• Home
  • »
  • News
  • »
  • entertainment
  • »
  • Lakshana: ನಕ್ಷತ್ರಾಗೆ ಡೆವಿಲ್ ಭಾರ್ಗವಿ ಧಮ್ಕಿ! ಭೂಪತಿ ಮುಂದೆ ಸಿಕ್ಕಿ ಹಾಕಿಕೊಂಡ ವಿಲನ್?

Lakshana: ನಕ್ಷತ್ರಾಗೆ ಡೆವಿಲ್ ಭಾರ್ಗವಿ ಧಮ್ಕಿ! ಭೂಪತಿ ಮುಂದೆ ಸಿಕ್ಕಿ ಹಾಕಿಕೊಂಡ ವಿಲನ್?

ಭೂಪತಿ ಮುಂದೆ ಸಿಕ್ಕಿ ಹಾಕಿಕೊಂಡ್ಲಾ ವಿಲನ್?

ಭೂಪತಿ ಮುಂದೆ ಸಿಕ್ಕಿ ಹಾಕಿಕೊಂಡ್ಲಾ ವಿಲನ್?

ನಕ್ಷತ್ರಾಗೆ ಧಮ್ಕಿ ಹಾಕಿ ವಿಲನ್ ಭಾರ್ಗವಿ ಫೋನ್ ಆಫ್ ಮಾಡಿ ಸಿಮ್ ಮುರಿಯುತ್ತಾಳೆ. ಇನ್ನೇನು ಮನೆ ಒಳಗೆ ಹೋಗಬೇಕು ಎಂದು ತಿರುಗುತ್ತಾಳೆ. ಅಲ್ಲಿ ಮುಂದೆ ಭೂಪತಿ ನಿಂತಿರುತ್ತಾನೆ. ಅದನ್ನು ನೋಡಿ ಭಾರ್ಗವಿ ಶಾಕ್ ಆಗ್ತಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana)ಧಾರಾವಾಹಿಯೂ  (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ಲಕ್ಷಣ ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ (Nakshatra) ಕಂಡ್ರೆ ಆಗಲ್ಲ. ಇನ್ನು ಧಾರಾವಾಹಿಗೆ ಹೊಸ ವಿಲನ್ ಎಂಟ್ರಿ ಆಗಿದೆ. ಆ ವಿಲನ್ (Villain) ಬೇರೆ ಯಾರೂ ಅಲ್ಲ ಚಂದ್ರಶೇಖರ್ ತಂಗಿ ಭಾರ್ಗವಿ. ಮನೆಯೊಳಗೆ ಇದ್ದಕೊಂಡೇ ನಾಟಕ ಆಡ್ತಾ ಇದ್ದಾಳೆ. ಭೂಪತಿ ಮುಂದೆ ಸಿಕ್ಕಿಹಾಕಿಕೊಂಡಿದ್ದಾಳಾ ನೋಡಬೇಕು.


    ತಂಗಿ ರೂಪದಲ್ಲಿ ಮನೆಯಲ್ಲೇ ಸಾವು
    ಚಂದ್ರಶೇಖರ್ ವಿಲನ್ ಯಾರು ಅಂತ ಊರೆಲ್ಲಾ ಹುಡುಕುತ್ತಿದ್ರೆ, ಅವಳು ಅವನ ಮನೆಯಲ್ಲೇ ಇದ್ದಾಳೆ. ಅದು ಬೇರೆ ಯಾರೂ ಅಲ್ಲ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಈ ಧಾರಾವಾಹಿಗೆ ಎಂಟ್ರಿ ಆಗಿರುವ ವಿಲನ್. ಮನೆಯಲ್ಲೇ ಇದ್ದುಕೊಂಡು ಅಣ್ಣನ ಮೇಲೆ ಕತ್ತಿ ಮಸೆಯುತ್ತಿದ್ದಾಳೆ. ಅಣ್ಣನನ್ನು ಹೇಗಾದ್ರೂ ಮುಗಿಸಬೇಕು ಎಂದು ಹಲವು ವರ್ಷಗಳಿಂದ ಮನೆಯಲ್ಲೇ ಇದ್ದುಕೊಂಡು ಸಂಚು ಮಾಡುತ್ತಿದ್ದಾಳೆ. ಅಣ್ಣನ ಮುಂದೆ ಒಳ್ಳೆಯವಳ ರೀತಿ ನಾಟಕ ಮಾಡ್ತಾ ಇದ್ದಾಳೆ.


    ಒದ್ದಾಡಲಿ ಎಂದೇ ಈ ನಾಟಕ
    ಪ್ರಖ್ಯಾತ್ ಕೊಲೆಯಾಗಿದ್ದನ್ನು ಕಣ್ಣಾರೆ ಕಂಡ ಚಂದ್ರಶೇಖರ್, ನಕ್ಷತ್ರಾ ಎಲ್ಲರೂ ಗಾಬರಿ ಆಗಿದ್ದಾರೆ. ಅದನ್ನೇ ಯೋಚನೆ ಮಾಡುತ್ತಾ ಮನೆಗೆ ಬಂದಿದ್ದಾರೆ. ಆ ಡೆವಿಲ್ ಕಣ್ಣ ಮುಂದೆ ಬಂದ್ರೆ ಸುಮ್ಮನೇ ಬಿಡಲ್ಲ ಎನ್ನುತ್ತಾನೆ. ಆಗ ಭಾರ್ಗವಿ ಬಂದು ಬಾಗಿಲು ತೆಗೆಯುತ್ತಾಳೆ. ಬಾಗಿಲು ತೆರೆದ ಭಾರ್ಗವಿ ಯಾರನ್ನು ಹುಡುಕುತ್ತಿದ್ದೀಯಾ ಅಣ್ಣ ಎಂದು ಕೇಳ್ತಾಳೆ?


    ಇದನ್ನೂ ಓದಿ: BBK Season 9: ಸೀರೆಯುಟ್ಟು ಮಳೆ ಡ್ಯಾನ್ಸ್ ಮಾಡಿದ ಸಾನ್ಯಾ ಹಾಟ್ ಲುಕ್! ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ


    ಅದಕ್ಕೆ ಚಂದ್ರಶೇಖರ್ ನಡೆದುದ್ದನ್ನು ಹೇಳ್ತಾನೆ. ಅಲ್ಲದೇ ನನ್ನ ಮನಸ್ಸು ಈಗಲೂ ಒದ್ದಾಡುತ್ತಿದೆ ಎಂದು ಹೇಳ್ತಾಳೆ. ಆಗ ಭಾರ್ಗವಿ, ಒದ್ದಾಡಲಿ ಅಂತ ತಾನೇ ಈ ರೀತಿ ಮಾಡಿದ್ದು ಎನ್ನುತ್ತಾಳೆ. ಆಗ ಎಲ್ಲರೂ ಶಾಕ್ ಆಗ್ತಾರೆ.


    ನಕ್ಷತ್ರಾಗೆ ಧಮ್ಕಿ ಹಾಕಿದ ಭಾರ್ಗವಿ
    ನಕ್ಷತ್ರಾಗೆ ಕಾಲ್ ಮಾಡಿದ ಡೆವಿಲ್ ಭಾರ್ಗವಿ, ಈ ವಿಷಯದಿಂದ ನೀನು ದೂರ ಇದ್ದು ಬಿಡು. ಇದು ಚಂದ್ರಶೇಖರ್ ಮತ್ತು ನನಗೆ ಸಂಬಂಧಿಸಿದ ವಿಷಯ. ಇದರಲ್ಲೇ ತಲೆ ಹಾಕಬೇಡ. ಹಾಕಿದ್ರೆ ನೀನು ಉಳಿಯಲ್ಲ ಎಂದು ಧಮ್ಕಿ ಹಾಕಿದ್ದಾಳೆ. ಅದಕ್ಕೆ ನಕ್ಷತ್ರಾ ಭಯ ಪಡೆದೇ ನನ್ನ ಅಪ್ಪನ ಸುದ್ದಿಗೆ ಬಂದ್ರೆ ಸುಮ್ನೆ ಇರಲ್ಲ ಎಂದು ಹೇಳ್ತಾಳೆ.


    ನಕ್ಷತ್ರಾಗೆ ಧಮ್ಕಿ ಹಾಕಿದ ಭಾರ್ಗವಿ


    ಭೂಪತಿಗೆ ಡೆವಿಲ್ ಬಗ್ಗೆ ಗೊತ್ತಾಗುತ್ತಾ?
    ನಕ್ಷತ್ರಾಗೆ ಧಮ್ಕಿ ಹಾಕಿ ವಿಲನ್ ಭಾರ್ಗವಿ ಫೋನ್ ಆಫ್ ಮಾಡಿ ಸಿಮ್ ಮುರಿಯುತ್ತಾಳೆ. ಇನ್ನೇನು ಮನೆ ಒಳಗೆ ಹೋಗಬೇಕು ಎಂದು ತಿರುಗುತ್ತಾಳೆ. ಅಲ್ಲಿ ಮುಂದೆ ಭೂಪತಿ ನಿಂತಿರುತ್ತಾನೆ. ಅದನ್ನು ನೋಡಿ ಭಾರ್ಗವಿ ಶಾಕ್ ಆಗ್ತಾಳೆ. ತನ್ನ ವಿಷ್ಯ ಎಲ್ಲಾ ಭೂಪತಿಗೆ ಗೊತ್ತಾಯ್ತಾ ಎಂದು ಗಾಬರಿ ಮಾಡಿಕೊಂಡಿದ್ದಾಳೆ.


    ಭೂಪತಿಗೆ ಡೆವಿಲ್ ಬಗ್ಗೆ ಗೊತ್ತಾಗುತ್ತಾ?


    ಇದನ್ನೂ ಓದಿ: Kannadathi: ಕಂಬಿ ಹಿಂದೆ ಹರ್ಷ, ಟೈಮ್ ನೋಡಿ ಜೈಲಿಗೆ ಕಳಿಸಿದ ಸಾನಿಯಾ!


    ಭೂಪತಿಗೆ ಭಾರ್ಗವಿಯೇ ವಿಲನ್ ಎಂದು ಗೊತ್ತಾಯ್ತಾ? ಅಥವಾ ಅಲ್ಲಿ ಏನೂ ಗೊತ್ತು ಆಗೇ ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: