ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ ಮದುವೆ ಆಗಿದೆ. ಅಳಿಯ ಮಾವನ ಮನೆಗೆ ಬಂದಿದ್ದಾನೆ. ಅಲ್ಲಿ ವೈಷ್ಣವ್ ಪಾತ್ರೆ ತೊಖೆದಿದ್ದಾನೆ. ಅದಕ್ಕೆ ಕಾವೇರಿ ಲಕ್ಷ್ಮಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಈ ಮೊದಲು ಆಚೆ ಮಲಗಿದ್ದ ವೈಷ್ಣವ್
ವೈಷ್ಣವ್ ಮಾವನ ಮನೆಗೆ ಹೋದಾಗ, ಒಳಗೆ ರೂಮ್ ಇಲ್ಲದ ಕಾರಣ ಹೊರಗೆ ಮಲಗಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಬೈದಿದ್ದಳು. ನಾನು ಮನೆ ಕೊಟ್ಟರೆ ನೀವು ಸ್ವಾಭಿಮಾನ, ಅದು, ಇದು ಅಂತ ಹೇಳಿ ತಗೊಳ್ಳಿಲ್ಲ. ಈಗ ನೋಡಿದ್ರೆ ನನ್ನ ಮಗ ಅಂಗಳದಲ್ಲಿ ಮಲಗಿದ್ದ. ಅಳಿಮಯ್ಯನನ್ನು ಚಳಿಯಲ್ಲಿ ಹೊರಗೆ ಮಲಗಿಸುವುದು ನಿಮ್ಮ ಸ್ವಾಭಿಮಾನಾನಾ? ನಿನ್ನೆ ನೆಲದ ಮೇಲೆ ಮಲಗಿಸಿದ್ದೆ ಎಂದು ಕಾವೇರಿ ಲಕ್ಷ್ಮಿಗೆ ಬೈದಿದ್ದಳು.
ಪಾತ್ರೆ ತೊಳೆದ ವೈಷ್ಣವ್
ಲಕ್ಷ್ಮಿ ಪಾತ್ರೆ ತೊಳೆಯುತ್ತಿದ್ದಳು. ವೈಷ್ಣವ್ ಅಲ್ಲಿಗೆ ಬಂದು ಸಹಾಯ ಮಾಡ್ತೇನೆ ಎಂದು ಹೇಳ್ತಾನೆ. ಲಕ್ಷ್ಮಿ ಎಷ್ಟೇ ಬೇಡ ಅಂದ್ರೂ ಕೇಳಲ್ಲ. ಹೆಂಡ್ತಿಗೆ ಸಹಾಯ ಮಾಡ್ತೀನಿ ಎಂದು ಪಾತ್ರೆ ತೊಳೆದಿದ್ದಾನೆ. ಅವನು ಪಾತ್ರೆ ತೊಳೆಯುವ ಟೈಮ್‍ಗೆ ಕಾವೇರಿ ಕಾರು ಎಂಟ್ರಿ ಆಗುತ್ತೆ. ಮಗ ಪಾತ್ರೆ ತೊಳೆಯುವುದನ್ನು ಕೆಂಡಾಮಂಡಲವಾಗಿದ್ದಾಳೆ.
ಲಕ್ಷ್ಮಿಗೆ ಕ್ಲಾಸ್
ಲಕ್ಷ್ಮಿ ಇದೇನು ಅಂತ ಕೇಳ್ತಾ ಇದ್ದಾಳೆ. ಅದಕ್ಕೆ ವೈಷ್ಣವ್ ಏನೂ ಹೇಳಲು ಹೋಗುತ್ತಾನೆ. ಆಗ ಕಾವೇರಿ ತಡೆಯುತ್ತಾಳೆ. ನೀನು ಸುಮ್ನೆ ಇದ್ರೆ ಸರಿ ಪುಟ್ಟ, ಲಕ್ಷ್ಮಿ ನೀನು ಹೇಳು, ಇದಕ್ಕಾ ನಾನು ಅವನನ್ನು ಇಲ್ಲಿಗೆ ಕಳಿಸಿದ್ದು, ಇದೇನಾ ನಿಮ್ಮ ಶಾಸ್ತ್ರ ಸಂಪ್ರದಾಯ? ನನ್ನ ಜನ್ಮ ಸಾರ್ಥಕ ಆಯ್ತು. ಇದನ್ನು ಈ ಜನ್ಮದಲ್ಲಿ ನೋಡ್ತೀನಿ ಎಂದುಕೊಂಡಿರಲಿಲ್ಲ ಎಂದು ಕಾವೇರಿ ಕೋಪ ಮಾಡಿಕೊಂಡಿದ್ದಾಳೆ.
ಲಕ್ಷ್ಮಿ ಮನೆಯವರಿಗೂ ತರಾಟೆ
ಇದನ್ನು ನೋಡಿ ಸುಮ್ಮನೇ ಇರೋಕೆ ಆಗಲ್ಲ. ನಿನ್ನ ಯಾವ ಮಾತು ಬೇಡ ಲಕ್ಷ್ಮಿ ಎಂದು ಒಳಗೆ ಹೋಗಿದ್ದಾಳೆ ಕಾವೇರಿ. ಬೀಗರೇ ಬೀಗರೇ ಎಂದು ಕರೆಯುತ್ತಾಳೆ. ಎಲ್ಲರೂ ಬರುತ್ತಾರೆ. ಕಾವೇರಿ ನೋಡಿ ಶಾಕ್ ಆಗ್ತಾರೆ ಇಷ್ಟೂತ್ತಿನಲ್ಲಿ ಏಕೆ ಬಂದ್ರಿ ಎಂದು ಕೇಳ್ತಾರೆ. ನಾನು ನಿಮ್ಮ ಬಳಿ ಉಪಚಾರ ಮಾಡಿಸಿಕೊಳ್ಳಲು ಬಂದಿಲ್ಲ. ನಿಮ್ಮ ಅಳಿಯನಿಗೆ ಎಂಥಾ ಮರ್ಯಾದೆ ಮಾಡ್ತೀರಿ ಎಂದು ನೋಡಿದೆ ಎಂದು ಕಾವೇರಿ ಹೇಳ್ತಾ ಇದ್ದಾಳೆ.
ಕಾವೇರಿ ಸಿಡಿಮಿಡಿ
ಅಳಿಯನಿಗೆ ಎಂತಾ ಸೇವೆ, ಸತ್ಕಾರ ಮಾಡುತ್ತಿದ್ದೀರಿ. ಇನ್ನು ನನಗೆ ಯಾವ ಮರ್ಯಾದೆ ಇದೆ ಇಲ್ಲಿ? ಈ ರೀತಿಯ ನೀವು ಅಳಿಯನನ್ನು ನಡೆಸಿಕೊಳ್ಳುವುದು? ಪುಟ್ಟನ ಕೈನಲ್ಲಿ ಪಾತ್ರೆ ತೊಳೆಸುತ್ತಿದ್ದೀರಿ? ಯಾರು ಈ ರೀತಿ ಮಾಡ್ತಾರೆ. ನೀವು ಎಲ್ಲಿಯಾದ್ರೂ ನೋಡಿದ್ದೀರಾ? ನನ್ನ ಮನೆಯಲ್ಲಿ ನನ್ನ ಮಗ ಒಂದು ಲೋಟ ಸಹ ಎತ್ತಿಟ್ಟಿಲ್ಲ ಎಂದು ಕಾವೇರಿ ಹೇಳಿದ್ದಾಳೆ.
ವೈಷ್ಣವ್‍ನನ್ನು ಕಾವೇರಿ ಮನೆಗೆ ಕರೆದುಕೊಂಡು ಹೋಗ್ತಾಳಾ? ಲಕ್ಷ್ಮಿ ಮಾತಾಡೋಕೆ ಬಿಡಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ