• Home
  • »
  • News
  • »
  • entertainment
  • »
  • Lakshana: ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ! ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ?

Lakshana: ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ! ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ?

ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ!

ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ!

ಇಬ್ಬರು ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆಗಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಳ್ತಾ ಇದ್ದಾರೆ. ಅದಕ್ಕೆ ಇಬ್ಬರು ತಾವು ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಹೋಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakhana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ನಕ್ಷತ್ರಾ (Nakshatra) ಹೇಗಾದ್ರೂ ಭೂಪತಿ ಪ್ರೀತಿ (Love) ಪಡೆಯಬೇಕು ಎಂದುಕೊಳ್ತಿದ್ದಾಳೆ. ಅದಕ್ಕೆ ನಕ್ಷತ್ರಾ, ಭೂಪತಿಯನ್ನು ಮಿಸ್ಟ್ರಿ ಮುನಿಯಪ್ಪ ಆಗಲು ಹೇಳಿದ್ದಾಳೆ.


    ವಠಾರದಲ್ಲಿದ್ದ ಭೂಪತಿ-ನಕ್ಷತ್ರಾ
    ಮದುವೆಗೂ ಮುಂಚೆ ಭೂಪತಿ ತಾನು ಬಡವ ಎಂದುಕೊಂಡು, ನಕ್ಷತ್ರಾ ಮನೆಯಲ್ಲಿ ಬಾಡಿಗೆಗೆ ಇರುತ್ತಾನೆ. ಆಗ ನಕ್ಷತ್ರಾ ಅವಳನ್ನು ಮಿಸ್ಟ್ರಿ ಮುನಿಯಪ್ಪ ಎಂದು ಕರೆಯುತ್ತಿದ್ದ. ಭೂಪತಿ ನಕ್ಷತ್ರಾಳನ್ನು ಖಾಲಿ ಡಬ್ಬಾ ಎಂದು ಕರೆಯುತ್ತಿದ್ದ. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಎಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಳ್ತಾ ಇದ್ರು.


    ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ!
    ನಕ್ಷತ್ರಾ ಭೂಪತಿ ಬಳಿ ಒಂದು ಚಾಲೆಂಜ್ ಕಟ್ಟಿ ಗೆದ್ದಿರುತ್ತಾಳೆ. ಅದರ ಪ್ರಕಾರ ಭೂಪತಿ ನಕ್ಷತ್ರಾ ಹೇಳಿದ ಕೆಲಸ ಮಾಡಬೇಕು. ಅದಕ್ಕೆ ನಕ್ಷತ್ರಾ ನಾವು ಒಂದು ದಿನದ ಮಟ್ಟಿಗೆ ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆಗಬೇಕು. ನಮ್ಮ ಹಳೇ ಜೀವನ ನೆನಪು ಮಾಡಿಕೊಳ್ಳಬೇಕು ಎಂದು ಹೇಳುತ್ತಾಳೆ. ಅದಕ್ಕೆ ಭೂಪತಿ ಒಪ್ಪಿ ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆಗಿದ್ದಾರೆ.


    ಇದನ್ನೂ ಓದಿ: Ramachari: ರಾಮಾಚಾರಿಗೆ ಪ್ರಪೋಸ್ ಮಾಡಲು ಎಲ್ಲಾ ಸಿದ್ಧತೆ, ಕಾತುರದಿಂದ ಕಾಯುತ್ತಿರುವ ಚಾರು!


    ಹಳೇ ನೆನಪುಗಳ ಮೆಲುಕು
    ಇಬ್ಬರು ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆಗಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಳ್ತಾ ಇದ್ದಾರೆ. ಅದಕ್ಕೆ ಇಬ್ಬರು ತಾವು ಕೆಲಸ ಮಾಡುತ್ತಿದ್ದ ಹೋಟೆಲ್​ಗೆ ಹೋಗಿದ್ದಾರೆ. ಅಲ್ಲಿ ಅಡುಗೆ ಕೆಲಸಕ್ಕೆ ಸಹಾಯ ಮಾಡ್ತಾ ಇದ್ದಾರೆ. ಅಲ್ಲಿದ್ದ ಅವರ ಹಳೆಯ ಗೆಳೆಯರು ಖುಷಿಯಾಗಿದ್ದಾರೆ.


    colors kannada serial, kannada serial, old life of hero, lakshana serial, serial today episode, bhupathi and nakshatra remembering old life, ಲಕ್ಷಣ ಧಾರಾವಾಹಿ, ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ, ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ


    ನಕ್ಷತ್ರಾ ಮೇಲೆ ಪ್ರೀತಿ ಹುಟ್ಟುತ್ತಾ?
    ನಕ್ಷತ್ರಾಗೆ ಭೂಪತಿ ಎಂದ್ರೆ ತುಂಬಾ ಇಷ್ಟ. ಆದ್ರೆ ಭೂಪತಿಗೆ ನಕ್ಷತ್ರಾ ಮೇಲೆ ಯಾವುದೇ ಪ್ರೀತಿ ಇಲ್ಲ. ಅದಕ್ಕೆ ನಕ್ಷತ್ರಾ ಹೇಗಾದ್ರೂ ಅವನ ಪ್ರೀತಿ ಪಡೆಯಬೇಕು ಎಂದು ಈ ರೀತಿ ಮಾಡ್ತಾ ಇದ್ದಾಳೆ. ಈ ರೀತಿಯಾದ್ರೂ ಭೂಪತಿಗೆ ತನ್ನ ಮೇಲೆ ಪ್ರೀತಿ ಆಗಬಹುದು ಎಂದು ಅವಳ ನಂಬಿಕೆ. ಭೂಪತಿಗೆ ಪ್ರೀತಿ ಆಗುತ್ತಾ ನೋಡಬೇಕು.


    ಇದನ್ನೂ ಓದಿ: Bigg Boss Kannada: 'ಫೇಕ್' ಹಚ್ಚಿಸಿದ ಬೆಂಕಿಗೆ ಬಿಗ್ ಬಾಸ್ ಮಂದಿ ತತ್ತರ, ರಾಜಣ್ಣ ಧಗಧಗ! 


    ಭೂಪತಿ ಪ್ರೀತಿ ಪಡೆಯಲು ಶ್ವೇತಾ ಹೈಡ್ರಾಮಾ
    ಶ್ವೇತಾಗೆ ಭೂಪತಿ ಮೇಲೆ ಮೊದಲಿನಿಂದಲೂ ಕಣ್ಣು ಇದೆ. ಹೇಗಾದ್ರೂ ಅವನ ಪ್ರೀತಿ ಬೇಕು ಎಂದು ಮನೆಗೆ ಬಂದು ಸೇರಿಕೊಂಡಿದ್ದಾಳೆ. ಶಕುಂತಲಾ ದೇವಿ ಮುಂದೆ ಹೈಡ್ರಾಮಾ ಮಾಡುತ್ತಿದ್ದಾಳೆ. ಭೂಪತಿ ಮುಂದೆಯೂ ನಾಟಕ ಆಡ್ತಾ ಇದ್ದಾಳೆ. ನಕ್ಷತ್ರಾ ಆಕೆಯ ಆಟಕ್ಕೆ ಆಗಾಗ ಬ್ರೇಕ್ ಹಾಕ್ತಾ ಇದ್ದಾಳೆ.


    colors kannada serial, kannada serial, old life of hero, lakshana serial, serial today episode, bhupathi and nakshatra remembering old life, ಲಕ್ಷಣ ಧಾರಾವಾಹಿ, ಮಿಸ್ಟ್ರಿ ಮುನಿಯಪ್ಪ, ಖಾಲಿ ಡಬ್ಬಾ ಆದ ಭೂಪತಿ-ನಕ್ಷತ್ರಾ, ಹಳೇ ನೆನಪುಗಳಿಂದ ಪ್ರೀತಿ ಹುಟ್ಟುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಶ್ವೇತಾ


    ಭೂಪತಿ ನಕ್ಷತ್ರಾ ಮೇಲೆ ಪ್ರೀತಿ ಆಗುತ್ತಾ? ನಕ್ಷತ್ರಾ ಕನಸು ನನಸಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: