• Home
 • »
 • News
 • »
 • entertainment
 • »
 • Lakshana: ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು?

Lakshana: ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು?

ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ!

ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ!

ಈ ಹಿಂದೆ ಶ್ವೇತಾ, ನಕ್ಷತ್ರಾಗೆ ಸವಾಲ್ ಹಾಕಿರುತ್ತಾಳೆ. ಇನ್ನೊಂದು ವಾರದಲ್ಲಿ ನಾನು ನಿನ್ನ ಮನೆ ಸೇರೇ ಸೇರುತ್ತೇನೆ ಎಂದು. ಅಂತೆಯೇ ಡ್ರಾಮಾ ಮಾಡಿ ನಕ್ಷತ್ರಾ ಮನೆ ಸೇರುತ್ತಿದ್ದಾಳೆ. ಆಕೆಗೆ ನಕ್ಷತ್ರಾ ಗಂಡ ಭೂಪತಿ ಮೇಲೆ ಕಣ್ಣು. ಅದಕ್ಕೆ ಹೇಗಾದ್ರೂ ಭೂಪತಿಯನ್ನು ಮದುವೆ ಆಗಬೇಕು ಎಂದುಕೊಂಡಿದ್ದಾಳೆ.

ಮುಂದೆ ಓದಿ ...
 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅಲ್ಲದೇ ಶ್ವೇತಾ ಹೇಗಾದ್ರೂ ಭೂಪತಿ ಮನೆ ಸೇರಬೇಕು ಎಂದು ಪ್ಲ್ಯಾನ್ ಮಾಡಿದ್ಲು. ಅದು ಸಕ್ಸಸ್ ಆಗಿದೆ. ಹೇಳಿದಂತೆ ಶ್ವೇತಾ (Shwetha) ನಕ್ಷತ್ರಾ (Nakshatra) ಮನೆ (Home) ಸೇರುತ್ತಿದ್ದಾಳೆ.


  ಮುದ್ದಿನ ಮಗಳ ವಿರುದ್ಧ ಅಪ್ಪನ ಕೂಗು


  ಶ್ವೇತಾ ತನ್ನ ಅಪ್ಪ ತುಕರಾಂ ಬಳಿ 10 ಸಾವಿರ ರೂಪಾಯಿಗಳನ್ನು ಕೇಳಿರುತ್ತಾಳೆ. ಆದ್ರೆ ಅದನ್ನು ತುಕಾರಾಂಗೆ ಕೊಡಲು ಆಗಿರಲಿಲ್ಲ. ಅಲ್ಲದೇ ಮನೆ ಬಳಿ ಏರಿಯಾ ಜನ ಬಂದಿರುತ್ತಾರೆ. ಆಗಲೇ ಶ್ವೇತಾ ತನ್ನ ಅಪ್ಪನ ಬಳಿ ದುಡ್ಡು ಕೇಳ್ತಾಳೆ. ಅದಕ್ಕೆ ಅವರ ಅಪ್ಪ ಆಗಲ್ಲ ಎನ್ನುತ್ತಾನೆ. ಅದಕ್ಕೆ ಶ್ವೇತಾ ಜನಗಳ ಮುಂದೆಯೇ ಬೈಯುತ್ತಾಳೆ. 10 ಸಾವಿರ ಕೊಡಲು ಆಗಲ್ವಾ ಎಂದು ಪ್ರಶ್ನೆ ಮಾಡ್ತಾಳೆ. ಅದಕ್ಕೆ ಅಲ್ಲಿದ್ದ ಜನ ನಿಮ್ಮ ಮಗಳಿಗೆ ಬುದ್ಧಿ ಹೇಳು ಎನ್ನುತ್ತಾರೆ.
  ಮನೆಯಿಂದ ಶ್ವೇತಾಳನ್ನು ಹೊರದಬ್ಬಿದ ಅಪ್ಪ


  ತುಕಾರಾಂ ಶ್ವೇತಾಳನ್ನು ಒಳಗೆ ಕರೆದುಕೊಂಡು ಜನರ ಮುಂದೆ ಹೇಗೆಲ್ಲಾ ಮಾತನಾಡ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಶ್ವೇತಾ ನೀನು ಅಪ್ಪನಾಗಿ ಏನ್ ಮಾಡಿದ್ದೀಯಾ. ಒಂದು ಒಳ್ಳೆ ಬಟ್ಟೆ ಕೊಟ್ಟಿಲ್ಲ. ಒಂದು ಒಳ್ಳೆ ಊಟ ಕೊಡಿಸಿಲ್ಲ. ಮಗಳು ಎಂದ್ರೆ ಪ್ರೀತಿ ಇದ್ರೆ ಸಾಕಾಗಲ್ಲ. ಸ್ವಲ್ಪ ದುಡ್ಡು ಕೊಡಬೇಕು ಎನ್ನುತ್ತಾಳೆ. ಅಲ್ಲದೇ ಆ ಸಿಎಸ್ ಎಷ್ಟೋ ವಾಸಿ, ಕೈತುಂಬಾ ದುಡ್ಡು ಕೊಡುತ್ತಿದ್ದ ಎಂದು ಹೇಳ್ತಾಳೆ.


  ಇದನ್ನೂ ಓದಿ: Nammamma Super Star: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ವೇದಿಕೆಯಲ್ಲಿ ಪುನೀತ್ ಸಹೋದರಿಯರ ಮಾತು 


  ಶ್ವೇತಾ ತುಕಾರಾಂ ಮುಂದೆ ಸಿಎಸ್ ಅನ್ನು ಹೊಗಳಿದ್ದಕ್ಕೆ ಅವನಿಗೆ ಕೋಪ ಬರುತ್ತೆ. ಶ್ವೇತಾಳನ್ನು ಹೊಡೆಯಲು ಹೋಗ್ತಾನೆ. ನೀನು ಅವನನ್ನು ಹೊಗಳುವುದಾದ್ರೆ, ಅವನ ಮನೆಗೆ ಹೋಗು ನೀನು. ನನ್ನ ಮನೆಯಲ್ಲಿ ಒಂದು ಕ್ಷಣವೂ ಇರಬೇಡ ಎನ್ನುತ್ತಾನೆ. ಅದಕ್ಕೆ ಮನೆಯವರೆಲ್ಲಾ ಗಾಬರಿ ಆಗ್ತಾರೆ, ಆದ್ರೂ ಬಿಡದೇ ಶ್ವೇತಾ ಬಟ್ಟೆ ಸಮೇತಾ ರಾತ್ರಿಯೇ ಆಕೆಯನ್ನು ಮನೆಯಿಂದ ಆಚೆ ದಬ್ಬುತ್ತಾನೆ.


  ಶ್ವೇತಾಳನ್ನು ಕರೆದುಕೊಂಡು ಹೋದ ಶಕುಂತಲಾ


  ಶ್ವೇತಾ ಅಪ್ಪ ಆಕೆಯನ್ನು ಮನೆಯಿಂದ ಆಚೆ ದಬ್ಬುವ ಸಮಯಕ್ಕೆ ಸರಿಯಾಗಿ ಶಕುಂತಲಾ ದೇವಿ ಬರುತ್ತಾಳೆ. ಶ್ವೇತಾ ಆಕೆಯ ಮುಂದೆ ಡ್ರಾಮಾ ಮಾಡುತ್ತಾಳೆ. ನನಗೆ ಯಾರು ದಿಕ್ಕು ಅಪ್ಪ, ನಿಮ್ಮನ್ನು ಬಿಟ್ರೆ, ಬೇರೆ ಯಾರೂ ಇಲ್ಲ ನನಗೆ ದಯವಿಟ್ಟು ಬಾಗಿಲು ತೆರೆಯಿರಿ ಎಂದು ಹೇಳ್ತಾಳೆ. ಅದನ್ನು ನೋಡಿ ಶಕುಂತಲಾ ಮನಸ್ಸು ಕರಗಿ ಆಕೆಯನ್ನು ಕರೆದುಕೊಂಡು ಹೋಗುತ್ತಾಳೆ.


  colors kannada serial, kannada serial, lakshana serial, shwetha enter to hero bhupathi house, ಲಕ್ಷಣ ಧಾರಾವಾಹಿ, ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಶಕುಂತಲಾ ದೇವಿ


  ನಕ್ಷತ್ರಾಗೆ ಸವಾಲ್ ಹಾಕಿದ್ದ ಶ್ವೇತಾ
  ಈ ಹಿಂದೆ ಶ್ವೇತಾ, ನಕ್ಷತ್ರಾಗೆ ಸವಾಲ್ ಹಾಕಿರುತ್ತಾಳೆ. ಇನ್ನೊಂದು ವಾರದಲ್ಲಿ ನಾನು ನಿನ್ನ ಮನೆ ಸೇರೇ ಸೇರುತ್ತೇನೆ ಎಂದು. ಅಂತೆಯೇ ಡ್ರಾಮಾ ಮಾಡಿ ನಕ್ಷತ್ರಾ ಮನೆ ಸೇರುತ್ತಿದ್ದಾಳೆ. ಆಕೆಗೆ ನಕ್ಷತ್ರಾ ಗಂಡ ಭೂಪತಿ ಮೇಲೆ ಕಣ್ಣು. ಅದಕ್ಕೆ ಹೇಗಾದ್ರೂ ಭೂಪತಿಯನ್ನು ಮದುವೆ ಆಗಬೇಕು ಎಂದುಕೊಂಡಿದ್ದಾಳೆ. ಅಲ್ಲದೇ ಶ್ವೇತಾ ತಮ್ಮ ಮನೆಯಲ್ಲಿ ಇರುವುದು ಭೂಪತಿಗೂ ಇಷ್ಟ ಇಲ್ಲ. ಇದನ್ನು ಅವರಮ್ಮನ ಬಳಿಯೂ ಹೇಳಿದ್ದ.


  colors kannada serial, kannada serial, lakshana serial, shwetha enter to hero bhupathi house, ಲಕ್ಷಣ ಧಾರಾವಾಹಿ, ಕೊನೆಗೂ ನಕ್ಷತ್ರಾ ಮನೆ ಸೇರಿ ಬಿಟ್ಲು ಶ್ವೇತಾ! ಮರೆಯಲ್ಲಿ ನಿಂತು ಸಹಾಯ ಮಾಡ್ತಿರೋರು ಯಾರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ನಕ್ಷತ್ರಾ


  ಇದನ್ನೂ ಓದಿ: Actress Sara Annaiah: ಸೀರೆಯಲ್ಲಿ ಕನ್ನಡತಿ ವರುಧಿನಿ; ದೀಪ ಹಿಡಿದು ಮಿನುಗಿದ ಸಾರಾ ಅಣ್ಣಯ್ಯ! 


  ಹಾಗಾದ್ರೆ ನಕ್ಷತ್ರಾಗೆ ಹಿಂದೆ ನಿಂತು ಸಹಾಯ ಮಾಡ್ತೀರೋ ಕಾಣದ ಕೈ ಯಾವುದು? ಶ್ವೇತಾಗೆ ಭಾರ್ಗವಿ ಏನಾದ್ರೂ ಸಹಾಯ ಮಾಡ್ತಾ ಇದ್ದಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

  Published by:Savitha Savitha
  First published: