• Home
  • »
  • News
  • »
  • entertainment
  • »
  • Lakshana: ಟೀಯಲ್ಲಿ ಉಪ್ಪು ಹಾಕಿದ್ಯಾರು? ಲಕ್ಷಣದ ಶಕುಂತಲಾ ದೇವಿ ಮುಂದೆ ಹೈಡ್ರಾಮಾ!

Lakshana: ಟೀಯಲ್ಲಿ ಉಪ್ಪು ಹಾಕಿದ್ಯಾರು? ಲಕ್ಷಣದ ಶಕುಂತಲಾ ದೇವಿ ಮುಂದೆ ಹೈಡ್ರಾಮಾ!

ನಕ್ಷತ್ರಾ ಮುಂದೆ ಶ್ವೇತಾಳ ಉಪ್ಪಿನ ಆಟ ನಡೆಯಲಿಲ್ಲ

ನಕ್ಷತ್ರಾ ಮುಂದೆ ಶ್ವೇತಾಳ ಉಪ್ಪಿನ ಆಟ ನಡೆಯಲಿಲ್ಲ

ಶ್ವೇತಾ, ಶಕುಂತಲಾ ದೇವಿ ಮುಂದೆ ಡ್ರಾಮಾ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ನಕ್ಷತ್ರಾಗೆ ಬೈಯಿಸಬೇಕು ಎಂದು ಪ್ಲ್ಯಾನ್ ಮಾಡಿದ್ಲು. ಆದ್ರೆ ಅದು ಅವಳಿಗೆ ಉಲ್ಟಾ ಹೊಡೆದಿದೆ. ಯಾಕಂದ್ರೆ ಟೀ ಮಾಡಿದ್ದು ನಕ್ಷತ್ರಾ ಅಲ್ಲ, ಭೂಪತಿ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ ಹೇಗಾದ್ರೂ ಭೂಪತಿ ಪ್ರೀತಿ (Love) ಪಡೆಯಬೇಕು ಎಂದುಕೊಳ್ತಿದ್ದಾಳೆ. ಅದಕ್ಕೆ ಶ್ವೇತಾ ಅಡ್ಡಗಾಲು ಹಾಕ್ತಾ ಇದ್ದಾಳೆ.


    ಭೂಪತಿ ಮನೆ ಸೇರಿರುವ ಶ್ವೇತಾ
    ಶ್ವೇತಾಗೆ ಮೊದಲಿನಿಂದಲೂ ಭೂಪತಿ ಅಂದ್ರೆ ಇಷ್ಟ. ಅವರಿಬ್ಬರು ಮದುವೆ ಆಗಬೇಕಿತ್ತು. ಆದ್ರೆ ಅದು ಸ್ಪಲ್ಪದರಲ್ಲೇ ಮಿಸ್ ಆಯ್ತು. ಅದಕ್ಕೆ ಹೇಗಾದ್ರೂ ಭೂಪತಿಯನ್ನು ಪಡೆಯಬೇಕು ಎಂದು ಏನೇನೋ ನಾಟಕ ಮಾಡಿ ಭೂಪತಿ ಮನೆ ಸೇರಿದ್ದಾಳೆ. ಅತ್ತೆ ಶಕುಂತಲಾ ದೇವಿಯೂ ಈಕೆಯ ನಾಟಕವನ್ನು ನಂಬ್ತಾರೆ.


    ಟೀ ಯಲ್ಲಿ ಉಪ್ಪಿದೆ ಎಂದು ಡ್ರಾಮಾ
    ನಕ್ಷತ್ರಾ, ಶ್ವೇತಾಗೆ ಟೀಯನ್ನು ತಂದುಕೊಡುತ್ತಾಳೆ. ಆಗ ಶ್ವೇತಾ ಜೋರು ಜೋರಾಗಿ ಟೀಗೆ ಉಪ್ಪು ಹಾಕಿದ್ದೀಯಾ ಅಂತ ಗಲಾಟೆ ಮಾಡ್ತಾಳೆ. ಆಗ ಮನೆಯವರೆಲ್ಲಾ ಅಲ್ಲಿಗೆ ಬರುತ್ತಾರೆ. ಆಗ ನಕ್ಷತ್ರಾ ಅದರಲ್ಲಿ ಉಪ್ಪಿಲ್ಲ ಎಂದು ಹೇಳ್ತಾಳೆ. ಅದಕ್ಕೆ ಶ್ವೇತಾ ಇಲ್ಲ ನೀನು ಉಪ್ಪು ಹಾಕಿದ್ದೀಯಾ ಎಂದು ಹೇಳ್ತಾಳೆ.


    ಇದನ್ನೂ ಓದಿ: KrissMi Nest: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮನೆ ಗೃಹ ಪ್ರವೇಶ; ಹೇಗಿದೆ ಲವ್ ಮಾಕ್ಟೇಲ್ ಜೋಡಿಯ ಹೊಸ ಗೂಡು? 


    ಟೀ ಮಾಡಿದ್ದು ಭೂಪತಿ
    ಆಗ ಭೂಪತಿ, ಶ್ವೇತಾ ಅದರಲ್ಲಿ ಉಪ್ಪಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ಟೀ ಮಾಡಿದ್ದ ನಾನು ಎಂದು ಹೇಳ್ತಾನೆ.ಟೀನ ಸರ್ವ್​ ಮಾಡಿದ್ದು ನಾನು. ಅದರಲ್ಲಿ ನಕ್ಷತ್ರಾ ಹೇಗೆ ಉಪ್ಪು ಹಾಕ್ತಾಳೆ ಎನ್ನುತ್ತಾನೆ. ಅಡುಗೆಮನೆ ಬಿಟ್ಟು, ಬೇರೆ ಎಲ್ಲಾದ್ರೂ ಉಪ್ಪಿನ ಡಬ್ಬ ಇದೇನಾ ಎಂದು ನಕ್ಷತ್ರಾ ಕೇಳ್ತಾಳೆ.


    colors kannada serial, kannada serial, shwetha salt drama in home, lakshana serial, serial today episode, ಲಕ್ಷಣ ಧಾರಾವಾಹಿ, ನಕ್ಷತ್ರಾ ಮುಂದೆ ಶ್ವೇತಾಳ ಉಪ್ಪಿನ ಆಟ ನಡೆಯಲಿಲ್ಲ, ಭೂಪತಿ ಬಿಡುವ ಮಾತೇ ಇಲ್ಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಟೀ ಮಾಡಿದ್ದು ಭೂಪತಿ


    ಶಕುಂತಲಾ ದೇವಿ ಮುಂದೆ ಡ್ರಾಮಾ
    ಶ್ವೇತಾ, ಶಕುಂತಲಾ ದೇವಿ ಮುಂದೆ ಡ್ರಾಮಾ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ನಕ್ಷತ್ರಾಗೆ ಬೈಯಿಸಬೇಕು ಎಂದು ಪ್ಲ್ಯಾನ್ ಮಾಡಿದ್ಲು. ಆದ್ರೆ ಅದು ಅವಳಿಗೆ ಉಲ್ಟಾ ಹೊಡೆದಿದೆ. ಯಾಕಂದ್ರೆ ಟೀ ಮಾಡಿದ್ದು ನಕ್ಷತ್ರಾ ಅಲ್ಲ, ಭೂಪತಿ. ಶಕುಂತಲಾ ದೇವಿ ಮಗ ಭೂಪತಿ ಮೇಲೆ ಯಾರಾದ್ರೂ ತಪ್ಪು ಹೇಳಲು ಬಂದ್ರೆ ಸಹಿಸಲ್ಲ.


    ಶ್ವೇತಾಗೆ ಟೀ ಮಾಡೋ ಕೆಲಸ
    ಇದೇ ಸಮಯವನ್ನು ಬಳಸಿಕೊಂಡ ನಕ್ಷತ್ರಾ, ಅತ್ತೆ ಶ್ವೇತಾಗೆ ನಾನು ಉಪ್ಪು ಹಾಕ್ತೇನೆ ಎಂದು ಅನುಮಾನ. ಅದಕ್ಕೆ ಈ ರೀತಿ ಮಾಡ್ತಾ ಇದ್ದಾಳೆ. ಇನ್ಮೇಲೆ ಅವಳೇ ಟೀ ಮಾಡೋ ಕೆಲಸ ಮಾಡಲಿ ಎನ್ನುತ್ತಾಳೆ. ಅದಕ್ಕೆ ಶಕುಂತಲಾ ದೇವಿ ಒಪ್ಪಿ, ಅವಳಿಗೆ ಅದೊಂದು ಕೆಲಸನಾ? ಅವಳು ಮಾಡ್ತಾಳೆ ಬಿಡು ಎನ್ನುತ್ತಾಳೆ. ಅದನ್ನು ಕೇಳಿ ಶ್ವೇತಾ ಬೇಸರಪಟ್ಟುಕೊಳ್ತಾಳೆ.


    colors kannada serial, kannada serial, shwetha salt drama in home, lakshana serial, serial today episode, ಲಕ್ಷಣ ಧಾರಾವಾಹಿ, ನಕ್ಷತ್ರಾ ಮುಂದೆ ಶ್ವೇತಾಳ ಉಪ್ಪಿನ ಆಟ ನಡೆಯಲಿಲ್ಲ, ಭೂಪತಿ ಬಿಡುವ ಮಾತೇ ಇಲ್ಲ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ಭೂಪತಿ ಬಿಡೋ ಮಾತೇ ಇಲ್ಲ
    ಶ್ವೇತಾ ಭೂಪತಿಯನ್ನು ಒಲಿಸಿಕೊಳ್ಳಲು ಈ ರೀತಿ ಮಾಡ್ತಾ ಇದ್ದಾಳೆ. ಆದ್ರೆ ಅದಕ್ಕೆ ನಕ್ಷತ್ರಾ ಬಿಡಲ್ಲ. ಶ್ವೇತಾ ಕುತಂತ್ರ ಬುದ್ಧಿ ಗೊತ್ತಿದ್ದೇ ಎಲ್ಲದಕ್ಕೂ ಪ್ರತಿತಂತ್ರ ರೂಪಿಸುತ್ತಾಳೆ. ಅದರಲ್ಲೂ ತನ್ನ ಗಂಡ ಭೂಪತಿನ್ನು ಬಿಡೋ ಮಾತೇ ಇಲ್ಲ ಎಂದು ಶ್ವೇತಾಗೆ ಮನದಟ್ಟು ಮಾಡಿಸಿದ್ದಾಳೆ.


    ಇದನ್ನೂ ಓದಿ: Bigg Boss Kannada: ಸಾನ್ಯಾ ಅಯ್ಯರ್ ಮಡಿಲಲ್ಲಿ ಮಲಗಿ ಜೋರಾಗಿ ಅತ್ತ ರೂಪೇಶ್ 


    ನಕ್ಷತ್ರಾ ಮನೆ ಸೇರಿರೋ ಶ್ವೇತಾ ಆಟ ಏನೂ ನಡೆಯಲ್ವಾ? ಶ್ವೇತಾ ಭೂಪತಿಯನ್ನು ಒಲಿಸಿಕೊಳ್ತಾಳಾ? ಮುಂದೇನಾಗುತ್ತೆ ಅಂತ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: