• Home
 • »
 • News
 • »
 • entertainment
 • »
 • Lakshana: ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ, ಎಲ್ಲವನ್ನೂ ಮೌರ್ಯನ ಮೇಲೆ ಹಾಕುತ್ತಿರುವ ಡೆವಿಲ್!

Lakshana: ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ, ಎಲ್ಲವನ್ನೂ ಮೌರ್ಯನ ಮೇಲೆ ಹಾಕುತ್ತಿರುವ ಡೆವಿಲ್!

ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ!

ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ!

ಚಂದ್ರಶೇಖರ್ ನನ್ನು ಕಿಡ್ನ್ಯಾಪ್ ಮಾಡಿ ಮರಕ್ಕೆ ಕಟ್ಟಿ ಹಾಕಲಾಗಿದೆ. ಅವರ ಸುತ್ತ ಪಟಾಕಿ ಕಟ್ಟಿದ್ದಾರೆ. ನಕ್ಷತ್ರಾಗೆ ಕಾಲ್ ಮಾಡಿದ ಭಾರ್ಗವಿ, ಲೈವ್ ವಿಡಿಯೋ ತೋರಿಸುತ್ತಿದ್ದಾಳೆ. ನಕ್ಷತ್ರಾ ಗಾಬರಿಯಿಂದ ಕಣ್ಣೀರು ಹಾಕುತ್ತಿದ್ದಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ  ಧಾರಾವಾಹಿಯೂ (Lakshana Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಅದರಲ್ಲೂ ಭೂಪತಿ ತಮ್ಮ ಮೌರ್ಯನಿಗೆ ನಕ್ಷತ್ರಾ, ಚಂದ್ರಶೇಖರ್ ಕಂಡ್ರೆ ಆಗಲ್ಲ. ಅವರಿಬ್ಬರನ್ನು ಕೊಲ್ಲಲು ಹೋಗಿ ಜೈಲ ಸೇರಿದ್ದ. ಈಗ ಜೈಲಿನಿಂದ ಎಸ್ಕೇಪ್ (Escape) ಆಗಿದ್ದಾನೆ. ಅಲ್ಲದೇ ಚಂದ್ರಶೇಖರ್  ನನ್ನು ಕಟ್ಟಿ ಹಾಕಿದ್ದಾನೆ.


  ಜೈಲಿನಿಂದ ತಪ್ಪಿಸಿಕೊಂಡಿರುವ ಮೌರ್ಯ
  ಮೌರ್ಯನಿಗೆ ನಕ್ಷತ್ರಾ ಮತ್ತು ಚಂದ್ರಶೇಖರ್ ಮೇಲೆ ಹಲವು ಬಾರಿ ಕೊಲೆ ಪ್ರಯತ್ನ ಮಾಡಿದ್ದಾನೆ. ಮೌರ್ಯ ಹೊರಗೆ ಇದ್ರೆ, ನಕ್ಷತ್ರಾ ಪ್ರಾಣಕ್ಕೆ ಅಪಾಯ ಎಂದು ಭೂಪತಿಯೇ ತಮ್ಮನನ್ನು ಜೈಲಿಗೆ ಕಳಿಸಿರುತ್ತಾನೆ. ನಕ್ಷತ್ರಾಳು ನೆಮ್ಮದಿಯಿಂದ ಇದ್ಲು. ಆದ್ರೆ ಮೌರ್ಯ ಪೆÇಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವಿಷ್ಯ ಭೂಪತಿ, ನಕ್ಷತ್ರಾ, ಚಂದ್ರಶೇಖರ್, ಶಕುಂತಲಾ ದೇವಿಗೆ ಗೊತ್ತಾಗಿದೆ. ಎಲ್ಲರೂ ಮೌರ್ಯ ಇನ್ನೇನು ಮಾಡ್ತಾನೋ ಅನ್ನೋ ಭಯ ಶುರುವಾಗಿದೆ.


  ಜೈಲಿನಿಂದ ಎಸ್ಕೇಪ್ ಆಗಲು ಮೌರ್ಯನಿಗೆ ಡೆವಿಲ್ ಸಹಾಯ
  ಮೌರ್ಯ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಭಾರ್ಗವಿ. ಅಂದ್ರೆ ಚಂದ್ರಶೇಖರ್ ತಂಗಿ. ಆಕೆ ಚಂದ್ರಶೇಖರ್ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಕೊಂಡಿದ್ದಾಳೆ. ಅದಕ್ಕೆ ಮೌರ್ಯ ಜೈಲಿನಿಂದ ಆಚೆ ಇದ್ರೆ ಈ ಆಟಕ್ಕೊಂದು ಮಜಾ ಬರುತ್ತೆ ಎಂದುಕೊಂಡು, ಆತನಿಗೆ ಪತ್ರ ಕಳಿಸಿ. ನಾವಿಬ್ಬರೂ ಮಿತ್ರರೇ ತಾನೇ ಎಂದು ಹೇಳಿ, ಆತನಿಗೆ ಜೈಲಿನಿಂದ ಎಸ್ಕೇಪ್ ಆಗಲು ಸಹಾಯ ಮಾಡಿದ್ದಾಳೆ.


  ಇದನ್ನೂ ಓದಿ: Bigg Boss Kannada: ಪ್ರಶಾಂತ್‍ಗೆ ಕಳಪೆ ಪಟ್ಟ, ಅನುಪಮಾ ಗೌಡ-ರಾಕೇಶ್ ವಿರುದ್ಧ ಕಿಡಿಕಾರಿದ ಸಂಬರ್ಗಿ! 


  ಚಂದ್ರಶೇಖರ್ ಕಿಡ್ನ್ಯಾಪ್
  ಮೌರ್ಯ ಜೈಲಿನಿಂದ ಎಸ್ಕೇಪ್ ಆಗಿದ್ದೇ ತಡ, ಚಂದ್ರಶೇಖರ್ ಕಿಡ್ನ್ಯಾಪ್ ಆಗಿದ್ದಾರೆ. ಅವರನ್ನು ಮೌರ್ಯ ಕಿಡ್ನ್ಯಾಪ್ ಮಾಡಿಲ್ಲ. ಆದ್ರೆ ಮನೆಯವರೆಲ್ಲಾ ಮೌರ್ಯನೇ ಕಿಡ್ನ್ಯಾಪ್ ಮಾಡಿದ್ದಾನೆ ಎಂದುಕೊಂಡಿದ್ದಾರೆ. ಆದ್ರೆ ಚಂದ್ರಶೇಖರ್ ನನ್ನು ಭಾರ್ಗವಿಯೇ ಕಿಡ್ನ್ಯಾಪ್ ಮಾಡಿದ್ದಾಳೆ. ನಕ್ಷತ್ರಾ ಮತ್ತು ಭೂಪತಿ ಆತಂಕದಲ್ಲಿದ್ದಾರೆ.


  colors kannada serial, chandrashekar kidnap, kannada serial, lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ, ಎಲ್ಲವನ್ನೂ ಮೌರ್ಯನ ಮೇಲೆ ಹಾಕುತ್ತಿರುವ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭೂಪತಿ


  ಮರಕ್ಕೆ ಕಟ್ಟಿ ಹಾಕಿ ಪಟಾಕಿ ಹಾಕಿದ ಭಾರ್ಗವಿ
  ಚಂದ್ರಶೇಖರ್ ನನ್ನು ಕಿಡ್ನ್ಯಾಪ್ ಮಾಡಿ ಮರಕ್ಕೆ ಕಟ್ಟಿ ಹಾಕಲಾಗಿದೆ. ಅವರ ಸುತ್ತ ಪಟಾಕಿ ಕಟ್ಟಿದ್ದಾರೆ. ನಕ್ಷತ್ರಾಗೆ ಕಾಲ್ ಮಾಡಿದ ಭಾರ್ಗವಿ, ಲೈವ್ ವಿಡಿಯೋ ತೋರಿಸುತ್ತಿದ್ದಾಳೆ. ನಕ್ಷತ್ರಾ ಗಾಬರಿ ಹಾಕಿ ಕಣ್ಣೀರು ಹಾಕುತ್ತಿದ್ದಾಳೆ. ಭೂಪತಿ ನಮ್ಮ ಅಪ್ಪನನ್ನು ಕಾಪಾಡು ಎಂದು ಕೇಳುತ್ತಿದ್ದಾಳೆ. ಅಲ್ಲದೇ ಮೌರ್ಯ ಕಿಡ್ನ್ಯಾಪ್ ಮಾಡಿದ್ದಾನೆ ಎಂದುಕೊಂಡು ಮೌರ್ಯ ಏನು ಮಾಡಬೇಡಿ ಎನ್ನುತ್ತಿದ್ದಾಳೆ.


  ಪಟಾಕಿ ಹಚ್ಚೇ ಬಿಟ್ಟ ಡೆವಿಲ್
  ನಕ್ಷತ್ರಾ, ಭೂಪತಿ ಹೇಗೋ ಮಾಡಿ ಚಂದ್ರಶೇಖರ್ ಇರುವ ಜಾಗ ಪತ್ತೆ ಹಚ್ಚಿ ಬಂದಿದ್ದಾರೆ. ಅಲ್ಲಿಗೆ ನಕ್ಷತ್ರಾ ಬರುತ್ತಿದ್ದಂತೆ, ಚಂದ್ರಶೇಖರ್ ಕಟ್ಟಿದ್ದ ಪಟಾಕಿಗೆ ಬೆಂಕಿ ಹಚ್ಚಿದ್ದಾರೆ. ಅದಕ್ಕೆ ಎಲ್ಲರೂ ಗಾಬರಿ ಆಗಿದ್ದಾರೆ. ತನ್ನ ಅಪ್ಪನ ಪ್ರಾಣ ಅಪಾಯದಲ್ಲಿದೆ ಎಂದು ಗೋಳಾಡುತ್ತಿದ್ದಾಳೆ. ಚಂದ್ರಶೇಖರ್ ಅಪಾಯ ಆಗೋದು ಗ್ಯಾರಂಟಿನಾ ಏನೋ ಗೊತ್ತಿಲ್ಲ.


  colors kannada serial, chandrashekar kidnap, kannada serial, lakshana Serial, serial today episode, Kidnap episode in serial, ಲಕ್ಷಣ ಧಾರಾವಾಹಿ, ಚಂದ್ರಶೇಖರ್ ಪ್ರಾಣ ಅಪಾಯದಲ್ಲಿ, ಎಲ್ಲವನ್ನೂ ಮೌರ್ಯನ ಮೇಲೆ ಹಾಕುತ್ತಿರುವ ಡೆವಿಲ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭಾರ್ಗವಿ


  ಇದನ್ನೂ ಓದಿ: Ramachaari: ಅತ್ತಿಗೆ ಸಾವಿಗೆ ಕಾರಣವಾದ ಚಾರು, ಸಿಡಿದೆದ್ದ ರಾಮಾಚಾರಿ ಏನ್ ಮಾಡ್ತಾನೆ? 


  ಚಂದ್ರಶೇಖರ್ ಅಧ್ಯಾಯ ಮುಕ್ತಾಯವಾಗುತ್ತಾ? ನಕ್ಷತ್ರಾ ಅಪ್ಪನನ್ನು ಕಾಪಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

  Published by:Savitha Savitha
  First published: