ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ (Nakshatra) ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನೊಂದೆಡೆ ನಕ್ಷತ್ರಾಳನ್ನು ಸಾಕಿದ ಅಪ್ಪ ಅಮ್ಮನಿಗೆ ಶ್ವೇತಾಳಿಂದ ತೊಂದ್ರೆ ಬಂದಿದೆ. ನಕ್ಷತಾಳ ಬದುಕನ್ನು ಶ್ವೇತಾ (Shwetha) ನರಕ ಮಾಡ್ತಾಳಂತೆ.
ಸಾಕಿದ ಮನೆ ಋಣ ತೀರಿಸಿದ ನಕ್ಷತ್ರಾ
ಹಣ ಡಬಲ್ ಮಾಡ್ತೀನಿ ಅಂತ ಹೇಳಿ ಶ್ವೇತಾ ತುಕಾರಾಂ ಬಳಿ ಮನೆ ಹೆಸರಿಗೆ ಮಾಡಿಸಿಕೊಂಡು ಅದನ್ನು ಮಾಡಿರುತ್ತಾಳೆ. ಮನೆ ತೆಗೆದುಕೊಂಡ ಬಿಲ್ಡರ್ ಮನೆ ಒಡೆಯಲು ಬಂದಿರುತ್ತಾನೆ. ಮನೆಯ ಬಗ್ಗೆ ನಕ್ಷತ್ರಾಳಿಗೆ ಕಾಲ್ ಮಾಡಿ ಅವರ ಅಕ್ಕ ಎಲ್ಲಾ ಹೇಳ್ತಾಳೆ. ಆಗ ನಕ್ಷತ್ರಾ ಅಲ್ಲಿಗೆ ಬಂದು ಅದನ್ನು ತಡೆಯುತ್ತಾನೆ.
ನಾನು 50 ಲಕ್ಷ ವಾಪಸ್ ಕೊಡ್ತೀನಿ ಮನೆ ಬಿಡಿ ಎನ್ನುತ್ತಾಳೆ. ಆಗ ಬಿಲ್ಡರ್, ಇದೇನ್ ಆಟನಾ? ನಿನ್ನ ಅಷ್ಟು ಕುಬೇರನಾ ಮಗಳ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ 1 ಕೋಟಿ ಕೊಡ್ತೀನಿ. ನಾನು ಚಂದ್ರಶೇಖರ್ ಅಂದ್ರೆ ಸಿಎಸ್ ಮಗಳು ಎನ್ನುತ್ತಾಳೆ. ಅದಕ್ಕೆ ಅವನು ಮನೆ ಕೊಟ್ಟು ವಾಪಸ್ ಹೋಗ್ತಾನೆ.
ಇದನ್ನೂ ಓದಿ: Kendasampige: ವೋಟ್ಗಾಗಿ ಸುಮನಾ ಮದುವೆ! ಎಲೆಕ್ಷನ್ ಆದ ಮೇಲೆ ಸುಮನಾಳನ್ನು ಬಿಡ್ತಾನಂತೆ!
ಶ್ವೇತಾಗೆ ಮನೆಯವರ ಕ್ಲಾಸ್
ಮನೆಯವರೆಲ್ಲಾ ಸೇರಿ ಶ್ವೇತಾಗೆ ಬೈಯ್ತಾ ಇದ್ದಾರೆ. ನಿನ್ನನ್ನು ನಂಬಿದ್ದಕ್ಕೆ ನಮಗೆ ಸರಿಯಾಗಿ ಮಾಡಿದೆ. ಮೋಸ ಮಾಡಿದೆ. ಸಕ್ಕರೆ ಗೊಂಬೆ ಅಂತಿದ್ವಿ. ನೀನು ನಮ್ಮ ತಲೆ ಮೇಲೆ ಕಲ್ಲು ಹಾಕಿ ಬಿಟ್ಟೆ ಎಂದು ಹೇಳಿದ್ದಾರೆ. ನಕ್ಷತ್ರಾ, ಶ್ವೇತಾಳಿಗೆ ವಾರ್ನಿಂಗ್ ಕೊಟ್ಟಿದ್ದಾಳೆ. ನಿನ್ನ ಪಾಪಾದ ಕೊಡ ತುಂಬಿದೆ. ಇನ್ನೊಂದು ತಪ್ಪು ಮಾಡಿದ್ರೆ, ನಾನು ನಿನ್ನ ಕ್ಷಮಿಸಲ್ಲ. ಪೊಲೀಸರಿಗೆ ಹೇಳಬೇಕಾಗುತ್ತೆ ಎನ್ನುತ್ತಾರೆ.
ನಕ್ಷತ್ರಾ ಮನೆಗೆ ಹೋಗ್ತಾಳಂತೆ ಶ್ವೇತಾ
ನಕ್ಷತ್ರಾ, ಶ್ವೇತಾಳಿಗೆ ಬೈದ ಕಾರಣ, ಶ್ವೇತಾ ಸಹ ನಕ್ಷತ್ರಾಗೆ ಸವಾಲ್ ಹಾಕಿದ್ದಾಳೆ. ನಾನು ಇನ್ನೊಂದು ವಾರದಲ್ಲಿ ಭೂಪತಿ ಮನೆಗೆ ಬಂದೇ ಬರುತ್ತೇನೆ. ಶ್ವೇತಾ ಸೋತಿರಬಹುದು. ಅದನ್ನು ನಾನು ಇಟ್ಟು ಕೊಳ್ಳುವುದಿಲ್ಲ. ವಾಪಸ್ ಕೊಡ್ತಾಳೆ. ನೋಡು ನಿನ್ನ ಜೀವನಕ್ಕೆ ಎಂಟ್ರಿ ಕೊಡ್ತೇನೆ. ನಿನ್ನ ಬದುಕು ನರಕ ಮಾಡ್ತಾನೆ.
ಭೂಪತಿಯನ್ನು ಕಿತ್ತುಕೊಳ್ತಾಂತೆ ಶ್ವೇತಾ
ನಾನು ನಿನ್ನ ಬದುಕಿಗೆ ಬಂದು ಭೂಪತಿಯನ್ನು ಕಿತ್ತುಕೊಳ್ತೇನೆ. ನಿನಗೆ ಭೂಪತಿ ಬೆಂಬಲ ಇದೆ ಎಂದು ಜಾಸ್ತಿ ಆಡಬೇಡ ಎಂದು ಶ್ವೇತಾ ಹೇಳ್ತಾಳೆ. ಅದು ನಿನ್ನ ಕೈಯಿಂದ ಆಗಲ್ಲ ಎಂದು ನಕ್ಷತ್ರಾ ಹೇಳ್ತಾಳೆ. ಎಲ್ಲಾ ಚೇಂಜ್ ಆಗುತ್ತೆ. ಎಂದು ಹೇಳ್ತಾಳೆ.
ಇದನ್ನೂ ಓದಿ: Actress Amulya: ದಸರಾ ಹಬ್ಬದ ಶುಭಾಶಯ ತಿಳಿಸಿದ ಅಮೂಲ್ಯ, ಮಮ್ಮಿ ಆದ್ರೂ ನಮ್ಮ ಐಶು ಸೂಪರ್ ಎಂದ ಜನ!
ನಕ್ಷತ್ರಾ ಮನೆಗೆ ಶ್ವೇತಾ ಎಂಟ್ರಿ ಕೊಡ್ತಾಳಾ? ಭೂಪತಿ ಶ್ವೇತಾ ಪಾಲಾಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ