ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಅಂದುಕೊಂಡಂತೆ ತಂಗಿ ಲಕ್ಷ್ಮಿ-ವೈಷ್ಣವ್ ಮದುವೆ ಆಗಿದೆ. ಅಳಿಯ ಮಾವನ ಮನೆಗೆ ಬಂದಿದ್ದಾನೆ. ಇಲ್ಲಿ ಕೀರ್ತಿ ಪ್ರೀತಿಸಿದ (Love) ವೈಷ್ಣವ್‍ನನ್ನು ಮರೆಯಲಾಗದೇ ಒದ್ದಾಡುತ್ತಿದ್ದಾಳೆ. ಈಗ ಕಾವೇರಿ ಅವನನ್ನು ನೀನು ಮರೆಯುವುದೇ ಒಳ್ಳೆಯದು ಎಂದಿದ್ದಾಳೆ.
ಕಾವೇರಿ ಹೈಡ್ರಾಮಾ
ಕೀರ್ತಿ ಮತ್ತು ವೈಷ್ಣವ್ ತುಂಬಾ ಪ್ರೀತಿ ಮಾಡ್ತಾ ಇರ್ತಾರೆ. ಆದ್ರೆ ಕಾವೇರಿಗೆ ಕೀರ್ತಿ ಇಷ್ಟ ಇರಲ್ಲ. ತನಗೆ ಲಕ್ಷ್ಮಿಯೇ ಸೊಸೆಯಾಗಿ ಬರಬೇಕು ಎಂದು, ಜಾತಕದ ನಾಟಕವಾಡಿದ್ದಳು. ಜಾತಕ ತೆಗೆದುಕೊಂಡು ಹೋಗಿ, ಕೀರ್ತಿಗೆ ತೋರಿಸಿ, ಜಾತಕದಲ್ಲಿ ದೋಷ ಇದೆ. ನೀನು, ಅವನು ಮದುವೆ ಆದ್ರೆ ನನ್ನ ಮಗ ಸಾಯ್ತಾನೆ ಎಂದು ನಾಟಕವಾಡಿದ್ದಳು. ಅದಕ್ಕೆ ಕೀರ್ತಿ ವೈಷ್ಣವ್ ನನ್ನು ಲಕ್ಷ್ಮಿ ಜೊತೆ ಮದುವೆ ಆಗಲು ಬಿಟ್ಟಿದ್ದಳು.
ವೈಷ್ಣವ್-ಲಕ್ಷ್ಮಿಗೆ ಡಿವೋರ್ಸ್ ಕೊಡಿಸಿ ಎಂತಿದ್ದಾಳೆ ಕೀರ್ತಿ
ಕಾವೇರಿಗೆ ಒಂದು ಕಡೆ ವೈಷ್ಣವ್ ಬದಲಾಗುತ್ತಿರುವ ಆತಂಕ, ಇನ್ನೊಂದೆಡೆ ಕೀರ್ತಿ ಬಂದಿದ್ದಾಳೆ. ವೈಷ್ಣವ್ ಮತ್ತು ಕೀರ್ತಿಗೆ ಡಿವೋರ್ಸ್ ಕೊಡಿಸಿ. ಕಾನೂನಿನ ಪ್ರಕಾರ ಅವರು ದೂರ ಹೋದ್ರೆ, ನಾನು ವೈಶ್ ಮದುವೆ ಆಗಬಹುದು. ಈ ಕೆಲಸ ನೀವೇ ಮಾಡಿ ಎಂದು ಡಿವೋರ್ಸ್ ಪೇಪರ್ ತಂದುಕೊಟ್ಟಿದ್ದಳು. ಕಾವೇರಿ ಅದನ್ನು ಹರಿದು ಹಾಕಿದ್ದಾಳೆ.
ಕಾವೇರಿಗೆ ತನ್ನ ಮಗನ ಬಗ್ಗೆ ಚಿಂತೆ
ಕಾವೇರಿಗೆ ತನ್ನ ಮಗನ ಬಗ್ಗೆ ಚಿಂತೆ ಆಗಿದೆ. ಅದಕ್ಕೆ ಭವಿಷ್ಯ ಕೇಳಲು ಜ್ಯೋತಿಷಿಗಳ ಬಳಿ ಹೋಗಿದ್ದಾಳೆ. ಇಬ್ಬರ ಜಾತಕ ತೋರಿಸಿದ್ದಾಳೆ. ಇಬ್ಬರದ್ದು ವಿಷ್ಣು-ಲಕ್ಷ್ಮಿ ಜಾತಕ ಎಂದು ಜ್ಯೋತಿಷಿ ಹೇಳ್ತಾರೆ. ಅಮ್ಮ, ಹೆಂಡ್ತಿ ಅಂತ ಬಂದ್ರೆ, ನನ್ನ ಮಗ ಯಾರ ಪರ ಇರ್ತಾನೆ ಹೇಳು ಎಂದು ಕೇಳ್ತಾಳೆ. ಅದಕ್ಕೆ ಅವರು ಅವನು ಯಾವತ್ತಿದ್ರೂ ಹೆಂಡ್ತಿ ಪರ ಎಂದು ಹೇಳ್ತಾರೆ. ಅದಕ್ಕೆ ಕಾವೇರಿ ಕೋಪ ಮಾಡಿಕೊಂಡು ಬಂದಿದ್ದಾಳೆ.
ನೀನು ಕಿರಿ ಕಿರಿ ಕೀರ್ತಿ
ಕೋಪದಲ್ಲಿದ್ದ ಕಾವೇರಿಯನ್ನು ಕೀರ್ತಿ ಮಾತನಾಡಿಸಿದ್ದಾಳೆ. ಬೇಗ ನನಗೂ, ವೈಷ್ಣವ್ ಮದುವೆ ಮಾಡಿ ಎಂದಿದ್ದಾಳೆ. ಅದಕ್ಕೆ ಕಾವೇರಿ ಕೀರ್ತಿ ಮೇಲೆ ರೇಗಾಡಿದ್ದಾಳೆ. ನೀನೊಂದು ಕಿರಿ ಕಿರಿ. ಪದೇ ಪದೇ ಬಂದು ತೊಂದ್ರೆ ಕೊಡ್ತಿ. ಎಲ್ಲಿಗೆ ಅಂದ್ರೆ ಅಲ್ಲಿಗೆ ಬರ್ತಿಯಾ. ನೀನು ಈ ರೀತಿ ಮಾಡ್ತಾ ಇದ್ರೆ ವೈಷ್ಣವ್ ನಿನಗೆ ಸಿಗಲ್ಲ. ಮರೆತು ಬಿಡಬೇಕು ಎಂದು ಹೇಳಿದ್ದಾಳೆ. ಅದನ್ನು ಕೇಳಿ ಕೀರ್ತಿ ಸಿಡಿಯುತ್ತಿದ್ದಾಳೆ.
ಕೀರ್ತಿ ಏನು ಎಂದು ತೋರಿಸುತ್ತೇನೆ
ಕಾವೇರಿ ಮಾತಿನಿಂದ ಕೀರ್ತಿ ಬೇಸರ ಮಾಡಿಕೊಂಡಿದ್ದಾಳೆ. ಕಾವೇರಿ ಅವರು ನನಗೆ ಬೈಯ್ತಾರೆ. ಅವರಿಗೆ ಆ ರೈಟ್ಸ್ ಕೊಟ್ಟವರು ಯಾರು? ದೊಡ್ಡವರು ಎಂದು ತಗ್ಗಿ, ಬಗ್ಗಿ ನಡೆದಿದ್ದು ತಪ್ಪಾಯ್ತು. ಇನ್ಮೇಲೆ ನಾನು ಅವರನ್ನು ಕೇಳಿ ಏನೂ ಮಾಡಲ್ಲ. ನನಗೆ ಏನು ಬೇಕು ಅದನ್ನು ಮಾಡೇ ಮಾಡ್ತೀನಿ. ವೈಷ್ಣವ್ ನನ್ನು ಮದುವೆ ಆಗ್ತೀನಿ ಎಂದು ಹೇಳ್ತಾ ಇದ್ದಾಳೆ.
ಇದನ್ನೂ ಓದಿ: Saanya Iyer: ಇವಳು ಪುಟ್ಟಗೌರಿನಾ? ಬಾಲಿವುಡ್ ಬೆಡಗಿನಾ? ಸಾನ್ಯಾ ಅಯ್ಯರ್ ಬೋಲ್ಡ್ ಲುಕ್ಗೆ ಪಡ್ಡೆ ಹುಡುಗರು ಫಿದಾ
ಕೀರ್ತಿ-ಕಾವೇರಿ ಇಬ್ಬರಲ್ಲಿ ಗೆಲುವು ಯಾರಿಗೆ. ಇವರಿಬ್ಬರಿಂದ ವೈಷ್ಣವ್-ಲಕ್ಷ್ಮಿಗೆ ತೊಮದ್ರೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ