ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ನಕ್ಷತ್ರಾ ತಾಳಿ ಕಟ್ ಆಗಿದೆ. ಆತಂಕಗೊಂಡಿದ್ದಾಳೆ. ಅದರ ಮೇಲೆ ಆ ತಾಳಿಯನ್ನು ಶ್ವೇತಾ ಕದ್ದಿದ್ದಾಳೆ. ಅದನ್ನು ತಾನೇ ಕದ್ದಿದ್ದು (Theft) ಎಂದು ಒಪ್ಪಿಕೊಂಸಿದ್ದಾಳೆ
ಕಟ್ ಆದ ತಾಳಿಯಿಂದ ನಕ್ಷತ್ರಾ ಕಂಗಾಲು
ಭೂಪತಿ ಮನವೊಲಿಸಿಕೊಳ್ಳೋ ಪ್ರಯತ್ನದಲ್ಲಿರೋ ನಕ್ಷತ್ರಾಗೆ ಮತ್ತೊಂದು ಆತಂಕ ಶುರುವಾಗಿದೆ. ಆಕೆಯ ಕತ್ತಿನಲ್ಲಿದ್ದ ತಾಳಿ ಕಟ್ ಆಗಿ ಬಿದ್ದಿದೆ. ಅದಕ್ಕೆ ಗಾಬರಿಗೊಂಡಿದ್ದಾಳೆ. ಏನಾದ್ರೂ ಅನಾಹುತ ಆಗುತ್ತಾ ಅಂತ ಭಯಗೊಂಡಿದ್ದಾಳೆ. ತನ್ನ ತಾಯಿಗೆ ಕಾಲ್ ಮಾಡಿ ಏನು ಮಾಡಬೇಕು ಅಮ್ಮ, ತುಂಬಾ ಭಯ ಆಗ್ತಿದೆ ಎಂದು ಕೇಳಿದ್ದಾಳೆ. ತಾಯಿ ಪೂಜೆ ಮಾಡೋ ಸಲಹೆ ನೀಡಿದ್ದಾಳೆ.
ತಾಳಿ ಕದ್ದ ಶ್ವೇತಾ
ನಕ್ಷತ್ರಾ ಕಟ್ ಆದ ತಾಳಿಯನ್ನು ತನ್ನ ರೂಮಿನಲ್ಲಿ ಇಟ್ಟು ಸ್ನಾನಕ್ಕೆ ಹೋಗ್ತಾಳೆ. ಆಗ ಶ್ವೇತಾ ಬಂದು ಅದನ್ನು ಕದ್ದಿದ್ದಾಳೆ. ನಕ್ಷತ್ರಾ ಬಂದು ಎಲ್ಲಾ ಕಡೆ ಹುಡುಕುತ್ತಾ ಇದ್ದಾಳೆ. ಆದ್ರೆ ತಾಳಿ ಸಿಕ್ಕಿಲ್ಲ. ಅದಕ್ಕೆ ಗಾಬರಿಯಾಗಿದ್ದಾಳೆ. ಅಳುತ್ತಾ ಎಲ್ಲಾ ಕಡೆ ತಾಳಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ಆದ್ರೆ ಎಲ್ಲೂ ತಾಳಿ ಸಿಗುತ್ತಿಲ್ಲ. ತಾನೇ ಹುಡುಕುವುದಾಗಿ ಶ್ವೇತಾ ನಾಟಕ ಮಾಡಿದ್ದಾಳೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಸೋತ ಸ್ನೇಹ! ರೂಪೇಶ್ ಶೆಟ್ಟಿ, ರಾಜಣ್ಣ, ಗುರೂಜಿ ಮಧ್ಯೆ ಬಿರುಕು!
ಕದ್ದ ತಾಳಿ ಮಾರಿ ಹಣ ತಂದ ಶ್ವೇತಾ
ಶ್ವೇತಾ ನಕ್ಷತ್ರಾ ತಾಳಿ ಕದ್ದು ಅದನ್ನು ಮಾರಿದ್ದಾಳೆ. ಅದರಿಂದ ಬಂದ ದುಡ್ಡನ್ನು ಬ್ಯಾಗ್ ನಲ್ಲಿ ಇಟ್ಟಿದ್ದಾಳೆ. ಶೌರ್ಯ ಮಗಳು ಆ ಬ್ಯಾಗ್ನ್ನು ತಂದು ನಕ್ಷತ್ರಾ ಬಳಿ ಕೊಟ್ಟಿದ್ದಾಳೆ. ಅಷ್ಟು ದುಡ್ಡು ನೋಡಿ, ಎಲ್ಲಿಂದ ಬಂತು ಎಂದು ನಕ್ಷತ್ರಾ ಮತ್ತು ಶಕುಂತಲಾ ದೇವಿ ಕೇಳಿದ್ದಾರೆ. ಶ್ವೇತಾ ಆತಂಕವಾಗಿ ನಿಂತಿದ್ದಾಳೆ.
ನಾನೇ ತಾಳಿ ಕದ್ದಿದ್ದು, ಏನಿವಾಗ?
ಶಕುಂತಲಾ ದೇವಿ ಅಲ್ಲಿಂದ ಹೋದ ಮೇಲೆ, ಶ್ವೇತಾ ನಕ್ಷತ್ರಾ ಮುಂದೆ ತಾನೇ ತಾಳಿ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಾನೇ ಕದ್ದಿದ್ದು. ಅದು ನಿನ್ನ ಕೈಗೆ ಯಾವುತ್ತೂ ಸಿಗಲ್ಲ. ಏನ್ ಮಾಡ್ತೀಯಾ ಮಾಡು ಎಂದು ಸವಾಲು ಹಾಕಿದ್ದಾಳೆ. ಅದನ್ನು ಕೇಳಿಸಿಕೊಂಡು ನಕ್ಷತ್ರಾಗೆ ತುಂಬಾ ಕೋಪ ಬಂದಿದೆ.
ನಕ್ಷತ್ರಾ ಮುಂದಿನ ನಡೆ ಏನು?
ನಕ್ಷತ್ರಾ ತಾಳಿ ಕಾಣುತ್ತಿಲ್ಲ. ಅದಕ್ಕೆ ಗಾಬರಿಯಾಗಿದ್ದಳು. ಮನೆಯಲ್ಲೇ ಹುಡುಕಿದ್ದಳು. ದೇವರ ಮೇಲೆ ಭಾರ ಹಾಕಿದ್ದಾಳೆ. ತಾಳಿ ಹುಡುಕಿ ಹುಡುಕಿ ಕಂಗಾಲಾಗಿದ್ದ ನಕ್ಷತ್ರಾಗೆ ಸತ್ಯ ಗೊತ್ತಾಗಿದೆ. ಈಗ ಶ್ವೇತಾ ಮೇಲೆ ಯಾವ ಕ್ರಮ ಕೈಗೊಳ್ತಾಳೋ ಗೊತ್ತಿಲ್ಲ. ಮನೆಯಲ್ಲೇ ಕಳ್ಳಿ ಇದ್ದು ಊರೆಲ್ಲಾ ಹುಡುಕಿದಂತಾಗಿದೆ.
ಇದನ್ನೂ ಓದಿ: Ramachari: ಶೈಲು ಆಗಿ ಬಂದಿರುವ ಚಾರುಳನ್ನು ರಾಮಾಚಾರಿ ಕಂಡು ಹಿಡಿಯುತ್ತಾನಾ?
ಶ್ವೇತಾ ತಾಳಿ ಮಾರಿದ್ದನ್ನು ಹೇಳ್ತಾಳಾ? ನಕ್ಷತ್ರಾಗೆ ತನ್ನ ತಾಳಿಯೇ ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ