• Home
  • »
  • News
  • »
  • entertainment
  • »
  • Lakshana: ತನ್ನ ಡೆಡ್ಲಿ ಆಟ ಮುಂದುವರಿಸಿದ ಡೆವಿಲ್, ನಕ್ಷತ್ರಾ-ಭೂಪತಿ ಮಾತು ಕೇಳಿಸಿಕೊಳ್ತಿಲ್ಲ ಚಂದ್ರಶೇಖರ್!

Lakshana: ತನ್ನ ಡೆಡ್ಲಿ ಆಟ ಮುಂದುವರಿಸಿದ ಡೆವಿಲ್, ನಕ್ಷತ್ರಾ-ಭೂಪತಿ ಮಾತು ಕೇಳಿಸಿಕೊಳ್ತಿಲ್ಲ ಚಂದ್ರಶೇಖರ್!

ನಕ್ಷತ್ರಾ

ನಕ್ಷತ್ರಾ

ವಿಲನ್, ತನ್ನ ಕೆಲಸ ಮುಂದುವರಿಸಿದ್ದಾಳೆ. ನವರಾತ್ರಿ ಹಬ್ಬದ ಪ್ರಯುಕ್ತ ದಹನ ಮಾಡಲು ಇಟ್ಟಿರುವ ರಾವಣ ಗೊಂಬೆ ಹಿಂದೆ ಪ್ರಖ್ಯಾತ್ ನನ್ನು ಕಟ್ಟಿ ಹಾಕಿದ್ದಾಳೆ. ಅದಕ್ಕೆ ಬೆಂಕಿಯ ಬಾಣ ಬಿಡುವ ಮೂಲಕ ಅವನನ್ನು ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ (Nakshatra). ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದಕ್ಕೆ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಮೌರ್ಯ ಈಗಾಗಲೇ ಜೈಲು ಸೇರಿದ್ದಾನೆ. ಇನ್ನು ಧಾರಾವಾಹಿಗೆ ಹೊಸ ವಿಲನ್ (Villain) ಎಂಟ್ರಿ ಆಗಿದೆ. ಅದು ಲೇಡಿ ಆಕೆ ಚಂದ್ರಶೇಖರ್ ನನ್ನು ಸರ್ವನಾಶ ಮಾಡ್ತಾಳಂತೆ. ಪ್ರಖ್ಯಾತ್ ಎನ್ನುವ ಹುಡುಗನನ್ನು ಮುಂದಿಟ್ಟುಕೊಂಡು ಭೂಪತಿಯನ್ನು ಆಟವಾಡಿಸುತ್ತಿದ್ದಾಳೆ.


    ಭೂಪತಿ ಜೊತೆ ಕೊರಿಯರ್ ಮೂಲಕ ಡೆವಿಲ್ ಆಟ
    ಲಕ್ಷಣ ಧಾರಾವಾಹಿಯಲ್ಲಿ ಬಂದಿರುವ ವಿಲನ್ ತಾನು ಡೆವಿಲ್ ಯಾರನ್ನೂ ಬಿಡಲ್ಲ ಎಂದುಕೊಂಡು ಓಡಾಡುತ್ತಿದ್ದಾಳೆ. ಭೂಪತಿಗೆ ಕೊರಿಯರ್ ನಲ್ಲೇ ಆಟವಾಡಿಸುತ್ತಿದ್ದಾಳೆ. ಪ್ರಖ್ಯಾತ್ ನನ್ನು ಕೊಲ್ಲುವುದಾಗಿ ಹೇಳ್ತಿದ್ದಳೆ. ಪ್ರಖ್ಯಾತ್ ಈ ಹಿಂದೆ ನಕ್ಷತ್ರಾ ಅಪ್ಪ ಚಂದ್ರಶೇಖರ್ ನನ್ನು ಸಾಯಿಸಲು ಬಂದಿರುತ್ತಾನೆ. ಅವನನ್ನು ಲೇಡಿ ವಿಲನ್ ತಡೆದಿರುತ್ತಾಳೆ.


    ಪ್ರಖ್ಯಾತ್ ಆಕೆಯನ್ನು ನೋಡಿದ್ದಾನೆ. ಅವನ ಸಹಾಯದಿಂದ ಆಕೆಯನ್ನು ಹಿಡಿಯಬಹುದು ಎಂದು ನಕ್ಷತ್ರ-ಭೂಪತಿ ಅವನನ್ನು ಕೆದುಕೊಂಡು ಬಂದಿರುತ್ತಾರೆ. ಆದ್ರೆ ಪ್ರಖ್ಯಾತ್ ನನ್ನು ಡೆವಿಲ್ ಕಿಡ್ನ್ಯಾಪ್ ಮಾಡಿದ್ದಾಳೆ. ಅಲ್ಲದೇ ಅವನ್ನನು ಸಾಯಿಸುವುದಾಗಿ ಹೇಳಿದ್ದಾಳೆ.


    ಅಪ್ಪ-ಅಮ್ಮನ ಬಳಿ ಹೋದ ನಕ್ಷತ್ರಾ-ಭೂಪತಿ
    ಡೆವಿಲ್ ಕೊಟ್ಟಿರೋ ಅಡ್ರೆಸ್, ನಕ್ಷತ್ರಾ ಅಪ್ಪ-ಅಮ್ಮ ಪೂಜೆ ನಡೆಸಿಕೊಡ್ತಿರೋ ಗ್ರೌಂಡ್. ಅದಕ್ಕೆ ನಕ್ಷತ್ರಾ ಭಯಗೊಂಡಿದ್ದಾಳೆ. ಅವಳು ನಮ್ಮ ಅಪ್ಪನನ್ನು ಕೊಲ್ಲಲು ಹೋಗಿದ್ದಾಳೆ. ಬೇಗ ಅವರನ್ನು ಕಾಪಾಡಬೇಕು ಎಂದು ಅವರಿರುವ ಜಾಗಕ್ಕೆ ಭೂಪತಿಯನ್ನು ಕರೆದುಕೊಂಡು ಹೋಗಿದ್ದಾಳೆ.


    ಇದನ್ನೂ ಓದಿ: Sathya Serial: ಸತ್ಯ ಮದುವೆ ಆಗಿದ್ದು ಕಾರ್ತಿಕ್​ನನ್ನು ಅನ್ನೋ ನಿಜ ಗೊತ್ತಾಗುತ್ತಾ? ದಿವ್ಯಾ ಮುಂದೇನು ಮಾಡ್ತಾಳೆ?


    ನಕ್ಷತ್ರಾ ಮಾತು ಕೇಳಿಸಿಕೊಳ್ಳದ ಚಂದ್ರಶೇಖರ್
    ನಕ್ಷತ್ರಾ_ಭೂಪತಿ ಪೂಜೆ ನಡೆಯುವ ಸ್ಥಳಕ್ಕೆ ಬಂದಿದ್ದನ್ನು ನೋಡಿ ಅಪ್ಪ ಚಂದ್ರಶೇಖರ್ ಖುಷಿಯಾಗಿದ್ದಾರೆ. ಕೊನೆಗೂ ಮಗಳು-ಅಳಿಯ ಬಂದ್ರು ಎಂದು ಸಂತೋಷಗೊಂಡಿದ್ದಾರೆ. ನಕ್ಷತ್ರಾ-ಭೂಪತಿ ತಮಗೆ ತೊಂದ್ರೆ ಇದೆ ಎಂದು ಚಂದ್ರಶೇಖರ್ ಬಳಿ ಹೇಳಲು ಹೋಗ್ತಾರೆ. ಆದ್ರೆ ಅದನ್ನು ಅವರು ಕೇಳಿಸಿಕೊಳ್ಳಲ್ಲ. ಪೂಜೆ ಮಾಡಿ ಎಂದು ಅವರ ಬಳಿಯೇ ಪೂಜೆ ಮಾಡಿಸುತ್ತಾ ಇದ್ದಾರೆ. ಮಗಳು ಅಳಿಯನ ಸಂಸಾರ ಚೆನ್ನಾಗಿರಲಿ ಎಂದು ಬೇಡಿಕೊಳ್ತಾ ಇದ್ದಾರೆ.


    Colors Kannada serial, Kannada serial, Lakshana Serial, serial today episode, new Villain enter to serial, ಲಕ್ಷಣ ಧಾರಾವಾಹಿ, ತನ್ನ ಡೆಡ್ಲಿ ಆಟ ಮುಂದುವರಿಸಿದ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಚಂದ್ರಶೇಖರ್


    ತನ್ನ ಕೆಲಸ ಮುಂದುವರೆಸಿದ ಡೆವಿಲ್
    ಇನ್ನು ವಿಲನ್, ತನ್ನ ಕೆಲಸ ಮುಂದುವರಿಸಿದ್ದಾಳೆ. ನವರಾತ್ರಿ ಹಬ್ಬದ ಪ್ರಯುಕ್ತ ದಹನ ಮಾಡಲು ಇಟ್ಟಿರುವ ರಾವಣ ಗೊಂಬೆ ಹಿಂದೆ ಪ್ರಖ್ಯಾತ್ ನನ್ನು ಕಟ್ಟಿ ಹಾಕಿದ್ದಾಳೆ. ಅದಕ್ಕೆ ಬೆಂಕಿಯ ಬಾಣ ಬಿಡುವ ಮೂಲಕ ಅವನನ್ನು ಕೊಲ್ಲೋ ಪ್ಲ್ಯಾನ್ ಮಾಡಿದ್ದಾಳೆ. ಅದನ್ನು ಭೂಪತಿ ತಡೆಯುತ್ತಾನಾ ನೋಡಬೇಕು.


    Colors Kannada serial, Kannada serial, Lakshana Serial, serial today episode, new Villain enter to serial, ಲಕ್ಷಣ ಧಾರಾವಾಹಿ, ತನ್ನ ಡೆಡ್ಲಿ ಆಟ ಮುಂದುವರಿಸಿದ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಭೂಪತಿ


    ಇದನ್ನೂ ಓದಿ: Kannadathi: ಅಮ್ಮಮ್ಮನ ಸ್ಥಾನ ತುಂಬೇ ಬಿಟ್ಟಳು ಭುವಿ, ಮತ್ತೆ ಆಸ್ಪತ್ರೆ ಸೇರ್ತಾರಾ ರತ್ನಮಾಲಾ?


    ಇವತ್ತಾದ್ರೂ ಡೆವಿಲ್ ಯಾರು ಅನ್ನೋದು ಗೊತ್ತಾಗುತ್ತಾ? ಭೂಪತಿ ಪ್ರಖ್ಯಾತ್ ನನ್ನು ಕಾಪಾಡ್ತಾನಾ? ಎಲ್ಲವನ್ನೂ ನೋಡಲು ಲಕ್ಷಣ ಸೀರಿಯಲ್ ನೋಡಬೇಕು.

    Published by:Savitha Savitha
    First published: