ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ ಮದುವೆ (Marriage) ಆಗಿದೆ. ವೈಷ್ಣವ್ ಲಕ್ಷ್ಮಿ ಮನೆಗೆ ಬೀಗರು ಊಟಕ್ಕೆ ಹೋಗಬೇಕಿದೆ. ಅದಕ್ಕೆ ಕಾವೇರಿ ಲಕ್ಷ್ಮಿ ದೊಡ್ಡಪ್ಪನಿಗೆ ದೊಡ್ಡ ಮನೆಯನ್ನು (Home) ಗಿಫ್ಟ್ ಮಾಡಿದ್ದಾಳೆ. ಅದಕ್ಕೆ ಲಕ್ಷ್ಮಿ ವಿರೋಧ ವ್ಯಕ್ತಪಡಿದ್ದಾಳೆ.
ಲಕ್ಷ್ಮಿ ತವರು ಮನೆಗೆ ವೈಷ್ಣವ್!
ಲಕ್ಷ್ಮಿ ಮತ್ತು ವೈಷ್ಣವ್ ಇಷ್ಟ ಇಲ್ಲ ಅಂದ್ರೂ ಮದುವೆಯಾಗಿದ್ದಾರೆ. ಲಕ್ಷ್ಮಿ ತನ್ನ ಅಕ್ಕಮ್ಮ ಭಾಗ್ಯನಿಗಾಗಿ ಮದುವೆಯಾದ್ರೆ, ವೈಷ್ಣವ್ ತನ್ನ ಅಮ್ಮ ಕೀರ್ತಿಗಾಗಿ ಮದುವೆಯಾಗಿದ್ದಾಳೆ. ಆದರೂ ಇಬ್ಬರು ಟೈ ತೆಗೆದುಕೊಂಡು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಬದುಕಬೇಕು ಎಂದು ತೀರ್ಮಾನ ಮಾಡಿದ್ದಾರೆ. ವೈಷ್ಣವ್ ಲಕ್ಷ್ಮಿ ತವರು ಮನೆಗೆ ಬೀಗರ ಊಟಕ್ಕೆ ಹೋಗಬೇಕಿದೆ.
ಲಕ್ಷ್ಮಿ ದೊಡ್ಡಪ್ಪನಿಗೆ ಮನೆ ಗಿಫ್ಟ್
ಲಕ್ಷ್ಮಿ ಅವರು ಮನೆ ಚಿಕ್ಕದು. ಅಲ್ಲಿಗೆ ವೈಷ್ಣವ್ ಹೋಗಬೇಕಿದೆ. ಒಂದು ದಿನ ಉಳಿದುಕೊಳ್ಳಬೇಕಿದೆ. ಅದಕ್ಕೆ ಕಾವೇರಿ ಲಕ್ಷ್ಮಿ ದೊಡ್ಡಪ್ಪನಿಗೆ ದೊಡ್ಡ ಮನೆ ಕೊಡಿಸಿದ್ದಾಳೆ. ಮನೆಯನ್ನು ಕೊಂಡುಕೊಂಡು ಅವರು ಹೆಸರಿಗೆ ಮಾಡಿ ದಾಖಲೆ ಪತ್ರ ಕಳಿಸಿರುತ್ತಾಳೆ. ಅದನ್ನು ನೋಡಿದ ದೊಡ್ಡಪ್ಪನಿಗೆ ಬೇಸರವಾಗಿದೆ. ಆದ್ರೆ ಸುನಂದ ಮತ್ತು ಪೂಜಾ ಮಾತ್ರ ಖುಷಿಯಾಗಿದ್ದಾರೆ.
ಕಾವೇರಿ ಮನೆಗೆ ಬಂದು ದೊಡ್ಡಪ್ಪ
ಲಕ್ಷ್ಮಿ ದೊಡ್ಡಪ್ಪ ಕಾವೇರಿ ಮನೆಗೆ ಬಂದಿದ್ದಾರೆ. ಬೀಗರೇ ನಮಗೆ ಈ ಮನೆ ಬೇಡ. ದಯವಿಟ್ಟಿ ತಪ್ಪು ತಿಳಿದುಕೊಳ್ಳಬೇಡಿ. ವಾಪಸ್ ತೆಗೆದುಕೊಳ್ಳಿ ಎಂದಿದ್ದಾರೆ. ನಾವು ನಮ್ಮ ಮಗಳು ಚೆನ್ನಾಗಿರಲಿ ಎಂದು ನಿಮಗೆ ಕೊಟ್ಟಿದ್ದೇವೆ. ಅದು ಬಿಟ್ಟು ನಿಮ್ಮಿಂದ ಏನೂ ನಿರೀಕ್ಷೆ ಇಲ್ಲ ನಮಗೆ. ಇದನ್ನು ಪಡೆಯಲು ಸ್ವಾಭಿಮಾನ ಅಡ್ಡ ಬರುತ್ತೆ ಎಂದು ಹೇಳಿದ್ದಾರೆ. ಅದಕ್ಕೆ ಕಾವೇರಿ ಕೋಪ ಮಾಡಿಕೊಂಡಿದ್ದಾಳೆ.
ನನ್ನ ಮಗ ನಿಮ್ಮ ಮನೆಗೆ ಬರಲ್ಲ ಎಂದು ವಾರ್ನಿಂಗ್
ಲಕ್ಷ್ಮಿ ಮನೆಯವರು ಯಾವಾಗ ಮನೆ ಬೇಡ ಅಂದ್ರೂ, ಆಗ ಕಾವೇರಿ, ತನ್ನ ವರಸೆ ಶುರು ಮಾಡಿದ್ದಾಳೆ. ನೀವು ಈ ಮನೆಯನ್ನು ತೆಗೆದುಕೊಳ್ಳಲೇಬೇಕು. ಇಲ್ಲ ಅಂದ್ರೆ ನನ್ನ ಮಗ ನಿಮ್ಮ ಮನೆಗೆ ಬರಲ್ಲ. ಆ ಚಿಕ್ಕ ಮನೆಗೆ ಬಂದು ಕಷ್ಟ ಪಡಬೇಕು. ನಮ್ಮ ಮಗ ನಿಮ್ಮ ಮನೆಗೆ ಬರಬೇಕು ಅಂದ್ರೆ ನೀವು ಇದನ್ನು ತೆಗೆದುಕೊಳ್ಳ ಬೇಕು ಎಂದು ಕಾವೇರಿ ವಾರ್ನಿಂಗ್ ಮಾಡಿದ್ದಾಳೆ.
ಇದು ತಪ್ಪ ಎಂದ ಲಕ್ಷ್ಮಿ
ಲಕ್ಷ್ಮಿ ಸಹ ತನ್ನ ಅತ್ತೆ ಕಾವೇರಿ ಈ ರೀತಿ ಮನೆ ಕೊಡುತ್ತಿರುವುದು ತಪ್ಪು ಎಂದು ಹೇಳಿದ್ದಾಳೆ. ಅತ್ತೆ ನಮ್ಮ ಮನೆ ನಮಗೆ ಸಾಕು. ನೀವು ಯಾವ ಗಿಫ್ಟ್ ಕೋಡೋದು ಬೇಡ. ಇದರಿಂದ ನಮಗೆ ಅವಮಾನ ಆಗುತ್ತೆ. ದಯವಿಟ್ಟು ನಮ್ಮನ್ನು ಮುಜುಗರಕ್ಕೆ ಒಳಪಡಿಸಬೇಡಿ ಎಂದು ಹೇಳ್ತಾಳೆ. ಸೊಸೆ ತನ್ನ ವಿರುದ್ಧವೇ ಮಾತನಾಡ್ತಾಳೆ ಎಂದು ಕಾವೇರಿಗೆ ಲಕ್ಷ್ಮಿ ಮೇಲೆ ಕೋಪ ಬಂದಿದೆ.
ಇದನ್ನೂ ಓದಿ: Ragini Dwivedi: ತುಪ್ಪದ ಬೆಡಗಿ ರಾಗಿಣಿ ಹೊಸ ಫೋಟೋಶೂಟ್, ಚೆಲುವೆ ನಿನಗೆ ನೀನೇ ಸಾಟಿ ಎಂದ ಫ್ಯಾನ್ಸ್!
ಕಾವೇರಿ ಬಯಕ್ಕೆ ಮನೆ ಪಡೆದುಕೊಳ್ತಾರಾ? ಲಕ್ಷ್ಮಿ ಸ್ವಾಭಿಮಾನ ಬಿಡ್ತಾಳಾ? ಕಾವೇರಿ ಹಠ ಗೆಲ್ಲುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ