುವೆಯಾದ ಮೇಲೆ ಸಂಪ್ರದಾಯದಂತೆ ವೈಷ್ಣವ್ ಮಾವನ ಮನೆಗೆ ಬಂದಿದ್ದಾನೆ. ಶ್ರೀಮಂತಿಕೆಯಲ್ಲಿ ಬೆಳೆದ ವೈಷ್ಣವ್‍ಗೆ ಇಲ್ಲಿ ಕಷ್ಟ ಆಗಬಹುದು ಎಂದು ಕಾವೇರಿಗೆ ಚಿಂತೆಯಿತ್ತು. ಮಗನಿಗಾಗಿ ಬೀಗರಿಗೆ ದೊಡ್ಡ ಮನೆ ಗಿಫ್ಟ್ ನೀಡಿದ್ಲು. ಆದ್ರೆ ಅದಕ್ಕೆ ಲಕ್ಷ್ಮಿ ಮತ್ತು ಅವರ ದೊಡ್ಡಪ್ಪ ಒಪ್ಪಿಲ್ಲ. ಸ್ವಾಭಿಮಾನ ಎಂದು ಹೇಳಿ ಹಳೇ ಮನೆಯಲ್ಲೇ ವಾಸವಿದ್ದಾರೆ.
ಇಲ್ಲಿ ಸುನಂದಾ ಕಾಟ
ಮನೆಗೆ ಬಂದ ಅಳಿಯನಿಗೆ ಉಪಚಾರ ಮಾಡಲು ಲಕ್ಷ್ಮಿ ದೊಡ್ಡಮ್ಮ ಸುನಂದಾ ಹಿಂದೆ ಮುಂದೆ ಮಾಡುತ್ತಿದ್ದಾಳೆ. ರೂಮ್ ಸಹ ಬಿಟ್ಟು ಕೊಟ್ಟಿಲ್ಲ. ನನಗೆ ಸೊಂಟ ನೋವು. ಮಂಚದ ಮೇಲೆ ಮಲಗಬೇಕು ಎಂದಿದ್ದಾಳೆ. ಅದಕ್ಕೆ ವೈಷ್ಣವ್ ಮತ್ತು ಲಕ್ಷ್ಮಿ ಆಚೆ ಮಲಗುತ್ತಾರೆ. ಅಲ್ಲದೇ ಎಲ್ಲ ದಿನಿಸಿ ಎತ್ತಿಟ್ಟ ಸುನಂದಾ ಮನೆಯಲ್ಲಿ ಏನೂ ಇಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಲಕ್ಷ್ಮಿ ಬೇಸರ ಮಾಡಿಕೊಂಡಿದ್ದಾಳೆ.
ಲಕ್ಷ್ಮಿಗೆ ಬೈದ ಕಾವೇರಿ
ಏನು ಹೇಳೋಕೆ ಬಾಕಿ ಉಳಿಸಿಕೊಂಡಿದ್ದೀಯಾ ನೀನು? ನನಗೆ ಇದೆಲ್ಲಾ ಹೀಗೆ ಆಗುತ್ತೆ ಅಂತ ಗೊತ್ತಿತ್ತು. ಅದಕ್ಕೆ ನಾನು ಆ ಹೊಸ ಮನೆ ಕೊಟ್ಟಿದ್ದು. ಆದ್ರೆ ನೀವು ಸ್ವಾಭಿಮಾನ, ಅದು, ಇದು ಅಂತ ಹೇಳಿ ತಗೊಳ್ಳಿಲ್ಲ. ಈಗ ನೋಡಿದ್ರೆ ನನ್ನ ಮಗ ಅಂಗಳದಲ್ಲಿ ಮಲಗಿದ್ದಾನೆ. ಅಳಿಮಯ್ಯನ ಚಳಿಯಲ್ಲಿ ಹೊರಗೆ ಮಲಗಿಸುವುದು ನಿಮ್ಮ ಸ್ವಾಭಿಮಾನಾನಾ? ನಿನ್ನೆ ನೆಲದ ಮೇಲೆ ಮಲಗಿಸಿದ್ದೆ ಎಂದು ಕಾವೇರಿ ಲಕ್ಷ್ಮಿಗೆ ಬೈದಿದ್ದಾಳೆ.
ಚುಚ್ಚು ಮಾತುಗಳು
ನನಗೆ ಆ ಕೀರ್ತಿಯಿಂದ ವಿಚಾರ ಗೊತ್ತಾಯ್ತು. ನಿನಗೆ ಗೊತ್ತಾ? ಚಿಕ್ಕ ವಯಸ್ಸಿನಿಂದ ನಾನು ಅವನನ್ನು ಎಷ್ಟು ಜೋಪಾನ ಮಾಡಿದ್ದೀನಿ ಅಂತ. ನನ್ನ ಮಗ ರಾತ್ರಿಯೆಲ್ಲ ಚಳಿಯಲ್ಲಿ ಮಲಗಿದ್ದ ಅಂದ್ರೆ, ನನಗೆ ಹೇಗೆ ಆಗಿರಬೇಡ, ಇದೇ ಕಾರಣಕ್ಕೆ ನಾನು ಹೊಸ ಮನೆ ಕೊಟ್ಟಿದ್ದು. ಅಲ್ಲಿ ಅವನಿಗೆ ಸೆಟ್ ಆಗಲ್ಲ ಅಂತ ನನಗೆ ಗೊತ್ತಿತ್ತು. ನೀನು ಸಿನಿಮಾ ಡೈಲಾಗ್ ಹೊಡೆದು ಅದನ್ನು ವಾಪಸ್ ಕೊಟ್ಟೆ ಎಂದು ಕಾವೇರಿ ಲಕ್ಷ್ಮಿಗೆ ಚುಚ್ಚು ಮಾತುಗಳನ್ನಾಡಿದ್ದಾಳೆ.
ತಕ್ಷಣ ಮನೆಗೆ ಬನ್ನಿ
ಸ್ವಾಭಿಮಾನ ಇರೋರು ನನ್ನ ಮಗನಿಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು. ಇಲ್ಲ ಅಂದ್ರೆ ನನ್ನ ಮಗನನ್ನು ಕರೆದುಕೊಂಡು ಹೋದ್ರಿ? ಇದೆಲ್ಲಾ ಏನ್ ಲಕ್ಷ್ಮಿ? ನಿನ್ನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅವನು ಖುಷಿಗೆ ಏನೇನು ಹೇಳ್ತಾನೆ. ನಿನಗೆ ಬುದ್ಧಿ ಇಲ್ವಾ? ನನಗೆ ಎಲ್ಲಾ ಸಾಕು. ಶಾಸ್ತ್ರಕ್ಕೆ ಅಂತ ಒಂದು ರಾತ್ರಿ ಇದ್ನಲ್ಲ ಅಷ್ಟೇ ಸಾಕು. ಈಗ ಅವನನ್ನು ಕರೆದುಕೊಂಡು ಹೋಗು ಎಂದು ಕಾವೇರಿ ಹೇಳ್ತಾ ಇದ್ದಾಳೆ.
ಇದನ್ನೂ ಓದಿ: Haripriya-Vasishta: ಶ್ರೀರಾಮ-ಸೀತೆಯಂತೆ ಈ ಜೋಡಿ! ದೃಷ್ಟಿ ಆಗ್ತೈತೆ ಎಂದ ನೆಟ್ಟಿಗರು
ಲಕ್ಷ್ಮಿಗೆ ತವರು ಮನೆಯಲ್ಲೂ ನೆಮ್ಮದಿ ಇಲ್ಲ. ಅತ್ತೆ ಮನೆಯಲ್ಲೂ ಬೈಗುಳ. ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ