ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮೀ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿತ್ತು. ಈಗ ಧಾರಾವಾಹಿ 2 ಭಾಗವಾಗಿದೆ. ಸಂಜೆ 7ಕ್ಕೆ ಭಾಗ್ಯಲಕ್ಷ್ಮೀ ಧಾರಾವಾಹಿ ಪ್ರಸಾರವಾದ್ರೆ, ಸಂಜೆ 7.30ಕ್ಕೆ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಕತೆ, ಅಕ್ಕ-ಪಕ್ಕ ಬರ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್-ಲಕ್ಷ್ಮೀ ಮದುವೆ ಆಗಿದೆ. ಸೊಸೆ (Daughter In Law ) ಬಂದ ಮೇಲೆ ಕಾವೇರಿಗೆ ತನ್ನ ಸ್ಥಾನ ಕಳೆದುಕೊಳ್ಳುತ್ತಿರುವ ಭೀತಿ ಎದುರಾಗಿದೆ. ಅಲ್ಲದೇ ಕೀರ್ತಿ ವೈಷ್ಣವ್-ಲಕ್ಷ್ಮಿಗೆ ಡಿವೋರ್ಸ್ (Divorce) ಕೊಡಿಸು ಎಂದು ಕಾವೇರಿ ಮುಂದೆ ಬಂದು ನಿಂತಿದ್ದಾಳೆ.
ಮನೆ ಜವಾಬ್ದಾರಿ ತೆಗೆದುಕೊಂಡ ಲಕ್ಷ್ಮೀ
ಲಕ್ಷ್ಮೀ ವೈಷ್ಣವ್ ಮನೆಗೆ ಬಂದಿದ್ದೇ ತಡ, ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾಳೆ. ಅದೇನು ಕಾವೇರಿಗೆ ಖುಷಿ ನೀಡಿದೆ. ಆದ್ರೆ ಲಕ್ಷ್ಮೀ ವೈಷ್ಣವ್ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದು ಇಷ್ಟ ಆಗ್ತಿಲ್ಲ. ಅದಕ್ಕೆ ಲಕ್ಷ್ಮೀ ಮೇಲೆ ರೇಗಾಡುತ್ತಿದ್ದಾಳೆ. ಆಕೆ ಅವನ ಊಟ, ತಿಂಡಿ ನೋಡಿಕೊಳ್ಳಬಾರದು ಎಂದು ಹೇಳಿ ಬಿಟ್ಟಿದ್ದಾಳೆ.
ಕಾರಿನ ಮುಂದಿನ ಸೀಟು ಲಕ್ಷ್ಮೀಗೆ
ವೈಷ್ಣವ್ ಮತ್ತು ಲಕ್ಷ್ಮಿ ಹೊಸದಾಗಿ ಮದುವೆ ಆದ ಕಾರಣ ದೇವಸ್ಥಾನಕ್ಕೆ ಹೋಗೋಣ ಎಂದು ಹೇಳ್ತಾರೆ. ಅದಕ್ಕೆ ಎಲ್ಲರೂ ರೆಡಿಯಾಗಿ ಕಾರಿನಲ್ಲಿ ಕೂರುವಾಗ, ಕಾವೇರಿ ವೈಷ್ಣವ್ ಪಕ್ಕ ಮುಂದಿನ ಸೀಟ್‍ನಲ್ಲಿ ಕೂರ್ತಾಳೆ. ಆಗ ಕಾವೇರಿ ಗಂಡ ಕೃಷ್ಣ, ಇನ್ಮೇಲೆ ಆ ಸೀಟ್ ಲಕ್ಷ್ಮೀದು ಎಂದು ಹೇಳ್ತಾನೆ. ಇದು ನೀನೇ ಮಾಡಿದ ರೂಲ್ಸ್ ಎಂದು ನೆನಪು ಮಾಡ್ತಾನೆ. ಅದಕ್ಕೆ ಕಾವೇರಿ ತಲೆ ಸುತ್ತಿ ಬೀಳ್ತಾಳೆ.
ಲಕ್ಷ್ಮೀ ನೋಡಿಕೊಳ್ತಾಳೆ ಎಂದ ವೈಷ್ಣವ್
ಅಲ್ಲದೇ ವೈಷ್ಣವ್ ಸಹ ತನ್ನ ಅಮ್ಮನಿಗೆ ಕಾಲ್ ಮಾಡಿ, ಇನ್ಮುಂದೆ ಏನೂ ಟೆನ್ಶನ್ ಮಾಡಿಕೊಳ್ಳಬೇಡ ಅಮ್ಮ, ಎಲ್ಲವನ್ನೂ ಲಕ್ಷ್ಮೀ ನೋಡಿಕೊಳ್ತಾಳೆ ಎಂದು ಹೇಳ್ತಾನೆ. ಅದಕ್ಕೆ ಕಾವೇರಿಗೆ ಕೋಪ ಬಂದಿದೆ. ಇಷ್ಟು ದಿನ ಎಲ್ಲದಕ್ಕೂ ಅಮ್ಮ ಎನ್ನುತ್ತಿದ್ದ ಮಗ, ಈಗ ಲಕ್ಷ್ಮೀ ಎನ್ನುತ್ತಿದ್ದಾನೆ. ನನ್ನ ಸ್ಥಾನ ಕಳೆದು ಹೋಗ್ತಿದೆ ಎಂದು ಕೋಪ ಮಾಡಿಕೊಂಡಿದ್ದಾಳೆ.
ಕಾವೇರಿ ಹೈಡ್ರಾಮಾ
ಕೀರ್ತಿ ಮತ್ತು ವೈಷ್ಣವ್ ತುಂಬಾ ಪ್ರೀತಿ ಮಾಡ್ತಾ ಇರ್ತಾರೆ. ಆದ್ರೆ ಕಾವೇರಿಗೆ ಕೀರ್ತಿ ಇಷ್ಟ ಇರಲ್ಲ. ತನಗೆ ಲಕ್ಷ್ಮಿಯೇ ಸೊಸೆಯಾಗಿ ಬರಬೇಕು ಎಂದು, ಜಾತಕದ ನಾಟಕವಾಡಿದ್ದಳು. ಜಾತಕ ತೆಗೆದುಕೊಂಡು ಹೋಗಿ, ಕೀರ್ತಿಗೆ ತೋರಿಸಿ, ಜಾತಕದಲ್ಲಿ ದೋಷ ಇದೆ. ನೀನು, ಅವನು ಮದುವೆ ಆದ್ರೆ ನನ್ನ ಮಗ ಸಾಯ್ತಾನೆ ಎಂದು ನಾಟಕವಾಡಿದ್ದಳು. ಅದಕ್ಕೆ ಕೀರ್ತಿ ವೈಷ್ಣವ್ ನನ್ನು ಲಕ್ಷ್ಮಿ ಜೊತೆ ಮದುವೆ ಆಗಲು ಬಿಟ್ಟಿದ್ದಳು.
ವೈಷ್ಣವ್-ಲಕ್ಷ್ಮಿಗೆ ಡಿವೋರ್ಸ್ ಕೊಡಿಸಿ ಎಂದ ಕೀರ್ತಿ
ಕಾವೇರಿಗೆ ಒಂದು ಕಡೆ ವೈಷ್ಣವ್ ಬದಲಾಗುತ್ತಿರುವ ಆತಂಕ, ಇನ್ನೊಂದೆಡೆ ಕೀರ್ತಿ ಬಂದಿದ್ದಾಳೆ. ವೈಷ್ಣವ್ ಮತ್ತು ಕೀರ್ತಿಗೆ ಡಿವೋರ್ಸ್ ಕೊಡಿಸಿ. ಕಾನೂನಿನ ಪ್ರಕಾರ ಅವರು ದೂರ ಹೋದ್ರೆ, ನಾನು ವೈಶ್ ಮದುವೆ ಆಗಬಹುದು. ಈ ಕೆಲಸ ನೀವೇ ಮಾಡಿ ಎಂದು ಡಿವೋರ್ಸ್ ಪೇಪರ್ ತಂದುಕೊಟ್ಟಿದ್ದಾಳೆ.
ಇದನ್ನೂ ಓದಿ: Sapthami Gowda: 'ರೈಸಿಂಗ್ ಸ್ಟಾರ್ ಆಫ್ ದಿ ಇಯರ್' ಪ್ರಶಸ್ತಿ ಪಡೆದ ಸಪ್ತಮಿ ಗೌಡ, ಕಾಂತಾರದ ಲೀಲಾ ಫುಲ್ ಖುಷ್!
ಕಾವೇರಿ ತನ್ನ ಸ್ಥಾನ ಕಳೆದುಕೊಳ್ತಾಳಾ? ವೈಷ್ಣವ್ ಲಕ್ಷ್ಮೀಗೆ ಡಿವೋರ್ಸ್ ಕೊಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ