• Home
  • »
  • News
  • »
  • entertainment
  • »
  • Lakshana: ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ!

Lakshana: ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ!

ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ

ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ

ಮೌರ್ಯ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವಿಷ್ಯ ಭೂಪತಿ, ನಕ್ಷತ್ರಾ, ಚಂದ್ರಶೇಖರ್, ಶಕುಂತಲಾ ದೇವಿಗೆ ಗೊತ್ತಾಗಿದೆ. ಎಲ್ಲರೂ ಮೌರ್ಯ ಇನ್ನೇನು ಮಾಡ್ತಾನೋ ಅನ್ನೋ ಭಯ ಶುರುವಾಗಿದೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯೂ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಅವರಿಬ್ಬರನ್ನು ಕೊಲ್ಲಲು (Murder) ಹೋಗಿ ಜೈಲ ಸೇರಿದ್ದ. ಈಗ ಜೈಲಿನಿಂದ ಎಸ್ಕೇಪ್ (Escape) ಆಗಿದ್ದಾನೆ.


    ಜೈಲು ಸೇರಿದ್ದ ಭೂಪತಿ ತಮ್ಮ ಮೌರ್ಯ


    ಚಂದ್ರಶೇಖರ್ ತಮ್ಮ ಕುಟುಂಬಕ್ಕೆ ಮೋಸ ಮಾಡಿದ್ರು ಅಂತ ಮೌರ್ಯನಿಗೆ ತುಂಬಾ ಕೋಪ. ಮರೆಯಲ್ಲಿದ್ದುಕೊಂಡೆ, ನಕ್ಷತ್ರಾ-ಚಂದ್ರಶೇಖರ್ ತುಂಬಾ ತೊಂದ್ರೆ ಕೊಡ್ತಾ ಇರ್ತಾನೆ. ಇಬ್ಬರನ್ನು ಸಾಯಿಸುವ ಮಟ್ಟಕ್ಕೆ ಹೋಗಿರುತ್ತಾನೆ. ಎಲ್ಲರೂ ಯಾರು ಅದು ಎಂದು ತಲೆ ಕೆಡಸಿಕೊಂಡಿರುತ್ತಾರೆ. ಕೊನೆಗೆ ಮೌರ್ಯನೇ ಅದಕ್ಕೆಲ್ಲಾ ಕಾರಣ ಎಂದು ಗೊತ್ತಾಗೆ ಪೊಲೀಸರಿಂದ ಅರೆಸ್ಟ್ ಆಗಿರುತ್ತಾನೆ.


    ಮೌರ್ಯ ಎಸ್ಕೇಪ್


    ಮೌರ್ಯ ಹೊರಗೆ ಇದ್ರೆ, ನಕ್ಷತ್ರಾ ಪ್ರಾಣಕ್ಕೆ ಅಪಾಯ ಎಂದು ಭೂಪತಿಯೇ ತಮ್ಮನನ್ನು ಜೈಲಿಗೆ ಕಳಿಸಿರುತ್ತಾನೆ. ನಕ್ಷತ್ರಾಳು ನೆಮ್ಮದಿಯಿಂದ ಇದ್ಲು. ಆದ್ರೆ ಮೌರ್ಯ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವಿಷ್ಯ ಭೂಪತಿ, ನಕ್ಷತ್ರಾ, ಚಂದ್ರಶೇಖರ್, ಶಕುಂತಲಾ ದೇವಿಗೆ ಗೊತ್ತಾಗಿದೆ. ಎಲ್ಲರೂ ಮೌರ್ಯ ಇನ್ನೇನು ಮಾಡ್ತಾನೋ ಅನ್ನೋ ಭಯ ಶುರುವಾಗಿದೆ.


    ಇದನ್ನೂ ಓದಿ: Jothe Jotheyali: ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ! ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ 


    ಭೂಪತಿಗೆ ಆತಂಕದ ಜೊತೆ ಕೋಪ


    ತನ್ನ ತಮ್ಮ ತಪ್ಪು ದಾರಿ ಹಿಡಿದಿದ್ದಾನೆ ಎಂದು ಮೊದಲೇ ಭೂಪತಿಗೆ ಕೋಪ ಬಂದಿತ್ತು. ಜೈಲಿನಲ್ಲಿ ಇದ್ರೆ ಸರಿ ಹೋಗ್ತಾನೆ ಎಂದು ಎಲ್ಲರು ಅಂದುಕೊಂಡಿದ್ರು. ಆದ್ರೆ ಮೌರ್ಯ ಬದಲಾಗುವುದು ಇರಲಿ, ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾನೂ ಇಲ್ಲ. ಜೈಲಿನಿಂದ ಬೇರೆ ತಪ್ಪಿಸಿಕೊಂಡಿದ್ದಾನೆ. ಅದಕ್ಕೆ ಭೂಪತಿಗೆ ಆತಂಕದ ಜೊತೆ ಕೋಪ ಮಾಡಿಕೊಂಡಿದ್ದಾನೆ.


    colors kannada serial, kannada serial, lakshana serial, maurya escape from police station serial today episode, ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ, ಲಕ್ಷಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ಮೌರ್ಯನಿಗೆ ಸಹಾಯ ಮಾಡಿದ ಡೆವಿಲ್


    ಮೌರ್ಯ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಭಾರ್ಗವಿ. ಅಂದ್ರೆ ಚಂದ್ರಶೇಖರ್ ತಂಗಿ. ಆಕೆ ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೊಂಡಿದ್ದಾಳೆ. ಅದಕ್ಕೆ ಮೌರ್ಯ ಜೈಲಿನಿಂದ ಆಚೆ ಇದ್ರೆ ಈ ಆಟಕ್ಕೊಂದು ಮಜಾ ಬರುತ್ತೆ ಎಂದುಕೊಂಡು, ಆತನಿಗೆ ಪತ್ರ ಕಳಿಸಿ. ನಾವಿಬ್ಬರೂ ಮಿತ್ರರೇ ತಾನೇ ಎಂದು ಹೇಳಿ, ಆತನಿಗೆ ಜೈಲಿನಿಂದ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾಳೆ.


    colors kannada serial, kannada serial, lakshana serial, maurya escape from police station serial today episode, ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ, ಭೂಪತಿ-ನಕ್ಷತ್ರಾಗೆ ಹೆಚ್ಚಾದ ಆತಂಕ, ಲಕ್ಷಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಮೌರ್ಯ


    ಭಾರ್ಗವಿ ಮುಂದಿನ ನಡೆ ಏನು?
    ಭಾರ್ಗವಿ 20 ವರ್ಷಗಳ ಹಿಂದಿನ ಘಟನೆಗೆ ಸೇಡು ತೀರಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾಳೆ. ಅಣ್ಣನ ಮನೆಯಲ್ಲೇ ಇದ್ದುಕೊಂಡು ಅವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾಳೆ. ಮೌರ್ಯ ಜೈಲಿನಲ್ಲಿ ಇದ್ರೆ, ಚಂದ್ರಶೇಖರ್ ನೆಮ್ಮದಿಯಿಂದ ಇರುತ್ತಾನೆ. ಅವನ ನೆಮ್ಮದಿ ಕೆಡಸಲೆಂದೇ ಮೌರ್ಯನನ್ನು ಆಚೆ ಕರೆಸಿದ್ದಾಳೆ.


    ಇದನ್ನೂ ಓದಿ: Shrirasthu Shubhamasthu: ಹೂವು-ಹಣ್ಣು ಹಿಡಿದು ತುಳಸಿ ಮನೆಗೆ ಬಂದ ಸಿರಿ! ಸೊಸೆಯಾಗಿ ಸ್ವೀಕರಿಸ್ತಾಳಾ ಅತ್ತೆ? 


    ಜೈಲಿನಿಂದ ತಪ್ಪಿಸಿಕೊಂಡ ಮೌರ್ಯ ಮತ್ಯಾವ ತಪ್ಪು ಮಾಡುತ್ತಾನೆ? ಭೂಪತಿ ತಮ್ಮನನ್ನ ಮತ್ತೆ ಹಿಡಿಯುತ್ತಾನಾ? ಚಂದ್ರಶೇಖರ್ ತನ್ನ ಮಗಳನ್ನು ಹೇಗೆ ಉಳಿಸಿಕೊಳ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: