• Home
  • »
  • News
  • »
  • entertainment
  • »
  • Lakshana: ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್! ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್

Lakshana: ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್! ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್

ವೈಷ್ಣವಿ ಅತಿಥಿ ಪಾತ್ರ

ವೈಷ್ಣವಿ ಅತಿಥಿ ಪಾತ್ರ

ನೀವು ನಿಮ್ಮ ಗಂಡನನ್ನು ಎಷ್ಟು ಪ್ರೀತಿ ಮಾಡ್ತೀರಾ ಎಂದು ಗೊತ್ತಾಯ್ತು. ನೀವು ಅವನನ್ನು ಯಾರಿಗೂ ಬಿಟ್ಟು ಕೊಡಲ್ಲ. ನಾನು ಭೂಪತಿ ಸೇರಿ ಡ್ರಾಮಾ ಮಾಡಿದ್ವಿ ಎಂದು ವೈಷ್ಣವಿ ಹೇಳಿದ್ದಾಳೆ. ಆಕೆ ಮಾತು ಕೇಳಿ ನಕ್ಷತ್ರಾ ಸಮಾಧಾನಗೊಂಡಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಅಂದ್ರೆ ವೈಷ್ಣವಿ (Vaishnavi) ಅವರ ಎಂಟ್ರಿ ಆಗಿದೆ. ಆಕೆ ನಾನು ಭೂಪತಿ ಮದುವೆ ಆಗ್ತೀವಿ ಅಂತ ಹೇಳಿ, ನಾಟಕ (Drama) ಮಾಡಿ ಮನೆಯವರಿಗೆ ಶಾಕ್ ಕೊಟ್ಟಿದ್ದಾಳೆ.


    ಭೂಪತಿ ಬಾಳಲ್ಲಿ ಸ್ನೇಹದ ಗಾಳಿ


    ನಕ್ಷತ್ರಾ ಹೇಗಾದ್ರೂ ಭೂಪತಿ ಪ್ರೀತಿಯನ್ನು ಪಡೆಯಬೇಕು ಎಂದು ಸಾಹಸ ಪಡುತ್ತಿದ್ದಾಳೆ. ಅದೇ ಸಮಯಕ್ಕೆ ಧಾರಾವಾಹಿಗೆ ವೈಷ್ಣವಿ ಅವರ ಎಂಟ್ರಿ ಆಗಿದೆ. ಭೂಪತಿ ಜೀವನಲ್ಲಿ ಹೊಸ ಸುಂಟರಗಾಳಿ ಎದ್ದಿದೆ ಅಂತ ಎಲ್ಲರೂ ಅಂದುಕೊಂಡಿದ್ರು ಮನೆಗೆ ಬಂದಿರುವ ವೈಷ್ಣವಿ ನಾನು ಭೂಪತಿ ಪತ್ನಿ ಎನ್ನುತ್ತಿದ್ದಳು. ನಕ್ಷತ್ರಾ ಬಳಿ ಬಂದು, ನಿನ್ನ ಹೆಂಡತಿ ಪಟ್ಟ ಇವತ್ತಿಗೆ ಮುಗಿಯಿತು. ಇನ್ಮೇಲೆ ನಾನೇ ಭೂಪತಿ ಹೆಂಡತಿ ಎಂದು ಹೇಳುತ್ತಿದ್ದಳು.


    ಜೋಕ್ ಗಾಗಿ ಮನೆಯವರೆಲ್ಲಾ ಶಾಕ್


    ನಾನೇ ಭೂಪತಿ ಹೆಂಡತಿ ಎಂದು ಮನೆಯವರ ಮುಂದೆ ವೈಷ್ಣವಿ ಹೇಳುತ್ತಿದ್ದಳು. ಅದನ್ನು ಕೇಳಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಶಕುಂತಲಾ ದೇವಿಯೂ ಏನೇನೋ ಮಾತನಾಡಬೇಡ ಎಂದು ಹೇಳುತ್ತಾಳೆ. ಅದಕ್ಕೆ ವೈಷ್ಣವಿ, ಭೂಪತಿಯನ್ನೇ ಕರೆದು ಕೇಳಿ, ನಾನು ಯಾರು ಯಾಕೆ ಬಂದಿದ್ದೇನೆ ಎಂದು ಗೊತ್ತಾಗುತ್ತೆ ಎಂದು ಹೇಳುತ್ತಾಳೆ. ಭೂಪತಿ ಸಹ ನನಗೆ ವೈಷ್ಣವಿ ಗೊತ್ತು ಎಂದು ನಾಟಕ ಮಾಡುತ್ತಾನೆ.


    colors kannada serial, kannada serial, lakshana serial, vaishnavi guest role, serial today episode, ಲಕ್ಷಣ ಧಾರಾವಾಹಿ, ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್, ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಜೋಕ್ ಗಾಗಿ ಮನೆಯವರೆಲ್ಲಾ ಶಾಕ್


    ವೈಷ್ಣವಿ ನಾಟಕ ತಿಳಿಯಿತು


    ನಕ್ಷತ್ರಾ ವೈಷ್ಣವಿ ಬಳಿ ಮಾತನಾಡಲು ಹೋಗಿರುತ್ತಾಳೆ. ಆಗ ವೈಷ್ಣವಿ ಇದೆಲ್ಲಾ ನಾಟಕ. ನಾನು ಭೂಪತಿ ಒಳ್ಳೆಯ ಸ್ನೇಹಿತರು ಎಂದು ಹೇಳ್ತಾಳೆ. ಅಲ್ಲದೇ ನೀವು ನಿಮ್ಮ ಗಂಡನನ್ನು ಎಷ್ಟು ಪ್ರೀತಿ ಮಾಡ್ತೀರಾ ಎಂದು ಗೊತ್ತಾಯ್ತು. ನೀವು ಅವನನ್ನು ಯಾರಿಗೂ ಬಿಟ್ಟು ಕೊಡಲ್ಲ. ನಾನು ಭೂಪತಿ ಸೇರಿ ಡ್ರಾಮಾ ಮಾಡಿದ್ವಿ ಎಂದು ವೈಷ್ಣವಿ ಹೇಳಿದ್ದಾಳೆ. ಆಕೆ ಮಾತು ಕೇಳಿ ನಕ್ಷತ್ರಾ ಸಮಾಧಾನಗೊಂಡಿದ್ದಾಳೆ.


    ಇದನ್ನೂ ಓದಿ: Gaalipata 2: ಟಿವಿಯಲ್ಲಿ ಹಾರಾಡಲು ಗಾಳಿಪಟ 2 ರೆಡಿ, ಜೀ ಕನ್ನಡದಲ್ಲಿ ಸಿನಿಮಾ! 


    ವೈಷ್ಣವಿ  ಅತಿಥಿ ಪಾತ್ರ


    ವೈಷ್ಣವಿ ವಿಲನ್ ರೋಲ್ ಮಡಲು ಎಂಟ್ರಿ ಕೊಟ್ರಾ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದ್ರೆ ಆಕೆ ಲಕ್ಷಣ ಧಾರಾವಾಹಿಗೆ ಅತಿಥಿ ಪಾತ್ರಕ್ಕೆ ಅಷ್ಟೇ ಬಂದಿರೋದು. ಅದು ಭೂಪತಿ ಸ್ನೇಹಿತೆ ಎಂದುಕೊಂಡು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಭೂಪತಿ-ವೈಷ್ಣವಿ ಸೇರಿ ಮನೆಯವರಿಗೆ ಶಾಕ್ ನೀಡಿ, ಆತಂಕಗೊಳಿಸಿದ್ದರು.


    ಶ್ವೇತಾ ಆಟ ನಕ್ಷತ್ರಾ ಮುಂದೆ ನಡೆಯಲ್ಲ


    ಇನ್ನು ಶ್ವೇತಾ ಭೂಪತಿಯನ್ನು ಪಡೆಯಬೇಕು ಎಂದು ನಕ್ಷತ್ರಾ ಮನೆ ಸೇರಿದ್ದಾಳೆ. ಹೇಗದ್ರೂ ಅವನ್ನು ಒಲಿಸಿಕೊಂಡು ಮದುವೆ ಆಗಬೇಕು ಎಂದುಕೊಂಡಿದ್ದಾಳೆ. ಆದ್ರೆ ಅದಕ್ಕೆಲ್ಲಾ ನಕ್ಷತ್ರಾ ಬಿಡಲ್ಲ. ಇಬ್ಬರು ಒಟ್ಟಿಗೆ ಮಾತನಾಡುಲು ಸಹ ನಕ್ಷತ್ರಾ ಬಿಡುತ್ತಿಲ್ಲ. ಅವಳ ಜೊತೆ ಮಾತನಾಡಬೇಡಿ ಎಂದು ತಾಕೀತು ಮಾಡುತ್ತಿದ್ದಾಳೆ.


    colors kannada serial, kannada serial, lakshana serial, vaishnavi guest role, serial today episode, ಲಕ್ಷಣ ಧಾರಾವಾಹಿ, ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್, ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಶ್ವೇತಾ


    ಇದನ್ನೂ ಓದಿ: Olavina Nildana: ತಾರಿಣಿ ಅಂದ್ರೆ ತುಂಬಾ ಇಷ್ಟ! ಮನೆಮಂದಿ ಮುಂದೆ ಲವ್ ರಿವೀಲ್ ಮಾಡಿದ ಸಿದ್ಧಾಂತ್! 


    ನಕ್ಷತ್ರಾಗೆ ಭೂಪತಿಯನ್ನು ಕಾಪಾಡಿಕೊಳ್ಳೋದೇ ದೊಡ್ಡ ಸವಾಲ್ ಆಗಿದೆ. ಹೇಗೆ ತನ್ನ ಗಂಡನನ್ನು ಉಳಿಸಿಕೊಳ್ತಾಳೆ ನೋಡಬೇಕು. ಮುಂದೇನಾಗುತ್ತೆ ಅನ್ನೋ ಕುತೂಹಲ ಇದ್ರೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: