• Home
  • »
  • News
  • »
  • entertainment
  • »
  • Lakshana: ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್​ಗೆ ಬೆಂಕಿ! ಮುಂದಿದೆ ಟ್ವಿಸ್ಟ್

Lakshana: ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್​ಗೆ ಬೆಂಕಿ! ಮುಂದಿದೆ ಟ್ವಿಸ್ಟ್

ಬೆಂಕಿ ಹಚ್ಚಿ ಕುಣಿದಾಡಿದ ಭಾರ್ಗವಿ

ಬೆಂಕಿ ಹಚ್ಚಿ ಕುಣಿದಾಡಿದ ಭಾರ್ಗವಿ

ಡೆವಿಲ್ ಅಂದ್ರೆ ಚಂದ್ರಶೇಖರ್ ತಂಗಿ ಭಾರ್ಗವಿ, ಪ್ರಖ್ಯಾತ್ ನನ್ನು ಕಿಡ್ನ್ಯಾಪ್ ಮಾಡಿ, ನವರಾತ್ರಿಯ ರಾವಣನ ಸಂಹಾರದ ಗೊಂಬೆಯಲ್ಲಿ ಕಟ್ಟಿ ಹಾಕಿರುತ್ತಾಳೆ. ಮೊದಲೇ ಹೇಳಿದಂತೆ ಪ್ರಖ್ಯಾತ್ ಗೆ ಎಲ್ಲರ ಮುಂದೆ ಬೆಂಕಿ ಹಚ್ಚಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada)  ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನು ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಆಗಿದೆ. ಆ ವಿಲನ್ (Villain)  ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ (Sister) ಭಾರ್ಗವಿ. ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್ ಗೆ ಭಾರ್ಗವಿ ಬೆಂಕಿ ಇಟ್ಟಿದ್ದಾಳೆ.


    ಡೆವಿಲ್ ಯಾರು ಅನ್ನೋ ಕುತೂಹಲಕ್ಕೆ ತೆರೆ
    ಕಳೆದ ಒಂದು ವಾರದಿಂದ ಲಕ್ಷಣ ಧಾರಾವಾಹಿಯಲ್ಲಿ ಲೇಡಿ ವಿಲನ್ ನಡುಕ ಹುಟ್ಟಿಸಿದ್ದಳು. ಯಾರು ಇರಬಹುದು ಎಂದು ಎಲ್ಲರ ಕುತೂಹಲ ಹೆಚ್ಚಾಗಿತ್ತು. ಜನ ಇವತ್ತಾದ್ರೂ ವಿಲನ್ ತೋರಿಸಿ ನಿರ್ದೇಶಕರೇ ಎಂದು ಕೇಳ್ತಾ ಇದ್ರು. ಕೊನೆಗೂ ಅವಳು ಯಾರು ಎಂದು ಗೊತ್ತಾಗಿದೆ. ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ ನಿರ್ದೇಶಕರು.


    ಚಂದ್ರಶೇಖರ್ ತಂಗಿಯೇ ಡೆವಿಲ್
    ಚಂದ್ರಶೇಖರ್ ವಿಲನ್ ಯಾರು ಅಂತ ಊರೆಲ್ಲಾ ಹುಡುಕುತ್ತಿದ್ರೆ, ಅವಳು ಅವನ ಮನೆಯಲ್ಲೇ ಇದ್ದಾಳೆ. ಅದು ಬೇರೆ ಯಾರೂ ಅಲ್ಲ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಈ ಧಾರಾವಾಹಿಗೆ ಎಂಟ್ರಿ ಆಗಿರುವ ವಿಲನ್. ಮನೆಯಲ್ಲೇ ಇದ್ದುಕೊಂಡು ಅಣ್ಣನ ಮೇಲೆ ಕತ್ತಿ ಮಸೆಯುತ್ತಿದ್ದಾಳೆ. ಚಂದ್ರಶೇಖರ್ ಗೆ ತನ್ನ ತಂಗಿಯೇ ವಿಲನ್ ಎಂದು ಗೊತ್ತಾಗುತ್ತಾ? ನಕ್ಷತ್ರಾಗೆ ತನ್ನ ಅತ್ತೆಯ ಕುತಂತ್ರ ತಿಳಿಯುತ್ತಾ ನೋಡಬೇಕು.


    ಇದನ್ನೂ ಓದಿ: Ramachari: ಶರ್ಮಿಳಾಗೆ ಕೊಲೆ ಸುಪಾರಿ ಕೊಡಲು ಹೋಗಿ ಮಗಳಿಗೇ ಅಪಾಯ ತಂದ ಮಾನ್ಯತಾ! 


    ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್ ಗೆ ಬೆಂಕಿ
    ಡೆವಿಲ್ ಅಂದ್ರೆ ಚಂದ್ರಶೇಖರ್ ತಂಗಿ ಭಾರ್ಗವಿ, ಪ್ರಖ್ಯಾತ್ ನನ್ನು ಕಿಡ್ನ್ಯಾಪ್ ಮಾಡಿ, ನವರಾತ್ರಿಯ ರಾವಣನ ಸಂಹಾರದ ಗೊಂಬೆಯಲ್ಲಿ ಕಟ್ಟಿ ಹಾಕಿರುತ್ತಾಳೆ. ಅಲ್ಲದೇ ಅವನನ್ನು ತಾಕತ್ ಇದ್ರೆ ಕಾಪಾಡಿ ಎಂದು ಭೂಪತಿ ಸವಾಲು ಹಾಕಿರುತ್ತಾಳೆ. ನಿಮ್ಮ ಮುಂದೆಯೇ ಅವನನು ಸಾಯಿಸ್ತೀನಿ ಎಂದು ಸವಾಲ್ ಹಾಕಿರುತ್ತಾಳೆ. ಹೇಳಿದಂತೆ ಪ್ರಖ್ಯಾತ್ ಗೆ  ಎಲ್ಲರ ಮುಂದೆ ಬೆಂಕಿ ಹಚ್ಚಿದ್ದಾಳೆ.


    Colors Kannada serial, Kannada serial, Lakshana Serial, serial today episode, Villain Is Nakshatra Mother in law, ಲಕ್ಷಣ ಧಾರಾವಾಹಿ, ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್ ಗೆ ಬೆಂಕಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಪ್ರಖ್ಯಾತ್ ಗೆ ಬೆಂಕಿ


    ಬೆಂಕಿ ಹಚ್ಚಿ ಕುಣಿದಾಡಿದ ಭಾರ್ಗವಿ
    ವಿಲನ್ ಭಾರ್ಗವಿ ಪ್ರಖ್ಯಾತ್ ಗೆ ಬೆಂಕಿ ಹಚ್ಚಿ ಅದರ ಮುಂದೆ ಭಯಂಕರವಾಘಿ ನೃತ್ಯ ಮಾಡಿದ್ದಾಳೆ. ತನ್ನ ಗುರಿ ಯಾರೂ ತಪ್ಪಿಸಲು ಆಗಲ್ಲ ಎಂದಬ ಸಂದೇಶ ಕಳಿಸಿದ್ದಾಳೆ. ಅವಳು ನಕ್ಷತ್ರಾ ಮುಂದೆಯೇ ಹೋದ್ರೂ ಅವಳನ್ನು ಹಡಿಯಲು ಆಗಿಲ್ಲ. ಅವಳು ಮುಂದೆ ಹೋಗಿ ರೋಡ್ ಗೆ ಬೆಂಕಿ ಹಾಕಿದ್ದಾಳೆ.


    ಇದನ್ನೂ ಓದಿ: Kannadathi: ಸಾನಿಯಾ ಸೊಕ್ಕಡಗಿಸಿದ ಕನ್ನಡ ಟೀಚರ್! 


    ಭೂಪತಿ ಬೇಸರ
    ವಿಲನ್ ಕಣ್ಮುಂದೆಯೇ ಪ್ರಖ್ಯಾತ್ ನನ್ನು ಕೊಂದಿದ್ದು ನೋಡಿ, ಭೂಪತಿ, ನಕ್ಷತ್ರಾ ಬೇಸರ ಮಾಡಿಕೊಂಡಿದ್ದಾರೆ. ಅವನನ್ನು ಕಾಪಾಡಲು ಆಗಲಿಲ್ಲ ಎಂದು ನೊಂದುಕೊಂಡಿದ್ದಾರೆ. ಯಾರು ಆಕೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.


    Colors Kannada serial, Kannada serial, Lakshana Serial, serial today episode, Villain Is Nakshatra Mother in law, ಲಕ್ಷಣ ಧಾರಾವಾಹಿ, ಭೂಪತಿ-ನಕ್ಷತ್ರಾ ಮುಂದೇಯೇ ಪ್ರಖ್ಯಾತ್ ಗೆ ಬೆಂಕಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭೂಪತಿ ಬೇಸರ


    ವಿಲನ್ ಯಾರು ಅಂತ ವೀಕ್ಷಕರಿಗೆ ಗೊತ್ತಾಗಿದೆ. ಧಾರಾವಾಹಿಯಲ್ಲಿರುವವರಿಗೆ ಯಾವಾಗ ಗೊತ್ತಾಗುತ್ತೆ? ವಿಲನ್ ಎಲ್ಲರನ್ನು ಸರ್ವನಾಶ ಮಾಡ್ತಾಳಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: