• Home
  • »
  • News
  • »
  • entertainment
  • »
  • Lakshana: ಕಥೆಯಲ್ಲಿ ಚಂದ್ರಶೇಖರ್ ತಂಗಿಯೇ ಡೆವಿಲ್, ವಿಲನ್ ಆಗಿ ಬಂದಳು ಮಿಲ್ಲಿ ತಾಯಿ ಭಾರ್ಗವಿ!

Lakshana: ಕಥೆಯಲ್ಲಿ ಚಂದ್ರಶೇಖರ್ ತಂಗಿಯೇ ಡೆವಿಲ್, ವಿಲನ್ ಆಗಿ ಬಂದಳು ಮಿಲ್ಲಿ ತಾಯಿ ಭಾರ್ಗವಿ!

ಚಂದ್ರಶೇಖರ್ ತಂಗಿಯೇ ಡೆವಿಲ್

ಚಂದ್ರಶೇಖರ್ ತಂಗಿಯೇ ಡೆವಿಲ್

ವಿಲನ್ ಯಾರು ಅಂತ ಚಂದ್ರಶೇಖರ್ ಊರೆಲ್ಲಾ ಹುಡುಕುತ್ತಿದ್ರೆ, ಅವಳು ಅವನ ಮನೆಯಲ್ಲೇ ಇದ್ದಾಳೆ. ಅದು ಬೇರೆ ಯಾರೂ ಅಲ್ಲ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಈ ಧಾರಾವಾಹಿಗೆ ಎಂಟ್ರಿ ಆಗಿರುವ ವಿಲನ್! ಮನೆಯಲ್ಲೇ ಇದ್ದುಕೊಂಡು ಅಣ್ಣನ ಮೇಲೆ ಕತ್ತಿ ಮಸೆಯುತ್ತಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನು ಧಾರಾವಾಹಿಗೆ ಹೊಸ ವಿಲನ್ (Villain) ಎಂಟ್ರಿ ಆಗಿದೆ. ಆ ವಿಲನ್ ಯಾರು ಎಂದು ಇವತ್ತು ಗೊತ್ತಾಗುತ್ತೆ. ಅವಳು ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ ಭಾರ್ಗವಿ.


    ಭೂಪತಿ ಜೊತೆ ಕೊರಿಯರ್ ಮೂಲಕ ಡೆವಿಲ್ ಆಟ
    ಲಕ್ಷಣ ಧಾರಾವಾಹಿಯಲ್ಲಿ ಬಂದಿರುವ ವಿಲನ್ ತಾನು ಡೆವಿಲ್ ಯಾರನ್ನೂ ಬಿಡಲ್ಲ ಎಂದುಕೊಂಡು ಓಡಾಡುತ್ತಿದ್ದಾಳೆ. ಭೂಪತಿಗೆ ಕೊರಿಯರ್ ನಲ್ಲೇ ಆಟವಾಡಿಸುತ್ತಿದ್ದಾಳೆ. ಪ್ರಖ್ಯಾತ್ ನನ್ನು ಕೊಲ್ಲುವುದಾಗಿ ಹೇಳ್ತಿದ್ದಳೆ. ಪ್ರಖ್ಯಾತ್ ಈ ಹಿಂದೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ನನ್ನು ಸಾಯಿಸಲು ಬಂದಿರುತ್ತಾನೆ. ಅವನನ್ನು ಲೇಡಿ ವಿಲನ್ ತಡೆದಿರುತ್ತಾಳೆ.


    ಪ್ರಖ್ಯಾತ್ ಆಕೆಯನ್ನು ನೋಡಿದ್ದಾನೆ. ಅವನ ಸಹಾಯದಿಂದ ಆಕೆಯನ್ನು ಹಿಡಿಯಬಹುದು ಎಂದು ನಕ್ಷತ್ರ-ಭೂಪತಿ ಅವನನ್ನು ಕೆದುಕೊಂಡು ಬಂದಿರುತ್ತಾರೆ. ಆದ್ರೆ ಪ್ರಖ್ಯಾತ್ ನನ್ನು ಡೆವಿಲ್ ಕಿಡ್ನ್ಯಾಪ್ ಮಾಡಿದ್ದಾಳೆ. ಅಲ್ಲದೇ ಅವನ್ನನು ಸಾಯಿಸುವುದಾಗಿ ಹೇಳಿದ್ದಾಳೆ.


    ಅಪ್ಪ-ಅಮ್ಮನ ಬಳಿ ಹೋದ ನಕ್ಷತ್ರಾ-ಭೂಪತಿ
    ಡೆವಿಲ್ ಕೊಟ್ಟಿರೋ ಅಡ್ರೆಸ್, ನಕ್ಷತ್ರಾ ಅಪ್ಪ-ಅಮ್ಮ ಪೂಜೆ ನಡೆಸಿಕೊಡ್ತಿರೋ ಗ್ರೌಂಡ್. ಅದಕ್ಕೆ ನಕ್ಷತ್ರಾ ಭಯಗೊಂಡಿದ್ದಾಳೆ. ಅವಳು ನಮ್ಮ ಅಪ್ಪನನ್ನು ಕೊಲ್ಲಲು ಹೋಗಿದ್ದಾಳೆ. ಬೇಗ ಅವರನ್ನು ಕಾಪಾಡಬೇಕು ಎಂದು ಅವರಿರುವ ಜಾಗಕ್ಕೆ ಭೂಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಆದ್ರೆ ಇವತ್ತು ಅಲ್ಲೇ ಡೆವಿಲ್ ಯಾರು ಅಂತ ತಿಳಿಯಲಿದೆ.


    ಇದನ್ನೂ ಓದಿ: Hitler Kalyana: ಹಿಟ್ಲರ್ ಕಲ್ಯಾಣಕ್ಕೆ ಮೊದಲ ಹೆಂಡತಿಯಾಗಿ ಎಂಟ್ರಿ ಕೊಟ್ಟ ರಜಿನಿ!


    ಡೆವಿಲ್ ಯಾರು ಅನ್ನೋ ಕುತೂಹಲ
    ಕಳೆದ ಒಂದು ವಾರದಿಂದ ಲಕ್ಷಣ ಧಾರಾವಾಹಿಯಲ್ಲಿ ಲೇಡಿ ವಿಲನ್ ನಡುಕ ಹುಟ್ಟಿಸಿದ್ದಳು. ಯಾರು ಇರಬಹುದು ಎಂದು ಎಲ್ಲರ ಕುತೂಹಲ ಹೆಚ್ಚಾಗಿತ್ತು. ಜನ ಇವತ್ತಾದ್ರೂ ವಿಲನ್ ತೋರಿಸಿ ನಿರ್ದೇಶಕರೇ ಎಂದು ಕೇಳ್ತಾ ಇದ್ರು. ಕೊನೆಗೂ ಅವಳು ಯಾರು ಎಂದು ಗೊತ್ತಾಗಿದೆ.

    Colors Kannada serial, Kannada serial, Lakshana Serial, serial today episode, new Villain Is Nakshatra Mother in law, ಲಕ್ಷಣ ಧಾರಾವಾಹಿ, ಚಂದ್ರಶೇಖರ್ ತಂಗಿಯೇ ಡೆವಿಲ್, ಲಕ್ಷಣ ಸೀರಿಯಲ್ ವಿಲನ್ ಮಿಲ್ಲಿ ತಾಯಿ ಭಾರ್ಗವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ನಕ್ಷತ್ರಾ


    ಚಂದ್ರಶೇಖರ್ ತಂಗಿಯೇ ಡೆವಿಲ್
    ಚಂದ್ರಶೇಖರ್ ವಿಲನ್ ಯಾರು ಅಂತ ಊರೆಲ್ಲಾ ಹುಡುಕುತ್ತಿದ್ರೆ, ಅವಳು ಅವನ ಮನೆಯಲ್ಲೇ ಇದ್ದಾಳೆ. ಅದು ಬೇರೆ ಯಾರೂ ಅಲ್ಲ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಈ ಧಾರಾವಾಹಿಗೆ ಎಂಟ್ರಿ ಆಗಿರುವ ವಿಲನ್. ಮನೆಯಲ್ಲೇ ಇದ್ದುಕೊಂಡು ಅಣ್ಣನ ಮೇಲೆ ಕತ್ತಿ ಮಸೆಯುತ್ತಿದ್ದಾಳೆ.


    Colors Kannada serial, Kannada serial, Lakshana Serial, serial today episode, new Villain Is Nakshatra Mother in law, ಲಕ್ಷಣ ಧಾರಾವಾಹಿ, ಚಂದ್ರಶೇಖರ್ ತಂಗಿಯೇ ಡೆವಿಲ್, ಲಕ್ಷಣ ಸೀರಿಯಲ್ ವಿಲನ್ ಮಿಲ್ಲಿ ತಾಯಿ ಭಾರ್ಗವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಚಂದ್ರಶೇಖರ್


    ತನ್ನ ಕೆಲಸ ಮುಂದುವರೆಸಿದ ಡೆವಿಲ್
    ಇನ್ನು ವಿಲನ್, ತನ್ನ ಕೆಲಸ ಮುಂದುವರಿಸಿದ್ದಾಳೆ. ನವರಾತ್ರಿ ಹಬ್ಬದ ಪ್ರಯುಕ್ತ ದಹನ ಮಾಡಲು ಇಟ್ಟಿರುವ ರಾವಣ ಗೊಂಬೆ ಹಿಂದೆ ಪ್ರಖ್ಯಾತ್ ನನ್ನು ಕಟ್ಟಿ ಹಾಕಿದ್ದಾಳೆ. ಅದಕ್ಕೆ ಬೆಂಕಿಯ ಬಾಣ ಬಿಡುವ ಮೂಲಕ ಅವನನ್ನು ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ. ಅದನ್ನು ಭೂಪತಿ ತಡೆಯುತ್ತಾನಾ ನೋಡಬೇಕು.


    ಇದನ್ನೂ ಓದಿ: BBK Season 09: ರೋಲ್ ಕಾಲ್ ಮಾಡಿದ್ದು ಪ್ರೂವ್ ಮಾಡಿದ್ರೆ ನೇಣು ಹಾಕಿಕೊಳ್ತಾನೆ! ರೂಪೇಶ್ ರಾಜಣ್ಣ ಸವಾಲ್ ಹಾಕಿದ್ದು ಯಾರಿಗೆ?


    ಚಂದ್ರಶೇಖರ್ ಗೆ ತನ್ನ ತಂಗಿಯೇ ವಿಲನ್ ಎಂದು ಗೊತ್ತಾಗುತ್ತಾ? ನಕ್ಷತ್ರಾಗೆ ತನ್ನ ಅತ್ತೆಯ ಕುತಂತ್ರ ತಿಳಿಯುತ್ತಾ ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: