• Home
  • »
  • News
  • »
  • entertainment
  • »
  • Lakshana: ದಿನದಿಂದ ದಿನಕ್ಕೆ ರೋಚಕ ತಿರುವು, ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ

Lakshana: ದಿನದಿಂದ ದಿನಕ್ಕೆ ರೋಚಕ ತಿರುವು, ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ

ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ

ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ

ಅಪ್ಪ-ಅಮ್ಮನ ಬಗ್ಗೆ ವಿಚಾರಿಸೋಕೆ ಬೆಳಗ್ಗೆ ಬೆಳಗ್ಗೆಯೇ ಕಾಲ್ ಮಾಡಿದ್ಯಾ ಕಂದಾ, ನಿನ್ನ ಜೀವನ ಆರಾಮಾಗಿ ಇದ್ರೆ ತಾನೇ ನೀನು ಈ ಕಡೆ ಗಮನ ಕೊಡೋದು, ನಿನ್ನ ಜೀವನ ಛಿದ್ರಾ ಮಾಡ್ತೀನಿ ಎಂದುಕೊಳ್ತಿದ್ದಾಳೆ ಭಾರ್ಗವಿ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಇನ್ನು ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಆಗಿದೆ. ಆ ವಿಲನ್ ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ ಭಾರ್ಗವಿ. ಮನೆಯೊಳಗೆ ಇದ್ದಕೊಂಡೇ ನಾಟಕ ಆಡ್ತಾ ಇದ್ದಾಳೆ, ನಕ್ಷತ್ರಾ (Nakshatra) ಜೀವನ (Life) ಛಿದ್ರಾಗೊಳಿಸೋದೇ ಭಾರ್ಗವಿ ಮುಂದಿನ ಗುರಿ ಅಂತೆ.


    ಅಪ್ಪನನ್ನು ನೋಡೊಕೊಳ್ಳಲು ಅತ್ತೆಗೆ ಹೇಳಿದ ನಕ್ಷತ್ರಾ
    ನಕ್ಷತ್ರಾಗೆ ತನ್ನ ಅಪ್ಪನ ತಂಗಿ ಭಾರ್ಗವಿಯೇ ವಿಲನ್ ಎಂದು ಗೊತ್ತಿಲ್ಲ. ಅದಕ್ಕೆ ಅಪ್ಪನನ್ನು ನೋಡಿಕೊಳ್ಳಲು ಅತ್ತೆಗೆ ಹೇಳುತ್ತಿದ್ದಾಳೆ. ಬೆಳಗ್ಗೆಯೇ ಕಾಲ್ ಮಾಡಿ, ಅಪ್ಪ ಎದ್ರಾ, ಆರಾಮಾಗಿ ಇದ್ದಾರಾ? ನಿನ್ನೆ ತರ ಬೆಚ್ಚಿ ಬೀಳ್ತಿಲ್ಲ ಅಲ್ವಾ ಎಂದು ಭಾರ್ಗವಿಗೆ ಕೇಳ್ತಾಳೆ. ಅದಕ್ಕೆ ಭಾರ್ಗವಿ, ಇಲ್ಲ ನಕ್ಷತ್ರಾ, ಅವನು ಅದರಿಂದ ಆಚೆ ಬಂದಿದ್ದಾನೆ. ಗಾಬರಿ ಆಗುವಂತದ್ದು ಏನೂ ಇಲ್ಲ ಎಂದು ಹೇಳ್ತಾಳೆ. ನನಗೆ ನೀವೇ ಧೈರ್ಯ ಅತ್ತೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ನಕ್ಷತ್ರಾ ಹೇಳ್ತಾಳೆ.


    ವಿಲನ್ ಕಂಡುಹಿಯಲು ಭಾರ್ಗವಿ ಸಹಾಯ
    ಅದಲ್ಲದೇ ನಕ್ಷತ್ರಾ, ವಿಲನ್ ಯಾರು ಎಂದು ಕಂಡು ಹಿಡಿಯಲು ನಿಮ್ಮ ಸಹಾಯ ಬೇಕು ಅತ್ತೆ. ನೀವು ನಮ್ಮ ಜೊತೆ ಇರಿ.ನಿಮಗೆ ಯಾವುದೇ ಸಣ್ಣ ಸುಳಿವು ಸಿಕ್ರು ನಮಗೆ ತಿಳಿಸಿ. ಯಾರಿಗೆ ಗೊತ್ತು, ಯಾವುದರಿಂದ ಈ ಸಮಸ್ಯೆಗೆ ಉತ್ತರ ಸಿಗುತ್ತೋ, ಏನೋ ಎಂದು ನಕ್ಷತ್ರಾ ಹೇಳ್ತಾಳೆ. ಅದಕ್ಕೆ ಭಾರ್ಗವಿ, ಹೌದು ನಕ್ಷತ್ರಾ ಯಾವುದನ್ನೂ ನೆಗ್‍ಲೆಟ್ ಮಾಡವಂತಿಲ್ಲ. ನೀನು ಏನೂ ಯೋಚನೆ ಮಾಡಬೇಡ. ನಾನು ಇದೀನಿ. ನಾನ್ ಎಲ್ಲದರ ಮೇಲೂ ಒಂದು ಕಣ್ಣು ಇಟ್ಟಿರುತ್ತೇನೆ ಎನ್ನುತ್ತಾಳೆ.


    ಇದನ್ನೂ ಓದಿ: Bhagya Lakshmi: ಮಗನ ಬಗ್ಗೆ ಕಾವೇರಿ ಕನಸು ಚೂರು ಚೂರಾಯ್ತು!


    ಬೇಟೆ, ಬೇಟೆಗಾರನ ಸಹಾಯ
    ನಕ್ಷತ್ರಾ ವಿಲನ್ ಹಿಡಿಯಲು ಸಹಾಯ ಮಾಡಿ ಎಂದು ವಿಲನ್ ಭಾರ್ಗವಿಗೆ ಕೇಳ್ತಾ ಇದ್ದಾಳೆ. ಇದನ್ನು ನೆನೆಸಿಕೊಂಡು ಭಾರ್ಗವಿ ನಗ್ತಾ ಇದ್ದಾಳೆ. ಅಪ್ಪ-ಅಮ್ಮನ ಬಗ್ಗೆ ವಿಚಾರಿಸೋಕೆ ಬೆಳಗ್ಗೆ ಬೆಳಗ್ಗೆಯೇ ಕಾಲ್ ಮಾಡಿದ್ಯಾ ಕಂದಾ, ನಿನ್ನ ಜೀವನ ಆರಾಮಾಗಿ ಇದ್ರೆ ತಾನೇ ನೀನು ಈ ಕಡೆ ಗಮನ ಕೊಡೋದು ಎಂದು ನಿನ್ನ ಜೀವನ ಛಿದ್ರಾ ಮಾಡ್ತೀನಿ ಎಂದುಕೊಳ್ತಿದ್ದಾಳೆ ಭಾರ್ಗವಿ.


    Colors Kannada serial, Kannada serial, Lakshana Serial, serial today episode, Villain Bhargavi plan spoil Nakshatra life, ಲಕ್ಷಣ ಧಾರಾವಾಹಿ, ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭೂಪತಿ


    ನಕ್ಷತ್ರಾ ಜೀವನಕ್ಕೆ ಶ್ವೇತಾ
    ನಕ್ಷತ್ರಾ ತನ್ನ ಅಪ್ಪ-ಅಮ್ಮನ ಕಡೆ ಗಮನ ಕೊಡಬಾರದು ಎಂದು, ಭಾರ್ಗವಿ ಶ್ವೇತಾಳನ್ನು ನಕ್ಷತ್ರಾ ಜೀವನಕ್ಕೆ ಎಂಟ್ರಿ ಕೊಡಿಸುತ್ತಿದ್ದಾಳೆ. ಶ್ವೇತಾ, ಭೂಪತಿ ಮನೆಗೆ ಬಂದು, ಭೂಪತಿಯನ್ನು ತನ್ನೆಡೆ ಒಲೊಸಿಕೊಳ್ಳುವಂತೆ ಮಾಡ್ತಾಳಂತೆ. ಆಗ ನಕ್ಷತ್ರಾ ತನ್ನ ಗಂಡನನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿ ಅಪ್ಪ-ಅಮ್ಮನನ್ನು ಮರೆಯುತ್ತಾಳೆ ಎನ್ನುವುದೇ ಭಾರ್ಗವಿ ಉದ್ದೇಶ.


    Colors Kannada serial, Kannada serial, Lakshana Serial, serial today episode, Villain Bhargavi plan spoil Nakshatra life, ಲಕ್ಷಣ ಧಾರಾವಾಹಿ, ನಕ್ಷತ್ರಾ ಜೀವನ ಛಿದ್ರ-ಛಿದ್ರ ಮಾಡ್ತಾಳಂತೆ ಭಾರ್ಗವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶ್ವೇತಾ


    ಇದನ್ನೂ ಓದಿ: Ramachari: ಹನಿ ಹನಿ ನೀರಿಗೂ ಚಾರು ಪರದಾಟ! ಗಂಡನ ಮುಂದೆ ತಪ್ಪೊಪ್ಪಿಕೊಂಡ ಮಾನ್ಯತಾ!


    ನಕ್ಷತ್ರಾ ಜೀವನಕ್ಕೆ ಶ್ವೇತಾ ಎಂಟ್ರಿ ಆಗುತ್ತಾ? ಅವಳ ಜೀವನ ಛಿದ್ರವಾಗುತ್ತಾ? ಅತ್ತೆ ಭಾರ್ಗವಿ ವಿಲನ್ ಎಂದು ನಕ್ಷತ್ರಾಗೆ ಗೊತ್ತಾಗೊತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: