• Home
  • »
  • News
  • »
  • entertainment
  • »
  • Lakshana: ಶ್ವೇತಾಳನ್ನು ಮನೆಯಿಂದ ಹೊರದಬ್ಬಿದ ಅಪ್ಪ, ನಕ್ಷತ್ರಾ ಮನೆ ಸೇರ್ತಾಳಾ ಕುತಂತ್ರಿ?

Lakshana: ಶ್ವೇತಾಳನ್ನು ಮನೆಯಿಂದ ಹೊರದಬ್ಬಿದ ಅಪ್ಪ, ನಕ್ಷತ್ರಾ ಮನೆ ಸೇರ್ತಾಳಾ ಕುತಂತ್ರಿ?

ಶ್ವೇತಾಳನ್ನು ಮನೆಯಿಂದ ಹೊರದಬ್ಬಿದ ಅಪ್ಪ

ಶ್ವೇತಾಳನ್ನು ಮನೆಯಿಂದ ಹೊರದಬ್ಬಿದ ಅಪ್ಪ

ಶ್ವೇತಾ ಅಪ್ಪ, ನನ್ನ ಮನೆಯಲ್ಲಿ ಒಂದು ಕ್ಷಣವೂ ಇರಬೇಡ ಎನ್ನುತ್ತಾನೆ. ಅದಕ್ಕೆ ಮನೆಯವರೆಲ್ಲಾ ಗಾಬರಿ ಆಗ್ತಾರೆ, ಆದ್ರೂ ಬಿಡದೇ ಶ್ವೇತಾಳನ್ನು ಬಟ್ಟೆ ಸಮೇತಾ ರಾತ್ರಿಯೇ ಆಕೆಯನ್ನು ಮನೆಯಿಂದ ಆಚೆ ದಬ್ಬುತ್ತಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಶ್ವೇತಾ (Shwetha) ಹೇಗಾದ್ರೂ ಭೂಪತಿ ಮನೆ ಸೇರಬೇಕು ಎಂದುಕೊಂಡಿದ್ದಾಳೆ. ಶ್ವೇತಾಳನ್ನು ಅವರ ಅಪ್ಪ (Father) ಮನೆಯಿಂದ ಹೊರದಬ್ಬಿದ್ದಾನೆ.


    ಅಪ್ಪನಿಗೆ ಎದುರು ಮಾತನಾಡಿದ ಶ್ವೇತಾ!
    ಶ್ವೇತಾ ತನ್ನ ಅಪ್ಪನ ಬಳಿ 10 ಸಾವಿರ ರೂಪಾಯಿಗಳನ್ನು ಕೇಳಿರುತ್ತಾಳೆ. ಆದ್ರೆ ಅದನ್ನು ತುಕಾರಾಂಗೆ ಕೊಡಲು ಆಗಿರಲಿಲ್ಲ. ಅಲ್ಲದೇ ಮನೆ ಬಳಿ ಏರಿಯಾ ಜನ ಬಂದಿರುತ್ತಾರೆ. ಆಗಲೇ ಶ್ವೇತಾ ತನ್ನ ಅಪ್ಪನ ಬಳಿ ದುಡ್ಡು ಕೇಳ್ತಾಳೆ. ಅದಕ್ಕೆ ಅವರ ಅಪ್ಪ ಆಗಲ್ಲ ಎನ್ನುತ್ತಾನೆ. ಅದಕ್ಕೆ ಶ್ವೇತಾ ಜನಗಳ ಮುಂದೆಯೇ ಬೈಯುತ್ತಾಳೆ. 10 ಸಾವಿರ ಕೊಡಲು ಆಗಲ್ವಾ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಅಲ್ಲಿದ್ದ ಜನ ನಿಮ್ಮ ಮಗಳಿಗೆ ಬುದ್ಧಿ ಹೇಳು ಎನ್ನುತ್ತಾರೆ.


    ಸಿಎಸ್ ಹೊಗಳಿದ ಶ್ವೇತಾ
    ತುಕಾರಾಂ ಶ್ವೇತಾಳನ್ನು ಒಳಗೆ ಕರೆದುಕೊಂಡು ಜನರ ಮುಂದೆ ಹೇಗೆಲ್ಲಾ ಮಾತನಾಡ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಶ್ವೇತಾ ನೀನು ಅಪ್ಪನಾಗಿ ಏನ್ ಮಾಡಿದ್ದೀಯಾ. ಒಂದು ಒಳ್ಳೆ ಬಟ್ಟೆ ಕೊಟ್ಟಿಲ್ಲ. ಒಂದು ಒಳ್ಳೆ ಊಟ ಕೊಡಿಸಿಲ್ಲ. ಮಗಳು ಎಂದ್ರೆ, ಪ್ರೀತಿ ಇದ್ರೆ ಸಾಕಾಗಲ್ಲ. ಸ್ವಲ್ಪ ದುಡ್ಡು ಕೊಡಬೇಕು ಎನ್ನುತ್ತಾಳೆ. ಅಲ್ಲದೇ ಆ ಸಿಎಸ್ ಎಷ್ಟೋ ವಾಸಿ, ಕೈತುಂಬಾ ದುಡ್ಡು ಕೊಡುತ್ತಿದ್ದ ಎಂದು ಹೇಳ್ತಾಳೆ.


    ಇದನ್ನೂ ಓದಿ: Ramachari: ಅಪಾಯದಿಂದ ಪಾರಾದರೂ ಕಂಟಕ ತಪ್ಪಿಲ್ಲ, ಚಾರು ಸ್ಥಿತಿಗೆ ರಾಮಾಚಾರಿ ಕಣ್ಣೀರು 


    ಮನೆಯಿಂದ ಆಚೆ ಹಾಕಿದ ಅಪ್ಪ
    ಶ್ವೇತಾ, ತುಕಾರಾಂ ಮುಂದೆ ಸಿಎಸ್ ಅನ್ನು ಹೊಗಳಿದ್ದಕ್ಕೆ ಅವನಿಗೆ ಕೋಪ ಬರುತ್ತೆ. ಶ್ವೇತಾಳನ್ನು ಹೊಡೆಯಲು ಹೋಗ್ತಾನೆ. ನೀನು ಅವನನ್ನು ಹೊಗಳುವುದಾದ್ರೆ, ಅವನ ಮನೆಗೆ ಹೋಗು ನೀನು. ನನ್ನ ಮನೆಯಲ್ಲಿ ಒಂದು ಕ್ಷಣವೂ ಇರಬೇಡ ಎನ್ನುತ್ತಾನೆ. ಅದಕ್ಕೆ ಮನೆಯವರೆಲ್ಲಾ ಗಾಬರಿ ಆಗ್ತಾರೆ, ಆದ್ರೂ ಬಿಡದೇ ಶ್ವೇತಾಳನ್ನು ಬಟ್ಟೆ ಸಮೇತ ರಾತ್ರಿಯೇ ಆಕೆಯನ್ನು ಮನೆಯಿಂದ ಆಚೆ ದಬ್ಬುತ್ತಾನೆ.


    ಸರಿಯಾದ ಸಮಯಕ್ಕೆ ಬಂದ ಶಕುಂತಲಾ ದೇವಿ
    ಶ್ವೇತಾ ಅಪ್ಪ ಆಕೆಯನ್ನು ಮನೆಯಿಂದ ಆಚೆ ದಬ್ಬುವ ಸಮಯಕ್ಕೆ ಸರಿಯಾಗಿ ಶಕುಂತಲಾ ದೇವಿ ಬರುತ್ತಾಳೆ. ಶ್ವೇತಾಳನ್ನು ಕರೆದುಕೊಂಡು ಹೋಗ್ತಾಳಾ ನೋಡಬೇಕು. ಶ್ವೇತಾ ಪ್ಲ್ಯಾನ್ ಸಹ ಅದೆ. ಹೇಗಾದ್ರೂ ಶಕುಂತಲಾ ದೇವಿ ಮನೆ ಸೇರೋದು. ಅದಕ್ಕೆ ತಕ್ಕಂತೆ ಶ್ವೇತಾ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ತಾ ಇದ್ದಾಳೆ.


    ಭೂಪತಿ


    ನಕ್ಷತ್ರಾ ಜೀವನಕ್ಕೆ ಶ್ವೇತಾ ತರುವುದು ಭಾರ್ಗವಿ ಪ್ಲ್ಯಾನ್
    ಧಾರಾವಾಹಿಯಲ್ಲಿರುವ ಭಾರ್ಗವಿದು ಸಹ ಇದೇ ಪ್ಲ್ಯಾನ್. ನಕ್ಷತ್ರಾ ತನ್ನ ಅಪ್ಪ-ಅಮ್ಮನ ಕಡೆ ಗಮನ ಕೊಡಬಾರದು ಎಂದು, ಭಾರ್ಗವಿ ಶ್ವೇತಾಳನ್ನು ನಕ್ಷತ್ರಾ ಜೀವನಕ್ಕೆ ಎಂಟ್ರಿ ಕೊಡಿಸುತ್ತಿದ್ದಾಳೆ. ಶ್ವೇತಾ, ಭೂಪತಿ ಮನೆಗೆ ಬಂದು, ಭೂಪತಿಯನ್ನು ತನ್ನೆಡೆ ಒಲಿಸಿಕೊಳ್ಳುವಂತೆ ಮಾಡ್ತಾಳಂತೆ. ಆಗ ನಕ್ಷತ್ರಾ ತನ್ನ ಗಂಡನನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿ ಅಪ್ಪ-ಅಮ್ಮನನ್ನು ಮರೆಯುತ್ತಾಳೆ ಎನ್ನುವುದೇ ಭಾರ್ಗವಿ ಉದ್ದೇಶ.


    ನಕ್ಷತ್ರಾ


    ಇದನ್ನೂ ಓದಿ: Raveena Tandon: KGF ಖಡಕ್ ಪ್ರಧಾನಿ ರಮೀಕಾ ಬರ್ತ್​ಡೇ! ಹುಟ್ಟುಹಬ್ಬದ ಸಂಭ್ರಮದಲ್ಲಿ ರವೀನಾ


    ಶ್ವೇತಾ ಭೂಪತಿ ಮನೆ ಸೇರ್ತಾಳಾ? ನಕ್ಷತ್ರಾ ಜೀವನ ಹಾಳು ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: